Site icon Vistara News

Deepavali Sky lanterns: ದೀಪಾವಳಿ ಅಲಂಕಾರಕ್ಕೆ ಬಂತು ವೆರೈಟಿ ಆಕಾಶ ದೀಪ

Deepavali Sky lanterns

ಶೀಲಾ ಸಿ. ಶೆಟ್ಟಿ, ಬೆಂಗಳೂರು
ಈಗಾಗಲೇ ದೀಪಾವಳಿ ಸಂಭ್ರಮ ಹೆಚ್ಚಿಸಲು ಮಾರುಕಟ್ಟೆಯಲ್ಲಿ ನಾನಾ ಬಗೆಯ ಆಕರ್ಷಕ ಆಕಾಶ ದೀಪಗಳು (Deepavali Sky lanterns) ಅಥವಾ ಸ್ಕೈ ಲ್ಯಾಂಟೆರ್ನ್‌ಗಳು ಆಗಮಿಸಿವೆ. ಅವುಗಳಲ್ಲಿ ಚೈನೀಸ್‌ ಶೈಲಿಯವು ಹಾಗೂ ಪ್ಯಾರಾಚೂಟ್‌ ವಿನ್ಯಾಸದವು ಹೆಚ್ಚು ಮಾರಾಟವಾಗುತ್ತಿವೆ.

ಬಗೆಬಗೆಯ ಲ್ಯಾಂಟೆರ್ನ್‌ಗೆ ಬೇಡಿಕೆ

ವೈವಿಧ್ಯಮಯ ಪ್ಯಾರಾಚೂಟ್‌, ಬಲೂನು, ಚೆಂಡಿನಾಕಾರ, ಹೃದಯಾಕಾರದ ಆಕಾಶದೀಪ, ಪೆಂಟಾಗನಲ್‌, ಎಕ್ಸಾಗನಲ್‌, ಆಕ್ಟಾಗನಲ್‌, ತಾವರೆ, ಗುಲಾಬಿ, ನಕ್ಷತ್ರಾಕಾರ ಸೇರಿದಂತೆ ನಾನಾ ಡಿಸೈನ್‌ಗಳಲ್ಲಿ ದೊರೆಯುತ್ತಿವೆ. ಕೆಂಪು, ಹಸಿರು, ನೀಲಿ, ಬಿಳಿ, ಹಳದಿ ಮತ್ತಿತರ ಕಡು ಹಾಗೂ ತಿಳಿ ಬಣ್ಣಗಳನ್ನೊಳಗೊಂಡ ಗ್ರಾಹಕರನ್ನು ಸೆಳೆಯುತ್ತಿವೆ. ಕೆಲವಕ್ಕೆ ಕೆಳಗೆ ಕುಚ್ಚುಗಳಿದ್ದರೆ, ಇನ್ನು ಕೆಲವು ಫ್ರಿಂಜ್‌ ಶೈಲಿಯಲ್ಲಿ ಎಳೆ ಎಳೆಯಾಗಿ ಹಾರಾಡುತ್ತಿರುತ್ತವೆ.

Lantern specialty

ಇಕೋ ಫ್ರೆಂಡ್ಲಿ ಸ್ಕೈ ಲ್ಯಾಂಟೆರ್ನ್ಸ್‌

ಈ ಬಾರಿ ಪ್ಲಾಸ್ಟಿಕ್‌ನವಕ್ಕೆ ಹೆಚ್ಚು ಬೇಡಿಕೆಯಿಲ್ಲ. ಕಾಟನ್‌ ಬಟ್ಟೆ ಇಲ್ಲವೇ ದಪ್ಪನಾದ ಪೇಪರ್‌ ಮತ್ತು ಬಿದಿರಿನಿಂದ ತಯಾರಿಸಿದ ಆಕಾಶದೀಪಗಳಿಗೆ ಈ ಬಾರಿ ಪ್ರಾಮುಖ್ಯತೆ ಹೆಚ್ಚಾಗಿದೆ. ಕಲಾತ್ಮಕವಾಗಿ ಸುತ್ತಲೂ ನಾನಾ ವಿನ್ಯಾಸದ ಬಣ್ಣದ ಆಕರ್ಷಕ ಪೇಪರ್‌ ಅಂಟಿಸಿರುವ ಈ ಆಕಾಶ ದೀಪಗಳು ತೂಗು ಹಾಕುವ ಸಲುವಾಗಿ ಲೈಟ್‌ವೇಟ್‌ನಲ್ಲಿ ಸಿದ್ಧಪಡಿಸಲಾಗಿರುತ್ತದೆ ಎನ್ನುತ್ತಾರೆ ಮಾರಾಟಗಾರರು.

