Site icon Vistara News

ಬಂದೇ ಬರ್ತಾನೋ ರಾಮ; ಜರ್ಮನಿ ಗಾಯಕಿ ಹಾಡಿಗೆ ಜನ ಫಿದಾ, ನೀವೂ ಕೇಳಿ

German singer Cassandra Mae Spittmann

German singer Cassandra Mae Spittmann soulfully sings Ram Aayenge; People Lauds Her

ನವದೆಹಲಿ: ಭಾರತ ಸೇರಿ ವಿಶ್ವಾದ್ಯಂತ ಇರುವ ಹಿಂದುಗಳು, ಭಕ್ತರು ಈಗ ಭಗವಾನ್‌ ಶ್ರೀರಾಮನ ಜಪದಲ್ಲಿ ಮುಳುಗಿದ್ದಾರೆ. ಅಯೋಧ್ಯೆಯಲ್ಲಿ ನಿರ್ಮಿಸಿರುವ ರಾಮಮಂದಿರವನ್ನು (Ram Mandir) ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ಉದ್ಘಾಟಿಸಲಿದ್ದಾರೆ. ರಾಮಮಂದಿರ ಉದ್ಘಾಟನೆ ಹಿನ್ನೆಲೆಯಲ್ಲಿ ನರೇಂದ್ರ ಮೋದಿ ಅವರೇ ರಾಮನ ಭಜನೆ ಗೀತೆಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುತ್ತಿದ್ದಾರೆ. ಇದರ ಬೆನ್ನಲ್ಲೇ ಜರ್ಮನಿಯ ಖ್ಯಾತ ಗಾಯಕಿ ಕೆಸೆಂಡ್ರಾ ಮೇ ಸ್ಪಿಟ್‌ಮನ್ (Cassandra Mae Spittmann) ಅವರು ‘ರಾಮ್‌ ಆಯೇಂಗೆ’ ಎಂಬ ಭಜನೆಯನ್ನು ಹಾಡುವ ಮೂಲಕ ದೇಶದ ಜನರ ಮನಗೆದ್ದಿದ್ದಾರೆ. ಅವರು ಹಾಡಿರುವ ವಿಡಿಯೊ (Viral Video) ಈಗ ವೈರಲ್‌ ಆಗಿದೆ.

ಕೆಸೆಂಡ್ರಾ ಮೇ ಸ್ಪಿಟ್‌ಮನ್ ಅವರಿಗೆ ವ್ಯಕ್ತಿಯೊಬ್ಬರು ರಾಮ್‌ ಆಯೇಂಗೆ ಹಾಡು ಎಂದು ಮನವಿ ಮಾಡಿಕೊಳ್ಳುತ್ತಾರೆ. ಆಗ ಕೆಸೆಂಡ್ರಾ ಮೇ ಸ್ಪಿಟ್‌ಮನ್ ಅವರು ಕೂಡಲೇ, ”ರಾಮ್‌ ಆಯೇಂಗೆ” ಎಂದು ಮಧುರವಾಗಿ ಹಾಡಿದ್ದಾರೆ. ಒಬ್ಬ ವಿದೇಶಿ ಗಾಯಕಿ ಬಾಯಲ್ಲಿ ರಾಮನ ಭಜನೆ ಕೇಳಿದ ಭಾರತೀಯರು ಅವರನ್ನು ಹಾಡಿಹೊಗಳಿದ್ದಾರೆ. “ತುಂಬ ಮಧುರವಾಗಿ ಹಾಡಿದ್ದೀರಿ. ನೀವು ಹಿಂದಿಯಲ್ಲಿ ಹಾಡಿದ ಶೈಲಿಯೇ ಅದ್ಭುತವಾಗಿದೆ” ಎಂದು ಒಬ್ಬರು ಪ್ರತಿಕ್ರಿಯಿಸಿದ್ದಾರೆ. ಮತ್ತೊಬ್ಬರು, “ಎಂಥಾ ಅದ್ಭುತವಾದ ಗಾಯನ. ಇದು ಭಾರತ ಹಾಗೂ ಜರ್ಮನಿ ನಡುವಿನ ಅವಿನಾಭಾವ ಸಂಬಂಧದ ದ್ಯೋತಕ” ಎಂದು ಬಣ್ಣಿಸಿದ್ದಾರೆ. ಹೀಗೆ ನೂರಾರು ಜನ ಕೆಸೆಂಡ್ರಾ ಮೇ ಸ್ಪಿಟ್‌ಮನ್ ಅವರ ಹಾಡಿಗೆ ಮೆಚ್ಚುಗೆ ಸೂಚಿಸಿದ್ದಾರೆ.

