ಮೇಷ: ಧೈರ್ಯದಿಂದ ಮುನ್ನುಗ್ಗಿದರೆ ಗೆಲುವು
ಒಂದು ರೀತಿಯ ಅಸಮಾಧಾನ ಹೊತ್ತುಕೊಂಡೇ ಬದುಕು ಸಾಗುತ್ತಿದೆಯಲ್ಲ ಎಂಬ ಖೇದಕರ ಮನಸ್ಸು ಚಡಪಡಿಕೆಯಲ್ಲೇ ತುಂಬಿರುತ್ತದೆ. ಧೈರ್ಯದಿಂದಲೇ ಗೆಲ್ಲಲು ಮೈ ಚಳಿ ಬಿಟ್ಟು ಹೊರ ಬರಬೇಕು ನೀವು. ಯಾರೆಲ್ಲಾ, ಏನೂ ಪ್ರತಿಭೆ, ಕ್ರಿಯಾಶೀಲತೆ ಇರದಿರುವವರೂ ಮುನ್ನುಗ್ಗುತ್ತಿರುವಾಗ ನೀವು ಹಿಂದೆ ಬೀಳದಿರಿ. ಮುನ್ನುಗ್ಗುವ ಕಾಯಕ, ಅವೇಶದಿಂದ ಹಾರಾಡದಿರುವ ಶಾಂತ ಸ್ವಭಾವ ಒಗ್ಗೂಡಿಸಿಕೊಂಡರೆ ಬಹಳಷ್ಟು ಹೆಜ್ಜೆಗಳನ್ನು ಸಫಲತೆಯಿಂದ ಇಡಬಲ್ಲಿರಿ. ಶ್ರೀ ಗುರು ದತ್ತಾತ್ರೇಯನನ್ನು ಸ್ತುತಿಸಿ.
ಶುಭ ಸಂಖ್ಯೆ: 4 ಶುಭ ದಿಕ್ಕು: ಈಶಾನ್ಯ
ವೃಷಭ: ಹಣ ಕೊಟ್ಟು ಕೋಡಂಗಿಯಾಗಬೇಡಿ!
ಮಿಂಚಲು ಸಾಧ್ಯವಿರುವ ದಿನಗಳು. ಅಧಿಕಾರ, ಪ್ರಭಾವಿ ಸ್ಥಾನಮಾನ, ವರ್ಚಸ್ವೀ ಸ್ಥಳದಲ್ಲಿ ನಿಮ್ಮ ಮುಂದಾಳತ್ವ ಇತ್ಯಾದಿಯಾಗಿ ಪ್ರಾಬಲ್ಯತೆ ಪಡೆಯಲು ಹೇಳಿ ಮಾಡಿಸಿದ ದಿನಗಳು ಇವು. ಆರ್ಥಿಕ ವಿಚಾರಗಳಲ್ಲಿ ಕೊಂಚ ಬಿಗುವಾಗಿರಲು ಸಜ್ಜಾಗಿ. ಕೆಲವು ಬಾರಿ ʻಸಾಧ್ಯವಾಗದು ಕೊಡಲುʼ ಎಂದು ಹೇಳಲು ಸಾಧ್ಯವಾಗದಂತೆ ಇಕ್ಕಟ್ಟಿನಲ್ಲಿ ತಂದು ಕೂರಿಸುತ್ತಾರೆ ಘಾತಕ ಜನರು. ಹಣಕ್ಕಾಗಿ ಟೋಪಿ ಹಾಕುವವರ ಬಗ್ಗೆ ಎಚ್ಚರ ಇರಲಿ. ನಿರ್ವಿಘ್ನದಾಯಕನಾದ ಗಣೇಶನನ್ನು ಪೂಜಿಸಿ, ಒಳಿತಿದೆ.
