ಬೆಂಗಳೂರು: ಶಾಂತಿ ದೂತನಾಗಿ ಅವತರಿಸಿ ಭೂಮಿಗೆ ಬಂದ ಏಸುಕ್ರಿಸ್ತನ ಜನ್ಮದಿನದ ಸಡಗರದ ಕ್ಷಣಗಳನ್ನು ಜಗತ್ತಿನಾದ್ಯಂತ ಕ್ರೈಸ್ತ ಬಂಧುಗಳು ಸಂಭ್ರಮಿಸುತ್ತಿದ್ದಾರೆ. ಕ್ರಿಸ್‌ಮಸ್‌ನ (Happy Christmas) ಈ ವಿಶೇಷ ಸಂದರ್ಭದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ (BY Vijayendra) ಅವರು ಬೆಂಗಳೂರಿನ ಕ್ರೈಸ್ತ ಮಹಾ ಧರ್ಮಾಧ್ಯಕ್ಷರನ್ನು (Bangalore Bishop) ಭೇಟಿ ಮಾಡಿ ಶುಭಾಶಯ ಕೋರಿದರು.
ಸರ್ವಧರ್ಮ ಗೌರವಿಸಿ, ಭ್ರಾತೃತ್ವ ಬೆಸೆಯುವ ಪ್ರಧಾನಿ ನರೇಂದ್ರ ಮೋದಿ (PM Narendra Modi) ಅವರು ಕ್ರಿಸ್‌ಮಸ್ ಭಾಗವಹಿಸುವ ಮೂಲಕ ನೈಜ ಭಾರತೀಯತೆಯ ಸಂದೇಶವನ್ನು ವಿಶ್ವಕ್ಕೆ ಪಸರಿಸಿದ್ದಾರೆ. ಈ ನಿಟ್ಟಿನಲ್ಲಿ ನಾವೂ ಸಹ ಬೆಂಗಳೂರಿನ ಕ್ರೈಸ್ತ ಮಹಾಧರ್ಮಾಧ್ಯಕ್ಷರಾದ ಅತಿ ವಂ. ಪೀಟರ್ ಮಚಾದೊ ಅವರನ್ನು ಭೇಟಿಯಾಗಿ ಶುಭಾಶಯ ಕೋರಿದೆವು. ಮಾನವ ಕುಲಕ್ಕೆ ಸಕಲ ಒಳಿತುಗಳನ್ನು ಬಯಸುವ ಕ್ರೈಸ್ತನ ಸಂದೇಶಗಳನ್ನು ಸ್ಮರಿಸಿದೆವು ಎಂದು ವಿಜಯೇಂದ್ರ ಜಾಲತಾಣ ಎಕ್ಸ್‌ನಲ್ಲಿ ಬರೆದುಕೊಂಡಿದ್ದಾರೆ. ಈ ಸಂದರ್ಭದಲ್ಲಿ ಪಕ್ಷದ ನೂತನ ರಾಜ್ಯ ಪ್ರಧಾನ ಕಾರ್ಯದರ್ಶಿಗಳಾದ ನಂದೀಶ್ ರೆಡ್ಡಿ, ಸಂಸದರಾದ ಪಿ.ಸಿ.ಮೋಹನ್ ಹಾಗೂ ಐ.ಎ.ಕಾಂತರಾಜ್ ಅವರು ಉಪಸ್ಥಿತರಿದ್ದರು.
