Site icon Vistara News

Horoscope Today : ಇಂದು ನಾಲ್ಕು ರಾಶಿಯವರಿಗೆ ಶುಭ ಫಲ; ನಿಮ್ಮ ಭವಿಷ್ಯ ಹೀಗಿದೆ

Horoscope Today

ಇಂದಿನ ಭವಿಷ್ಯ

ಇಂದಿನ ಪಂಚಾಂಗ (08-04-2023)

ಶ್ರೀ ಶಕೇ 1945, ಶೋಭಕೃತ್ ನಾಮ ಸಂವತ್ಸರ, ಉತ್ತರಾಯಣ,
ವಸಂತ ಋತು, ಚೈತ್ರ ಮಾಸ, ಕೃಷ್ಣ ಪಕ್ಷ.

ತಿಥಿ: ಬಿದಿಗೆ 10:10 ವಾರ: ಶನಿವಾರ
ನಕ್ಷತ್ರ: ಸ್ವಾತಿ 13:57 ಯೋಗ: ವಜ್ರ 23:57
ಕರಣ: ಗರಜ 10:10 ಇಂದಿನ ವಿಶೇಷ: ಸದ್ಗುರು ಭಗವಾನ್ ಶ್ರೀಧರ ಸ್ವಾಮಿಗಳ ಆರಾಧನೆ
ಅಮೃತಕಾಲ: ಬೆಳಗ್ಗೆ 05 ಗಂಟೆ 12 ನಿಮಿಷದಿಂದ 06 ಗಂಟೆ 48 ನಿಮಿಷದವರೆಗೆ.

ಸೂರ್ಯೋದಯ : 06:12 ಸೂರ್ಯಾಸ್ತ : 06:32

ರಾಹುಕಾಲ : ಬೆಳಗ್ಗೆ 9.00 ರಿಂದ 10.30
ಗುಳಿಕಕಾಲ: ಬೆಳಗ್ಗೆ 6.00 ರಿಂದ 7.30
ಯಮಗಂಡಕಾಲ: ಮಧ್ಯಾಹ್ನ 1.30 ರಿಂದ 3.00

ದ್ವಾದಶ ರಾಶಿ ಭವಿಷ್ಯ (Horoscope Today)

ಮೇಷ: ಆರೋಗ್ಯ ಮಧ್ಯಮ. ಹಣಕಾಸು ಬಾಕಿ ವ್ಯವಹಾರಗಳು ಪೂರ್ಣವಾಗುವವು. ಸಂಗಾತಿಯ ಆರೋಗ್ಯದ ಕಡೆಗೆ ಗಮನ ಇರಲಿ. ಕುಟುಂಬದಲ್ಲಿ ಕಲಹಗಳಿಗೆ ಅವಕಾಶ ನೀಡದಂತೆ ಎಚ್ಚರಿಕೆ ವಹಿಸಿ. ಉದ್ಯೋಗಿಗಳಿಗೆ ಶುಭ ಫಲ. ಕೌಟುಂಬಿಕವಾಗಿ ಶುಭ ಫಲ.
ಅದೃಷ್ಟ ಸಂಖ್ಯೆ: 5

ವೃಷಭ: ಆರ್ಥಿಕವಾಗಿ ಸಂಕಷ್ಟ ಎದುರಿಸುವ ಸಾಧ್ಯತೆ. ಬಿಡುವಿರದ ಕಾರ್ಯಕ್ರಮದ ಹೊರತಾಗಿಯೂ ಆರೋಗ್ಯ ಚೆನ್ನಾಗಿರುತ್ತದೆ. ವಾಹನ ಖರೀದಿ ವಿಚಾರ ಮಾಡುವಿರಿ. ಹಿಂದೆ ನಡೆದ ಘಟನೆಯನ್ನು ನೆನಪಿಸಿಕೊಂಡು ಕೊರಗುವುದು ಬೇಡ. ಸಹದ್ಯೋಗಿಗಳಿಂದ ಅಸಹಕಾರ. ಕೌಟುಂಬಿಕವಾಗಿ ಶುಭ ಫಲ.
ಅದೃಷ್ಟ ಸಂಖ್ಯೆ: 4

