ಶೀಲಾ ಸಿ. ಶೆಟ್ಟಿ, ಬೆಂಗಳೂರು
ಸ್ಯಾಂಡಲ್‌ವುಡ್ ನಟ ಲೂಸ್ ಮಾದ ಯೋಗಿ ತಮ್ಮ ಪತ್ನಿ ಹಾಗೂ ಮಗಳೊಂದಿಗೆ ವಿಂಟರ್ ಹಾಲಿಡೇ ಫ್ಯಾಷನ್‌ಗೆ (Star couple winter fashion) ಸೈ ಎಂದಿದ್ದಾರೆ. ಪತ್ನಿ ಸಾಹಿತ್ಯ ಹಾಗೂ ತಮ್ಮ ಮಗಳೊಂದಿಗೆ ವಿಂಟರ್ ಹಾಲಿಡೇ ಫ್ಯಾಷನ್‌ವೇರ್‌ನಲ್ಲಿ ಕಾಣಿಸಿಕೊಂಡಿರುವ ಅವರು ಹಿಮಾಚಲ್ ಪ್ರದೇಶದ ಸುತ್ತಮುತ್ತಲ ಪ್ರದೇಶದಲ್ಲಿ ಎಂಜಾಯ್ ಮಾಡುತ್ತಿದ್ದಾರೆ. ಪರ್ಫೆಕ್ಟ್ ಹಾಲಿ ಡೇ ಡ್ರೆಸ್‌ಕೋಡ್ ಪಾಲಿಸಿರುವ ಅವರೆಲ್ಲರ ಸೀಸನ್‌ವೇರ್ ಬಗ್ಗೆ ಫ್ಯಾಷನ್ ವಿಮರ್ಶಕರ ರಿವ್ಯೂ ನೀಡಿದ್ದಾರೆ. ಈ ಬಗ್ಗೆ ಇಲ್ಲಿದೆ ಡಿಟೇಲ್ಸ್.
ಸ್ಪಾಟ್‌ಗೆ ತಕ್ಕಂತೆ ಬದಲಾಗುವ ವಿಂಟರ್ ಫ್ಯಾಷನ್
“ಹಾಲಿ ಡೇ ಟ್ರಾವೆಲ್‌ನಲ್ಲಿ ಅದರಲ್ಲೂ ವಿಂಟರ್ ಸೀಸನ್‌ನ ಟ್ರಾವೆಲ್‌ನಲ್ಲಿ ಬೆಚ್ಚಗಿನ ಉಡುಪುಗಳನ್ನು ಧರಿಸುವುದು ಕಡ್ಡಾಯ. ಇಲ್ಲವಾದಲ್ಲಿ ಹವಮಾನ ಬದಲಾದಂತೆ ಆರೋಗ್ಯಕ್ಕೂ ಧಕ್ಕೆಯಾಗಬಹುದು. ಹಾಗಾಗಿ ನಾರ್ತ್ ಇಂಡಿಯಾ ಟ್ರಾವೆಲ್ ಮಾಡುವವರು ಆದಷ್ಟೂ ಬೆಚ್ಚಗಿನ ಔಟ್‌ಫಿಟ್ ಧರಿಸುತ್ತಾರೆ. ಒಳಗೆ ಥರ್ಮಲ್‌ವೇರ್ ಧರಿಸುವುದರ ಜೊತೆಗೆ ಮೇಲುಡುಗೆ ಅಂದರೆ ಇನ್ನಿತರೇ ಔಟ್‌ಫಿಟ್‌ಗಳನ್ನು ಅದರ ಮೇಲೆ ಧರಿಸುತ್ತಾರೆ. ಇನ್ನು ಹಿಮಾಚಲ ಪ್ರದೇಶ ಎಂದಾಕ್ಷಣ ಅಲ್ಲಿ ಚಳಿ ಹೆಚ್ಚಾಗಿರುವುದರೊಂದಿಗೆ ಹಿಮ ಕೂಡ ಬೀಳುತ್ತಿರುತ್ತದೆ. ಇದಕ್ಕೆ ಪೂರಕ ಎಂಬಂತೆ, ಡ್ರೆಸ್‌ಕೋಡ್ ಪಾಲಿಸುವುದು ತೀರಾ ಅಗತ್ಯ. ನಟ ಯೋಗಿ ಕುಟುಂಬ ಕೂಡ ಇದನ್ನು ಚಾಚೂ ತಪ್ಪದೇ ಪಾಲಿಸಿದೆ ಎನ್ನುತ್ತಾರೆ ಫ್ಯಾಷನ್ ವಿಮರ್ಶಕರು.
