Site icon Vistara News

Ayodhya Ram Mandir: ಪ್ರಾಣ ಪ್ರತಿಷ್ಠಾಪನೆಗೆ ಜ.22ನ್ನೇ ಆರಿಸಿಕೊಂಡಿದ್ದೇಕೆ? ಹೀಗಿದೆ ವಿಶೇಷ!

Ayodhya City Rama temple

ಅಯೋಧ್ಯೆ: ಜನವರಿ 22ರಂದು ಅಯೋಧ್ಯೆಯಲ್ಲಿ ನಡೆಯಲಿರುವ ರಾಮಮಂದಿರದ (Ayodhya Ram Mandir) ಪ್ರಾಣ ಪ್ರತಿಷ್ಠಾಪನೆಯನ್ನು (Ram Mandir Pran Pratishta) ವಿಶ್ವದಾದ್ಯಂತ ಕೋಟ್ಯಂತರ ಹಿಂದೂಗಳು ನಿರೀಕ್ಷಿಸುತ್ತಿದ್ದಾರೆ. ಈ ಐತಿಹಾಸಿಕ ಘಟನೆಗೆ ಸಾಕ್ಷಿಯಾಗಲು ದೇಶವಿದೇಶಗಳಿಂದ ಭಕ್ತಾದಿಗಳು ಕಾತರರಾಗಿದ್ದಾರೆ. ಆದರೆ ಈ ಮಹತ್ವದ ಕಾರ್ಯಕ್ರಮಕ್ಕೆ ಜನವರಿ ಇಪ್ಪತ್ತೆರಡೇ ಯಾಕೆ?

ಈ ದಿನಾಂಕಕ್ಕೆ ಒಂದಲ್ಲ, ಹಲವು ಖಗೋಳ-ಸಂಖ್ಯಾಶಾಸ್ತ್ರೀಯ ಮಹತ್ವಗಳಿವೆ. ಹಿಂದೂ ಪಂಚಾಂಗದ ಪ್ರಕಾರ ಈ ಮಂಗಳಕರ ದಿನ ಯಾವ್ಯಾವ ರೀತಿಯಲ್ಲಿ ಪ್ರಾಮುಖ್ಯತೆ ಹೊಂದಿದೆ ಎಂಬುದನ್ನು ಇಲ್ಲಿ ನೋಡೋಣ.

ಹಿಂದೂ ಮಾಸ ಪೌಷ: ಹಿಂದೂ ಸಂಪ್ರದಾಯದಲ್ಲಿ ಅತ್ಯಂತ ಮಂಗಳಕರವೆಂದು ಪರಿಗಣಿಸಲ್ಪಟ್ಟಿರುವ ಚಾಂದ್ರಮಾನ ಪದ್ಧತಿಯಲ್ಲಿ ಹತ್ತನೇ ತಿಂಗಳಾಗಿರುವ ಪೌಷ ಮಾಸದಲ್ಲಿ ರಾಮಮಂದಿರದ ಉದ್ಘಾಟನೆ ನಡೆಸಲಾಗುತ್ತಿದೆ. ಈ ಅವಧಿಯಲ್ಲಿಯೇ ಕುಂಭಮೇಳ, ಮಹಾಕುಂಭದಂತಹ ವಿವಿಧ ಧಾರ್ಮಿಕ, ಸಾಂಸ್ಕೃತಿಕ ಮತ್ತು ಆಧ್ಯಾತ್ಮಿಕ ಕಾರ್ಯಕ್ರಮಗಳು ನಡೆಯುತ್ತವೆ.

ಮಕರ ಸಂಕ್ರಾಂತಿ ಮತ್ತು ಉತ್ತರಾಯಣ: ಜನವರಿ 22 ಮಕರ ಸಂಕ್ರಾಂತಿಯ ನಂತರ ಬರುತ್ತದೆ. ಮಕರ ಸಂಕ್ರಾಂತಿ ಉತ್ತರದ ಕಡೆಗೆ ಸೂರ್ಯನ ಚಲನೆಯನ್ನು ಗುರುತಿಸುವ ಮಹತ್ವದ ಹಿಂದೂ ಪರ್ವ. ಇಲ್ಲಿಂದ ಬಳಿಕ ಉತ್ತರಾಯಣ. ಇದು ಮಂಗಳಕರ, ಬೆಳವಣಿಗೆ ಮತ್ತು ಹೊಸ ಆರಂಭದ ಸಮಯವೆಂದು ಪರಿಗಣಿಸಲಾಗಿದೆ.

