Site icon Vistara News

Dina Bhavishya : ಉದ್ಯೋಗಿಗಳೇ ಎಚ್ಚರ! ಸಹದ್ಯೋಗಿಗಳಿಂದ ಕಾದಿದೆ ಗಂಡಾಂತರ

Possibility of irritation from colleagues

ಚಂದ್ರನು ಮಂಗಳವಾರವೂ ವೃಶ್ಚಿಕ ರಾಶಿಯಲ್ಲೆ ಇರಲಿದ್ದಾನೆ. ಇದರಿಂದಾಗಿ ಮೇಷ, ವೃಷಭ, ಸಿಂಹ, ತುಲಾ, ಧನಸ್ಸು, ಮಕರ ರಾಶಿಯವರಿಗೆ ಚಂದ್ರನ ಬಲ ದೊರೆಯಲಿದೆ. ಸಿಂಹ ಹಾಗೂ ಕುಂಭ ರಾಶಿಯ ವಿವಾಹ ಆಕಾಂಕ್ಷಿಗಳಿಗೆ ಶುಭ ಸುದ್ದಿ ಸಿಗುವ ಸಾಧ್ಯತೆ. ಮೇಷ, ವೃಶ್ಚಿಕ, ಧನಸ್ಸು ರಾಶಿಯವರು ಮಾತಿನಲ್ಲಿ ಹಿಡಿತ ಇರಬೇಕು. ವೃಶ್ಚಿಕ ರಾಶಿಯವರು ಇತರರನ್ನು ಟೀಕಿಸಲು ಹೋಗಿ ಅಮೂಲ್ಯವಾದ ಸಮಯ ವ್ಯರ್ಥ ಮಾಡಿಕೊಳ್ಳುವುದು ಬೇಡ. ಮೀನ ರಾಶಿಯವರಿಗೆ ರಹಸ್ಯ ಕಾರ್ಯಗಳು ಯಶಸ್ಸು ತಂದು ಕೊಡಲಿವೆ. ಜತೆಗೆ ವಿನಾಕಾರಣ ಕೋಪಗೊಂಡು ಮನಸ್ಸಿನ ನೆಮ್ಮದಿ ಹಾಳು ಮಾಡಿಕೊಳ್ಳುವುದು ಬೇಡ. ಇತರೆ ದ್ವಾದಶ ರಾಶಿಗಳ ಇಂದಿನ ಭವಿಷ್ಯ ಹೇಗಿದೆ? ಪಂಚಾಂಗ ಏನು ಹೇಳುತ್ತದೆ (Kannada Dina Bhavishya) ಎಂಬುದನ್ನು ತಿಳಿಯೋಣ.

ಇಂದಿನ ಪಂಚಾಂಗ (kannada panchanga) (22-08-2023)

ಶ್ರೀ ಶಕೇ 1945, ಶೋಭಕೃತ ನಾಮ ಸಂವತ್ಸರ, ದಕ್ಷಿಣಾಯಣ, ವರ್ಷ ಋತು, ಶ್ರಾವಣ ಮಾಸ, ಶುಕ್ಲ ಪಕ್ಷ.
ತಿಥಿ: ಷಷ್ಠಿ 27:05 ವಾರ: ಮಂಗಳವಾರ
ನಕ್ಷತ್ರ: ಚಿತ್ತಾ 06:30 ಯೋಗ: ಶುಕ್ಲ 22:16
ಕರಣ: ಕೌಲವ 14:37 ಅಮೃತ ಕಾಲ: ರಾತ್ರಿ 10:45 ರಿಂದ ಮಧ್ಯರಾತ್ರಿ 12:27 ರವರೆಗೆ
ದಿನದ ವಿಶೇಷ: ಕಲ್ಕಿ ಜಯಂತಿ, ಮಂಗಳಗೌರಿ ವ್ರತ, ನೀಲಾಂಬಿಕಾ ಷಷ್ಠಿ

