Site icon Vistara News

Ganesh Chaturthi: ಗಣೇಶನಿಗೆ ಇವೆ 108 ಹೆಸರುಗಳು! ಪ್ರತಿ ಹೆಸರಿನ ಅರ್ಥವೂ ವಿಶೇಷ!

Ganesh Chaturthi

ನಾಡಿನ ಜನ ಗಣಪತಿ ಹಬ್ಬದ (Ganesh Chaturthi) ಸಂಭ್ರಮದಲ್ಲಿದ್ದಾರೆ. ಎಲ್ಲೆಡೆ ಗೌರಿ ಮತ್ತು ಗಣೇಶನ ಪೂಜೆಗೆ ಭರ್ಜರಿ ತಯಾರಿ ನಡೆಯುತ್ತಿದೆ. ಅಂದ ಹಾಗೆ ಈ ಗಣಪತಿ ಹಿಂದೂ ಧರ್ಮದಲ್ಲಿ ಅತ್ಯಂತ ವಿಶೇಷ ಮತ್ತು ಆದಿ ಪೂಜಿತ, ಅಂದರೆ ಎಲ್ಲ ದೇವರಿಗಿಂತ ಮೊದಲು ಪೂಜಿಸುವ ದೇವರು. ಎಲ್ಲ ದೇವತೆಗಳ ಪೂಜೆಗೆ ಮೊದಲು ಈತನನ್ನೇ ಪೂಜಿಸಲಾಗುತ್ತದೆ. ಅದೇ ಕಾರಣಕ್ಕೆ ಗಣಪತಿಯನ್ನು ಆದಿಪೂಜಿತ ಎಂದೂ ಕರೆಯಲಾಗುತ್ತದೆ. ಹೀಗೆ ಹಲವಾರು ಕಾರಣಗಳಿಂದ ಗಣಪತಿಗೆ ಹಲವಾರು ಹೆಸರುಗಳು ಬಂದಿವೆ. ಬರೋಬ್ಬರಿ 108 ಹೆಸರುಗಳು (108 names of Ganesha) ಗಣಪನಿಗಿವೆ. ಅವುಗಳ ಪಟ್ಟಿ ಮತ್ತು ಅದರ ಅರ್ಥ ಇಲ್ಲಿದೆ.

  1. ಅಖುರಥ: ಇಲಿಯನ್ನು ತನ್ನ ವಾಹನವಾಗಿರಿಸಿಕೊಂಡವನು ಎಂದರ್ಥ. 2. ಆಲಂಪತ: ಎಂದಿಗೂ ಅನಂತನಾದ ದೇವ. 3. ಅಮಿತ: ಕೊನೆಯಿಲ್ಲದವನು. 4. ಅನಂತಚಿದೃಪಮಯಂ: ಅನಂತ ಜ್ಞಾನ ಉಳ್ಳವನು. 5. ಅವನೀಶ್: ಭೂಮಿಯ ಒಡೆಯನು. 6. ಅವಿಘ್ನ: ವಿಘ್ನ ನಿವಾರಕ ಗಣೇಶ. 7. ಬಾಲ ಗಣಪತಿ: ಹೆಸರೇ ಹೇಳುವಂತೆ ಬಾಲಕ ಗಣಪತಿ. 8. ಬಾಲಚಂದ್ರ: ಚಂದ್ರನಿಂದ ಅಲಂಕೃತಗೊಂಡವನು. 9. ಭೀಮ: ಭೀಮನಂತೆ ಗಾತ್ರ ಹೊಂದಿರುವವನು. 10. ಭೂಪತಿ: ಭೂಮಿಗೆ ಪತಿ, ಭೂಮಿಗೆ ಯಜಮಾನನು.

