ವಿಸ್ತಾರ ನ್ಯೂಸ್ ಬೆಂಗಳೂರು: ರಾಮ ಮಂದಿರ ಉದ್ಘಾಟನೆಗೆ ಕೆಲವೇ ದಿನಗಳು ಬಾಕಿ ಉಳಿದಿದ್ದು, ಅಯೋಧ್ಯೆ ನಗರವು ಲಕ್ಷಾಂತರ ಸಂಖ್ಯೆಯ ಭಕ್ತರನ್ನು ಸ್ವಾಗತಿಸಲು ಸಜ್ಜಾಗಿದೆ. ಒಂದೇ ಬಾರಿಗೆ ಜಮಾವಣೆಯಾಗಲಿರುವ ಜನರನ್ನು ನಿಯಂತ್ರಣ ಮಾಡುವ ಉದ್ದೇಶದಿಂದ ಉತ್ತರ ಪ್ರದೇಶ ಹಾಗೂ ಕೇಂದ್ರ ಸರ್ಕಾರ ರೈಲ್ವೆ ನಿಲ್ದಾಣ, ವಿಮಾನ ನಿಲ್ದಾಣ ಮತ್ತು ರಸ್ತೆಗಳನ್ನು ನವೀಕರಣ ಮಾಡಿದೆ. ಅಂತೆಯೇ ಜನವರಿ 22 ರಂದು ರಾಮ ಮಂದಿರದ ಉದ್ಘಾಟನಾ ಸಮಾರಂಭ ನಡೆಯಲಿದ್ದು, ಸೆಲೆಬ್ರಿಟಿಗಳು, ಕೈಗಾರಿಕೋದ್ಯಮಿಗಳು ಮತ್ತು ಹಿರಿಯ ರಾಜಕಾರಣಿಗಳು ಈ ಐತಿಹಾಸಿಕ ಕಾರ್ಯಕ್ರಮಕ್ಕೆ ಸಾಕ್ಷಿಯಾಗಲಿದ್ದಾರೆ. ಇದರ ಹಿನ್ನೆಲೆಯಲ್ಲಿ ಹೋಟೆಲ್ ರೂಮ್ಗಳ (Ayodhya Hotels) ಬಾಡಿಗೆ ಹೆಚ್ಚಾಗಿದ್ದು, ಸರಾಸರಿ ಹೋಟೆಲ್ಗಳ ಬಾಡಿಗೆ 1 ಲಕ್ಷ ರೂಪಾಯಿ ದಾಟಿದೆ.
ಅಯೋಧ್ಯೆ ಅಭಿವೃದ್ಧಿ ಪ್ರಾಧಿಕಾರವು ಉದ್ಘಾಟನೆಯ ನಂತರದ ಆರಂಭಿಕ ತಿಂಗಳುಗಳಲ್ಲಿ ಪ್ರತಿದಿನ ಮೂರು ಲಕ್ಷ ಪ್ರವಾಸಿಗರನ್ನು ನಿರೀಕ್ಷಿಸುತ್ತಿದೆ. ಭಾರತದ ಉನ್ನತ ಹೋಟೆಲ್ ಚೈನ್ಗಳು ರಾಮ ಮಂದಿರವಿರುವ ಅಯೋಧ್ಯೆ ಪಟ್ಟಣದಲ್ಲಿ ದೊಡ್ಡ ವ್ಯಾಪಾರದ ಅವಕಾಶದ ಮೇಲೆ ಕಣ್ಣಿಟ್ಟಿವೆ. ಅದರ ಜತೆ ಸದ್ಯಕ್ಕೆ ಲಭ್ಯ ಇರುವ ಹೋಟೆಲ್ಗಳಿಗೆ ಡಿಮ್ಯಾಂಡ್ ಹೆಚ್ಚಾಗಿದೆ. ಮಾಧ್ಯಮ ವರದಿಗಳ ಪ್ರಕಾರ, ನಗರದ ಕೆಲವು ಹೋಟೆಲ್ ಕೊಠಡಿಗಳ ಸರಾಸರಿ ಬಾಡಿಗೆ ಈಗ 85,000 ರೂ.ಗಳನ್ನು ದಾಟಿದೆ.