ಸೂರ್ಯೋದಯ : 06:08  ಸೂರ್ಯಾಸ್ತ : 06:37

ರಾಹುಕಾಲ ಸಾಯಂಕಾಲ 3.00 ರಿಂದ 4.30
ಗುಳಿಕಕಾಲ: ಮಧ್ಯಾಹ್ನ 12 ರಿಂದ 1.30
ಯಮಗಂಡಕಾಲ: ಬೆಳಗ್ಗೆ 9.00 ರಿಂದ 10.30

ದ್ವಾದಶ ರಾಶಿ ಭವಿಷ್ಯ (Dina Bhavishya in Kannada)

ಮೇಷ: ಸ್ನೇಹಿತರು ಅಥವಾ ಕುಟುಂಬದ ಸದಸ್ಯರೊಂದಿಗೆ ಪ್ರಯಾಣ ಸಾಧ್ಯತೆ. ಆರೋಗ್ಯದಲ್ಲಿ ಸ್ವಲ್ಪ ಮಟ್ಟಿನ ವ್ಯತ್ಯಾಸದಿಂದ ಖರ್ಚು ಆಗಲಿದೆ. ಹಿರಿಯರ ಮಾರ್ಗದರ್ಶನ ಸಿಗಲಿದೆ. ಅತಿಥಿಗಳ ಆಗಮನ ನಿಮ್ಮ ಯೋಜಿತ ಕಾರ್ಯದಲ್ಲಿ ವಿಳಂಬವಾಗುವ ಸಾಧ್ಯತೆ. ವೈವಾಹಿಕ ಜೀವನದಲ್ಲಿ ವಿರಸ ಉಂಟಾಗುವ ಸಾಧ್ಯತೆ, ಮಾತಿನಲ್ಲಿ ಹಿಡಿತವಿರಲಿ. ಕೌಟುಂಬಿಕವಾಗಿ ಸಾಧಾರಣ ಫಲ.
ಅದೃಷ್ಟ ಸಂಖ್ಯೆ: 4

ವೃಷಭ: ಕೆಲಸ ಕಾರ್ಯಗಳಲ್ಲಿನ ಯಶಸ್ಸಿಂದ ಪ್ರಶಂಸೆ ಸಿಗುವುದು. ದಿನದ ಮಟ್ಟಿಗೆ ಖರ್ಚು. ಸಂಬಂಧವಿರದ ವಿಷಯಗಳಿಗೆ ಕಿವಿಗೊಡವುದು ಬೇಡ. ಹೂಡಿಕೆ ವ್ಯವಹಾರದಲ್ಲಿ ತೊಡಗುವುದು ಬೇಡ. ಹಳೆಯ ವಿಚಾರಗಳನ್ನು ಕೆದಕುವುದು ಬೇಡ. ಆರೋಗ್ಯ ಮಧ್ಯಮ ಸ್ಥಿತಿಯಲ್ಲಿರಲಿದೆ. ಕೌಟುಂಬಿಕವಾಗಿ ಸಾಧಾರಣ ಫಲ.
ಅದೃಷ್ಟ ಸಂಖ್ಯೆ: 3

ಮಿಥುನ: ನಿಮ್ಮ ಅಭಿಪ್ರಾಯಗಳಿಗೆ ವಿರೋಧ ವ್ಯಕ್ತವಾಗುವ ಸಾಧ್ಯತೆ, ಇದರಿಂದ ಆತುರದಲ್ಲಿ ಮಾತನಾಡಿ ಮಾನಸಿಕ ನೆಮ್ಮದಿಯನ್ನು ಹಾಳು ಮಾಡಿಕೊಳ್ಳುವುದು ಬೇಡ. ಅನಿರೀಕ್ಷಿತ ಖರ್ಚು. ಆರೋಗ್ಯದ ಕಡೆಗೆ ಕಾಳಜಿ ವಹಿಸುವುದು ಉತ್ತಮ. ಕೌಟುಂಬಿಕವಾಗಿ ಸಾಧಾರಣ ಫಲ.
ಅದೃಷ್ಟ ಸಂಖ್ಯೆ: 1