ಶುಕ್ಲ ಪಕ್ಷದ ದ್ವಾದಶಿ ತಿಥಿ: ವಿಶೇಷವಾಗಿ ಶುಕ್ಲ ಪಕ್ಷ ಮತ್ತು ದ್ವಾದಶಿ ತಿಥಿ ಅಯೋಧ್ಯೆ ರಾಮ ಮಂದಿರದ ಉದ್ಘಾಟನೆಯ ದಿನ. ಶುಕ್ಲ ಪಕ್ಷವು ಚಂದ್ರನ ಬೆಳವಣಿಗೆಯ ಹಂತವಾಗಿದೆ. ಇದು ಚಂದ್ರನ ಹೆಚ್ಚುತ್ತಿರುವ ಪ್ರಕಾಶದೊಂದಿಗೆ ಸಂಬಂಧಿಸಿದೆ. ಬೆಳವಣಿಗೆ, ಸಮೃದ್ಧಿ ಮತ್ತು ಸಕಾರಾತ್ಮಕ ಶಕ್ತಿಯನ್ನು ಸಂಕೇತಿಸುತ್ತದೆ. ಹೊಸ ಉದ್ಯಮಗಳು, ಯೋಜನೆಗಳು ಅಥವಾ ಸಮಾರಂಭಗಳನ್ನು ಪ್ರಾರಂಭಿಸಲು ಶುಕ್ಲ ಪಕ್ಷ ಅತ್ಯಂತ ಮಂಗಳಕರ. ದ್ವಾದಶಿ ತಿಥಿಯು ಸ್ಥಿತಿಕರ್ತನಾದ, ರಕ್ಷಕನಾದ ಭಗವಾನ್ ವಿಷ್ಣುವಿಗೆ ಸಂಬಂಧಿಸಿದೆ. ಭಗವಾನ್ ರಾಮನು ವಿಷ್ಣುವಿನ ಏಳನೆಯ ಮತ್ತು ಅತ್ಯಂತ ಜನಪ್ರಿಯ ಅವತಾರ. ಈ ತಿಥಿಯಂದು ಮಂದಿರವನ್ನು ಉದ್ಘಾಟನೆ ಮಾಡುವುದು ವಿಷ್ಣುವಿನ ದೈವಿಕ ಉಪಸ್ಥಿತಿಯನ್ನು ಆಹ್ವಾನಿಸುವ ಸಂಕೇತ.

ಮೃಗಶೀರ್ಷ ನಕ್ಷತ್ರ: ಅಂದು ಮೃಗಶಿರಾ ನಕ್ಷತ್ರದಲ್ಲಿ ಚಂದ್ರನು ವೃಷಭ ರಾಶಿಯಲ್ಲಿರುತ್ತಾನೆ. ವೃಷಭ ರಾಶಿಯು ಸ್ಥಿರತೆ, ಭದ್ರತೆ ಮತ್ತು ವಸ್ತು ಸಂಪತ್ತಿಗೆ ಸಂಬಂಧಿಸಿದ ಸಂಕೇತ. ಇದು ರಾಮಮಂದಿರದ ಉದ್ಘಾಟನೆಗೆ ಪ್ರಶಸ್ತ. ಇದು ದೇವಾಲಯವು ಸ್ಥಿರ ಮತ್ತು ಸಮೃದ್ಧವಾಗಲಿದೆ ಎಂದು ಸೂಚಿಸುತ್ತದೆ. ಈ ದಿನ ಚಂದ್ರನು ಮೃಗಶಿರಾ ನಕ್ಷತ್ರದಲ್ಲಿ ಇರುತ್ತಾನೆ. ಹೊಸ ಉದ್ಯಮಗಳನ್ನು ಕೈಗೊಳ್ಳಲು ಮತ್ತು ಯಶಸ್ಸನ್ನು ಸಾಧಿಸಲು ಇದು ಪ್ರಬಲ ನಕ್ಷತ್ರ.

