ಶೀಲಾ ಸಿ. ಶೆಟ್ಟಿ, ಬೆಂಗಳೂರು
ಶೀರ್ ಶ್ರಗ್ಸ್ ಈ ವಿಂಟರ್ ಸೀಸನ್‌ನ (Winter Fashion 2024) ಲೇಯರ್ ಲುಕ್‌ನಲ್ಲಿ ಟ್ರೆಂಡಿಯಾಗಿವೆ. ನೋಡಲು ಆಕರ್ಷಕವಾಗಿ ಕಾಣಿಸುವ, ಧರಿಸಿದಾಗ ಉಡುಪಿನ ಮೇಲೆ ಪಾರದರ್ಶಕವಾಗಿ ಕಾಣುವ ಇವು ಸಾದಾ ಶೀರ್, ಮಾನೋಕ್ರೋಮ್ ಎಂಬೋಸಿಂಗ್ ಪ್ರಿಂಟ್ಸ್, ಟ್ರಾನ್ಸಪರೆಂಟ್ ವೈಟ್ ಸೇರಿದಂತೆ ನಾನಾ ವಿನ್ಯಾಸದಲ್ಲಿ ಶೇಡ್‌ಗಳಲ್ಲಿ ಫ್ಯಾಷನ್‌ನಲ್ಲಿವೆ. ಆದರೆ, ಹಾಫ್ ವೈಟ್, ಕ್ರೀಮ್ ಹಾಗೂ ಐವರಿ ಬಣ್ಣದವು ಹೆಚ್ಚು ಪ್ರಚಲಿತದಲ್ಲಿವೆ.
ಟ್ರೆಂಡಿಯಾಗಿರುವ ಪಾರದರ್ಶಕ ಶೀರ್ ಶ್ರಗ್ಸ್
ಕಳೆದ ಬಾರಿ ಲಾಂಗ್ ಶ್ರಗ್ಸ್ ಟ್ರೆಂಡಿಯಾಗಿದ್ದವು. ಆದರೆ, ಈ ಬಾರಿ ಶಾರ್ಟ್ ಲೆಂಥ್‌ನವು ಚಾಲ್ತಿಯಲ್ಲಿವೆ. ಅದರಲ್ಲೂ ಉಡುಪಿನ ಮೇಲೆ ಧರಿಸಿದಾಗ ಧರಿಸಿರುವ ಉಡುಪು ಕಾಣುವಂತಹ ಪಾರದರ್ಶಕ ಶ್ರಗ್ಸ್ ಹುಡುಗಿಯರನ್ನು ಸೆಳೆದಿವೆ. ಫುಲ್ ಸ್ಲೀವ್‌ಗಿಂತ ಎಲ್ಬೋ ಸ್ಲೀವ್ ಅಥವಾ ತ್ರೀ ಫೋರ್ತ್ ಸ್ಲೀವ್ ಇರುವಂತಹ ಶ್ರಗ್ಸ್ ಹೆಚ್ಚು ಬೇಡಿಕೆಯಲ್ಲಿವೆ ಹಾಗೂ ಮಾರಾಟವಾಗುತ್ತಿವೆ ಎನ್ನುತ್ತಾರೆ ಮಾರಾಟಗಾರರು. ಇನ್ನು ಶ್ವೇತ ವರ್ಣದವು ಹೆಚ್ಚು ಬೇಡಿಕೆ ಪಡೆದುಕೊಂಡಿವೆ.
ಕಾಲರ್‌ನಂತೆ ಕಾಣುವ ಈ ಪಾರದರ್ಶಕ ಶ್ರಗ್ಸ್‌ಗಳು ವೆಸ್ಟರ್ನ್ ಔಟ್‌ಫಿಟ್‌ಗಳು ಹಾಗೂ ಸೆಮಿ ಇಂಡೋ-ವೆಸ್ಟರ್ನ್ ಉಡುಗೆಗಳೊಂದಿಗೆ ಮ್ಯಾಚ್ ಆಗುವ ಡಿಸೈನ್‌ನಲ್ಲಿ ಬಿಡುಗಡೆಗೊಂಡಿವೆ ಎನ್ನುತ್ತಾರೆ ಸ್ಟೈಲಿಸ್ಟ್‌ಗಳು.