ಶುಭ ಸಂಖ್ಯೆ : 2 ಶುಭ ದಿಕ್ಕು: ನೈಋತ್ಯ
ಮಿಥುನ: ಪ್ರಮೋಷನ್ ಪಡೆಯುವ ಕಾಲ
ಬೇಕಾಗಿರುವ ವೇಳೆಯಲ್ಲಿ ಕೋಪ ಪ್ರದರ್ಶಿಸಿ ಜನರ ಕ್ರೋಧ ಅಥವಾ ನಿರ್ಲಕ್ಷಕ್ಕೆ ತುತ್ತಾಗದಿರಿ. ನಿಮ್ಮ ಮೈಪರಚಿಕೊಳ್ಳುವ ಸ್ಥಿತಿ ಬಂದಾಗಲೂ ಶಾಂತ ಭಾವದಿಂದಲೇ ವರ್ತಮಾನವನ್ನು ಎದುರಿಸಿ ನಿಲ್ಲಿ. ನಿಮ್ಮ ಖಚಿತ ನಿರ್ಣಯಗಳು ನಿಮ್ಮನ್ನು ಗೌರವಾದಾರಗಳಿಗೆ ದಾರಿ ಮಾಡಿಕೊಡುವ ಶಕ್ತಿ ಪಡೆದಿವೆ. ಹಾಗೆಯೇ ವಿರೋಧಿಗಳಿಂದಲೇ ಬೆಂಬಲ ಪಡೆಯುವ ಅವಕಾಶವನ್ನು ಜಾಣ್ಮೆಯಿಂದಲೇ ಪಡೆಯಿರಿ. ಇದು ಕೆಲಸ ಮಾಡುವ ಆಫೀಸ್ ಇರಬಹುದು, ರಾಜಕಾರಣವೇ ಇರಬಹುದು. ವಿವೇಚನೆಯಿಂದ ಗೆಲ್ಲಿ. ಗಣೇಶನನ್ನು ಸ್ತುತಿಸಿ.
ಶುಭ ಸಂಖ್ಯೆ : 7 ಶುಭ ದಿಕ್ಕು: ಪೂರ್ವ
ಕಟಕ: ಶಾಂತಿ, ಸಮಾಧಾನವೇ ನಿಮ್ಮ ಅಸ್ತ್ರ
ಧೈರ್ಯವೇ ಎಲ್ಲದಕ್ಕೂ ಏರುವ ಏಣಿ ಎಂದು ಅಂದುಕೊಂಡಿದ್ದ ನಿಮಗೆ ಧೈರ್ಯವೇ ಎಲ್ಲೋ ಕೈಕೊಡುವ ಹಂತ ಬೆಳವಣಿಗೆಯಲ್ಲಿದೆ. ಶನೈಶ್ವರ ಸ್ವಾಮಿ ಮುನಿದಿದ್ದಾನೆ. ಮುನಿಸು ಎದುರಿಸುವ ವಿವೇಕವನ್ನು ನೀವು ಪ್ರದರ್ಶಿಸಿ. ಅನಾವಶ್ಯಕವಾದ ವಾದ, ಚರ್ಚೆಗಳ ಪಾಲಿಗೆ ಹೋಗದೇ ಒಂದು ಹಂತದಲ್ಲಿ ಶಾಂತರಾಗಿ ಬಿಡಿ. ಸಾಮಾಜಿಕ ಜೀವನವೇ ಇರಲಿ, ಕೌಟುಂಬಿಕ ವಚಾರಗಳೇ ಇರಲಿ. ನೀವು ಶಾಂತರಾಗುವ ಕಲೆಯನ್ನು ಕರಗತಗೊಳಿಸಿಕೊಳ್ಳಲೇಬೇಕು. ಶ್ರೀರಾಮರಕ್ಷಾ ಸ್ತೋತ್ರ ಪಠಿಸಿ. ಇದರಿಂದ ಗೆಲುವು.
ಶುಭ ಸಂಖ್ಯೆ : 9 ಶುಭ ದಿಕ್ಕು: ಆಗ್ನೇಯ
ಸಿಂಹ: ನಿಮಗೆ ಈ ವಾರ ದೈವದ ಬೆಂಬಲವಿದೆ!
