ಶೀಲಾ ಸಿ. ಶೆಟ್ಟಿ, ಬೆಂಗಳೂರು
ಎಂದಿನಂತೆ ಈ ಬಾರಿಯ ಚಳಿಗಾಲದಲ್ಲಿ ವೈವಿಧ್ಯಮಯ ಕಲರ್ಫುಲ್ ವುಲ್ಲನ್ ಸ್ವೆಟರ್ಗಳು (winter Sweater fashion) ನಾನಾ ಬಗೆಯ ಡಿಸೈನ್ನಲ್ಲಿ ಬಿಡುಗಡೆಗೊಂಡಿವೆ. ಲೇಯರ್ ಲುಕ್ಗೆ ಸಾಥ್ ನೀಡುವ ಇವನ್ನು ಹೇಗೆಲ್ಲಾ ಉಡುಪಿನೊಂದಿಗೆ ಸ್ಟೈಲಾಗಿ ಧರಿಸಿ ಫ್ಯಾಷೆನಬಲ್ ಆಗಿಯೂ ಕಾಣಿಸಬಹುದು ಹಾಗೆನ್ನುತ್ತಾರೆ ಸ್ಟೈಲಿಸ್ಟ್ಗಳು. ಇದಕ್ಕಾಗಿ ಮಿಕ್ಸ್ ಮ್ಯಾಚ್ ಮಾಡುವುದು ಮುಖ್ಯ ಎಂದು ಒಂದಿಷ್ಟು ಟಿಪ್ಸ್ ನೀಡಿದ್ದಾರೆ. “ಚಳಿಗಾಲಕ್ಕೂ ವುಲ್ಲನ್ ಸ್ವೆಟರ್ಸ್ಗೂ ಎಲ್ಲಿಲ್ಲದ ಸಂಬಂಧ. ಬೆಚ್ಚನೆಯ ಸ್ವೆಟರ್ ಧರಿಸಿದ್ದರೇ ಸಾಕು, ಚಳಿಯನ್ನು ಹೊಡೆದೊಡಿಸಬಹುದು. ಅದರಲ್ಲೂ ಇಂದು ಫ್ಯಾಷನ್ಗೆ ತಕ್ಕಂತೆ ನಾನಾ ಬಗೆಯ ಕಲರ್ಫುಲ್ ವುಲ್ಲನ್ ಸ್ವೆಟರ್ಗಳು ಮಾರುಕಟ್ಟೆಯಲ್ಲಿ ಲಗ್ಗೆಯಿಟ್ಟಿವೆ. ಸೀದಾ-ಸದಾ ಡಿಸೈನ್ನಲ್ಲಿ, ಬಗೆಬಗೆಯ ನೆಕ್ಲೈನ್ಗಳಲ್ಲಿ, ವೈವಿಧ್ಯಮಯ ಸ್ಲೀವ್ಗಳಲ್ಲಿ, ಟ್ರಾಪಿಕಲ್, ಫ್ಲೋರಲ್ ಹಾಗೂ ಡಾರ್ಕ್-ಲೈಟ್ ಶೇಡ್ಸ್ನಲ್ಲಿ ಸ್ವೆಟರ್ಗಳು ಫ್ಯಾಷನ್ ಲೋಕದ ಬಾಗಿಲು ತಟ್ಟಿವೆ. ಇವುಗಳನ್ನು ಧರಿಸುವ ಔಟ್ಫಿಟ್ನೊಂದಿಗೆ ಮ್ಯಾಚ್ ಮಾಡಿದಲ್ಲಿ ಆಕರ್ಷಕವಾಗಿ ಕಾಣಬಹುದು” ಎನ್ನುತ್ತಾರೆ ಸ್ಟೈಲಿಸ್ಟ್ ಜಾನ್.
ಲೈಟ್ವೈಟ್ ವುಲ್ಲನ್ ಸ್ವೆಟರ್ ಆಯ್ಕೆ ಉತ್ತಮ
ಇದೀಗ ದೊರೆಯುತ್ತಿರುವ ಆರಾಮ ಎನಿಸುವ, ಯಾವುದೇ ಉಡುಪಿನ ಮೇಲೂ ಧರಿಸಬಹುದಾದ ಸಿಂಪಲ್ ಹಾಗೂ ಡಿಸೈನರಿ ನೆಕ್ಲೈನ್ ಇರುವ ಲೈಟ್ವೈಟ್ ವುಲ್ಲನ್ ಸ್ವೆಟರ್ಸ್ ಆಯ್ಕೆ ಮಾಡಿ. ಇವುಗಳಲ್ಲೂ ನಾನಾ ಬ್ರಾಂಡ್ನಲ್ಲಿ ಸಾಕಷ್ಟು ಡಿಸೈನ್ನವು ಲಭ್ಯ. ಬಟನ್ ಇರುವಂತವು ಫಾರ್ಮಲ್ ಉಡುಪು ಧರಿಸುವವರಿಗೆ ಮ್ಯಾಚ್ ಆಗುತ್ತವೆ.
