Site icon Vistara News

PM Narendra Modi: ಅಯೋಧ್ಯೆಯ ದೀಪೋತ್ಸವ ಅದ್ಭುತ, ದೈವಿಕ! ಪ್ರಧಾನಿ ಮೋದಿ ಬಣ್ಣನೆ

Ayodhya Deepotsava is Amazing, Unforgettable Says PM Narendra Modi

ನವದೆಹಲಿ: ಉತ್ತರ ಪ್ರದೇಶದ (Uttar Pradesh) ಅಯೋಧ್ಯೆಯಲ್ಲಿ (Ayodhya) ನಡೆದ ದೀಪೋತ್ಸವನ್ನು (Deepostsava) ಕಂಡು ಪ್ರಧಾನಿ ನರೇಂದ್ರ ಮೋದಿ (PM Narendra Modi) ಅವರು ಬೆರಗಾಗಿದ್ದಾರೆ. ಅಯೋಧ್ಯೆಯಲ್ಲಿ ನಡೆದ ದೀಪೋತ್ಸವನ್ನು ಪ್ರಧಾನಿ ಮೋದಿ ಅವರು “ಅದ್ಭುತ(Amazing), ದೈವಿಕ ಮತ್ತು ಮರೆಯಲಾಗದ ವಿಸ್ಮಯ(Unforgettable)” ಎಂದು ಕರೆದಿದ್ದಾರೆ. ಅಲ್ಲದೇ ದೀಪೋತ್ಸವದ ಕೆಲವು ಚಿತ್ರಗಳನ್ನು ಎಕ್ಸ್ ವೇದಿಕೆಯಲ್ಲಿ ಹಂಚಿಕೊಂಡಿದ್ದಾರೆ.

ತಮ್ಮ ಅಧಿಕೃತ ಎಕ್ಸ್ ವೇದಿಕೆ ಖಾತೆಯಲ್ಲಿ ಪೋಸ್ಟ್ ಮಾಡಿರುವ ಪ್ರಧಾನಿ ನರೇಂದ್ರ ಮೋದಿ ಅವರು, ಅಯೋಧ್ಯೆಯಲ್ಲಿ ಬೆಳಗಿದ ಲಕ್ಷಾಂತರ “ದಿಯಾಗಳ” (ಮಣ್ಣಿನ ದೀಪಗಳು) ಮೂಲಕ ಇಡೀ ದೇಶವು “ಪ್ರಕಾಶಮಾನವಾಗಿದೆ” ಎಂದು ಹೇಳಿದ್ದಾರೆ.

ದಿಯಾಗಳಿಂದ ಹೊರಹೊಮ್ಮುವ ಶಕ್ತಿಯು ಭಾರತದಾದ್ಯಂತ ಹೊಸ ಉತ್ಸಾಹ ಮತ್ತು ಉತ್ಸಾಹವನ್ನು ಹರಡುತ್ತಿದೆ. ಭಗವಾನ್ ಶ್ರೀರಾಮನು ಎಲ್ಲಾ ದೇಶವಾಸಿಗಳಿಗೆ ಒಳ್ಳೆಯದನ್ನು ಮಾಡಲಿ ಮತ್ತು ನನ್ನ ಎಲ್ಲಾ ಕುಟುಂಬ ಸದಸ್ಯರಿಗೆ ಸ್ಫೂರ್ತಿಯಾಗಲಿ ಎಂದು ನಾನು ಬಯಸುತ್ತೇನೆ. ಜೈ ಸಿಯಾ ರಾಮ್ ಎಂದು ಪ್ರಧಾನಿ ಮೋದಿ ಹಿಂದಿಯಲ್ಲಿ ಟ್ವೀಟ್ ಮಾಡಿದ್ದಾರೆ.

ಅಯೋಧ್ಯೆಯಲ್ಲಿ ಬೆಳಗಿದ 22 ಲಕ್ಷ ದೀಪಗಳು

ರಾಮ ಜನ್ಮಭೂಮಿ ಅಯೋಧ್ಯೆಯು ದೀಪಗಳಲ್ಲಿ ಮಿಂದೆದ್ದಿದೆ. ದೀಪಾವಳಿ (Deepavali 2023) ಹಿನ್ನೆಲೆಯಲ್ಲಿ ಸರಯೂ ನದಿ ತೀರ ಸೇರಿ ಅಯೋಧ್ಯೆಯ ಆರು ಘಾಟ್‌ಗಳಲ್ಲಿ ಸುಮಾರು 22 ಲಕ್ಷ ದೀಪಗಳನ್ನು ಬೆಳಗಿರುವುದು ದಾಖಲೆಯಾಗಿದೆ. ಇದರಿಂದಾಗಿ ಅಯೋಧ್ಯೆಯಲ್ಲಿ ದೀಪಾವಳಿ ಸಂಭ್ರಮವು ಇಮ್ಮಡಿಯಾಗಿದೆ. ಅಯೋಧ್ಯೆಯ ದೀಪೋತ್ಸವ (Ayodhya Deepotsav) ಗಮನ ಸೆಳೆಯಿತು. ದೀಪಗಳು ರಾಮನ ನಗರದ ವೈಭವವನ್ನು ದ್ವಿಗುಣಗೊಳಿಸಿದ್ದವು.

ಯೋಧರ ಜತೆ ಮೋದಿ ದೀಪಾವಳಿ

ಪ್ರಧಾನಿ ನರೇಂದ್ರ ಮೋದಿ ಅವರು ಪ್ರತಿ ವರ್ಷದಂತೆ ಈ ಬಾರಿಯೂ ಗಡಿಯಲ್ಲಿ ಯೋಧರ ಜತೆ ದೀಪಾವಳಿ ಆಚರಿಸಿದ್ದಾರೆ. ಹಿಮಾಚಲ ಪ್ರದೇಶದ ಲೆಪ್ಚಾ ಗಡಿಯಲ್ಲಿ ಯೋಧರೊಂದಿಗೆ ದೀಪಾವಳಿ ಆಚರಿಸಿದ ಮೋದಿ, ಸೈನಿಕರಿಗೆ ಸಿಹಿ ತಿನ್ನಿಸಿದರು. ಇದೇ ವೇಳೆ ಮಾತನಾಡಿದ ಮೋದಿ, “ನೀವು (ಯೋಧರು) ಎಲ್ಲಿ ಇರುತ್ತೀರೋ, ಅಲ್ಲಿಯೇ ನನ್ನ ಹಬ್ಬ” ಎಂದು ಹೇಳಿದರು. ಹಾಗೆಯೆ, ಸಾಲು ಸಾಲು ಪೋಸ್ಟ್‌ ಮಾಡಿದ ಮೋದಿ, ದೇಶದ ರಕ್ಷಣೆಗೆ ಯೋಧರ ಕೊಡುಗೆಯನ್ನು ಸ್ಮರಿಸಿದರು.

ಈ ಸುದ್ದಿಯನ್ನೂ ಓದಿ: Deepavali 2023: ಭಾರತದ ಈ ಊರುಗಳ ದೀಪಾವಳಿಯ ಸಂಭ್ರಮ ಒಮ್ಮೆಯಾದರೂ ಕಣ್ತುಂಬಿಕೊಳ್ಳಲೇಬೇಕು!

Exit mobile version