ಜ್ಞಾನದ ದೇವತೆ

  1. ಭುವನಪತಿ: ಭುವನಕ್ಕೆ ಒಡೆಯ, ಜಗತ್ತಿನ ಒಡೆಯನು. 12. ಬುದ್ಧಿನಾಥ: ಬುದ್ಧಿಯನ್ನು, ಜ್ಞಾನವನ್ನು ದಯಪಾಲಿಸುವವನು. 13. ಬುದ್ಧಿಪ್ರಿಯ: ಬುದ್ಧಿವಂತ, ಜ್ಞಾನವಂತನಾದವನು. 14. ಬುದ್ಧಿವಿಧಾತ: ಜ್ಞಾನದ ದೇವತೆ, ಜ್ಞಾನ ದಯಪಾಲಿಸುವ ದೇವರು. 15. ಚತುರ್ಭುಜ: ನಾಲ್ಕು ಕೈಗಳನ್ನು ಹೊಂದಿರುವವನು. 16. ದೇವದೇವ: ದೇವತೆಗಳ ದೇವ. 17. ದೇವಾಂತಕನಾಶಕ: ರಾಕ್ಷಸರನ್ನು, ಅಸುರರನ್ನು ನಾಶಪಡಿಸುವ ದೇವರು. 18. ದೇವವ್ರತ: ಭಕ್ತರ ಪ್ರಾಯಶ್ಚಿತ್ತಗಳನ್ನು ಒಪ್ಪಿಕೊಳ್ಳುವ ದೇವತೆ. 19. ದೇವೇಂದ್ರಶಿಖಾ: ದೇವತೆಗಳ ಹಿತರಕ್ಷಣೆ ಮಾಡುವ ದೇವರು. 20. ಧಾರ್ಮಿಕ: ಧರ್ಮ ನಿರತನಾದವನು.

ಒಂದು ದಂತ ಹೊಂದಿರುವವನು

  1. ಧೂಮ್ರವರ್ಣ: ಧೂಮ್ರ ಬಣ್ಣದ ದೇವತೆ. 22. ದುರ್ಜ: ಅದ್ವಿತೀಯ, ಅಜೇಯ ದೇವತೆ. 23. ದ್ವೈಮಾತುರ: ಇಬ್ಬರು ತಾಯಂದಿರನ್ನು ಉಳ್ಳವನು. 24. ಏಕಾಕ್ಷರ: ಒಂದು ಅಕ್ಷರದವನು. 25. ಏಕದಂತ: ಒಂದು ದಂತ ಹೊಂದಿರುವ ದೇವರು. 26. ಏಕದೃಷ್ಟ: ಒಂದು ಹಲ್ಲು ಹೊಂದಿರುವ ದೇವರು. 27. ಈಶಪುತ್ರ: ಶಿವ/ಈಶ್ವರನ ಪುತ್ರ. 28. ಗದಾಧರ: ಗದೆಯನ್ನು ಆಯುಧವನ್ನಾಗಿ ಉಪಯೋಗಿಸುವ ದೇವರು. 29. ಗಜಕರ್ಣ: ಗಜದ ಕಣ್ಣು, ಅಂದರೆ ಆನೆಯ ಕಣ್ಣುಗಳನ್ನು ಹೊಂದಿರುವ ದೇವರು. 30. ಗಜಾನನ: ಆನೆಯ ಮುಖವನ್ನು ಹೊಂದಿರುವ ದೇವರು.

ಗಣಗಳಿಗೆಲ್ಲ ನಾಯಕ

  1. ಗಜನನೇತಿ: ಆನೆಯ ಮುಖದ ತರಹದ ಮುಖವನ್ನು ಹೊಂದಿರುವ ದೇವರು. 32. ಗಜವಕ್ರ: ಆನೆಯ ಸೊಂಡಿಲುಳ್ಳ ದೇವರು. 33. ಗಜವಕ್ತ್ರ: ಆನೆಯ ಬಾಯಂತೆ ಬಾಯನ್ನು ಉಳ್ಳ ದೇವರು. 34. ಗಣದಕ್ಷಯ (ಗಣನಾಯಕ): ಗಣಗಳಿಗೆಲ್ಲಾ (ದೇವತೆಗಳು) ಅಧಿನಾಯಕನಾದವನು. 35. ಗಣಧ್ಯಕ್ಷಿನ: ಗಣಗಳಿಗೆಲ್ಲಾ ಅಧ್ಯಕ್ಷನಾದವನು. 36. ಗಣಪತಿ: ಗಣನಾಯಕ, ದೇವತೆಗಳಿಗೆಲ್ಲಾ ಒಡೆಯನಾದವನು. 37. ಗೌರಿಸುತ: ಗೌರಿಯ ಪುತ್ರ, ಪಾರ್ವತಿಯ ಸುತ. 38. ಗುಣಿನ: ಸರ್ವ ಜ್ಞಾನ ಉಳ್ಳವನು. 39. ಹರಿದ್ರ: ಬಂಗಾರದ ಬಣ್ಣದ ಮೈ ಉಳ್ಳವ. 40. ಹೇರಂಬಾ: ತಾಯಿಯ ಮುದ್ದಿನ ಮಗ.