ಶ್ರಗ್ಸ್ ಮಿಕ್ಸ್ ಮ್ಯಾಚ್
ಈ ಹಿಂದೆ ಶ್ರಗ್ಸ್ ಎಂದಾಕ್ಷಾಣ ಬಹುತೇಕ ಯುವತಿಯರು ಕಾಮನ್ ಕಲರ್ ಶ್ರಗ್ಸ್ ಖರೀದಿಸುತ್ತಿದ್ದರು. ಎಲ್ಲಾ ಉಡುಪುಗಳೊಂದಿಗೆ ಇವನ್ನು ಮಿಕ್ಸ್ ಮ್ಯಾಚ್ ಮಾಡಬಹುದು ಎಂಬುದು ಕಾರಣವಾಗಿತ್ತು. ಆದರೆ, ಇದೀಗ ಕಾಲ ಬದಲಾಗಿದೆ. ಮಿಕ್ಸ್ ಮ್ಯಾಚ್ ಎನ್ನುವುದಕ್ಕಿಂತ ಮಿಸ್ ಮ್ಯಾಚ್ ಸ್ಟೈಲಿಂಗ್ ಟ್ರೆಂಡ್‌ನಲ್ಲಿದೆ ಎನ್ನುತ್ತಾರೆ ಸ್ಟೈಲಿಸ್ಟ್‌ಗಳು. ಅವರು ಹೇಳುವಂತೆ, ಇದೀಗ ಪಾರದರ್ಶಕ ಶೀರ್ ಕಾನ್ಸೆಪ್ಟ್‌ನ ಶ್ರಗ್ಸ್ ಗಳನ್ನು ಯಾವುದೇ ಲೈಟ್ ಶೇಡ್‌ನ ಉಡುಗೆಗಳ ಮೇಲೂ ಧರಿಸಬಹುದು. ಇನ್ನು ಲೇಯರ್ ಲುಕ್ ನೀಡಬಹುದು ಎನ್ನುತ್ತಾರೆ.
ಟಾಮ್‌ಬಾಯ್ ಇಮೇಜ್
ಶ್ರಗ್ಸ್ ಅನ್ನು ಡಿಫರೆಂಟ್ ಆಗಿ ಬಿಂಬಿಸಲು ಫ್ರಾಕ್ ಮೇಲೆ ಧರಿಸಬಹುದು. ಅಷ್ಟೇಕೆ! ಯಾವುದೇ ಉಡುಪಿನ ಮೇಲೆ ಧರಿಸಬಹುದು. ತುದಿಯನ್ನು ಟೈ ಮಾಡಿ ಟಾಮ್ ಬಾಯ್ ಇಮೇಜ್ ನೀಡಬಹುದು.
- ತಿಳಿವರ್ಣದ ಉಡುಪಿನ ಮೇಲೆ ಶೀರ್ ಶ್ರಗ್ಸ್ ಧರಿಸುವುದು ಸೂಕ್ತ.
- ಟೈಟಾಗಿ ಟೈ ಮಾಡಿದಲ್ಲಿ ರೌಡಿ ಲುಕ್ನಂತೆ ಕಾಣಿಸಬಹುದು.
- ಆಕ್ಸೆಸರೀಸ್ ಹೈಲೈಟ್ ಮಾಡಬೇಡಿ.
- ಲೈಟ್ವೈಟ್ನದ್ದನ್ನು ಆಯ್ಕೆ ಮಾಡಿ.
(ಲೇಖಕಿ ಫ್ಯಾಷನ್ ಪತ್ರಕರ್ತೆ)
ಇದನ್ನೂ ಓದಿ: Sheer Puff Sleeve Blouse Fashion: ಮಹಿಳೆಯರ ಡಿಸೈನರ್ ಸೀರೆಗೆ ಬಂತು ಪಾರದರ್ಶಕ ಶೀರ್ ಪಫ್ ಬ್ಲೌಸ್ ಫ್ಯಾಷನ್!