ಶೀಲಾ ಸಿ. ಶೆಟ್ಟಿ, ಬೆಂಗಳೂರು
ಮಹಿಳಾ ದಿನಾಚಾರಣೆಗೂ (women’s day 2024) ಸ್ಟೈಲಿಂಗ್‌ಗೂ ಏನು ಸಂಬಂಧ ಎಂದುಕೊಳ್ಳುತ್ತಿದ್ದೀರಾ! ಖಂಡಿತಾ ಇದೆ. ನಿಮ್ಮ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಅಥವಾ ನಿಮ್ಮ ವ್ಯಕ್ತಿತ್ವಕ್ಕೆ ಸಂಬಂಧಿಸಿದಂತೆ ಈ ದಿನದಂದು ನಿಮ್ಮ ಸ್ಟೈಲಿಂಗ್ ಇದ್ದಾಗ ಮಾತ್ರ ನಿಮ್ಮ ಇಮೇಜ್‌ಗೆ ಘನತೆ ತಂದುಕೊಡಬಲ್ಲದು. ಆಕರ್ಷಕವಾಗಿ ಕಾಣಿಸಬಹುದು. ಅದಕ್ಕಾಗಿ ಈ 5 ಸಿಂಪಲ್ ಸ್ಟೈಲಿಂಗ್ ಟಿಪ್ಸ್ ಫಾಲೋ ಮಾಡಿ ಎನ್ನುತ್ತಾರೆ ಸ್ಟೈಲಿಸ್ಟ್ ರಿಚಾ.
“ಉದ್ಯೋಗಸ್ಥ ಮಹಿಳೆಯರು, ಹೋಮ್ ಮೇಕರ್ಸ್, ಕಾರ್ಪೋರೇಟ್ ಕ್ಷೇತ್ರದವರು, ಸ್ಪೋಟ್ಸ್, ಸಾಂಸ್ಕೃತಿಕ, ಕಲಾವಿದರು ಹೀಗೆ ಎಲ್ಲಾ ಕ್ಷೇತ್ರದ ಮಹಿಳೆಯರು ಅವರವರ ಕಾರ್ಯ ನಿರ್ವಹಣಾ ವಾತಾವರಣಕ್ಕೆ ಸಂಬಂಧಿಸಿದಂತೆ ಸ್ಟೈಲಿಂಗ್ ಫಾಲೋ ಮಾಡಬೇಕು” ಎನ್ನುತ್ತಾರೆ ಸ್ಟೈಲಿಸ್ಟ್ ಸಂಧ್ಯಾ ಶರ್ಮಾ ಅವರ ಪ್ರಕಾರ, ಮಹಿಳಾ ದಿನಾಚರಣೆ ಎಂದಾಕ್ಷಣ, ಯಾರೂ ಸೀರಿಯಸ್ ಲುಕ್ ನೀಡುವ ಸ್ಟೈಲಿಂಗ್ ಎಂದುಕೊಳ್ಳಬಾರದು ಎನ್ನುತ್ತಾರೆ.
ಸಾಮಾಜಿಕ ಕಳಕಳಿಯ ಕಾರ್ಯಕ್ರಮವಾದಲ್ಲಿ ಹೀಗೆ ಮಾಡಿ
ಸಾಮಾಜಿಕ ಕಳಕಳಿಯ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿರುವಿರಾದಲ್ಲಿ, ಆದಷ್ಟೂ ಸೀರೆ ಇಲ್ಲವೇ ಕುರ್ತಾಗೆ ಪ್ರಾಮುಖ್ಯತೆ ನೀಡಬೇಕು. ಎಥ್ನಿಕ್ ಲುಕ್‌ಗೆ ಆದ್ಯತೆ ನೀಡುವುದು ಉತ್ತಮ. ಹಾಗೆಂದು ಭಾರಿ ರೇಷ್ಮೆ ಸೀರೆ ಹಾಗೂ ವೆಡ್ಡಿಂಗ್ ಲುಕ್ ನೀಡುವ ಔಟ್‌ಫಿಟ್ಸ್ ಬೇಡ. ಕಾಟನ್ ಸೀರೆಗೆ ಪ್ರಾಮುಖ್ಯತೆ ನೀಡಿ.