ಮಾತು ಮಾಣಿಕ್ಯ ಎಂಬುದು ವಾಸ್ತವವಾದರೂ ಮೌನ ಬಂಗಾರ ಎಂಬ ರೂಢಿಯ ಮಾತನ್ನು ಮರೆಯದಿರಿ. ಹೀಗಾಗಿ ಅವಶ್ಯಕವಾದ ಮಾತುಗಳು ನಿಮ್ಮ ಪಾಲಿಗೆ ಸಂಜೀವಿನಿಯಾಗಲಿ. ಬೇಕಾಗಿರದ ಮಾತುಗಳನ್ನು ನಿಯಂತ್ರಿಸಿ. ಸರ್ಪದ ಬಾಧೆ ಹೊತ್ತಿರುತ್ತೀರಿ. ಪ್ರಾಪ್ತಿಯ ವಿಚಾರ ಲಭ್ಯವಿದೆ. ಆದರೆ ಸ್ಪಷ್ಟವಾದ ಪ್ರಯತ್ನಗಳು ಸೂಕ್ತವಾದ ರೀತಿಯಲ್ಲಿ ನಿಮ್ಮಿಂದ ಒಗ್ಗೂಡಿ ಬರುವಂತಿರಲಿ. ದೈವದ ಬೆಂಬಲವಿದೆ. ರಾಹುಪೀಡಾ ನಿವಾರಣಾ ಸ್ತೋತ್ರ ಓದಿ. ಗಣೇಶನ ಅನುಗ್ರಹಕ್ಕಾಗಿ ಅವನನ್ನು ಸ್ತುತಿಸಿ.
ಶುಭ ಸಂಖ್ಯೆ : 5 ಶುಭ ದಿಕ್ಕು: ಉತ್ತರ
ಕನ್ಯಾ: ಹಣಕಾಸಿನ ವಿಚಾರದಲ್ಲಿ ಜಾಗ್ರತೆ
ಹಣಕಾಸಿನ ವಿಚಾರದಲ್ಲಿ ಜಾಗ್ರತೆ. ಅವಸರದಿಂದ ವಾಗ್ದಾನ ಮಾಡಲು ಮುಂದಾಗದಿರಿ. ಒಳ್ಳೆಯ ಕೆಲಸ ಹುಡುಕಬೇಕು ಎಂಬ ಮಹತ್ವಾಕಾಂಕ್ಷೆಗೆ ಪ್ರಯತ್ನ ನಡೆಯಲಿ. ಇರುವ ಕೆಲಸ ಸರ್ರನೆ ಬಿಡಬೇಡಿ. ಶ್ರೀದೇವಿಯ ದಿವ್ಯಾನುಗ್ರಹದಿಂದ ಒಳ್ಳೆಯ ಕೆಲಸ ಸಿಗುವ ಅವಕಾಶ ವಿಪುಲವಾಗಿದೆ. ಮನೆಯಲ್ಲಿನ ಶಾಂತಿ ಸಹಕಾರ ನಿಮ್ಮ ಪಾಲಿಗೆ ಸಂಜೀವಿನಿಯೇ ಆಗಿದೆ. ನಿಮ್ಮ ಮಾತಿನ ಜಾಣ್ಮೆ ಚೆನ್ನಾಗಿಯೇ ಇದೆಯೆಂಬುದರಲ್ಲಿ ಸಂಶಯವಿಲ್ಲ. ಅನ್ಯರು ಆಡುವ ಮಾತಿನ ಬಗೆಗೂ ಲಕ್ಷ್ಯವಿರಲಿ. ಶ್ರೀ ಲಲಿತಾಳನ್ನು ಸ್ತುತಿಸಿ.
