Site icon Vistara News

Dina Bhavishya : ಆರೋಗ್ಯ ಹದಗೆಡಬಹುದು, ಈ ರಾಶಿಯವರು ಎಚ್ಚರಿಕೆ ವಹಿಸಿ!

Dina Bhavishya

ಚಂದ್ರನು ಸಿಂಹ ರಾಶಿಯಿಂದ ಬುಧವಾರ 01:18ಕ್ಕೆ ಕನ್ಯಾ ರಾಶಿಯನ್ನು ಪ್ರವೇಶಿಸುತ್ತಾನೆ. ಇದರಿಂದಾಗಿ ಮಿಥುನ, ಸಿಂಹ, ತುಲಾ, ವೃಶ್ಚಿಕ, ಕುಂಭ, ಮೀನ ರಾಶಿಯವರಿಗೆ ಚಂದ್ರನ ಬಲ ದೊರೆಯಲಿದೆ. ಮೇಷ ರಾಶಿಯ ಪ್ರೇಮಿಗಳಿಗೆ ಇಂದು ಹೊಸ ಆಶಾಭಾವನೆ ಮೂಡಲಿದೆ. ವೃಷಭ ರಾಶಿಯವರು ಸಹೋದ್ಯೋಗಿಗಳೊಂದಿಗೆ ಸಂಯಮದಿಂದ ವರ್ತಿಸಿ, ವ್ಯತಿರಿಕ್ತ ಪರಿಣಾಮ ಬೀರುವ ಸಾಧ್ಯತೆ ಇದೆ. ಮಿಥುನ ರಾಶಿಯವರಿಗೆ ಅನಗತ್ಯ ಆಲೋಚನೆಗಳು ನಿಮ್ಮ ಮನಸ್ಸನ್ನು ಆವರಿಸಬಹುದು. ಧನಸ್ಸು ರಾಶಿಯ ಉದ್ಯೋಗಿಗಳಿಗೆ ಕಿರಿಕಿರಿ ಸಾಧ್ಯತೆ ಇದೆ. ಮಕರ ರಾಶಿಯವರು ಆರೋಗ್ಯದ ಬಗ್ಗೆ ಎಚ್ಚರ ವಹಿಸಿ. ಇತರೆ ದ್ವಾದಶ ರಾಶಿಗಳ ಇಂದಿನ ಭವಿಷ್ಯ ಹೇಗಿದೆ? ಪಂಚಾಂಗ ಏನು ಹೇಳುತ್ತದೆ (Kannada Dina Bhavishya) ಎಂಬುದನ್ನು ತಿಳಿಯೋಣ.

ಇಂದಿನ ಪಂಚಾಂಗ (kannada panchanga) (13-09-2023)

ಶ್ರೀ ಶಕೇ 1945, ಶೋಭಕೃತ ನಾಮ ಸಂವತ್ಸರ, ದಕ್ಷಿಣಾಯಣ, ವರ್ಷ ಋತು, ಶ್ರಾವಣ ಮಾಸ, ಕೃಷ್ಣ ಪಕ್ಷ.
ತಿಥಿ:
ಚತುರ್ದಶಿ 28:48 ವಾರ: ಬುಧವಾರ
ನಕ್ಷತ್ರ: ಮಘಾ 25:59 ಯೋಗ: ಸಿದ್ದಿ 26:06
ಕರಣ: ವಿಷ್ಟಿ (ಭದ್ರ) 15:34 ಅಮೃತಕಾಲ: ರಾತ್ರಿ 11:19 ಯಿಂದ ಮಧ್ಯರಾತ್ರಿ 01:07ವರೆಗೆ
ದಿನದ ವಿಶೇಷ: ಹುಬ್ಬಳ್ಳಿ ಗುರುಸಿದೇಶ್ವರ ರಥ, ಮಾಸ ಶಿವರಾತ್ರಿ

ಸೂರ್ಯೋದಯ : 06: 14  ಸೂರ್ಯಾಸ್ತ : 06:45

ರಾಹುಕಾಲ: ಮಧ್ಯಾಹ್ನ 12.00 ರಿಂದ 1.30
ಗುಳಿಕಕಾಲ: ಬೆಳಗ್ಗೆ 10.30 ರಿಂದ 12.00
ಯಮಗಂಡಕಾಲ:
ಬೆಳಗ್ಗೆ 7.30 ರಿಂದ 9.00