ಮಿಥುನ: ಇತರರ ವಿರುದ್ಧ ದ್ವೇಷ ಕಾರುತ್ತಾ ನಿಮ್ಮ ಮಾನಸಿಕ ಒತ್ತಡವನ್ನು ಹೆಚ್ಚು ಮಾಡಿಕೊಳ್ಳುವುದು ಬೇಡ. ನಕರಾತ್ಮಕ ಆಲೋಚನೆಗಳು ನಿಮ್ಮನ್ನು ಘಾಸಿಮಾಡಬಹುದು. ಆರೋಗ್ಯದ ಕುರಿತು ಕಾಳಜಿ ಇರಲಿ. ಉದ್ಯೋಗಿಗಳಿಗೆ ಶುಭ ಫಲ. ಆರ್ಥಿಕ ಪ್ರಗತಿ ಸಾಧಾರಣ. ಕೌಟುಂಬಿಕವಾಗಿ ಶುಭ ಫಲ.
ಅದೃಷ್ಟ ಸಂಖ್ಯೆ: 2

ಕಟಕ: ಅತಿಯಾದ ಉತ್ಸಾಹದಲ್ಲಿ ಅತಿರೇಕದ ಮಾತುಗಳನ್ನು ಆಡುವುದು ಬೇಡ, ಭಾವನೆಗಳನ್ನು ನಿಯಂತ್ರಿಸಿ. ಹಣಕಾಸು ಪ್ರಗತಿ ಸಾಧಾರಣ. ಕುಟುಂಬದ ಸದಸ್ಯರ ಬೆಂಬಲ ಸಿಗಲಿದೆ. ಆರೋಗ್ಯದ ಕುರಿತು ಕಾಳಜಿ ಇರಲಿ. ಗೊತ್ತಿಲ್ಲದಂತೆ ಸಮಯ ವ್ಯರ್ಥವಾಗುವ ಸಾಧ್ಯತೆ. ಉದ್ಯೋಗಿಗಳಿಗೆ ಶುಭ ಫಲ. ಕೌಟುಂಬಿಕವಾಗಿ ಮಿಶ್ರ ಫಲ.
ಅದೃಷ್ಟ ಸಂಖ್ಯೆ: 6

ಸಿಂಹ: ಆರ್ಥಿಕ ಸಮಸ್ಯೆಯಿಂದಾಗಿ ಒತ್ತಡ ಹೆಚ್ಚಾಗಲಿದೆ. ಹಿರಿಯರ ಮಾರ್ಗದರ್ಶನ ಸಿಗಲಿದೆ. ಪ್ರಭಾವಿ ವ್ಯಕ್ತಿಗಳ ಬೆಂಬಲ, ಸ್ನೇಹ ಸಿಗಲಿದೆ. ವಿವಾಹ ಅಪೇಕ್ಷಿತರಿಗೆ ಕಂಕಣಭಾಗ್ಯ ಕೂಡಿ ಬರುವುದು. ವ್ಯಾಪಾರ-ವ್ಯವಹಾರದಲ್ಲಿ ಸಾಧಾರಣ ಪ್ರಗತಿ. ಆರೋಗ್ಯ ಪರಿಪೂರ್ಣ. ಕೌಟುಂಬಿಕವಾಗಿ ಶುಭ ಫಲ.
ಅದೃಷ್ಟ ಸಂಖ್ಯೆ: 4