ಯೂನಿಸೆಕ್ಸ್ ವುಲ್ಲನ್ ಪುಲ್ಓವರ್ಸ್
ಇನ್ನು ಯುವಕರು, ಯುವತಿಯರು ಹಾಗೂ ಮಕ್ಕಳಿಗಾಗಿ ಇದೀಗ ನಾನಾ ನೆಕ್ಲೈನ್ನ ಲೈಟ್ವೈಟ್ನ ವುಲ್ಲನ್ ಪುಲ್ಓವರ್ಸ್ ಕಾಲಿಟ್ಟಿವೆ. ಇದು ಕ್ಯಾಶುವಲ್ ಉಡುಪು ಧರಿಸುವವರಿಗೆ ಬೆಸ್ಟ್. ಇದು ನಯಾ ಜಮಾನದ ಟ್ರೆಂಡ್ಗೆ ಒಗ್ಗುವುದಲ್ಲದೇ, ಪುರುಷರು -ಸ್ರೀಯರಿಗೂ ಒಪ್ಪುತ್ತದೆ. ಯೂನಿಸೆಕ್ಸ್ ಡಿಸೈನ್ನಲ್ಲಿ ಜನಪ್ರಿಯಗೊಂಡಿವೆ. ಇನ್ನು. ರಾಯಲ್ ಬ್ಲ್ಯೂ, ಚಾಕೋಲೇಟ್, ಟಾಫಿ, ಮಜೆಂತಾ, ತಿಳಿ ಗುಲಾಬಿ, ತಿಳಿ ಹಳದಿ, ಕೆಂಪು, ನೀಲಿ, ಹಸಿರು, ರೇಡಿಯಂ, ಕೇಸರಿ ಬಣ್ಣದ ವುಲ್ಲನ್ ಪುಲ್ಒವರ್ಗಳು ಇಂದು ಟ್ರೆಂಡಿಯಾಗಿವೆ.
ಪ್ರಿಂಟೆಡ್ ಬಟನ್ ವುಲ್ಲನ್ ಸ್ವೆಟರ್ಸ್
ಇನ್ನು ಸೀರೆ ಉಡುವ ನಾರಿಯರು, ಸಲ್ವಾರ್ ಧರಿಸುವ ಹುಡುಗಿಯರಿಗೆ ಸೂಕ್ತವೆನಿಸುವ ಪ್ರಿಂಟೆಡ್ ಹಾಗೂ ರೆಗ್ಯುಲರ್ ಡಿಸೈನ್ನ ಲಾಂಗ್ ಪ್ರಿಂಟೆಡ್ ಸ್ವೆಟರ್ಗಳು ಬಂದಿವೆ. ಕಾಲೇಜಿಗೆ ಹೋಗುವ ಹುಡುಗಿಯರು, ಉದ್ಯೋಗಸ್ಥರು ಸೇರಿದಂತೆ ಎಲ್ಲಾವರ್ಗದ ಮಹಿಳೆಯರು ಉಡುಪಿಗೆ ಮ್ಯಾಚ್ ಆಗುವ ವಿನ್ಯಾಸದಲ್ಲಿ ದೊರೆಯುತ್ತಿವೆ. ಇವು ಧರಿಸಿದಾಗ ಆಕರ್ಷಕವಾಗಿ ಕಾಣುತ್ತವೆ.
ಲಾಂಗ್ ಕೋಟ್ ಶೈಲಿಯ ವುಲ್ಲನ್ ಸ್ವೆಟರ್ಸ್
ಇನ್ನು ಕೋಟ್ ಶೈಲಿಯಲ್ಲಿ ವುಲ್ಲನ್ ಸ್ವೆಟರ್ಗಳು ಬಿಡುಗಡೆಗೊಂಡಿದ್ದು, ಲೇಯರ್ ಲುಕ್ ಬಯಸುವ ಕಾರ್ಪೋರೇಟ್ ಕ್ಷೇತ್ರದ ಹುಡುಗಿಯರಿಗೆ ಇವು ಮ್ಯಾಚ್ ಆಗುತ್ತವೆ.
ವುಲ್ಲನ್ ಸ್ವೆಟರ್ಸ್ ಕೇರ್
- ಕಡಿಮೆ ಬೆಲೆಯ ಸ್ವೆಟರ್ಗಳು ಬಣ್ಣಗೆಡುತ್ತವೆ, ಪರಿಶೀಲಿಸಿ ಕೊಳ್ಳಿ.
- ವುಲ್ಲನ್ ಸ್ವೆಟರ್ ಧರಿಸಿದಾಗ ಬ್ರಿಥಬಲ್ ಉಡುಪು ಧರಿಸಿ.
- ಯಾವುದೇ ಕಾರಣಕ್ಕೂ ನೆನೆಹಾಕಿ ಒಗೆಯಬೇಡಿ.
(ಲೇಖಕಿ ಫ್ಯಾಷನ್ ಪತ್ರಕರ್ತೆ)
ಇದನ್ನೂ ಓದಿ: Winter Kids Hoodie Fashion: ಇದ್ದರೆ ಹೀಗಿರಬೇಕು ಮಕ್ಕಳ ಚಳಿಗಾಲದ ಹೂಡಿ ಫ್ಯಾಷನ್!