ದ್ವಾದಶ ರಾಶಿ ಭವಿಷ್ಯ (Dina Bhavishya in Kannada)

ಮೇಷ: ಕೆಲವು ಬಿಕ್ಕಟ್ಟುಗಳು ಮತ್ತು ಭಿನ್ನಾಭಿಪ್ರಾಯಗಳು ನಿಮಗೆ ಕಿರಿಕಿರಿ ಹಾಗೂ ಆತಂಕವನ್ನು ತರಬಹುದು. ಯಾರಾದರೂ ನಿಮ್ಮ ಸಹಾಯ ಕೇಳಬಹುದು. ನಿಮ್ಮ ಜ್ಞಾನದಾಹ ನಿಮಗೆ ಹೊಸ ಸ್ನೇಹಿತರನ್ನು ಪಡೆಯಲು ಸಹಾಯ ಮಾಡುತ್ತದೆ. ನಿಮ್ಮ ಸಂಬಂಧದ ಎಲ್ಲಾ ದೂರುಗಳು ಮತ್ತು ದ್ವೇಷಗಳು ಈ ಅದ್ಭುತವಾದ ದಿನದಂದು ಕಣ್ಮರೆಯಾಗುತ್ತವೆ. ಪ್ರೇಮಿಗಳಿಗೆ ಇಂದು ಹೊಸ ಆಶಾಭಾವನೆ ಮೂಡಿಸಲಿದೆ. ಆರೋಗ್ಯದ ಕುರಿತು ಕಾಳಜಿ ವಹಿಸಿ. ಉದ್ಯೋಗಿಗಳಿಗೆ ಶುಭ ದಿನವಿದು. ಹಣಕಾಸು ವ್ಯವಹಾರಗಳಲ್ಲಿ ಪ್ರಗತಿ ಇರಲಿದೆ. ಕೌಟುಂಬಿಕವಾಗಿ ಶುಭ ಫಲ.
ಅದೃಷ್ಟ ಸಂಖ್ಯೆ: 2

ವೃಷಭ: ನಿಮ್ಮ ಅಪಾರ ವಿಶ್ವಾಸ ಮತ್ತು ಸುಲಭದ ಕೆಲಸ ಇಂದು ವಿಶ್ರಾಂತಿಗೆ ಸಾಕಷ್ಟು ಸಮಯ ನೀಡುತ್ತದೆ. ಸಹೋದ್ಯೋಗಿಗಳೊಂದಿಗೆ ಸಂಯಮದಿಂದ ವರ್ತಿಸಿ, ವ್ಯತಿರಿಕ್ತ ಪರಿಣಾಮ ಬೀರುವ ಸಾಧ್ಯತೆ ಇದೆ. ಸಾಮಾಜಿಕ ಕಾರ್ಯಗಳಲ್ಲಿ ಹಾಜರಾಗಲು ಅವಕಾಶಗಳು ಬರಹುದು ಹಾಗೂ ಇದು ನಿಮ್ಮನ್ನು ಪ್ರಭಾವಿ ವ್ಯಕ್ತಿಗಳ ಜತೆ ನಿಕಟ ಸಂಪರ್ಕ ಹೊಂದುವಂತೆ ಮಾಡಬಹುದು. ಇಂದು ನಿಮ್ಮ ಕಲಾತ್ಮಕ ಮತ್ತು ಸೃಜನಶೀಲ ಸಾಮರ್ಥ್ಯ ಬಹಳಷ್ಟು ಮೆಚ್ಚುಗೆ ತರುತ್ತದೆ ಮತ್ತು ನಿಮಗೆ ಅನಿರೀಕ್ಷಿತ ಪ್ರತಿಫಲಗಳನ್ನು ತರುತ್ತದೆ. ಆರೋಗ್ಯ ಪರಿಪೂರ್ಣವಾಗಿರಲಿದೆ. ಹಣಕಾಸು ಪ್ರಗತಿ ಸಾಧಾರಣವಾಗಿರಲಿದೆ. ಕೌಟುಂಬಿಕವಾಗಿ ಮಧ್ಯಮ ಫಲ.
ಅದೃಷ್ಟ ಸಂಖ್ಯೆ: 1