ಅತ್ಯಂತ ಬಲಶಾಲಿ

  1. ಕಪಿಲಾ: ಹಳದಿ ಮಿಶ್ರಿತ ಕಂದುಬಣ್ಣದ ಮೈ ಇರುವವನು. 42. ಕವೀಶ: ಕವಿಗಳಿಗೆಲ್ಲ ಒಡೆಯ. 43. ಕೃತಿ: ಸಂಗೀತದ ದೇವತೆ. 44. ಕೃಪಾಳು: ಕರುಣಾಳಾದ ದೇವತೆ. 45. ಕೃಷಪಿಂಗಾಕ್ಷ: ಹಳದಿಮಿಶ್ರಿತ ಕಂದುಬಣ್ಣದ ಕಣ್ಣುಗಳುಳ್ಳವ.
  2. ಕ್ಷಮಾಕರಂ: ಕ್ಷಮೆಯನ್ನು ದಯಪಾಲಿಸುವವನು. 47. ಕ್ಷಿಪ್ರ: ಸರಳವಾಗಿ, ಸುಲಭವಾಗಿ ಭಕ್ತರಿಗೆ ಒಲಿಯುವ ದೇವರು. 48. ಲಂಬಕರ್ಣ: ಉದ್ದನೆಯ ಕಿವಿಗಳುಳ್ಳವನು. 49. ಲಂಬೋದರ: ಉದ್ದನೆಯ ಹೊಟ್ಟೆಯನ್ನುಳ್ಳವನು. 50. ಮಹಾಬಲ: ಅತ್ಯಂತ ಬಲಶಾಲಿಯಾದ ದೇವತೆ.

ಮೃತ್ಯುವನ್ನು ಗೆದ್ದವನು

  1. ಮಹಾಗಣಪತಿ: ಸರ್ವಾಧಿಕಾರಿ, ಸರ್ವೋಚ್ಚ ದೇವತೆ. 52. ಮಹೇಶ್ವರಂ: ಮಹಾ ಈಶ್ವರನ ಸಮಾನರಾದವನು. 53. ಮಂಗಳಮೂರ್ತಿ: ಮಂಗಳಕರನಾದ ದೇವತಾ ಮೂರ್ತಿ. 54. ಮನೋಮಯಿ: ಮನಸ್ಸನ್ನು ಗೆಲ್ಲುವವನು. 55. ಮೃತ್ಯುಂಜಯ: ಮೃತ್ಯುವನ್ನು ಗೆದ್ದವನು. 56. ಮುಂದಾಕರಮ: ಸಂತಸವನ್ನು ಮನೆ ಮಾಡಿಕೊಂಡಿರುವ ದೇವರು. 57. ಮುಕ್ತಿದಾಯಕ: ಮುಕ್ತಿಯನ್ನು ದಯಪಾಲಿಸುವ ದೇವರು. 58. ಮೂಷಿಕವಾಹನ: ಇಲಿಯನ್ನು ವಾಹನವಾಗಿರಿಸಿಕೊಂಡ ದೇವರು. 59. ನಾದಪ್ರತಿಥಿಷ್ಟ: ನಾದ ಸುಧೆಯನ್ನು ಇಷ್ಟಪಡುವ ದೇವರು. 60. ನಮಸ್ತೇತು: ದುಷ್ಟಶಕ್ತಿಗಳನ್ನು, ದುಷ್ಟ ವಿಚಾರಗಳನ್ನು ನಿರ್ಮೂಲನೆ ಮಾಡುವವನು.