ಕಟಕ: ಕೆಲಸ ಕಾರ್ಯಗಳಲ್ಲಿ ಯಶಸ್ಸು ಸಿಗಲಿದೆ. ಗೃಹಬಳಕೆ ಸಾಧನಗಳ ಖರೀದಿ ಸಾಧ್ಯತೆಯಿಂದ ಖರ್ಚು. ವ್ಯಾಪಾರ ವ್ಯವಹಾರದಲ್ಲಿ ಪ್ರಗತಿ. ಅತಿಥಿಗಳ ಆಗಮನ ಹರ್ಷ ತರಲಿದೆ. ಆರೋಗ್ಯ ಉತ್ತಮ. ಉದ್ಯೋಗಿಗಳಿಗೆ ಕಿರಿಕಿರಿ ಸಾಧ್ಯತೆ. ಕೌಟುಂಬಿಕವಾಗಿ ಶುಭ ಫಲ.
ಅದೃಷ್ಟ ಸಂಖ್ಯೆ: 5

ಸಿಂಹ: ನಿಮ್ಮ ಮಾತುಗಳು ಇತರರನ್ನು ಆಕರ್ಷಸಲಿದೆ. ನಾಲಿಗೆಯ ರುಚಿಗೆ ಮಾರು ಹೋಗಿ ಆರೋಗ್ಯವನ್ನು ಹಾಳು ಮಾಡಿಕೊಳ್ಳುವುದು ಬೇಡ. ವಿವಾಹ ಆಕಾಂಕ್ಷಿಗಳಿಗೆ ಶುಭ ಸುದ್ದಿ ಸಿಗುವ ಸಾಧ್ಯತೆ. ಹಣಕಾಸು ವ್ಯವಹಾರದಲ್ಲಿ ಪ್ರಗತಿ. ಸಂಗಾತಿಯ ಮಾತುಗಳು ಮಧುರವೆನಿಸುವುದು. ಕೌಟುಂಬಿಕವಾಗಿ ಶುಭ ಫಲ.
ಅದೃಷ್ಟ ಸಂಖ್ಯೆ: 3

ಕನ್ಯಾ: ನಿಮ್ಮ ತ್ಯಾಗದ ಮನೋಭಾವ ನಿಮಗೆ ಸಂತಸ ತರುವುದು. ಯಾರೊಂದಿಗೂ ದಿನದ ಮಟ್ಟಿಗೆ ಹಣಕಾಸಿನ ವ್ಯವಹಾರ ಮಾಡಬೇಡಿ, ವಿನಾಕಾರಣ ವಿವಾದವನ್ನು ಮೈಮೇಲೆ ಎಳೆದುಕೊಳ್ಳುವುದು ಬೇಡ. ಕುಟುಂಬದಲ್ಲಿ ಅನಾವಶ್ಯಕ ಮಾತುಗಳಿಂದ ಜಗಳವಾಗಬಹುದು, ಮೌನದಿಂದ ವರ್ತಿಸಿ. ಕೌಟುಂಬಿಕವಾಗಿ ಸಾಧಾರಣ ಫಲ.
ಅದೃಷ್ಟ ಸಂಖ್ಯೆ: 1

ಭವಿಷ್ಯ ಮತ್ತು ಜ್ಯೋತಿಷ್ಯಕ್ಕೆ ಸಂಬಂಧಿಸಿದ ಲೇಖನ/ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್‌ (Click Here) ಮಾಡಿ