ಮಿಥುನ: ಅನಗತ್ಯ ಆಲೋಚನೆಗಳು ನಿಮ್ಮ ಮನಸ್ಸನ್ನು ಆವರಿಸಬಹುದು. ಹಣಕಾಸು ಯೋಜನೆಗಳ ಕುರಿತಾಗಿ ಆಲೋಚನೆ ಮಾಡುವಿರಿ. ನಿಮ್ಮ ಸಂಗಾತಿ ನಿಮ್ಮ ಬಗ್ಗೆ ಒಳ್ಳೆಯದನ್ನು ಯೋಚಿಸುತ್ತಾರೆ. ಆದ್ದರಿಂದ ಕೆಲವೊಮ್ಮೆ ನಿಮ್ಮ ಮೇಲೆ ಕೋಪವನ್ನು ಸಹ ತೋರಿಸಬಹುದು. ಅವರ ಕೋಪಕ್ಕೆ ಕೋಪವೇ ಪರಿಹಾರವಲ್ಲ. ಅವರ ಮಾತುಗಳನ್ನು ನೀವು ಅರ್ಥ ಮಾಡಿಕೊಳ್ಳುವುದು ಉತ್ತಮ. ಹಳೆ ಸ್ನೇಹಿತರು ಭೇಟಿ ಮಾಡಬಹುದು. ಆರೋಗ್ಯ ಕೊಂಚ ಹದಗೆಡುವ ಸಾಧ್ಯತೆ ಇದೆ. ಉದ್ಯೋಗಿಗಳಿಗೆ ಶುಭ. ಕೌಟುಂಬಿಕ ಸಾಧಾರಣ ಫಲ.
ಅದೃಷ್ಟ ಸಂಖ್ಯೆ: 8

ಕಟಕ: ಅನಗತ್ಯ ಖರ್ಚಿನ ಹೊರೆತಾಗಿಯೂ ನಿಮ್ಮ ಆರ್ಥಿಕ ಭಾಗವು ಬಲವಾಗಿರುತ್ತದೆ. ನಿಮ್ಮ ಆಕರ್ಷಣೆ ಹಾಗೂ ವ್ಯಕ್ತಿತ್ವ ನೀವು ಹೊಸ ಸ್ನೇಹಿತರನ್ನು ಗಳಿಸಲು ಸಹಾಯ ಮಾಡುತ್ತದೆ. ಧಾರ್ಮಿಕ ಕಾರ್ಯಗಳಲ್ಲಿ ಭಾಗವಹಿಸುವ ಸಾಧ್ಯತೆ ಇದೆ. ವಾಹನ ಚಾಲನೆ ಮಾಡುವಾಗ ಜಾಗೃತೆ ಅವಶ್ಯವಾಗಿ ವಹಿಸಿ, ಅಪಘಾತ ಸಂಭವವಿದೆ. ಆರೋಗ್ಯದ ಕುರಿತು ಕಾಳಜಿ ವಹಿಸಿ. ಉದ್ಯೋಗಿಗಳಿಗೆ ಶುಭ ಫಲ. ಮನದ ಬಯಕೆ ಈಡೇರುವ ಆಶಾಭಾವನೆ ಮೂಡಲಿದೆ. ಕೌಟುಂಬಿಕವಾಗಿ ಶುಭ ಫಲ.
ಅದೃಷ್ಟ ಸಂಖ್ಯೆ: 3

ಸಿಂಹ: ಭೂಮಿ ಸಂಬಂಧಿ ವ್ಯವಹಾರ ನಡೆಯುವ ಸಾಧ್ಯತೆ ಇದೆ. ಅದು ನಿಮಗೆ ಲಾಭದಾಯಕವಾಗಲಿದೆ. ನಿಮ್ಮ ಪ್ರೀತಿಪಾತ್ರರು ನಿಮಗೆ ಅಪಾರ ಸಂತೋಷ ತರುತ್ತಾರೆ. ಉದ್ಯೋಗಿಗಳಿಗೆ ನಿಧಾನಗತಿಯಿಂದಾಗಿ ಸ್ವಲ್ಪ ಒತ್ತಡ ತರುವ ಸಾಧ್ಯತೆ ಇದೆ. ಸಂಗಾತಿಯ ಮಾತುಗಳು ಹಿತವೇನಿಸುವುದು. ಹಣಕಾಸು, ವ್ಯಾಪಾರ ವ್ಯವಹಾರಗಳಲ್ಲಿ ಪ್ರಗತಿ ಇರಲಿದೆ. ಕೌಟುಂಬಿಕವಾಗಿ ಶುಭ ಫಲ.
ಅದೃಷ್ಟ ಸಂಖ್ಯೆ: 1

