Site icon Vistara News

GOLD PRICE: ಬೆಂಗಳೂರಿನಲ್ಲಿ ಬಂಗಾರದ ದರದಲ್ಲಿ 820 ರೂ.ಗಳ ಗಣನೀಯ ಇಳಿಕೆ

ಬೆಂಗಳೂರು: ಬಂಗಾರ ಕೊಳ್ಳಲು ಬಯಸುವವರಿಗೆ ಇದು ಸಿಹಿ ಸುದ್ದಿ. ಬೆಂಗಳೂರಿನಲ್ಲಿ 24 ಕ್ಯಾರಟ್‌ ಚಿನ್ನದ ದರದಲ್ಲಿ ಪ್ರತಿ 10 ಗ್ರಾಮ್‌ ಚಿನ್ನದ ದರದಲ್ಲಿ 820 ರೂ. ಇಳಿಕೆಯಾಗಿದೆ.

ಆಭರಣ ಚಿನ್ನ ಅಥವಾ 22 ಕ್ಯಾರಟ್‌ ಚಿನ್ನಕ್ಕೆ 10 ಗ್ರಾಮ್‌ ಗೆ 750 ರೂ. ಇಳಿಕೆಯಾಗಿದ್ದು, 46,450 ರೂ.ಗೆ ತಗ್ಗಿದೆ. 100 ಗ್ರಾಮ್‌ ಆಭರಣ ಚಿನ್ನ ಖರೀದಿಸಿದರೆ 7,500ರೂ. ದರ ಇಳಿಕೆಯ ಪ್ರಯೋಜನ ಪಡೆಯಬಹುದು ( 4.64ಲಕ್ಷ ರೂ.)
ಚಿನ್ನದ ದರ ಅಂತಾರಾಷ್ಟ್ರೀಯ ಮಾರುಕಟ್ಟೆಯ ದರ, ಡಾಲರ್‌ ಎದುರು ರೂಪಾಯಿಯ ಮೌಲ್ಯವನ್ನು ಅವಲಂಬಿಸಿ ವ್ಯತ್ಯಾಸವಾಗುತ್ತದೆ.

ಮೇ 12ರಂದು 490ರೂ. ಏರಿದ್ದ ದರ ಇಂದು 820 ರೂ. ಇಳಿಕೆಯಾಗಿದೆ. ಬಂಗಾರದ ದರದಲ್ಲಿ ಕೆಲ ದಿನಗಳಿಂದ ತೀವ್ರ ಏರಿಳಿತ ಕಂಡು ಬಂದಿದೆ. ಬೆಳ್ಳಿಯ ದರದಲ್ಲಿ 1,600ರೂ.ಗಳ ಇಳಿಕೆಯಾಗಿದ್ದು, 63,400 ರೂ.ಗೆ ತಗ್ಗಿದೆ.

Exit mobile version