ಕನ್ಯಾ: ಸಕಾರಾತ್ಮಕ ಆಲೋಚನೆಗಳಿಂದ ಕೆಲಸ ಕಾರ್ಯಗಳಲ್ಲಿ ಯಶಸ್ಸು. ಅನಿವಾರ್ಯ ಕಾರಣಗಳಿಂದ ಖರ್ಚು ಹೆಚ್ಚಾಗಲಿದೆ. ಮನೆಯ ಸದಸ್ಯರ ವರ್ತನೆ ನಿಮ್ಮನ್ನು ಮಾನಸಿಕವಾಗಿ ತೊಂದರೆಗಳಾಗುವಂತೆ ಮಾಡುವ ಸಾಧ್ಯತೆ. ಪ್ರಯಾಣ ಸಾಧ್ಯತೆ. ಉದ್ಯೋಗಿಗಳಿಗೆ ಶುಭ ಫಲ. ಕೌಟುಂಬಿಕವಾಗಿ ಸಾಧಾರಣ ಫಲ.
ಅದೃಷ್ಟ ಸಂಖ್ಯೆ: 3

ಭವಿಷ್ಯ ಮತ್ತು ಜ್ಯೋತಿಷ್ಯಕ್ಕೆ ಸಂಬಂಧಿಸಿದ ಲೇಖನ/ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್‌ (Click Here) ಮಾಡಿ

ತುಲಾ: ಆರ್ಥಿಕವಾಗಿ ಸಂಕಷ್ಟ ಎದುರಿಸುವ ಸಾಧ್ಯತೆ. ಕೆಲಸ ಕಾರ್ಯಗಳು ನಿಧಾನ. ತಾಳ್ಮೆಯಿಂದ ವರ್ತಿಸಿ. ನೆರೆಹೊರೆಯವರೊಂದಿಗೆ ವಿನಾಕಾರಣ ಜಗಳ ಬೇಡ. ಉದ್ಯೋಗಿಗಳಿಗೆ ಶುಭ ಫಲ. ಆರೋಗ್ಯ ಪರಿಪೂರ್ಣ. ಕೌಟುಂಬಿಕವಾಗಿ ಸಾಧಾರಣ ಫಲ.
ಅದೃಷ್ಟ ಸಂಖ್ಯೆ: 5

ವೃಶ್ಚಿಕ: ಪ್ರಯತ್ನದಲ್ಲಿ ನಂಬಿಕೆ ಇಟ್ಟು ಕಾರ್ಯದಲ್ಲಿ ಮುನ್ನುಗ್ಗಿ ಯಶಸ್ಸು ಸಿಗಲಿದೆ. ಆರ್ಥಿಕವಾಗಿ ಲಾಭ. ಸಮಾರಂಭಗಳಲ್ಲಿ ಭಾಗವಹಿಸುವ ಸಾಧ್ಯತೆ. ಜನಪ್ರಿಯತೆ ಹೆಚ್ಚಾಗಲಿದೆ. ಪ್ರವಾಸದ ಕುರಿತು ಚರ್ಚೆ. ಕುಟುಂಬದವರ ಸಹಕಾರ ಸಿಗಲಿದೆ. ಕೊಂಚ ಆರೋಗ್ಯದ ಕಡೆಗೆ ಗಮನ ಇರಲಿ. ಉದ್ಯೋಗಿಗಳಿಗೆ ಹೊಸ ಭರವಸೆ ಮೂಡಲಿದೆ. ಕೌಟುಂಬಿಕವಾಗಿ ಶುಭ ಫಲ.
ಅದೃಷ್ಟ ಸಂಖ್ಯೆ: 7

ಧನಸ್ಸು: ಅತಿಯಾದ ಚಿಂತೆ, ಒತ್ತಡ ನಿಮ್ಮ ಆರೋಗ್ಯದ ಮೇಲೆ ದೈಹಿಕವಾಗಿ ಹಾಗೂ ಮಾನಸಿಕವಾಗಿ ಪರಿಣಾಮವನ್ನು ಬೀರಬಹುದು. ಆದಷ್ಟು ವಿಶ್ರಾಂತಿ ಪಡೆಯಿರಿ, ತಾಳ್ಮೆ ಇರಲಿ. ಆರ್ಥಿಕ ಪ್ರಗತಿ ಸಾಧಾರಣ. ಉದ್ಯೋಗಿಗಳಿಗೆ ಶುಭ ಫಲ. ಕುಟುಂಬದ ಆಪ್ತರಿಂದ ಸಮಾಧಾನದ ಮಾತುಗಳು ಕೇಳಿ ಬರಲಿದೆ. ಕೌಟುಂಬಿಕವಾಗಿ ಶುಭ ಫಲ.
ಅದೃಷ್ಟ ಸಂಖ್ಯೆ: 4