ಕನ್ಯಾ: ಒತ್ತಡ ಮುಕ್ತವಾಗಿ ಶಾಂತ ವಾತಾವರಣ ನಿರ್ಮಾಣವಾಗಲಿದೆ. ಹಣಕಾಸು ವ್ಯಾಪಾರ ವ್ಯವಹಾರಗಳಲ್ಲಿ ಲಾಭ ಇರಲಿದೆ. ಅನಿವಾರ್ಯ ಕಾರಣದಿಂದ ಖರ್ಚು ಮಾಡುವ ಸಾಧ್ಯತೆ ಇದೆ. ಇದು ಮನಸ್ಸಿಗೆ ಕೊಂಚ ಬೇಸರ ತರಬಹುದು. ಉದ್ಯೋಗ ಆಕಾಂಕ್ಷಿಗಳಿಗೆ ಇಂದು ಅದೃಷ್ಟದ ದಿನದಂತೆ ತೋರುತ್ತದೆ. ನಿಮಗೆ ಅಗತ್ಯವಿಲ್ಲದ ವಿಷಯಗಳ ಮೇಲೆ ಇಂದು ನಿಮ್ಮ ಹೆಚ್ಚಿನ ಸಮಯವನ್ನು ವ್ಯರ್ಥ ಮಾಡವುದು ಬೇಡ. ಆರೋಗ್ಯ ಪರಿಪೂರ್ಣವಾಗಿರಲಿದೆ. ಸಂಗಾತಿಯ ಮಾತುಗಳು ಅಹಿತವೆನಿಬಹುದು. ಕಲಹಗಳಿಗೆ ಆಸ್ಪದ ಕೊಡಬೇಡಿ. ಕೌಟುಂಬಿಕವಾಗಿ ಸಾಧಾರಣ ಫಲ.
ಅದೃಷ್ಟ ಸಂಖ್ಯೆ: 9

ಭವಿಷ್ಯ ಮತ್ತು ಜ್ಯೋತಿಷ್ಯಕ್ಕೆ ಸಂಬಂಧಿಸಿದ ಲೇಖನ/ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್‌ (Click Here) ಮಾಡಿ

ತುಲಾ: ಕುಟುಂಬದ ಸದಸ್ಯರ ಬೆಂಬಲ ಸಿಗಲಿದೆ. ಪ್ರೇಮ ಪ್ರಕರಣ ಹದಗೆಡುವ ಸಾಧ್ಯತೆ ಇದೆ. ಅನಿವಾರ್ಯ ಪ್ರಸಂಗಗಳಿಂದಾಗಿ ಪ್ರಯಾಣ ಸಾಧ್ಯತೆ ಇದೆ. ಸಂಬಂಧಿಕರ ಹಸ್ತಕ್ಷೇಪ ದಾಂಪತ್ಯ ಜೀವನದಲ್ಲಿ ವೈರತ್ವ ಮೂಡುವಂತೆ ಮಾಡಬಹುದು. ಅದಕ್ಕೆ ಅವಕಾಶ ಕೊಡಬೇಡಿ. ಆರೋಗ್ಯ ಪರಿಪೂರ್ಣವಾಗಿರಲಿದೆ. ವ್ಯಾಪಾರ ವ್ಯವಹಾರಗಳಲ್ಲಿ ಯಶಸ್ಸು ಸಿಗಲಿದ್ದು, ಆರ್ಥಿಕ ಸ್ಥಿತಿ ಉತ್ತಮವಾಗಿರಲಿದೆ. ಉದ್ಯೋಗಿಗಳಿಗೆ ಶುಭ ಫಲ. ಕೌಟುಂಬಿಕವಾಗಿ ಸಾಧಾರಣ ಫಲ.
ಅದೃಷ್ಟ ಸಂಖ್ಯೆ: 2