ಕಾರ್ಪೋರೇಟ್ ಕ್ಷೇತ್ರದ ಮಹಿಳೆಯರ ಔಟ್‌ಫಿಟ್ಸ್
ಕಾರ್ಪೋರೇಟ್ ಕ್ಷೇತ್ರದ ಮಹಿಳೆಯರಾದಲ್ಲಿ ವೆಸ್ಟರ್ನ್ ಅಥವಾ ಫಾರ್ಮಲ್‌ಪ್ಯಾಂಟ್ ಸೂಟ್ ಧರಿಸಬಹುದು. ಟ್ರೆಂಡಿ ಔಟ್‌ಫಿಟ್‌ಗಳನ್ನು ಆಯ್ಕೆ ಮಾಡುವ ಸ್ವಾತಂತ್ರ್ಯ ಈ ಕ್ಷೇತ್ರದವರಿಗೆ ಹೆಚ್ಚಿದೆ ಎನ್ನಬಹುದು.
ವುಮೆನ್ಸ್ ಡೇ ಪಾರ್ಟಿ ಡ್ರೆಸ್‌ಕೋಡ್ಸ್
ಸಾಕಷ್ಟು ವುಮೆನ್ಸ್ ಕ್ಲಬ್ ಹಾಗೂ ಅಸೋಸಿಯೇಷನ್‌ನವರು ನಡೆಸುವ ಗೆಟ್ ಟುಗೆದರ್ ಅಥವಾ ಲಂಚ್, ಬ್ರಂಚ್ ಅಥವಾ ನೈಟ್ ಪಾರ್ಟಿಗಳಿಗೆ, ಅಲ್ಲಿ ನಿರ್ಧರಿಸಿದ ಡ್ರೆಸ್‌ಕೋಡ್ ಫಾಲೋ ಮಾಡಬೇಕಾಗುತ್ತದೆ. ಯೂನಿಫಾರ್ಮಿಟಿಗೆ ಪ್ರಾಮುಖ್ಯತೆ ನೀಡುವುದರಿಂದ ಎಲ್ಲರೂ ಒಂದೇ ರೀತಿಯಲ್ಲಿ ಕಂಡರೂ ಕಾಣಬಹುದು.
ಸಂಘ-ಸಂಸ್ಥೆಗಳ ಕಾರ್ಯಕ್ರಮದಲ್ಲಿ ಯೂನಿಫಾರ್ಮ್ ಸೀರೆ ಲುಕ್
ಒಂದೇ ಬಗೆಯ ಯೂನಿಫಾರ್ಮ್‌ನಂತಹ ಸೀರೆಗಳು ಬಹುತೇಕ ಸಂಘ-ಸಂಸ್ಥೆಗಳ ಡ್ರೆಸ್‌ಕೋಡ್‌ನಲ್ಲಿರುತ್ತವೆ. ಒಂದೇ ಬಗೆಯ ಸೀರೆಗಳನ್ನು ಧರಿಸಿಯೂ ಡಿಫರೆಂಟ್ ಲುಕ್ ಬೇಕಾಗಿದ್ದಲ್ಲಿ, ಡಿಸೈನರ್ ಬ್ಲೌಸ್ ಅಥವಾ ಹೈ ಕಾಲರ್ ನೆಕ್ ಸೇರಿದಂತೆ ಡಿಸೈನ್‌ನ ಬ್ಲೌಸ್ ಧರಿಸಬಹುದು. ಸೀರೆಯನ್ನು ಡಿಫರೆಂಟ್ ಆಗಿ ಡ್ರೇಪಿಂಗ್ ಮಾಡಬಹುದು.
ಬಿಂದಾಸ್ ಲುಕ್ ಮಹಿಳೆಯ ಔಟ್‌ಲುಕ್
ಸೀರೆ ಬೇಡ, ಕುರ್ತಾ ಬೇಡ, ಬಿಂದಾಸ್ ಲುಕ್ ಬೇಕು ಎನ್ನುವವರು, ಟ್ರೆಂಡಿ ಔಟ್‌ಫಿಟ್ ಜೊತೆಗೆ ಸನ್‌ಗ್ಲಾಸ್, ನೆತ್ತಿಯ ಮೇಲೊಂದು ಪೋನಿಟೈಲ್, ಹೈ ಹೀಲ್ಸ್ ಹಾಕಿಕೊಳ್ಳಬಹುದು. ಇದು ಬಿಂದಾಸ್ ಲುಕ್ ನೀಡುತ್ತದೆ.
(ಲೇಖಕಿ ಫ್ಯಾಷನ್ ಪತ್ರಕರ್ತೆ)
ಇದನ್ನೂ ಓದಿ: Womens Day 2024: ಉದ್ಯಾನನಗರಿಯ ಫ್ಯಾಷನ್ ಲೋಕದಲ್ಲಿ ಮಹಿಳೆಯರದೇ ಮೇಲುಗೈ!