ನಟ ಯೋಗಿ ವಿಂಟರ್ ಫ್ಯಾಷನ್
ಲೂಸ್ ಮಾದ ಯೋಗಿ ಎಂದೇ ಕರೆಸಿಕೊಳ್ಳುವ ನಟ ಯೋಗಿಯವರು ಧರಿಸಿರುವ ರೆಡ್ ಶೇಡ್‌ನ ಹೂಡಿ ಇರುವಂತಹ ಮೆನ್ಸ್ ಬಾಂಬರ್ ಜಾಕೆಟ್ ಎದ್ದು ಕಾಣುವಂತಿದೆ. ಫ್ರೆಶ್ ಲುಕ್ ನೀಡಿದೆ. ಅದರೊಂದಿಗೆ ಅವರು ಥರ್ಮಲ್‌ವೇರ್ ಮೇಲೆ ಧರಿಸಿರುವ ಟೊರ್ನ್ ಡಾರ್ಕ್ ನೀಲಿ ಬಣ್ಣದ ಜೀನ್ಸ್ ಪ್ಯಾಂಟ್ , ಬ್ಲಾಕ್ ಶೂ ಬೆಚ್ಚಗಿರಿಸಿದೆ. ಬ್ಲ್ಯಾಕ್ ಶೇಡ್ ಸನ್‌ಗ್ಲಾಸ್ ಆಕರ್ಷಕವಾಗಿಸಿದೆ. ಇನ್ನು ಇವರ ಈ ಡ್ರೆಸ್‌ಕೋಡ್‌ಗೆ ಪತ್ನಿ ಸಾಹಿತ್ಯಾ ಅವರ ಗ್ರೇ ಹಾಗೂ ಬ್ಲ್ಯಾಕ್ ಬಣ್ಣದ ಬಾಂಬರ್ ಜಾಕೆಟ್ , ಬ್ಲ್ಯಾಕ್ ಪ್ಯಾಂಟ್ ಹಾಗೂ ಚಾಕೋಲೆಟ್ ಶೇಡ್‌ನ ವಿಂಟರ್ ಶೂ ಮ್ಯಾಚ್ ಆಗಿದೆ. ಫಂಕಿ ವೈಟ್ ಫ್ರೇಮ್ ಸನ್‌ಗ್ಲಾಸ್ ಫಂಕಿ ಲುಕ್ ನೀಡಿದೆ. ಇವರಿಬ್ಬರೊಂದಿಗೆ ಮಗಳ ಫಂಕಿ ಲುಕ್‌ನ ಗ್ಲೌವ್ಸ್, ಜಾಕೆಟ್ ಹಾಗೂ ವುಲ್ಲನ್ ಕ್ಯಾಪ್ ಆಕೆಯನ್ನು ಕ್ಯೂಟ್ ಆಗಿಸಿದೆ.
ಒಟ್ಟಾರೆ, ಸ್ಟಾರ್ ಕಪಲ್ ಫ್ಯಾಮಿಲಿಯ ವಿಂಟರ್ ಫ್ಯಾಷನ್ ಸೀಸನ್‌ಗೆ ತಕ್ಕಂತೆ ಪರ್ಫೆಕ್ಟ್ ಆಗಿದೆ ಎನ್ನುತ್ತಾರೆ ಫ್ಯಾಷನ್ ವಿಮರ್ಶಕರು.
(ಲೇಖಕಿ ಫ್ಯಾಷನ್ ಪತ್ರಕರ್ತೆ)
ಇದನ್ನೂ ಓದಿ: Winter Kids Fashion Tips: ವಿಂಟರ್‌ನಲ್ಲಿ ಮಕ್ಕಳ ಟ್ರೆಂಡಿ ವುಲ್ಲನ್‌ವೇರ್ ಆಯ್ಕೆಗೆ 5 ಟಿಪ್ಸ್