-ಶೀಲಾ ಸಿ. ಶೆಟ್ಟಿ, ಬೆಂಗಳೂರು
ಹೈ ಫ್ಯಾಷನ್ ಜ್ಯುವೆಲರಿ ಲಿಸ್ಟ್‌ನಲ್ಲಿದ್ದ ಜಿರ್ಕೊನ್ ಜ್ಯುವೆಲರಿಗಳು (Zircon Jewellery Fashion) ಇದೀಗ ಎಲ್ಲಾ ವರ್ಗದ ಮಹಿಳೆಯರನ್ನು ಸೆಳೆದಿವೆ. ಕತ್ತಿಗೆ ಧರಿಸಿದಾಗ ಮಿರಮಿರ ಮಿನುಗುವ ವೈವಿಧ್ಯಮಯ ಈ ಜ್ಯುವೆಲರಿಗಳು ಇದೀಗ ಲೆಕ್ಕವಿಲ್ಲದಷ್ಟು ಡಿಸೈನ್‌ನಲ್ಲಿ ಬಿಡುಗಡೆಗೊಂಡಿದ್ದು, ಬೇಡಿಕೆ ಹೆಚ್ಚಿಸಿಕೊಂಡಿವೆ.
ಹೈ ಫ್ಯಾಷನ್ ಜ್ಯುವೆಲರಿಗಳಿವು
“ಜಿರ್ಕೊನ್ ಜ್ಯುವೆಲರಿ ಹೈ ಫ್ಯಾಷನ್ ಜ್ಯುವೆಲರಿ ಕೆಟಗರಿಯಲ್ಲಿ ಟಾಪ್ ಲಿಸ್ಟ್‌ನಲ್ಲಿವೆ. ಬಂಗಾರ ಹಾಗೂ ಬಂಗಾರೇತರ ಲೋಹದಲ್ಲೂ ಈ ಆಭರಣಗಳು ಮಾರುಕಟ್ಟೆಗೆ ಆಗಮಿಸಿವೆ. ಬಂಗಾರದಲ್ಲಾದರೇ ಕೊಂಚ ದುಬಾರಿ ಎಂದೆನಿಸುವುದರಿಂದ ಮಹಿಳೆಯರು, ಇತರೇ ಲೋಹದಲ್ಲಿ ಲಭ್ಯವಿರುವ ಡಿಸೈನ್‌ಗಳಿಗೆ ಮನಸೋಲಲಾರಂಭಿಸಿದ್ದಾರೆ. ಇದಕ್ಕೆ ಪ್ರಮುಖ ಕಾರಣ, ಆಭರಣಗಳ ಅತ್ಯಾಕರ್ಷಕ ವಿನ್ಯಾಸ ಹಾಗೂ ಔಟ್‌ಲುಕ್” ಎನ್ನುತ್ತಾರೆ ಜ್ಯುವೆಲ್ ಸ್ಟೈಲಿಸ್ಟ್ ಅಮನ್. ಅವರ ಪ್ರಕಾರ, ಜಿರ್ಕೊನ್ ಆಭರಣಗಳು ಮೊದಮೊದಲು ಯುವತಿಯರಿಗೆ ಮಾತ್ರ ಪ್ರಿಯವಾಗಿದ್ದವು. ಇದೀಗ ವಯಸ್ಸಿನ ಭೇದ-ಭಾವವಿಲ್ಲದೇ ಎಲ್ಲರೂ ಧರಿಸಲಾರಂಭಿಸಿದ್ದಾರೆ. ಪ್ರತಿ ಮಹಿಳೆಯ ಬಳಿಯೂ ಈ ವಿನ್ಯಾಸದ ಒಂದಾದರೂ ಆಭರಣದ ಕಲೆಕ್ಷನ್ ಇದ್ದೇ ಇರುತ್ತದೆ ಎನ್ನುತ್ತಾರೆ.
ಇದನ್ನೂ ಓದಿ: Pregnancy Fashion: ಪ್ರೆಗ್ನೆನ್ಸಿ ಸ್ಟೈಲಿಂಗ್‌ನಲ್ಲಿ ಮರೆಯದೇ ಗಮನದಲ್ಲಿಟ್ಟುಕೊಳ್ಳಬೇಕಾದ ಸಂಗತಿಗಳಿವು!
ಟ್ರೆಂಡಿಯಾಗಿರುವ ಜಿರ್ಕೊನ್ ಆಭರಣಗಳು
ಜಿರ್ಕೊನ್ ಬ್ರೈಡಲ್ ಸೆಟ್, ಬ್ರೈಡಲ್ ಪರ್ಲ್, ಸಿಲ್ವರ್ ಗೋಲ್ಡ್ ಪಾಲಿಶ್‌ನ ಜಿರ್ಕೊನ್ ನೆಕ್ಲೇಸ್ ಹಾಗೂ ಇಯರಿಂಗ್ಸ್, ಜಿರ್ಕೊನ್ ಎಮರಾಲ್ಡ್, ರೂಬಿ ಸೆಟ್ ಸೇರಿದಂತೆ ನಾನಾ ಬಗೆಯವು ಆಭರಣಗಳ ಲೋಕದಲ್ಲಿ ಸದ್ಯ ಟ್ರೆಂಡಿಯಾಗಿದ್ದು, ಬೇಡಿಕೆ ಹೆಚ್ಚಿಸಿಕೊಂಡಿವೆ. ಇನ್ನು, ಕ್ಯೂಬಿಕ್ಸ್, ಜೆಮ್, ಟೀ ಡ್ರಾಪ್, ರೊಡಿಯಂ ಪ್ಲೇಟೆಡ್, ಸ್ಟೆರ್ಲಿಂಗ್, ಗೋಲ್ಡ್ ಪ್ಲೇಟೆಡ್, ಚೋಕರ್ ಸ್ಟೈಲ್, ಕಾಪರ್ ಅಲೋಯ್ ಶೈಲಿಯವು ನಾನಾ ವಿನ್ಯಾಸದಲ್ಲಿ ಬಿಡುಗಡೆಗೊಂಡಿದ್ದು, ಉದ್ಯೋಗಸ್ಥ ಮಹಿಳೆಯರಿಗೆ ಪ್ರಿಯವಾಗಿವೆ.
ಜಿರ್ಕೊನ್ ಜ್ಯುವೆಲರಿ ಆಯ್ಕೆ
- ಜಿರ್ಕೊನ್ ಜ್ಯುವೆಲರಿಗಳಲ್ಲೂ ಲೆಕ್ಕವಿಲ್ಲದಷ್ಟು ಡಿಸೈನ್ಗಳು ಲಭ್ಯವಿರುವುದರಿಂದ ಆಯ್ಕೆ ಸುಲಭವೇನಲ್ಲ!
- ಧರಿಸುವ ಮ್ಯಾಚಿಂಗ್ ಔಟ್ಫಿಟ್ಗೆ ತಕ್ಕಂತೆ ಆಯ್ಕೆ ಮಾಡಬಹುದು.
- ಅಗಲವಾದ ಡಿಸೈನ್ನವನ್ನು ನೆಕ್ಲೈನ್ ಅಗಲವಾಗಿರುವ ಉಡುಪಿಗೆ ಧರಿಸಬಹುದು.
- ಸಿಂಪಲ್ ಡಿಸೈನ್ನವನ್ನು ಎಲ್ಲಾ ಬಗೆಯ ಔಟ್ಫಿಟ್ಗೂ ಧರಿಸಬಹುದು.
( ಲೇಖಕಿ ಫ್ಯಾಷನ್ ಪತ್ರಕರ್ತೆ )