ಮೋದಕ ಪ್ರಿಯ

  1. ನಂದನ: ಶಿವನ ಪುತ್ರ. 62. ನಿಧೀಶ್ವರಂ: ಆಯುರಾರೋಗ್ಯ ಐಶ್ವರ್ಯವನ್ನು ದಯಪಾಲಿಸುವ ದೇವನೀತ. 63. ಓಂಕಾರ: ಓಂಕಾರ ಸ್ವರೂಪಿ. 64. ಪೀತಾಂಬರ: ಹಳದಿ ಬಣ್ಣ. 65. ಪ್ರಮೋದ: ಮೋದಕಪ್ರಿಯ. 66. ಪ್ರಥಮೇಶ್ವರ: ಪ್ರಥಮ ಪೂಜೆಯ ದೇವತೆ. 67. ಪುರುಷ್: ಅಪ್ರತಿಮ ಪುರುಷ ವ್ಯಕ್ತಿತ್ವ.
  2. ರಕ್ತ: ಕೆಂಪಗಿನ ಕಣ್ಣುಗಳು ಇರುವ ದೇವರು. 69. ರುದ್ರಪ್ರಿಯ: ರುದ್ರನಿಗೆ/ಶಿವನಿಗೆ ಪ್ರಿಯನಾದ ದೇವ. 70) ಸರ್ವದೇವಾತ್ಮನ್: ಸರ್ವ ಕಾಣಿಕೆಗಳನ್ನ, ಪೂಜೆಗಳನ್ನು, ಒಪ್ಪಿಸಿಕೊಳ್ಳುವವನು.

ಶುಭದಾಯಕ

  1. ಸರ್ವಸಿದ್ಧಾಂತ: ವಿದ್ಯೆ, ಬುದ್ಧಿ, ಜ್ಞಾನವನ್ನು ಸಿದ್ಧಿಸುವವನು. 72. ಸರ್ವಾತ್ಮನ್: ಜಗತ್ತನ್ನು ಸಂರಕ್ಷಿಸುತ್ತಿರುವವನು. 73. ಶಾಂಭವಿ: ಶಾಂಭವಿಯಾದ ತಾಯಿ ಪಾರ್ವತಿಯ ಸುತ. 74. ಶಶಿವರ್ಣಂ: ಚಂದ್ರನ ಬಣ್ಣವುಳ್ಳವನು. 75. ಶೂರ್ಪಕರ್ಣ: ಬೃಹದಾಕಾರದ ಕಿವಿಗಳುಳ್ಳವನು. 76. ಶುಭನ್: ಶುಭದಾಯಕನು. 77. ಶುಭಗುಣಕಣನ್: ಸರ್ವಕಾಯ, ಸರ್ವವಿಧಿಯನ್ನು ಬಲ್ಲ ದೇವರು. 78. ಶ್ವೇತ: ಬಿಳಿಯ ಬಣ್ಣದಂತೆ ಶುಭ್ರ. 79. ಸಿದ್ಧಿದಾತ: ಸಿದ್ಧಿಯನ್ನು ದಯಪಾಲಿಸುವ ದೇವರು.

ಬೇಡಿದ ವರ ನೀಡುವವನು

  1. ಸಿದ್ಧಿಪ್ರಿಯ: ಆಶೀರ್ವಾದವನ್ನು ಸಿದ್ಧಿಸುವವನು. 81. ಸಿದ್ಧಿ ವಿನಾಯಕ” ಯಶಸ್ಸಿನ ಅಧಿದೇವತೆ. 82. ಸ್ಕಂದಪೂರ್ವಜ: ಸುಬ್ರಹ್ಮಣ್ಯನ ಸಹೋದರ. 83. ಸುಮುಖ: ಸ್ತುತ್ಯಾರ್ಹ ಮುಖವನ್ನುಳ್ಳ ದೇವರು. 84. ಸುರೇಶ್ವರಂ: ಸುರದೇವತಿಗಳಿಗೆಲ್ಲಾ ಒಡೆಯನಾದ ದೇವರು.
  2. ಸ್ವರೂಪ್: ರೂಪವಂತನೂ, ಸುಂದರವದನದವನು. 86. ತರುಣ್: ಸದಾಕಾಲ ತರುಣನಂತೆಯೇ ಇರುವ ದೇವರು. 87. ಉದ್ದಂಡ: ದುಷ್ಟ ಶಿಕ್ಷಕ. 88. ಉಮಾಪುತ್ರ: ಉಮೆಯ ಮಗ. 89. ವಕ್ರತುಂಡ: ಬಾಗಿದ ಸೊಂಡಿಲುಳ್ಳವ. 90. ವರಗಣಪತಿ: ಬೇಡಿದ ವರ ನೀಡುವ ದೇವರು.