ತುಲಾ: ಇತರರು ನಿಮ್ಮ ಕಾರ್ಯಗಳನ್ನು ಪ್ರಶಂಸೆ ಮಾಡುವರು. ಹಣಕಾಸಿನ ಹರಿವು ಹೆಚ್ಚಾಗಲಿದೆ. ವ್ಯಾಪಾರ ವ್ಯವಹಾರದಲ್ಲಿ ಪ್ರಗತಿ. ಸಹದ್ಯೋಗಿಗಳು ನಿಮ್ಮ ವಿರುದ್ಧ ಪಿತೂರಿ ಮಾಡುವ ಸಾಧ್ಯತೆ ಇದ್ದು, ಎಚ್ಚರಿಕೆ ಇರಲಿ. ವಿನಾಕಾರಣ ಜಗಳ ಮಾಡಿ ಮನಸ್ಸು ಕೆಡಿಸಿಕೊಳ್ಳುವುದು ಬೇಡ. ಕೌಟುಂಬಿಕವಾಗಿ ಮಿಶ್ರ ಫಲ.
ಅದೃಷ್ಟ ಸಂಖ್ಯೆ: 4

ವೃಶ್ಚಿಕ: ಇತರರನ್ನು ಟೀಕಿಸಲು ನಿಮ್ಮ ಅಮೂಲ್ಯ ಸಮಯ ವ್ಯರ್ಥ ಮಾಡುವುದು ಬೇಡ. ಅನಾವಶ್ಯಕ ವಿಚಾರ ಮಾಡಿ ಆರೋಗ್ಯ ಹಾಳು ಮಾಡಿಕೊಳ್ಳುವುದು ಬೇಡ. ಹಣಕಾಸು ವ್ಯವಹಾರದಲ್ಲಿ ಪ್ರಗತಿ. ಉದ್ಯೋಗಿಗಳಿಗೆ ಶುಭ. ಕುಟುಂಬದಲ್ಲಿ ಹಳೆಯ ವಿಚಾರಗಳು ಕಲಹ ಸೃಷ್ಟಿಸಬಹುದು, ಮಾತು ಮಿತವಾಗಿರಲಿ. ಕೌಟುಂಬಿಕವಾಗಿ ಸಾಧಾರಣ ಫಲ.
ಅದೃಷ್ಟ ಸಂಖ್ಯೆ: 5

ಧನಸ್ಸು: ಕುಟುಂಬದ ಸದಸ್ಯರೊಂದಿಗೆ ಮನರಂಜನಾ ಕಾರ್ಯಕ್ರಮಗಳಲ್ಲಿ ಭಾಗವಹಿಸುವ ಸಾಧ್ಯತೆ ಇದೆ. ಅಮೂಲ್ಯ ವಸ್ತುಗಳ ಮೇಲೆ ಗಮನವಿರಲಿ. ದಿನದ ಮಟ್ಟಿಗೆ ಹೂಡಿಕೆ ವ್ಯವಹಾರದಲ್ಲಿ ತೊಡುಗುವುದು ಬೇಡ. ಹಣಕಾಸು ಪ್ರಗತಿ ಸಾಧಾರಣ. ವಿನಾಕಾರಣ ನಿಮ್ಮ ಸಿಟ್ಟು ಸಂಗಾತಿಯ ಮೇಲೆ ಹಾಕಿ, ಕುಟುಂಬದ ವಾತಾವರಣ ಕೆಡಿಸುವುದು ಬೇಡ. ಕೌಟುಂಬಿಕವಾಗಿ ಮಿಶ್ರ ಫಲ.
ಅದೃಷ್ಟ ಸಂಖ್ಯೆ: 2

