Site icon Vistara News

Navaratri Celebration : ಚಿಕ್ಕೋಡಿಯಲ್ಲಿ ತಲವಾರ್‌ನಿಂದ ಬೆರಳು ಕೊಯ್ದು ದೇವಿಗೆ ರಕ್ತದ ಅಭಿಷೇಕ!

Talwar in durga pooja

ಚಿಕ್ಕೋಡಿ: ನವರಾತ್ರಿ ಉತ್ಸವದಲ್ಲಿ (Navaratri Celebration) ಬೆರಳನ್ನು ಕೊಯ್ದುಕೊಂಡು ದುರ್ಗಾದೇವಿ ಮೂರ್ತಿಗೆ (Durga Devi Idol) ರಕ್ತದ ಅಭಿಷೇಕ (Blood anointing) ಮಾಡಿ ಭಕ್ತಿಯ ಪರಾಕಾಷ್ಠೆ ಮೆರೆದ ಘಟನೆ ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಬಸ್ತವಾಡ ಗ್ರಾಮದಲ್ಲಿ ನಡೆದಿದೆ. ಶ್ರೀರಾಮ ಸೇನೆ ಕಾರ್ಯಕರ್ತನೊಬ್ಬ (Sri Ram Sene activist) ದುರ್ಗಾದೇವಿ ಮೂರ್ತಿಗೆ ರಕ್ತವನ್ನು ಅರ್ಪಿಸಿದ್ದಾನೆ.

ತಲವಾರ್‌ನಿಂದ ಬೆರಳು ಕೊಯ್ದುಕೊಂಡ ಶ್ರೀರಾಮ ಸೇನೆ ಕಾರ್ಯಕರ್ತನೊಬ್ಬ ದೇವಿಗೆ ರಕ್ತ ಸಮರ್ಪಣೆ ಮಾಡಿದ್ದಾನೆ. ಬಸ್ತವಾಡ ಗ್ರಾಮದ ದುರ್ಗಾಮಾತಾ ಉತ್ಸವ ಕಮಿಟಿಯಿಂದ ದೇವಿ ಪ್ರತಿಷ್ಠಾಪನೆಯನ್ನು ಮಾಡಲಾಗಿತ್ತು. ಈ ವೇಳೆ ಶ್ವೇತ ವಸ್ತ್ರಧಾರಿಯಾಗಿ ಬಂದ ವ್ಯಕ್ತಿಯು ತಲವಾರ್‌ ಅನ್ನು ಹಿಡಿದು ತನ್ನ ಬೆರಳನ್ನು ಕೊಯ್ದುಕೊಂಡು ಸುರಿಯುತ್ತಿದ್ದ ರಕ್ತವನ್ನು ದೇವಿಮೂರ್ತಿಯ ಹಣೆಗೆ ಹಚ್ಚಿದ್ದಾನೆ.

ಇದನ್ನೂ ಓದಿ: Video Viral : ಚೆಂದ ಚೆಂದದ ನರ್ಸ್‌ಗಳು ಅಜ್ಜ ಅಂದ್ರೆ ತ್ರಾಸ್‌ ಆಕೇತಿ ಅಂದ್ರು ರಾಜು ಕಾಗೆ!

ನವರಾತ್ರಿ ಹಿನ್ನೆಲೆ ಹುಕ್ಕೇರಿ ತಾಲೂಕಿನ ವಿವಿಧೆಡೆ ಸೋಮವಾರ (ಅಕ್ಟೋಬರ್‌ 22) ದುರ್ಗಾ ಮಾತಾ ದೌಡ್‌ ಅನ್ನು ಆಚರಿಸಲಾಗಿದೆ. ಈ ವೇಳೆ ಹಿಂದು ಸಂಘಟನೆಗಳ ನೂರಾರು ಕಾರ್ಯಕರ್ತರು ಕೈಯಲ್ಲಿ ತಲವಾರ್ ಹಿಡಿದು ಮೆರವಣಿಗೆ ನಡೆಸಿದ್ದಾರೆ. ತಲಾವರ್‌ ಹಿಡಿದು ಮೆರವಣಿಗೆಯಲ್ಲಿ ಚಿಕ್ಕ ಚಿಕ್ಕ ಮಕ್ಕಳು ಹಾಗೂ ಬಾಲಕಿಯರು ಸಹ ಭಾಗಿಯಾಗಿದ್ದರು.