ಕೆಸೆಂಡ್ರಾ ಮೇ ಸ್ಪಿಟ್‌ಮನ್ ಅವರಿಗೂ ಭಾರತದ ಭಜನೆ, ಧಾರ್ಮಿಕ ಗೀತೆಗಳಿಗೂ ಅವಿನಾಭಾವ ಸಂಬಂಧವಿದೆ. ಕೆಸೆಂಡ್ರಾ ಮೇ ಸ್ಪಿಟ್‌ಮನ್ ಅವರು ಆಗಾಗ ಭಾರತದ ಧಾರ್ಮಿಕ ಗೀತೆಗಳನ್ನು ಹಾಡುತ್ತಲೇ ಇರುತ್ತಾರೆ. ನರೇಂದ್ರ ಮೋದಿ ಅವರೂ ಗಾಂಧಿ ಜಯಂತಿ ದಿನ ಕೆಸೆಂಡ್ರಾ ಮೇ ಸ್ಪಿಟ್‌ಮನ್ ಅವರು ಹಾಡಿದ್ದ “ವೈಷ್ಣವ ಜನ ತೋ” ಹಾಡಿನ ವಿಡಿಯೊವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು. ಅದರಲ್ಲೂ, ಕೆಸೆಂಡ್ರಾ ಮೇ ಸ್ಪಿಟ್‌ಮನ್ ಅವರು ಹಿಂದಿಯಲ್ಲಿ ಹಾಡುವ ಹಾಡುಗಳು ಹೆಚ್ಚು ಜನಪ್ರಿಯವಾಗಿವೆ.

ಇದನ್ನೂ ಓದಿ: Ram Mandir: ರಾಮಮಂದಿರಕ್ಕೆ ವಿಜ್ಞಾನದ ಬಲ; ಸಾವಿರ ವರ್ಷವಾದರೂ ಏನೂ ಆಗಲ್ಲ, ಹೇಗೆ ಅಂತೀರಾ?

ಕೆಲ ದಿನಗಳ ಹಿಂದಷ್ಟೇ ಕನ್ನಡದ ಸುಪ್ರಸಿದ್ಧ ಹಾಡು ‘ಪೂಜಿಸಲೆಂದೇ ಹೂಗಳ ತಂದೆ’ ಹಾಡಿಗೆ ಪ್ರಧಾನಿ ನರೇಂದ್ರ ಮೋದಿ ಅವರು ತಲೆದೂಗಿದ್ದರು. ಅವರು ಶಿವಶ್ರೀ ಸ್ಕಂದ ಪ್ರಸಾದ್ ಎಂಬ ಗಾಯಕಿ ಹಾಡಿರುವ ಹಾಡಿನ ಯೂಟ್ಯೂಬ್ ಲಿಂಕ್ ಪೋಸ್ಟ್ ಮಾಡಿರುವ ಪ್ರಧಾನಿ ಸಾಂಸ್ಕೃತಿಕ ಪರಂಪರೆಯನ್ನು ಸಂರಕ್ಷಿಸುವ ಮಾತಾಡಿದ್ದರು. ಇವರ ಪೋಸ್ಟ್ ಏಕಾಏಕಿ ವೈರಲ್ ಆಗಿತ್ತು. ಈ ಮೂಲಕ ಕನ್ನಡ ಭಾಷಿಕರ ಹಾಗೂ ಸಂಗೀತ ಪ್ರೇಮಿಗಳ ಮನಗೆದ್ದಿದ್ದಾರೆ ಮೋದಿ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version