ಉತ್ತರಾಷಾಢ ನಕ್ಷತ್ರದಲ್ಲಿ ಸೂರ್ಯ: ಜನವರಿ 22ರಂದು ಸೂರ್ಯನು ಉತ್ತರ ಆಷಾಢ ನಕ್ಷತ್ರ ಮತ್ತು ಮಕರ ರಾಶಿಯಲ್ಲಿ ಇರುತ್ತಾನೆ. ಉತ್ತರ ಆಷಾಢವು ನಾಯಕತ್ವ, ಶಕ್ತಿ ಮತ್ತು ಯಶಸ್ಸಿಗೆ ಸಂಬಂಧಿಸಿದ ನಕ್ಷತ್ರ. ಇದು ಉದ್ಘಾಟನೆಗೆ ಅತ್ಯಂತ ಮಂಗಳಕರ. ಈ ದೇವಾಲಯವು ಭಾರತವನ್ನು ಜಾಗತಿಕ ಆಧ್ಯಾತ್ಮಿಕ ನಾಯಕನಾಗಿ ಬಿಂಬಿಸುತ್ತದೆ.

ಸರ್ವಾರ್ಥ ಸಿದ್ಧಿ ಮತ್ತು ಅಮೃತ ಸಿದ್ಧಿ ಯೋಗ: ಈ ಎರಡೂ ಯೋಗಗಳನ್ನು ಹಿಂದೂ ಸಂಪ್ರದಾಯದಲ್ಲಿ ಅತ್ಯಂತ ಮಂಗಳಕರವಾದ ಜ್ಯೋತಿಷ್ಯ ಸಂಯೋಜನೆ ಎಂದು ಪರಿಗಣಿಸಲಾಗುತ್ತದೆ. ಜನವರಿ 22ರಂದು ಅವುಗಳ ಉಪಸ್ಥಿತಿಯು ಅಯೋಧ್ಯೆಯಲ್ಲಿ ರಾಮಮಂದಿರ ಉದ್ಘಾಟನೆಯ ಮಹತ್ವವನ್ನು ಇನ್ನಷ್ಟು ಹೆಚ್ಚಿಸುತ್ತದೆ. ಇದು ದೀರ್ಘಾಯುಷ್ಯ, ಸಮೃದ್ಧಿ ಮತ್ತು ಆಶೀರ್ವಾದಗಳನ್ನು ಪ್ರತಿನಿಧಿಸುತ್ತದೆ. ಉತ್ತಮ ಆರೋಗ್ಯ, ಸಮೃದ್ಧಿ ಮತ್ತು ದೈವಿಕ ಅನುಗ್ರಹದೊಂದಿಗೆ ಸಹ ಸಂಬಂಧ ಹೊಂದಿವೆ.

22ರ ಪ್ರಾಮುಖ್ಯತೆ: ದಿನದ ಸಂಖ್ಯೆ 22. ಸಂಖ್ಯಾಶಾಸ್ತ್ರದಲ್ಲಿ 22 ಅನ್ನು ʼಮಾಸ್ಟರ್ ಬಿಲ್ಡರ್ʼ ಅಥವಾ ʼಮಾಸ್ಟರ್ ಟೀಚರ್ʼ ಸಂಖ್ಯೆ ಎಂದು ಉಲ್ಲೇಖಿಸಲಾಗುತ್ತದೆ. ಇದು ಕನಸುಗಳನ್ನು ರಿಯಾಲಿಟಿ ಆಗಿ ಪರಿವರ್ತಿಸುವ ಸಾಮರ್ಥ್ಯವನ್ನು ಸಂಕೇತಿಸುತ್ತದೆ. ದೊಡ್ಡ ಪ್ರಮಾಣದಲ್ಲಿ ಕಲ್ಪನೆಗಳನ್ನು ವ್ಯಕ್ತಪಡಿಸುತ್ತದೆ. 22ನೇ ಸಂಖ್ಯೆಗೆ ಸಂಬಂಧಿಸಿದ ವ್ಯಕ್ತಿಗಳು ಜಗತ್ತಿನಲ್ಲಿ ಧನಾತ್ಮಕ ಬದಲಾವಣೆ ತರುವ ಸಾಮರ್ಥ್ಯವನ್ನು ಹೊಂದಿದ್ದಾರೆ ಎಂದು ನಂಬಲಾಗಿದೆ. ದಿನಾಂಕದ ಒಟ್ಟು ಮೊತ್ತ (22 + 1 + 2024) 31 ಆಗಿದೆ, ಇದನ್ನು ಕೂಡಿಸಿದಾಗ 4 (3 + 1) ಸಿಗುತ್ತದೆ. ಸಂಖ್ಯೆ 4 ಸ್ಥಿರತೆ, ಪ್ರಾಯೋಗಿಕತೆ ಮತ್ತು ಬಲವಾದ ಅಡಿಪಾಯದೊಂದಿಗೆ ಸಂಬಂಧಿಸಿದೆ.