ವೃಶ್ಚಿಕ: ಆಕರ್ಷಕ ವ್ಯಕ್ತಿತ್ವವು ಇತರರನ್ನು ಆಕರ್ಷಿಸಲಿದೆ. ಶ್ರಮಕ್ಕೆ ತಕ್ಕ ಪ್ರತಿಫಲ ಸಿಗಲಿದೆ. ಸ್ವಲ್ಪ ಆರ್ಥಿಕ ಪ್ರತಿಫಲಗಳನ್ನು ತರುತ್ತದೆ. ಪಾಲಕರು ಮತ್ತು ಸ್ನೇಹಿತರು ನಿಮ್ಮನ್ನು ಸಂತೋಷವಾಗಿರಿಸಲು ಅವರಿಗೆ ಸಾಧ್ಯವಾದದ್ದನ್ನೆಲ್ಲ ಮಾಡುತ್ತಾರೆ. ಇದು ಪ್ರೀತಿಯಲ್ಲಿ ನಿಮ್ಮ ಅದೃಷ್ಟದ ದಿನ. ನಿಮ್ಮ ಸಂಗಾತಿ ನಿಮ್ಮ ಬಹುನಿರೀಕ್ಷಿತ ಕಲ್ಪನೆಗಳನ್ನು ಸಾಕ್ಷಾತ್ಕಾರ ಮಾಡುವ ಮೂಲಕ ನಿಮ್ಮನ್ನು ಅಚ್ಚರಿಗೊಳಿಸುತ್ತಾರೆ. ಭವಿಷ್ಯದ ಹೂಡಿಕೆ ಬಗೆಗೆ ಆಲೋಚನೆ ಮಾಡುವಿರಿ. ಆಪ್ತರ ಆಗಮನದಿಂದ ಕಾರ್ಯದಲ್ಲಿ ವಿಳಂಬ ಸಾಧ್ಯತೆ ಇದೆ. ಆರೋಗ್ಯ ಪರಿಪೂರ್ಣವಾಗಿರಲಿದೆ. ಉದ್ಯೋಗಿಗಳಿಗೆ ಶುಭ ಫಲ.ಕೌಟುಂಬಿಕವಾಗಿ ಶುಭ ಫಲ.
ಅದೃಷ್ಟ ಸಂಖ್ಯೆ: 4

ಧನಸ್ಸು: ಹಣಕಾಸು ಹೂಡಿಕೆ ಬಗೆಗೆ ಆಲೋಚನೆ ಮಾಡುವಿರಿ. ಉದ್ಯೋಗಿಗಳಿಗೆ ಕಿರಿಕಿರಿ ಸಾಧ್ಯತೆ ಇದೆ. ಮನೆಯಲ್ಲಿನ ವ್ಯತಿರಿಕ್ತ ವಾತಾವರಣ ನಿಮ್ಮ ಮನಸ್ಸಿಗೆ ನೋವುಂಟು ಮಾಡುವ ಸಾಧ್ಯತೆ ಇದೆ. ಅದರಿಂದ ದೂರ ಇರಿ. ನಿಮ್ಮ ಆಪ್ತರೊಂದಿಗೆ ವಿಷಯ ಹಂಚಿಕೊಳ್ಳುವ ಸಾಧ್ಯತೆ ಇದೆ. ಆದರೆ ಗೌಪ್ಯ ವಿಷಯಗಳು ಗೌಪ್ಯವಾಗಿದ್ದರೆ ಒಳ್ಳೆಯದು. ದೈಹಿಕ ಆರೋಗ್ಯ ಪರಿಪೂರ್ಣ.ಕೌಟುಂಬಿಕವಾಗಿ ಸಾಧಾರಣ ಫಲ.
ಅದೃಷ್ಟ ಸಂಖ್ಯೆ: 1

ದ್ವಾದಶ ರಾಶಿಗಳ ಇಂದಿನ ಫಲಾಫಲ ಹೀಗಿದೆ ನೋಡಿ

ಮಕರ: ನಿಮ್ಮ ಆರೋಗ್ಯದ ಬಗ್ಗೆ ಎಚ್ಚರ ವಹಿಸಿ. ಇಂದು ನೀವು ಹಣಕಾಸಿನ ಸಮಸ್ಯೆಯಿಂದ ತೊಂದರೆಗೊಳಗಾಗಬಹುದು. ಅತಿಥಿಗಳ ಆಗಮನ ಕೊಂಚ ಮಟ್ಟಿಗೆ ಸಮಾಧಾನ ತರಿಸಬಹುದು.ಉದ್ಯೋಗದ ಸ್ಥಳದಲ್ಲಿ ಮಾತಿನ ನಿಯಂತ್ರಣ ತಪ್ಪಿ ಅಪಾಯ ತಂದುಕೊಳ್ಳುವುದು ಬೇಡ. ವಿದ್ಯಾರ್ಥಿಗಳು ಅಭ್ಯಾಸದ ಕಡೆ ಹೆಚ್ಚು ಗಮನ ಹರಿಸಬೇಕು. ವ್ಯಾಪಾರ ವ್ಯವಹಾರಗಳಲ್ಲಿ ಸಾಧಾರಣವಾಗಿರಲಿದೆ. ಕೌಟುಂಬಿಕವಾಗಿ ಸಾಧಾರಣ ಫಲ.
ಅದೃಷ್ಟ ಸಂಖ್ಯೆ: 1