ಶುಭ ಸಂಖ್ಯೆ : 2 ಶುಭ ದಿಕ್ಕು: ಆಗ್ನೇಯ
ತುಲಾ: ಬೌದ್ಧಿಕ ಚಾತುರ್ಯ ತೋರಿಸಿ
ನೆನಪಿಡಿ, ಒಂದು ಚಿಕ್ಕ ಮಾತು ಅಥವಾ ಘಟನೆ ನಿಮ್ಮ ಮನಃ ಶಾಂತಿಯನ್ನೇ ಹಾಳು ಮಾಡೀತು. ಆರೋಗ್ಯದ ಬಗೆಗಿನ ವಿಚಾರ ನಿರ್ಲಕ್ಷಕ್ಕೆ ಒಳಗಾಗದಿರಲಿ. ಕೋರ್ಟ್, ಕಚೇರಿಯ ವಿಷಯಗಳು ತುಸು ಒತ್ತಡವನ್ನು ತರುತ್ತವೆ ಎಂಬ ವಿಚಾರ ಕೈ ಬಿಡಿ. ಅನಿವಾರ್ಯವಾದರೆ ನ್ಯಾಯಕ್ಕಾಗಿ ಕೋರ್ಟ್ ಕಟ್ಟೆ ಏರಲು ಹಿಂಜರಿಯದಿರಿ. ನಿಮ್ಮ ಶಕ್ತಿ ಸಾಮರ್ಥ್ಯವನ್ನು ಬೌದ್ಧಿಕ ಚಾತುರ್ಯದ ಮೂಲಕವೇ ಪ್ರದರ್ಶಿಸಿ. ಎಲ್ಲರೂ ತಿರುಗಿ ಬಿದ್ದಿದ್ದಾರೆ ಎಂಬ ನೋವು, ಅಸಹಾಯಕತೆ ಕಂಡೀತು. ಹನುಮಾನ್ ಚಾಲೀಸಾ ಓದಿ.
ಶುಭ ಸಂಖ್ಯೆ : 6 ಶುಭ ದಿಕ್ಕು: ದಕ್ಷಿಣ
ವೃಶ್ಚಿಕ: ಅದೃಷ್ಟ ಪ್ರಾಪ್ತಿಯ ಸಮಯ
ಬಾಳ ಸಂಗಾತಿಯೊಡನೆಯ ಅನೋನ್ಯತೆಯಿಂದಾಗಿ ಹಲವು ರೀತಿಯ ಕೆಲಸ ಕಾರ್ಯಗಳು, ಮನೆಯಲ್ಲಿ ಶುಭ ವಾರ್ತೆ, ಶುಭ ಕೆಲಸಗಳು ಕೇಳಿ ಬರಲು, ಸಂಭವಿಸಲು ಸೂಕ್ತವಾದ ಕಾಲಘಟ್ಟವಾಗಿದೆ ಇದೆ. ಆದರೆ ಆರೋಗ್ಯದ ವಿಚಾರದಲ್ಲಿ ನಿರ್ಲಕ್ಷ್ಯಬೇಡ. ಧನಾಗಮನದ ಬಗೆಗೆ ಸೂಚನೆಗಳು ಗೋಚರಿಸುತ್ತಿವೆ. ವಿಶೇಷವಾಗಿ ಗಣೇಶನ ಆರಾಧನೆ, ಸುಬ್ರಹ್ಮಣ್ಯನ ಸ್ತುತಿಯಿಂದ ಅದೃಷ್ಟ ಪ್ರಾಪ್ತಿಗೆ ಅಧಿಕ ಅವಕಾಶಲಭ್ಯ. ಸುಖದ ವಿಚಾರಗಳು ಪ್ರವಾಸವೋ, ಹಲವು ದಿನಗಳ ವ್ಯಾಜ್ಯದ ಸಮಾಪ್ತಿಯಿಂದಲೋ ಅನಿರೀಕ್ಷಿತವಾಗಿ ಸಂಭವಿಸುತ್ತದೆ.
