ಮಂಡ್ಯ: ಜಿಲ್ಲೆಯ ಕೆ.ಆರ್.ಪೇಟೆ ತಾಲೂಕಿನ ಅಂಬಿಗರ ಹಳ್ಳಿ ಬಳಿಯ ತ್ರಿವೇಣಿ ಸಂಗಮದಲ್ಲಿ ಹಮ್ಮಿಕೊಂಡಿರುವ ದಕ್ಷಿಣ ಭಾರತದ ಮಹಾ ಕುಂಭಮೇಳದ (Kumbh Mela) ಎರಡನೇ ದಿನ ಶುಕ್ರವಾರ ವಿಶೇಷ ಗಂಗಾರತಿ ನೆರವೇರಿಸಲಾಯಿತು.
ಉತ್ತರ ಪ್ರದೇಶದ ವಾರಾಣಸಿ(ಕಾಶಿ) ಮಾದರಿಯಲ್ಲಿ ಶ್ರೀ ಡಾ.ನಿರ್ಮಲಾನಂದನಾಥ ಸ್ವಾಮೀಜಿ, ಸುತ್ತೂರು ಮಠದ ಶ್ರೀ ಶಿವರಾತ್ರಿ ದೇಶೀಕೇಂದ್ರ ಸ್ವಾಮೀಜಿ ಅವರ ನೇತೃತ್ವದಲ್ಲಿ ವಾರಾಣಸಿಯಿಂದ ಬಂದಿರುವ ಆಗಮಿಕರು, ಹೇಮಾವತಿ, ಲಕ್ಷ್ಮಣ ತೀರ್ಥ, ಕಾವೇರಿ ನದಿಯ ಸಂಗಮದಲ್ಲಿ ವಿಶೇಷ ಗಂಗಾರತಿ ಸಲ್ಲಿಸಿದರು. ಈ ಮೂಲಕ ಕುಂಭ ಮೇಳದ ಎರಡನೇ ದಿನದ ಪೂಜಾ ಕಾರ್ಯಗಳು ಸಮಾಪ್ತಗೊಂಡವು. ಇದಕ್ಕೂ ಮುನ್ನ ಬೆಳಗ್ಗೆ ದಕ್ಷಿಣ ಭಾರತದ ಮಹಾ ಕುಂಭಮೇಳವನ್ನು ಧರ್ಮಸ್ಥಳ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಅವರು ಉದ್ಘಾಟಿಸಿದ್ದರು.
ಇದನ್ನೂ ಓದಿ | Kumbhamela | ಜಲಕ್ಕೆ ಕೃತಜ್ಞತೆ ಸಲ್ಲಿಸೋಣ; ನೀರಿನ ಮಹತ್ವ ಬಗ್ಗೆ ಪಾಠ ಮಾಡಿದ ಡಾ. ವೀರೇಂದ್ರ ಹೆಗ್ಗಡೆ