ಕುಂಭ: ನಿಮ್ಮ ಅಪಾರ ವಿಶ್ವಾಸ ನಿಮಗೆ ಯಶಸ್ಸು ತಂದುಕೊಡಲಿದೆ. ನೀವು ಪ್ರಯಾಣ ಮಾಡುವ ಮತ್ತು ಹಣ ಖರ್ಚು ಮಾಡುವ ಸಾಧ್ಯತೆ ಇದೆ. ದಿನದ ಕೊನೆಯಲ್ಲಿ ಅನಿವಾರ್ಯ ಕಾರಣದಿಂದ ಮನಸ್ಸಿಗೆ ನೋವುಂಟು ಆಗುವ ಸಾಧ್ಯತೆ. ನೀವು ಅತೀ ಉದಾರಿಯಾಗಿದ್ದಲ್ಲಿ ನಿಮ್ಮವರು ಲಾಭ ತೆಗೆದುಕೊಳ್ಳಬಹುದು. ಸ್ನೇಹಿತರೊಬ್ಬನೊಂದಿಗೆ ಇಂದು ಸಮಯವನ್ನು ಕಳೆಯುವ ಸಾಧ್ಯತೆ ಇದೆ. ಆರೋಗ್ಯ ಪರಿಪೂರ್ಣವಾಗಿರಲಿದೆ. ಕೌಟುಂಬಿಕವಾಗಿ ಶುಭ ಫಲ.
ಅದೃಷ್ಟ ಸಂಖ್ಯೆ: 8

ಇದನ್ನೂ ಓದಿ : ತಾತಯ್ಯ ತತ್ವಾಮೃತಂ: ದೇಹದಲ್ಲಿ ಜೀವ ಇರುವಾಗ ಏನು ಮಾಡಬೇಕು?

ಮೀನ: ಗಾಳಿಯಲ್ಲಿ ಗೋಪುರ ಕಟ್ಟಿ ಸಮಯ ವ್ಯರ್ಥ ಮಾಡಿಕೊಳ್ಳುವುದು ಬೇಡ. ಬದಲಿಗೆ ಏನಾದರೂ ಅರ್ಥಪೂರ್ಣವಾದದ್ದನ್ನು ಮಾಡಲು ನಿಮ್ಮ ಶಕ್ತಿ ವ್ಯಯಿಸಿ. ಆಪ್ತರೊಂದಿಗೆ ಅನಿವಾರ್ಯ ಕಾರಣದಿಂದ ಮುನಿಸಿಕೊಳ್ಳುವ ಸಾಧ್ಯತೆ. ಇದಕ್ಕೆ ಅವಕಾಶ ಕೊಡದೆ ನಿಮ್ಮ ಹಾಸ್ಯ ಮನೋಭಾವನೆಯಿಂದ ಸಮಸ್ಯೆ ಪರಿಹರಿಸಿಕೊಳ್ಳಿ. ಉದ್ಯೋಗಿಗಳಿಗೆ ಹೊಸ ಭರವಸೆ ಮೂಡಲಿದೆ. ಸಂಗಾತಿಯ ಮಾತುಗಳು ಹಿತವೆನಿಸುತ್ತದೆ. ಆರೋಗ್ಯ ಮಧ್ಯಮ.ಆರ್ಥಿಕ ಪ್ರಗತಿ ಸಾಧಾರಣ.ಕೌಟುಂಬಿಕವಾಗಿ ಶುಭ ಫಲ
ಅದೃಷ್ಟ ಸಂಖ್ಯೆ: 5

ವಿದ್ವಾನ್ ಶ್ರೀ ನವೀನಶಾಸ್ತ್ರಿ ರಾ. ಪುರಾಣಿಕ
ಖ್ಯಾತ ಜ್ಯೋತಿಷಿ ಹಾಗೂ ಉಪನ್ಯಾಸಕರು

M: 9481854580 | pnaveenshastri@gmail.com

Exit mobile version