Site icon Vistara News

Gold Rate Today: ಚಿನ್ನ ಖರೀದಿಸುವವರಿಗೆ ಗುಡ್‌ ನ್ಯೂಸ್;‌ ಇಂದು ಬೆಲೆ ಏರಿಕೆ ಇಲ್ಲ

Actress Meghana

Gold Rate Remains Unchanged In Bengaluru Today

ಬೆಂಗಳೂರು: ಉದ್ಯಾನ ನಗರಿ ಬೆಂಗಳೂರಿನಲ್ಲಿ (Bengaluru) ಭಾನುವಾರ ಚಿನ್ನದ ಬೆಲೆಯಲ್ಲಿ ವ್ಯತ್ಯಾಸವಾಗಿಲ್ಲ. ಹಾಗಾಗಿ, ವೀಕೆಂಡ್‌ನಲ್ಲಿ ಚಿನ್ನ ಖರೀದಿಸುವವರಿಗೆ ಹೊರೆಯಾಗುವುದಿಲ್ಲ. ಬೆಂಗಳೂರಿನಲ್ಲಿ ಇಂದು (ಮಾರ್ಚ್‌ 17) (Gold Rate Today) 22 ಕ್ಯಾರಟ್‌ನ ಒಂದು ಗ್ರಾಂ ಚಿನ್ನದ ಬೆಲೆಯು 6,059 ರೂ. ಇದ್ದರೆ, 24 ಕ್ಯಾರಟ್‌ನ ಒಂದು ಗ್ರಾಂ ಚಿನ್ನದ ಬೆಲೆಯು 6,610 ರೂ. ಇದೆ.

ಶನಿವಾರ (ಮಾರ್ಚ್‌ 16) ಚಿನ್ನದ ಬೆಲೆಯಲ್ಲಿ ಒಂದು ಗ್ರಾಂಗೆ ಒಂದು ರೂಪಾಯಿ ಮಾತ್ರ ಇಳಿಕೆಯಾಗಿತ್ತು. ಶುಕ್ರವಾರ ಬೆಲೆ ಯಥಾಸ್ಥಿತಿ ಇತ್ತು. ಕಳೆದ 10 ದಿನಗಳಲ್ಲಿ ಚಿನ್ನದ ಬೆಲೆಯು ನಾಲ್ಕು ಬಾರಿ ಯಥಾಸ್ಥಿತಿ ಇದ್ದರೆ, ಮೂರು ಬಾರಿ ಇಳಿಕೆ ಕಂಡಿತ್ತು. ಮೂರು ಬಾರಿ ಏರಿಕೆಯಾಗಿತ್ತು. ಇನ್ನು ಭಾನುವಾರ ಬೆಳ್ಳಿಯ ಬೆಲೆಯಲ್ಲೂ ಯಾವುದೇ ವತ್ಯಾಸವಾಗಿಲ್ಲ. ಬೆಳ್ಳಿಯ ಬೆಲೆಯು ಒಂದು ಗ್ರಾಂಗೆ 76.10 ರೂ. ಇದೆ.

ನಗರ22 ಕ್ಯಾರಟ್24 ಕ್ಯಾರಟ್
ದಿಲ್ಲಿ60,74066,250
ಮುಂಬಯಿ60,59066,110
ಬೆಂಗಳೂರು60,59066,710
ಚೆನ್ನೈ61,15066,440

ಚಿನ್ನದ ಕ್ಯಾರಟ್‌ ಎಂದರೇನು?

ಚಿನ್ನದ ಕ್ಯಾರಟ್‌ ಎಂಬುದು ಚಿನ್ನದ ಶುದ್ಧತೆಯನ್ನು ಅಳೆಯಲು ಬಳಸುವ ಪದ. ಚಿನ್ನದ ಶುದ್ಧತೆಯನ್ನು ಅಳೆಯಲು ಕ್ಯಾರಟ್ ಅನ್ನು ಒಂದು ಘಟಕವಾಗಿ ಬಳಸಲಾಗುತ್ತದೆ. ಕ್ಯಾರಟೇಜ್ ಹೆಚ್ಚು‌ ಇದ್ದಷ್ಟೂ ಚಿನ್ನವು ಶುದ್ಧವಾಗಿರುತ್ತದೆ. ಇತರ ಲೋಹಗಳೊಂದಿಗೆ ಮಿಶ್ರಿತ ಚಿನ್ನದ ಶುದ್ಧತೆಯ ಮಾಪನವೇ ‘ಕ್ಯಾರಟೇಜ್’. ಕ್ಯಾರಟ್‌ನ ಚಿಹ್ನೆಯು “K”