ಹೊಸ್ತಿಲು ಪೂಜೆ ಮಾಡಿದರೆ ದುಷ್ಟಶಕ್ತಿಗಳು ಹೋಗುತ್ತಾ? ಇಲ್ಲಿದೆ ನೋಡಿ ಉತ್ತರ

ಮಕರ: ನಿಮ್ಮ ಕೋಪದ ಸ್ವಭಾವದಿಂದ ಇತರರೊಂದಿಗೆ ವಾದಕ್ಕೆಳಿಯಬೇಡಿ. ಆತುರದಲ್ಲಿ ಅತಿರೇಕದ ಮಾತುಗಳು ಜಗಳ ತಂದೀತು. ಆರೋಗ್ಯದ ಕಡೆಗೆ ಗಮನವಿರಲಿ. ದಿನದ ಮಟ್ಟಿಗೆ ಖರ್ಚು ಹೆಚ್ಚಲಿದೆ. ಆತ್ಮೀರೊಂದಿಗೆ ಪ್ರಯಾಣಿಸುವ ಸಾಧ್ಯತೆ ಇದೆ. ಉದ್ಯೋಗಿಗಳಿಗೆ ಕಿರಿಕಿರಿ ಉಂಟಾಗುವ ಸಾಧ್ಯತೆ ಇದೆ. ಕೌಟುಂಬಿಕವಾಗಿ ಶುಭ ಫಲ.
ಅದೃಷ್ಟ ಸಂಖ್ಯೆ: 2

ಕುಂಭ: ಕೆಲಸಕ್ಕೆ ಹಾಕಿದ ಶ್ರಮ ವ್ಯರ್ಥವಾಗದಂತೆ ಎಚ್ಚರಿಕೆ ವಹಿಸಿ. ಆತುರದಲ್ಲಿ ಅತಿರೇಕದ ಮಾತುಗಳನ್ನು ಆಡುವುದು ಸರಿಯಲ್ಲ, ತಾಳ್ಮೆಯಿಂದ ಮಾತನಾಡಿ. ವಿವಾಹ ಅಪೇಕ್ಷಿತರಿಗೆ ಶುಭ ಸುದ್ದಿ ಸಿಗುವ ಸಾಧ್ಯತೆ ಇದೆ. ಹಿರಿಯರಿಂದ ಮಾರ್ಗದರ್ಶನ ಸಿಗಲಿದೆ. ಕೌಟುಂಬಿಕವಾಗಿ ಶುಭ ಫಲ.
ಅದೃಷ್ಟ ಸಂಖ್ಯೆ: 9

ಇದನ್ನೂ ಓದಿ : ತಾತಯ್ಯ ತತ್ವಾಮೃತಂ: ದೇಹದಲ್ಲಿ ಜೀವ ಇರುವಾಗ ಏನು ಮಾಡಬೇಕು?

ಮೀನ: ರಹಸ್ಯ ಕಾರ್ಯಗಳು ಯಶಸ್ಸು ತಂದು ಕೊಡಲಿವೆ. ಕುಟುಂಬಕ್ಕೆ ಸಮಯವನ್ನು ನೀಡುವಿರಿ. ವಿನಾಕಾರಣ ಕೋಪಗೊಂಡು ಮನಸ್ಸಿನ ನೆಮ್ಮದಿಯನ್ನು ಹಾಳು ಮಾಡಿಕೊಳ್ಳುವುದು ಬೇಡ. ಖರ್ಚು ಹೆಚ್ಚಾಗಲಿದೆ. ಸಂಗಾತಿಯಾದವರು ನಿಮ್ಮ ಮನಸ್ಸಿನ ಭಾವನೆಗಳಿಗೆ ಸ್ಪಂದಿಸುತ್ತಾರೆ. ಕೌಟುಂಬಿಕವಾಗಿ ಶುಭ ಫಲ.
ಅದೃಷ್ಟ ಸಂಖ್ಯೆ: 7

ವಿದ್ವಾನ್ ಶ್ರೀ ನವೀನಶಾಸ್ತ್ರಿ ರಾ. ಪುರಾಣಿಕ
ಖ್ಯಾತ ಜ್ಯೋತಿಷಿ ಹಾಗೂ ಉಪನ್ಯಾಸಕರು

M: 9481854580 | pnaveenshastri@gmail.com

Exit mobile version