ಶುಭ ಸಂಖ್ಯೆ : 4 ಶುಭ ದಿಕ್ಕು: ಈಶಾನ್ಯ
ಧನಸ್ಸು: ಸಂತೋಷ ತರುವ ಕಾಲ
ಕಾಡಿ ಕಾಡಿ ಈಗ ಬಿಟ್ಟು ಹೋದ ಶನೈಶ್ವರನೇ ಧೈರ್ಯ ತುಂಬುವ ಮಮತೆಯ ಮಾತೃಹೃದಯಿಯಾಗುತ್ತಿದ್ದಾನೆಂಬುದನ್ನು ನೆನಪಿಡಿ. ನಿಮ್ಮ ಸುಂಸಬದ್ಧವಾದ ಲೆಕ್ಕಾಚಾರಗಳು ಅನುಭವ ಹಾಗೂ ಜಾಣ್ಮೆಯ ಹೆಜ್ಜೆಗಳನ್ನು ಬದುಕಿನಲ್ಲಿರಿಸುವ ಕಾರಣದಿಂದಾಗಿ ಲಾಭಕರವಾಗಿ ನಿಮ್ಮ ಸಂತೋಷಕ್ಕೆ ಕಾರಣ ಆಗಬಲ್ಲವು. ಪಿತ್ರಾರ್ಜಿತವಾದ ಹಲವು ಗಟ್ಟಿ ಅನುಭವ ಅಥವಾ ಪರಂಪರೆಯ ಕಾರಣದಿಂದ ನೀವೇ ನಿಮ್ಮದೇ ಆದ ಸ್ವಯಂ ಉದ್ಯೋಗಕ್ಕೆ ಮುಂದಾಗುವುದರಿಂದಲೂ ಲಾಭಲಭ್ಯ. ಮಹಾಲಕ್ಷ್ಮೀ ಅಷ್ಟಕವನ್ನು ಪಠಿಸಿ.
ಶುಭ ಸಂಖ್ಯೆ : 8 ಶುಭ ದಿಕ್ಕು: ಪಶ್ಚಿಮ
ಜ್ಯೋತಿಷ್ಯಕ್ಕೆ ಸಂಬಂಧಿಸಿದ ವಿಷಯಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
ಮಕರ: ಜಾಣ್ಮೆಯಿಂದ ಲಾಭ ಗಳಿಸಿ
ರಾಶ್ಯಾಧಿಪ ಶನಿ ಮಹಾರಾಜನೇ ಕೊಂಚ ಡೋಲಾಯಮಾನ ಸ್ಥಿತಿಗೆ ಕಾರಣವಾಗುವ ಹಾಗೆ ಚಂದ್ರನ ಉಪಟಳಗಳು ನಿಮ್ಮನ್ನು ಬಾಧಿಸಬಹುದು. ಸಾಡೇಸಾತಿ ದಿನಗಳು ಇವು. ಯುದ್ಧ ಅನಿವಾರ್ಯವೇ ಆದರೆ ಸ್ಪರ್ಧಿಸಿ. ಎದುರಾಳಿಯನ್ನು ಮಣಿಸುವ ತಂತ್ರಗಳನ್ನು ಭೈರವನ ಅನುಗ್ರಹದಿಂದಲೇ ನೀವು ಪಡೆಯಬೇಕು. ಶಾಸನ ಬದ್ಧವಾದ ಹೋರಾಟ, ಚುನಾವಣೆಗಳಲ್ಲಿನ ಸ್ಪರ್ಧೆ ಇತ್ಯಾದಿಗಳಿಂದ ಹಿಂದೆ ಸರಿಯದಿರಿ. ಮುಳಗುವವನಿಗೆ ಹುಲ್ಲು ಕಡ್ಡಿ ಆದಾರವಾಗುವ ಸೋಜಿಗ ಸಾಧ್ಯ. ತಾರ್ಕಿಕವಾಗಿ ಯೋಚಿಸಿ ಮುನ್ನುಗ್ಗಿ.