24 ಕ್ಯಾರಟ್ ಎಂಬುದು ಬೇರೆ ಯಾವುದೇ ಲೋಹಗಳ ಮಿಶ್ರವಿಲ್ಲದ ಶುದ್ಧ ಚಿನ್ನವಾಗಿದೆ. 24 ಕ್ಯಾರಟ್ ಚಿನ್ನವನ್ನು ಶುದ್ಧ ಚಿನ್ನ ಅಥವಾ 100 ಪ್ರತಿಶತ ಚಿನ್ನ ಎಂದೂ ಕರೆಯಲಾಗುತ್ತದೆ. ಚಿನ್ನದ ಎಲ್ಲ 24 ಭಾಗಗಳು ಯಾವುದೇ ಲೋಹವನ್ನು ಸೇರಿಸಿರುವುದಿಲ್ಲ. ಇದು 99.9 ಪ್ರತಿಶತ ಶುದ್ಧವಾಗಿರುತ್ತದೆ. ಇದು ಒಂದು ವಿಶಿಷ್ಟವಾದ ಪ್ರಕಾಶಮಾನವಾದ ಹಳದಿ ಬಣ್ಣವನ್ನು ಹೊಂದಿರುತ್ತದೆ. ನಾಣ್ಯಗಳು ಮತ್ತು ಬಾರ್‌ಗಳನ್ನು ಹೆಚ್ಚಾಗಿ 24 ಕ್ಯಾರೆಟ್ ಚಿನ್ನದಿಂದ ಖರೀದಿಸಲಾಗುತ್ತದೆ.

gold in hand

24 ಕ್ಯಾರಟ್ ಚಿನ್ನ ಮೃದುವಾಗಿರುತ್ತದೆ, ಕಡಿಮೆ ಸಾಂದ್ರತೆಯದಾಗಿರುತ್ತದೆ. ಆದ್ದರಿಂದ ಆಭರಣಗಳನ್ನು ಮಾಡಲು ಇದು ಸೂಕ್ತವಲ್ಲ. ಕಿವಿ ಸೋಂಕಿನಿಂದ ಬಳಲುತ್ತಿರುವ ಮಕ್ಕಳಿಗೆ ಬಳಸುವಂತಹ ಎಲೆಕ್ಟ್ರಾನಿಕ್ಸ್ ಮತ್ತು ವೈದ್ಯಕೀಯ ಸಾಧನಗಳಲ್ಲಿ 24k ಚಿನ್ನವನ್ನು ಬಳಸಲಾಗುತ್ತದೆ.

ಇದನ್ನೂ ಓದಿ: Raichur News : ಬಾಯ್‌ಫ್ರೆಂಡ್‌ಗಾಗಿ ಚಿನ್ನ ಕದ್ದಳು; ಮರ್ಯಾದೆಗೆ ಅಂಜಿ ಪೋಷಕರು ಸೂಸೈಡ್‌, ಮಗಳು ಸೀರಿಯಸ್‌

22 ಕ್ಯಾರೆಟ್ ಚಿನ್ನ ಇದರಲ್ಲಿ 22 ಭಾಗಗಳಲ್ಲಿ ಚಿನ್ನ ಹಾಗೂ ಉಳಿದ ಎರಡು ಭಾಗಗಳಲ್ಲಿ ಕೆಲವು ಇತರ ಲೋಹಗಳಿರುತ್ತವೆ. ಆಭರಣಗಳ ತಯಾರಿಕೆಯಲ್ಲಿ ಇದನ್ನು ಹೆಚ್ಚು ವ್ಯಾಪಕವಾಗಿ ಬಳಸಲಾಗುತ್ತದೆ. ಬೆಳ್ಳಿ, ಸತು, ನಿಕಲ್ ಮತ್ತು ಇತರ ಮಿಶ್ರಲೋಹಗಳಂತಹ ಇತರ ಲೋಹಗಳನ್ನು ಸೇರ್ಪಡೆ ಮಾಡಲಾಗುತ್ತದೆ. ಇದು ಚಿನ್ನದ ವಿನ್ಯಾಸವನ್ನು ಗಟ್ಟಿಗೊಳಿಸುತ್ತದೆ ಮತ್ತು ಆಭರಣವನ್ನು ಹೆಚ್ಚು ಬಾಳಿಕೆ ಬರುವಂತೆ ಮಾಡುತ್ತದೆ. 22 ಕ್ಯಾರಟ್ ಚಿನ್ನವು 91.67 ಪ್ರತಿಶತ ಚಿನ್ನವನ್ನು ಹೊಂದಿದ್ದು, ಉಳಿದ 8.33 ಪ್ರತಿಶತ ಬೇರೆ ಲೋಹಗಳಿಂದ ಮಾಡಲ್ಪಟ್ಟಿರುತ್ತದೆ. 18 ಕ್ಯಾರಟ್ ಚಿನ್ನವು 75 ಪ್ರತಿಶತ ಚಿನ್ನವನ್ನು ಒಳಗೊಂಡಿರುತ್ತದೆ. ಉಳಿದ ತಾಮ್ರ ಅಥವಾ ಬೆಳ್ಳಿಯಂತಹ ಇತರ ಲೋಹಗಳ 25 ಪ್ರತಿಶತದೊಂದಿಗೆ ಮಿಶ್ರಣವಾಗಿರುತ್ತದೆ. ಸ್ಟಡೆಡ್ ಆಭರಣಗಳು ಮತ್ತು ವಜ್ರದ ಆಭರಣಗಳನ್ನು 18 ಕ್ಯಾರಟ್ ಚಿನ್ನವನ್ನು ಬಳಸಿ ತಯಾರಿಸಲಾಗುತ್ತದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version