ಲ್ಯಾಂಟೆರ್ನ್ ಮಧ್ಯ ಲೈಟಿಂಗ್‌

‘ಆಕಾಶದೀಪಗಳಿಗೆ ಮಧ್ಯದಲ್ಲಿ ಓಪನ್‌ ಇರುತ್ತದೆ. ಅದರ ಮೂಲಕ ಬಲ್ಬ್ ಅಥವಾ ಕ್ಯಾಂಡಲ್‌ ಹೊತ್ತಿಸಬಹುದು. ಕಾರ್ಡ್‌ಬೋರ್ಡ್‌ ಪೇಪರ್‌ ಹಾಗೂ ನಾನಾ ವಿನ್ಯಾಸ ಮತ್ತು ಬಣ್ಣದ ಪೇಪರ್‌ನಿಂದ ತಯಾರಿಸಿದ ಚಿಕ್ಕ ಸೈಜಿನ ಸ್ಕೈ ಲ್ಯಾಂಟೆರ್ನ್‌ಗಳು ಮಾರಾಟವಾಗುತ್ತಿವೆ. ಸಾಕಷ್ಟು ವಿನ್ಯಾಸ, ಬಣ್ಣ ಮತ್ತು ನಾನಾ ಆಕಾರದ ಆಕಾಶ ದೀಪಗಳು ಗ್ರಾಹಕರನ್ನು ಸೆಳೆಯುತ್ತಿವೆ’ ಎನ್ನುತ್ತಾರೆ ಮಾರಾಟಗಾರರು.

ಸ್ಟಾರ್‌ ಸ್ಕೈ ಲ್ಯಾಂಟೆರ್ನ್‌

ನಕ್ಷತ್ರ ಆಕಾರದ ಲ್ಯಾಂಟೆರ್ನ್‌ಗಳಲ್ಲಿ ರಾಯಲ್‌ ಕ್ರೀಮ್‌ ಹಾಗೂ ಮಿಲ್ಕಿ ವೈಟ್‌ ಶೇಡ್‌ನವು ಹೆಚ್ಚು ಬೇಡಿಕೆಯಲ್ಲಿವೆ. ಇವನ್ನು ಮನೆಯೊಳಗಿನ ಲಿವಿಂಗ್‌ ರೂಂ ಹಾಗೂ ಡೈನಿಂಗ್‌ ರೂಂ ಮಧ್ಯೆ ಹಾಕಬಹುದು. ಗೋಡೆಯ ಬದಿಯಲ್ಲೂ ಸಿಂಗರಿಸಬಹುದು. ಕೆಲವರು ಇವನ್ನು ನ್ಯೂ ಇಯರ್‌ನಲ್ಲೂ ತೂಗು ಹಾಕುತ್ತಾರೆ ಎನ್ನುತ್ತಾರೆ ಒಳಾಂಗಣ ವಿನ್ಯಾಸಕಿ ರಾಧಿಕಾ. ಇನ್ನು, ಹಾಲೋಗ್ರಾಫಿಕ್‌ ಡಿಸೈನ್‌ನಲ್ಲಿ ಲಭ್ಯವಿರುವ ಮಿನಿ ಸ್ಟಾರ್‌ ಲ್ಯಾಂಟೆರ್ನ್‌ಗಳನ್ನು ಮನೆಯ ಯಾವ ಭಾಗದಲ್ಲಾದರೂ ತೂಗು ಹಾಕಬಹುದು. ಬಾಗಿಲಿನ ಮುಂಭಾಗ, ಲಿವಿಂಗ್‌ ರೂಮ್‌ನ ಕಾರ್ನರ್‌ ಹೀಗೆ ಕಾರ್ನರ್‌ ಸೂಟ್‌ ಆಗುತ್ತವೆ. ಇವು ಆನ್‌ಲೈನ್‌ನಲ್ಲೂ ಇವು ವೈವಿಧ್ಯಮಯ ಡಿಸೈನ್‌ನಲ್ಲಿ ಲಭ್ಯ.

ಲ್ಯಾಂಟೆರ್ನ್ ವಿಶೇಷತೆ

(ಲೇಖಕಿ ಫ್ಯಾಷನ್‌ ಪತ್ರಕರ್ತೆ)

ಇದನ್ನೂ ಓದಿ: Deepavali Mens Fashion: ದೀಪಾವಳಿ ಹಬ್ಬದ ಮೆನ್ಸ್ ಟ್ರೆಡಿಷನಲ್‌ ಸ್ಟೈಲಿಂಗ್‌ಗೆ ಸಾಥ್‌ ನೀಡುವ ಎಥ್ನಿಕ್‌ವೇರ್ಸ್

Exit mobile version