Ram Mandir

ಜನವರಿ 22 ಮತ್ತು ಅಭಿವ್ಯಕ್ತಿ: ಈ ಸಂಖ್ಯೆಯ ಒಟ್ಟು ಮೊತ್ತ 4 ಆಗಿರುವುದು, ಈ ದಿನದ ಸಂಖ್ಯಾಶಾಸ್ತ್ರೀಯ ಶಕ್ತಿಯು ಪ್ರಾಯೋಗಿಕ ಅಭಿವ್ಯಕ್ತಿಗಳನ್ನು ಪ್ರೋತ್ಸಾಹಿಸುತ್ತದೆ. ವಿವರಗಳಿಗೆ ಗಮನ, ಸಂಘಟನೆ ಮತ್ತು ಕ್ರಮಬದ್ಧವಾದ ಯೋಜನೆಯು ಸ್ಪಷ್ಟವಾದ ಮತ್ತು ನಿರಂತರ ಫಲಿತಾಂಶಗಳಿಗೆ ಕಾರಣವಾಗಬಹುದು. 4ರ ಕಂಪನವು ಭೌತಿಕ ಅರ್ಥದಲ್ಲಿ ಮಾತ್ರವಲ್ಲದೆ ವೈಯಕ್ತಿಕ ಮತ್ತು ಆಧ್ಯಾತ್ಮಿಕ ಬೆಳವಣಿಗೆಯ ದೃಷ್ಟಿಯಿಂದಲೂ ಕೇಂದ್ರೀಕರಿಸುತ್ತದೆ. ಆಧ್ಯಾತ್ಮಿಕ ಅನ್ವೇಷಣೆಗಳಲ್ಲಿ ಶಕ್ತಿ ಮತ್ತು ಬೆಂಬಲವನ್ನು ಕಂಡುಕೊಳ್ಳುವ ದಿನ.

ಪೂರ್ಣಗೊಳಿಸುವಿಕೆ ಮತ್ತು ಅಡಿಪಾಯ: ದಿನಾಂಕದ ಒಟ್ಟು ಮೊತ್ತವು 4 ಎಂದು ಪರಿಗಣಿಸಿದಾಗ ಇದು ಪೂರ್ಣಗೊಳ್ಳುವಿಕೆಯ ಸಾರವನ್ನು ಸಹ ಹೊಂದಿದೆ ಮತ್ತು ಬಲವಾದ ಅಡಿಪಾಯವನ್ನು ಹಾಕುತ್ತದೆ. ಸಂಖ್ಯೆ 4 ಸಾಮಾನ್ಯವಾಗಿ ಪೂರ್ಣಗೊಳಿಸುವಿಕೆಗೆ ಸಂಬಂಧಿಸಿದೆ. ಸಂಖ್ಯಾಶಾಸ್ತ್ರದಲ್ಲಿ, ಇದು ಸಂಪೂರ್ಣತೆಯ ಪ್ರಜ್ಞೆಯನ್ನು ಪ್ರತಿನಿಧಿಸುತ್ತದೆ. ಜೀವನದ ಒಂದು ನಿರ್ದಿಷ್ಟ ಹಂತ ಅಥವಾ ಅಂಶವು ಕೊನೆಗೊಳ್ಳುತ್ತಿದೆ ಎಂದು ಅದು ಸೂಚಿಸುತ್ತದೆ. 4 ಅನ್ನು ಘನ ಅಡಿಪಾಯವನ್ನು ನಿರ್ಮಿಸುವ ಪರಿಕಲ್ಪನೆಗೆ ಲಿಂಕ್ ಮಾಡಲಾಗಿದೆ. ಭವಿಷ್ಯದ ಕಾರ್ಯಗಳಿಗೆ ಅಡಿಪಾಯ ಹಾಕಲು ಇದು ಸೂಕ್ತ ಸಮಯ ಎಂದು ಇದು ಸೂಚಿಸುತ್ತದೆ.

ಇದನ್ನೂ ಓದಿ: Ayodhya Ram Mandir : ಮಮತಾ ಬ್ಯಾನರ್ಜಿಯನ್ನು ಮುಮ್ತಾಜ್ ಖಾನ್ ಎಂದ ರಾಮ ಮಂದಿರದ ಅರ್ಚಕ

Exit mobile version