ಶುಭ ಸಂಖ್ಯೆ : 1 ಶುಭ ದಿಕ್ಕು: ಉತ್ತರ
ಕುಂಭ: ಮಾತನಾಡುವಾಗ ಎಚ್ಚರವಿರಲಿ
ವಿನಾಕಾರಣವಾಗಿ ವಿರೋಧಿ ಕೆಣಕುತ್ತಾನೆ. ನಿಮ್ಮ ಮೌನವನ್ನು ಸೋಲು ಎಂದೇ ಭಾವಿಸುತ್ತಾನೆ. ಆದರೆ ಕೆರಳದಿರಿ. ದೃಢವಾದ ಮನಸ್ಸು ನಿಮ್ಮದೇ ಆದ ಭದ್ರಕೋಟೆ. ಸರ್ರನೆ ಕೋಪದ, ಅತಾರ್ಕಿಕಮಾತುಗಳು ಹೊರ ಬಾರದಂತೆ ಗರಿಷ್ಠ ಎಚ್ಚರ ಹೊಂದಿರಿ. ಮಕ್ಕಳು ಬಿರುಸಾಗಿ ಮಾತನಾಡಬಹುದು. ಮಕ್ಕಳ ವೇದನೆಯ ಮೂಲ ಎಲ್ಲಿದೆ ಎಂಬುದನ್ನು ಜಾಣ್ಮೆಯಿಂದಲೇ ಅರಿತು ರಿಪೇರಿಗೆ ಮುಂದಾಗಿ. ಬರೀ ಮೈಕೈ ಪರಚಿಕೊಳ್ಳುವುದರಿಂದ ಲಾಭವಿಲ್ಲ. ಪರದಾಟವೇ ಗತಿ ಆದೀತು. ಹನುಮಾನ್ ಚಾಲೀಸಾ ಓದಿ. ಕ್ಷೇಮವಿದೆ.
ಶುಭ ಸಂಖ್ಯೆ : 7 ಶುಭ ದಿಕ್ಕು: ವಾಯವ್ಯ
ಮೀನ: ಸೋಲೆ ಗೆಲುವಿನ ಮೆಟ್ಟಿಲು
ಜಾಸ್ತಿ ಯೋಚನೆ ಮಾಡಲು ಹೋಗಬೇಡಿ. ಇಕ್ಕಟ್ಟಾದ ರಸ್ತೆಗಳನ್ನು ಹುಷಾರಾಗಿ ಹೆಜ್ಜೆ ಇರಿಸಿ ದಾಟಿ. ನಷ್ಟ ತರಲೇ ಶಪಥ ತೊಟ್ಟಂತಿರುವ ಶನೈಶ್ವರ, ರಾಹು, ಕೇತುಗಳು ತಲೆನೋವು ತರುವ ಗ್ರಹಗಳಾಗಿವೆ. ಹಣಕಾಸಿನ ವಿಚಾರದಲ್ಲಿ ನಿರ್ಲಕ್ಷ್ಯಬೇಡ. ಆಫೀಸಿನಲ್ಲಿ ಯಾರೊಡನೆಯೂ ವಾಗ್ವಾದ ಬೇಡ. ನಿಮ್ಮ ಮಾತೇ ಸರಿ ಇದೆ ಎಂದು ಕೈಮುಗಿದು ಬಿಡಿ. ಸೋತು ಗೆಲ್ಲಲು ದೈವ ಸಹಾಯ ಮಾಡಲು ಇದರಿಂದ ಸಾಧ್ಯವಿದೆ. ಧೈರ್ಯವನ್ನು ಆಸ್ತಿಯಾಗಿಸಿಕೊಳ್ಳಿ. ಆದರೆ ಕಿಚ್ಚು ರೋಷ ಬೇಡ. ದಶರಥ ಮಹಾರಾಜ ವಿರಚಿತ ಶನೈಶ್ವರ ಸ್ತೋತ್ರ ಓದಿ.
ಶುಭ ಸಂಖ್ಯೆ : 3 ಶುಭ ದಿಕ್ಕು: ಪೂರ್ವ
ಎಂ.ಎಂ.ಕೆ. ಶರ್ಮ, ಬೆಂಗಳೂರು
ಮೊಬೈಲ್ ನಂ.: 9632980996
ಇದನ್ನೂ ಓದಿ : Astrology: ನಿಮ್ಮ ರಾಶಿಗೆ ಸಾಡೇಸಾತಿ ಮತ್ತು ಶನಿ ದೆಸೆ ಯಾವಾಗ ಇದೆ ಗೊತ್ತೆ?