ಬೆಳಗಾವಿ ಜಿಲ್ಲೆಯ ಹುಕ್ಕೇರಿ ಪಟ್ಟಣದ ವಿವಿಧ ಬೀದಿಗಳಲ್ಲಿ ಈ ದೌಡ್ ನಡೆದಿದ್ದು, ದೇವಿ ಪರ ಘೋಷಣೆಗಳು ಮೊಳಗಿದವು.

ಯವತಿಯರ ಕೈಯಲ್ಲೂ ತಲವಾರ್‌!

ದೌಡ್‌ ಪ್ರಯುಕ್ತ ಮೆರವಣಿಗೆ ನಡೆಸಲಾಗಿದೆ. ಈ ವೇಳೆ ದೌಡ್‌ನಲ್ಲಿ ಭಾಗಿಯಾದ ನೂರಾರು ಯುವಕರು ಹಾಗೂ ಯುವತಿಯರು ತಲವಾರ್‌ ಹಿಡಿದು ಭಕ್ತಿ ತೋರಿದ್ದಾರೆ. ದುರ್ಗಾದೇವಿಗೆ ಹಾಡಿಗೆ ಹೆಜ್ಜೆ ಹಾಕಿದ್ದಾರೆ. ಜಯ ಘೋಷಗಳನ್ನು ಮೊಳಗಿದ್ದಾರೆ.

ಪಾಕಿಸ್ತಾನ ಧ್ವಜದ ರಂಗೋಲಿ ಹೊಸಲಿದ ಯುವಕರು

ಇದೇ ವೇಳೆ ಯುವಕರ ಗುಂಪೊಂದು ದುರ್ಗಾ ದೇವಿಗೆ ಜಯಘೋಷಗಳನ್ನು ಹಾಕಿ ಕುಣಿದು ಕುಪ್ಪಳಿದೆ. ಅಲ್ಲದೆ, ರಸ್ತೆಯಲ್ಲಿ ಪಾಕಿಸ್ತಾನ‌ ದೇಶದ ಧ್ವಜದ ರಂಗೋಲಿ ಬಿಡಿಸಿದ್ದಲ್ಲದೆ, ಅದನ್ನು ಕಾಲಿನಿಂದ ತುಳಿದು, ಅಳಿಸಿ ಸಂಭ್ರಮಿಸಿದ್ದಾರೆ.

ಇದನ್ನೂ ಓದಿ: ‌HD Kumaraswamy : ಜನ ಕಷ್ಟದಲ್ಲಿದ್ದರೆ ಕರ್ನಾಟಕದ ನೀರೋ ಕ್ರಿಕೆಟ್ ನೋಡುತ್ತಿದ್ದ! ಸಿಎಂ – ಎಚ್‌ಡಿಕೆ ವಾರ್

ಮೊಳಗಿದ ಭಾರತ್‌ ಮಾತಾಕಿ ಜೈ

ಮೆರವಣಿಗೆ ವೇಳೆ ಬಿಳಿ ವಸ್ತ್ರ, ಕೇಸರಿ ಶಾಲು ಧರಿಸಿದ ಹಿಂದು ಸಂಘಟನೆಯವರು ಭೋಲೋ ಭಾರತ್‌ ಮಾತಾಕಿ ಜೈ, ಛತ್ರಪತಿ ಶಿವಾಜಿ ಮಹಾರಾಜ್‌ ಕಿ ಜೈ ಉದ್ಘೋಷಣೆಗಳನ್ನು ಕೂಗಿದರು. ಈ ವೇಳೆ ಶಿವಾಜಿ ಮಹಾರಾಜ್‌ ಅವರ ಫೋಟೊ, ಭಾರತಾಂಬೆಯ ಫೋಟೊ, ಶಿವಾಜಿ ಮೂರ್ತಿ, ಪಂಜು ಹಾಗೂ ಖಡ್ಗಗಳು ಗಮನ ಸೆಳೆದವು.

Exit mobile version