Site icon Vistara News

Ganesh Chaturthi | ಏರಿಯಾ ಗಣೇಶನಿಗೆ ಬೇಕು NOC; ಬಿಬಿಎಂಪಿ ರೂಲ್ಸ್‌

Ganesh idol

ಬೆಂಗಳೂರು: ಗಣೇಶ ಹಬ್ಬಕ್ಕೆ ಕೆಲವೇ ದಿನಗಳು ಬಾಕಿ ಇದ್ದು, ಗಣೇಶೋತ್ಸವದಲ್ಲಿ (Ganesh Chaturthi) ಗಣೇಶನ ಕೂರಿಸಲು ಬಿಬಿಎಂಪಿ ಅಧಿಕಾರಿಗಳಿಂದ ಎನ್‌ಒಸಿ (No Objection Certificate) ಪಡೆಯಬೇಕಿದೆ.

ಈ ಸಂಬಂಧ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿರುವ ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್, ಆಯಾ ವಲಯಗಳಲ್ಲಿನ ವಲಯವಾರು ಕಚೇರಿಯಲ್ಲಿ ಎನ್‌ಒಸಿ ಪಡೆಯಬಹುದಾಗಿದೆ ಎಂದಿದ್ದಾರೆ. ಗಣೇಶ ಚತುರ್ಥಿಗೆ ಇನ್ನು ಹತ್ತು ದಿನವಷ್ಟೇ ಬಾಕಿ ಇದ್ದು, ಈಗಾಗಲೇ ಪೊಲೀಸ್ ಇಲಾಖೆಯೊಂದಿಗೆ ಸಭೆ ನಡೆಸಿದ್ದೇವೆ ಎಂದಿರುವ ಆಯುಕ್ತರು, ಅಗ್ನಿಶಾಮಕ, ಬೆಸ್ಕಾಂನವರೊಂದಿಗೂ ಸಭೆ ನಡೆಸಲಾಗಿದೆ. ಎಲ್ಲ ಅಂಶಗಳನ್ನು ಪರಿಗಣಿಸಿ ಹೊಸ ಆದೇಶ ಹೊರಡಿಸಲಾಗುವುದು ಎಂದರು.

ಕೊರೊನಾ ಹಿನ್ನೆಲೆಯಲ್ಲಿ ಎರಡು ವರ್ಷ ಬೇರೆಯದ್ದೇ ನಿಯಮಗಳು ಜಾರಿಯಲ್ಲಿತ್ತು. ಆದರೆ, ಈ ಬಾರಿ ಎರಡು ವರ್ಷಗಳ ಹಿಂದೆ ಇದ್ದ ನಿಯಮಗಳಲ್ಲಿ ಸ್ವಲ್ಪ ಹೊಸ ನಿಯಮಗಳನ್ನು ಸೇರಿಸಿ ಮಾನದಂಡ ನಿಗದಿಪಡಿಸಲಾಗುವುದು ಎಂದಿದ್ದಾರೆ.

ಸಿಂಗಲ್‌ ವಿಂಡೋ ಮೂಲಕ ಅನುಮತಿ

ಗಣೇಶ ಮೂರ್ತಿಯನ್ನು ಕೂರಿಸುವವರಿಗೆ ಸಿಂಗಲ್ ವಿಂಡೋ (ಏಕಗವಾಕ್ಷಿ) ಮೂಲಕ ಎನ್‌ಒಸಿ ವ್ಯವಸ್ಥೆ ಮಾಡಲಾಗುತ್ತಿದೆ. ಎಲ್ಲ ವಲಯಗಳಲ್ಲಿಯೂ ಎನ್‌ಒಸಿ ಪಡೆಯಬಹುದಾಗಿದ್ದು, ರಸ್ತೆ ಬದಿಯಲ್ಲಿ ಕೂರಿಸುವ ಗಣೇಶಕ್ಕೆ ಹೆಚ್ಚೆಂದರೆ 15 ದಿನಗಳ ಕಾಲಾವಕಾಶ ನೀಡಲಾಗಿದೆ.

ಗಣೇಶ ವಿಸರ್ಜನೆಗೆ ನಾಲ್ಕು ಕಲ್ಯಾಣಿಗಳಲ್ಲಿ ವ್ಯವಸ್ಥೆ ಮಾಡಲಾಗುತ್ತಿದ್ದು, ಜತೆಗೆ ಮನೆಗಳಲ್ಲಿ ಕೂರಿಸುವ ಸಣ್ಣ-ಪುಟ್ಟ ಗಣೇಶ ಮೂರ್ತಿಗಳ ವಿಸರ್ಜನೆಗೆ ವಾರ್ಡ್ ಮಟ್ಟದಲ್ಲಿ ವಾಟರ್ ಟ್ಯಾಂಕರ್ ವ್ಯವಸ್ಥೆ ಮಾಡಲಾಗುತ್ತಿದೆ ಎಂದು ಆಯುಕ್ತ ತುಷಾರ್‌ ಗಿರಿನಾಥ್‌ ಹೇಳಿದ್ದಾರೆ.

ಇದನ್ನೂ ಓದಿ | ಚಾಮರಾಜಪೇಟೆ ಮೈದಾನದಲ್ಲಿ 11 ದಿನದ ಗಣೇಶೋತ್ಸವಕ್ಕೆ ದಿನ ಫಿಕ್ಸ್‌ ಮಾಡಿದ ಸಮಿತಿ, ಸಿಗುತ್ತಾ ಅನುಮತಿ?

Exit mobile version