ವಿಘ್ನಗಳಿಂದ ಕಾಪಾಡುವವನು

  1. ವರಪ್ರದ: ವರಗಳನ್ನು ದಯಪಾಲಿಸುವ ದೇವರು. 92. ವರದವಿನಾಯಕ: ಯಶಸ್ಸನ್ನು ಹರಸಿ ವರವನ್ನು ನೀಡುವ ದೇವರು. 93. ವೀರಗಣಪತಿ: ವೀರನಾದ ಗಣೇಶ ದೇವತೆ. 94. ವಿದ್ಯಾವಾರಿಧಿ: ವಿದ್ಯೆಯ ಅಧಿದೇವತೆ. 95. ವಿಘ್ನಹರ: ವಿಘ್ನಗಳನ್ನು ಹರಿಸುವವನು. 96. ವಿಘ್ನಹರ್ತ: ವಿಘ್ನಗಳನ್ನು ನಾಶಪಡಿಸುವವನು. 97. ವಿಘ್ನರಾಜ: ವಿಘ್ನಗಳನ್ನೆಲ್ಲಾ ಜಯಿಸಿ, ಅದರ ಒಡೆಯನಾಗಿರುವವನು. 98. ವಿಘ್ನ ರಾಜೇಂದ್ರ: ವಿಘ್ನಗಳನ್ನೆಲ್ಲಾ ಜಯಿಸುವವನು. 99. ವಿಘ್ನ ವಿನಾಶಾನಯ: ವಿಘ್ನಗಳ ನಾಶ ಮಾಡುವ ದೇವರು. 100. ವಿಘ್ನೇಶ್ವರ: ವಿಘ್ನಗಳಿಂದ ಕಾಪಾಡುವ ದೇವರು. 101. ವಿಕತ್: ಬೃಹತ್‌ ದೇಹದ ದೇವರು. 102. ವಿನಾಯಕ: ಎಲ್ಲರಿಗೂ ನಾಯಕ. 103. ವಿಶ್ವಮುಖ: ಜಗತ್ತಿಗೆ ಮುಖದಂತೆ ಇರುವವನು. 104. ವಿಶ್ವರಾಜ: ಜಗತ್ತಿಗೇ ರಾಜ. 105. ಯಜ್ಞಕಾಯ: ಯಜ್ಞಗಳಲ್ಲಿ ಭಕ್ತಿ ಸಮರ್ಪಣೆಗಳನ್ನು ಸ್ವೀಕರಿಸುವ ದೇವರು. 106. ಯಶಸ್ಕರಂ: ಯಶಸ್ಸನ್ನು, ಅದೃಷ್ಟವನ್ನು, ಸಿದ್ಧಿಸುವವನು. 107. ಯಶಸ್ವಿನ್: ಅತ್ಯಂತ ಪ್ರೀತಿದಾಯಕನಾದ, ಅತ್ಯಂತ ಜನಪ್ರಿಯನಾದ ದೇವತೆ. 108. ಯೋಗದೀಪ: ಯೋಗದ ಅಧಿದೇವತೆ.

ಇದನ್ನೂ ಓದಿ: Ganesha Stories With Audio: ನೀವು ಓದಲೇಬೇಕಾದ ಗಣಪತಿಯ ಕುತೂಹಲಕರ ಕಥೆಗಳಿವು!

Exit mobile version