ಮಕರ: ಅನಿವಾರ್ಯವಾಗುವ ಕೆಲ ಪ್ರಸಂಗಗಳು ನಿಮ್ಮನ್ನು ಒತ್ತಡಕ್ಕೆ ಒಳಗಾಗುವಂತೆ ಮಾಡಬಹುದು. ಸಭೆ ಸಮಾರಂಭಗಳಲ್ಲಿ ಭಾಗವಹಿಸುವ ಸಾಧ್ಯತೆ. ಆರೋಗ್ಯ ಪರಿಪೂರ್ಣ. ಆರ್ಥಿಕವಾಗಿ ಪ್ರಗತಿ, ಹೂಡಿಕೆಯ ಕುರಿತು ಆಲೋಚನೆ. ಹೊಸ ಸ್ನೇಹಿತರ ಪರಿಚಯವಾಗಲಿದೆ. ಉದ್ಯೋಗದ ಕುರಿತು ಆಲೋಚನೆ. ಕೌಟುಂಬಿಕವಾಗಿ ಶುಭ ಫಲ.
ಅದೃಷ್ಟ ಸಂಖ್ಯೆ: 4

ಕುಂಭ: ವಾಹನ ಚಾಲನೆ ಮಾಡುವಾಗ ಜಾಗರೂಕತೆಯಿಂದ ಚಾಲನೆ ಮಾಡಿ. ಅವಸರದಲ್ಲಿ ಕೆಲಸ ಮಾಡುವುದು ಬೇಡ. ಹೂಡಿಕೆ, ವ್ಯಾಪಾರ ವ್ಯವಹಾರಗಳಲ್ಲಿ ಪ್ರಗತಿ. ದಿಢೀರ್‌ ಪ್ರಯಾಣ ಸಾಧ್ಯತೆ. ಆರೋಗ್ಯದ ಕುರಿತು ಕಾಳಜಿ ಇರಲಿ. ಉದ್ಯೋಗಿಗಳಿಗೆ ಸಾಧಾರಣ ಫಲ. ಕೌಟುಂಬಿಕವಾಗಿ ಕನಿಷ್ಠ ಫಲ.
ಅದೃಷ್ಟ ಸಂಖ್ಯೆ: 2

ಮೀನ: ದಿನದ ಮಟ್ಟಿಗೆ ಅನಿವಾರ್ಯ ಕಾರಣಗಳಿಂದ ಖರ್ಚು. ಆರೋಗ್ಯ ಮಧ್ಯಮ. ಧಾರ್ಮಿಕ ಕಾರ್ಯಕ್ರಮಗಳಲ್ಲಿ ಭಾಗಿಯಾಗುವ ಸಾಧ್ಯತೆ. ಮಾತಿನ ಭರದಲ್ಲಿ ಅತಿರೇಕದ ಮಾತುಗಳು ಬೇಡ, ತಾಳ್ಮೆಯಿಂದ ವರ್ತಿಸಿ. ಆರೋಗ್ಯ ಪರಿಪೂರ್ಣ. ಕೌಟುಂಬಿಕವಾಗಿ ಶುಭ ಫಲ.
ಅದೃಷ್ಟ ಸಂಖ್ಯೆ: 8

ವಿದ್ವಾನ್ ಶ್ರೀ ನವೀನಶಾಸ್ತ್ರಿ ರಾ. ಪುರಾಣಿಕ
ಖ್ಯಾತ ಜ್ಯೋತಿಷಿ ಹಾಗೂ ಉಪನ್ಯಾಸಕರು

M: 9481854580 | pnaveenshastri@gmail.com

ಇದನ್ನೂ ಓದಿ: Navavidha Bhakti : ಪಾದಸೇವೆಯಿಂದಲೂ ಭಕ್ತಿಯ ವೃದ್ಧಿ

Exit mobile version