ಶಾಂತಿ ಧೂತನಾಗಿ ಅವತರಿಸಿ ಭೂಮಿಗೆ ಬಂದ ಏಸುಕ್ರಿಸ್ತನ ಜನ್ಮದಿನದ ಸಡಗರದ ಕ್ಷಣಗಳನ್ನು ಇಂದು ದೇಶಾದ್ಯಂತ ಕ್ರೈಸ್ತ ಬಂಧುಗಳು ಸಂಭ್ರಮಿಸುತ್ತಿದ್ದಾರೆ. ಸರ್ವಧರ್ಮ ಗೌರವಿಸಿ, ಭ್ರಾತೃತ್ವ ಬೆಸೆಯುವ ಪ್ರಧಾನಿ ಶ್ರೀ @narendramodi ಜೀ ಅವರೂ ಸಹ ಈ ಸಡಗರದಲ್ಲಿ ಭಾಗವಹಿಸುವ ಮೂಲಕ ನೈಜ ಭಾರತೀಯತೆಯ ಸಂದೇಶವನ್ನು ವಿಶ್ವಕ್ಕೆ ಪಸರಿಸಿದ್ದಾರೆ. ಈ… pic.twitter.com/vy2We4SrNl
— Vijayendra Yediyurappa (@BYVijayendra) December 25, 2023
ಇದನ್ನೂ ಓದಿ : Happy Christmas 2023 : ಪ್ರೀತಿ, ವಾತ್ಸಲ್ಯ, ಕರುಣೆಯ ಜಗತ್ತು ಕಟ್ಟಿದ ಮಹಿಮಾನ್ವಿತ ಯೇಸು ಕ್ರಿಸ್ತರು
ಕ್ರಿಸ್‌ಮಸ್ ಹಬ್ಬದ ಶುಭಾಶಯ ಸಲ್ಲಿಸಿದ ಎಚ್.ಡಿ ಕುಮಾರ ಸ್ವಾಮಿ
ನಾಡಿನ ಸಮಸ್ತ ಜನತೆಗೆ ಪವಿತ್ರ ಕ್ರಿಸ್ಮಸ್ ಹಬ್ಬದ ಹಾರ್ದಿಕ ಶುಭಾಶಯಗಳು. ಈ ಹಬ್ಬವು ಭಕ್ತಿ, ಸೌಹಾರ್ದತೆಯ ಸಂಗಮವಾಗಿದ್ದು, ಯೇಸು ಕ್ರಿಸ್ತರ ಜನ್ಮದಿನವಾದ ಈ ದಿನ ಪ್ರತಿಯೊಬ್ಬರಿಗೂ ಶಾಂತಿ, ಸಹಬಾಳ್ವೆ ಹಾಗೂ ಸಹಿಷ್ಣುತೆಯಿಂದ ಜೀವಿಸಲು ಪ್ರೇರಣೆಯಾಗಲಿ ಎಂದು ಹಾರೈಸುತ್ತೇನೆ ಎಂದು ಮಾಜಿ ಸಿಎಂ, ಜೆಡಿಎಸ್ ನಾಯಕ ಎಚ್.ಡಿ ಕುಮಾರಸ್ವಾಮಿ ಹೇಳಿದ್ದಾರೆ.
ನಾಡಿನ ಸಮಸ್ತ ಜನತೆಗೆ ಪವಿತ್ರ ಕ್ರಿಸ್ಮಸ್ ಹಬ್ಬದ ಹಾರ್ದಿಕ ಶುಭಾಶಯಗಳು. ಈ ಹಬ್ಬವು ಭಕ್ತಿ, ಸೌಹಾರ್ದತೆಯ ಸಂಗಮವಾಗಿದ್ದು, ಯೇಸು ಕ್ರಿಸ್ತರ ಜನ್ಮದಿನವಾದ ಈ ದಿನ ಪ್ರತಿಯೊಬ್ಬರಿಗೂ ಶಾಂತಿ, ಸಹಬಾಳ್ವೆ ಹಾಗೂ ಸಹಿಷ್ಣುತೆಯಿಂದ ಜೀವಿಸಲು ಪ್ರೇರಣೆಯಾಗಲಿ ಎಂದು ಹಾರೈಸುತ್ತೇನೆ.#Christmas pic.twitter.com/5ZDQ14eGDP
— ಹೆಚ್.ಡಿ.ಕುಮಾರಸ್ವಾಮಿ | H.D.Kumaraswamy (@hd_kumaraswamy) December 25, 2023