ಶೀಲಾ ಸಿ. ಶೆಟ್ಟಿ, ಬೆಂಗಳೂರು
ದೀಪಾವಳಿ ಹಬ್ಬದ ಶಾಪಿಂಗ್ (Deepavali Shopping) ಎಲ್ಲೆಡೆ ಆರಂಭವಾಗಿದೆ. ಮಾಲ್‌ಗಳಲ್ಲಿ ಮಾತ್ರವಲ್ಲ, ಆಯಾ ಏರಿಯಾದ ಅಂಗಡಿ-ಮುಂಗಟ್ಟುಗಳಲ್ಲಿ, ಶಾಪ್‌ಗಳಲ್ಲಿ, ಸೇರಿದಂತೆ ಎಲ್ಲೆಡೆ ಹಬ್ಬದ ಶಾಪಿಂಗ್ ಭರಾಟೆ ಹೆಚ್ಚಾಗಿದೆ. ಹಬ್ಬದ ರಂಗು ಹೆಚ್ಚಿಸುವ ಟ್ರೆಡಿಷನಲ್‌ವೇರ್‌ಗಳು, ಸೀರೆಗಳು, ಆಭರಣಗಳು, ಪೂಜಾ ಸಾಮಾಗ್ರಿಗಳು, ನಾನಾ ಬಗೆಯ ಗೃಹಾಲಂಕಾರದ ಸಾಮಗ್ರಿಗಳು ಸೇರಿದಂತೆ ಎಲ್ಲವೂ ಮಾರುಕಟ್ಟೆಗೆ ಲಗ್ಗೆ ಇಟ್ಟಿವೆ.
ದೀಪಾವಳಿ ಧಮಾಕಾ
ಮಾಲ್‌ಗಳಲ್ಲಿರುವ ಬ್ರಾಂಡೆಡ್ ಡಿಸೈನರ್‌ವೇರ್‌ಗಳು ಹಾಗೂ ಎಲ್ಲಾ ಬಗೆಯ ಶಾಪ್‌ಗಳಲ್ಲಿ ದೀಪಾವಳಿಯ ಆಫರ್ಸ್ ಸುರಿಮಳೆಯಾಗಿದೆ. ಕೆಲವೆಡೆಯಂತು ಡಿಸ್ಕೌಂಟ್ಸ್ ಹಾಗೂ ದೀಪಾವಳಿ ಧಮಕಾದಂತಹ ಆಫರ್‌ಗಳ ಕೊಡುಗೆಗಳು ಗ್ರಾಹಕರನ್ನು ಸೆಳೆಯುತ್ತಿದೆ.
ದೀಪಾವಳಿಗೆ ಗ್ರ್ಯಾಂಡ್ ಟ್ರೆಡಿಷನಲ್‌ವೇರ್ಸ್ ಎಂಟ್ರಿ
ದೀಪಾವಳಿ ಗ್ರ್ಯಾಂಡ್ ಹಬ್ಬ. ಈ ಹಬ್ಬಕ್ಕೆ ಪೂರಕವಾಗುವಂತೆ ಫ್ಯಾಷನ್ ಲೋಕವೂ ಮಹಿಳೆಯರು, ಪುರುಷರು ಹಾಗೂ ಮಕ್ಕಳಿಗೆ ಗ್ರ್ಯಾಂಡ್ ಡಿಸೈನರ್‌ವೇರ್ಸ್ ಕಲೆಕ್ಷನ್‌ಗಳನ್ನೇ ಬಿಡುಗಡೆ ಮಾಡಿದೆ. ಆ ಮಟ್ಟಿಗೆ ಈ ಹಬ್ಬದಲ್ಲಿ ಹೆವ್ವಿ ಗ್ರ್ಯಾಂಡ್ ಲುಕ್ ನೀಡುವ ಟ್ರೆಡಿಷನಲ್‌ವೇರ್ಸ್ ಧರಿಸಲಾಗುತ್ತದೆ. ಮಹಿಳೆಯರ ಆಲ್‌ಟೈಮ್ ಫೇವರೇಟ್ ರೇಷ್ಮೆ ಸೀರೆಗಳು, ಪುರುಷರ ಶೆರ್ವಾನಿ, ಧೋತಿ, ಬಂದಗಾಲದಂತಹ ಇಂಡೋ-ವೆಸ್ಟರ್ನ್ ಶೈಲಿಯ ಗ್ರ್ಯಾಂಡ್ ಔಟ್‌ಫಿಟ್‌ಗಳು, ಯುವತಿಯರ ಮನೋಭಿಲಾಷೆಗೆ ಹೊಂದುವಂತಹ ಹೆವ್ವಿ ಲೆಹೆಂಗಾ, ಗಾಗ್ರಾ-ಚೋಲಿ ಸೇರಿದಂತೆ ನಾನಾ ಡಿಸೈನರ್‌ವೇರ್‌ಗಳು ಬಂದಿವೆ. ಮಕ್ಕಳಿಗೆ ಇವುಗಳಲ್ಲೆ ಮಿನಿ ಡಿಸೈನರ್‌ವೇರ್ಸ್ ಆಗಮಿಸಿವೆ ಎನ್ನುತ್ತಾರೆ ಮಾಲ್‌ವೊಂದರ ಡಿಸೈನರ್‌ವೇರ್ ಸೆಂಟರ್‌ನ ಮ್ಯಾನೇಜರ್.
ಜಗಮಗಿಸುವ ಆಕ್ಸೆಸರೀಸ್
ಇಮಿಟೇಷನ್ ಆಭರಣಗಳು ಮಾತ್ರವಲ್ಲ, ನಾನಾ ಬಗೆಯ ವನ್ ಗ್ರಾಮ್ ಗೋಲ್ಡ್ ಹಾಗೂ ಜಗಮಗಿಸುವ ಆಭರಣಗಳು ಈ ಸೀಸನ್‌ನಲ್ಲಿ ಸಾಕಷ್ಟು ಡಿಸೈನ್ಸ್ ಹಾಗೂ ಸೆಟ್‌ನಲ್ಲಿ ಎಂಟ್ರಿ ನೀಡಿವೆ.
ಬಂಗಾರಕ್ಕೆ ಕುಂದದ ಬೇಡಿಕೆ
ಇನ್ನು ಲಕ್ಷ್ಮಿ ಪೂಜೆ ಹಾಗೂ ಧನ್‌ತೆರಾಸ್ ಮಾಡುವವರಿಗೆಂದೇ ಈಗಾಗಲೇ ಬೆಳ್ಳಿ-ಬಂಗಾರದ ಆಭರಣಗಳು ಕಾಲಿಟ್ಟಿವೆ. ಪ್ರತಿವರ್ಷದಂತೆ ಈ ವರ್ಷವೂ ಜ್ಯುವೆಲರಿ ಶಾಪ್‌ಗಳು ನಾನಾ ಬಗೆಯ ಕೊಡುಗೆಗಳನ್ನು ಪ್ರಕಟಿಸಿವೆ.
ಗೃಹಾಲಂಕಾರದ ಸಾಮಗ್ರಿಗಳು
ದೀಪಾವಳಿ ಸಮಯದಲ್ಲಿ ಗೃಹಾಲಂಕಾರದ ಸಾಮಗ್ರಿಗಳು ಹಾಗೂ ಎಲೆಕ್ಟ್ರಾನಿಕ್ ಐಟಂಗಳು ಕೂಡ ನಾನಾ ಆಫರ್‌ಗಳಲ್ಲಿ ಹಾಗೂ ಸೌಲಭ್ಯದಲ್ಲಿ ದೊರಕುತ್ತವೆ. ಟಿವಿ, ರೆಫಿಜರೇಟರ್‌ನಿಂದಿಡಿದು ಟೆಕ್ನಾಲಜಿಗೆ ಸಂಬಂಧಿಸಿದ ವಸ್ತುಗಳು ಆನ್‌ಲೈನ್ ಹಾಗೂ ಆಫ್‌ಲೈನ್‌ನಲ್ಲಿ ಡಿಸ್ಕೌಂಟ್ಸ್ ಹಾಗೂ ಫೆಸ್ಟಿವ್ ಸೀಸನ್ ಧಮಾಕಾ ಹೆಸರಲ್ಲಿ ದೊರೆಯುತ್ತಿವೆ.
(ಲೇಖಕಿ ಫ್ಯಾಷನ್ ಪತ್ರಕರ್ತೆ)
ಇದನ್ನೂ ಓದಿ: Sequence Blouse Fashion: ಸೆಲೆಬ್ರೆಟಿ ಲುಕ್‌ಗಾಗಿ ಬೇಡಿಕೆ ಹೆಚ್ಚಿಸಿಕೊಂಡ ಮಿನುಗುವ ಸಿಕ್ವಿನ್ಸ್ ಬ್ಲೌಸ್
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