ಅಯೋಧ್ಯೆ ರಾಮ ಮಂದಿರದ 170 ಕಿಲೋಮೀಟರ್ ವ್ಯಾಪ್ತಿಯಲ್ಲಿ ಬರುವ ಲಕ್ನೋ, ಪ್ರಯಾಗ್ರಾಜ್ ಮತ್ತು ಗೋರಖ್ಪುರದಲ್ಲಿ ಹೋಟೆಲ್ಗಳ ಬೇಡಿಕೆಯೂ ಹೆಚ್ಚಾಗಿದೆ. ಸಿಗ್ನೆಟ್ ಹೋಟೆಲ್ಸ್ ಮತ್ತು ರೆಸಾರ್ಟ್ಸ್ನ ಎಂಡಿ ಮತ್ತು ಸಂಸ್ಥಾಪಕರು ಜನವರಿಯಲ್ಲಿ ತಮ್ಮ ಎಲ್ಲಾ ಕೊಠಡಿಗಳನ್ನು ಕಾಯ್ದಿರಿಸಲಾಗಿದೆ ಎಂದು ಹೇಳಿದರು. ಅವರ ಹೋಟೆಲ್ಗಳಲ್ಲಿನ ಕೊಠಡಿಗಳ ಸರಾಸರಿ ಬಾಡಿಗೆ 85,000 ರೂ.ಗಳನ್ನು ದಾಟಿದೆ. ಸಿಗ್ನೆಟ್ ಕಲೆಕ್ಷನ್ ಕೆಕೆ ಅಯೋಧ್ಯೆಯ ತನ್ನ ಎಲ್ಲಾ ಹೋಟೆಲ್ಸ್ 45% ಕೊಠಡಿಗಳನ್ನು ದೇಗುಲದ ಟ್ರಸ್ಟ್ಗಾಗಿ ಕಾಯ್ದಿರಿಸಿದೆ. ವಿಐಪಿಗಳಿಗೆ ಅಲ್ಲಿ ಸ್ಥಳಾವಕಾಶ ಮುಂದಾಗಿದೆ.
ಇದನ್ನೂ ಓದಿ : Ram Mandir : ಪ್ರವಾಸೋದ್ಯಮ ಹೂಡಿಕೆಗಳ ಷೇರು ಮೌಲ್ಯ ಹೆಚ್ಚಿಸಿದ ರಾಮ ಮಂದಿರ
ಸಿಗ್ನೆಟ್ ಕಲೆಕ್ಷನ್ ಕೆಕೆ ಹೋಟೆಲ್ ನ ಎಲ್ಲಾ ಕೊಠಡಿಗಳನ್ನು ಜನವರಿಗೆ ಮುಂಚಿತವಾಗಿ ಕಾಯ್ದಿರಿಸಲಾಗಿದೆ. ಅವರ ಪ್ರತಿಯೊಂದು ಕೊಠಡಿಯನ್ನು ಸುಮಾರು 85,000 ರೂ.ಗಳ ಬೆಲೆಗೆ ನೀಡಲಾಗಿದೆ. ಕೆಲವರು ಈ ಮಿತಿಯನ್ನು ಸಹ ದಾಟಿದ್ದಾರೆ.
ಎಲ್ಲ ಹೋಟೆಲ್ಗಳು ಖಾಲಿ
ಅಯೋಧ್ಯೆಯ ಬೃಹತ್ ಪ್ರವಾಸೋದ್ಯಮ ಅವಕಾಶವನ್ನು ಬಳಸಿಕೊಳ್ಳಲು ರಾಡಿಸನ್ ಕಳೆದ ವಾರ ಪಾರ್ಕ್ ಇನ್ ಅನ್ನು ತೆರೆದಿದೆ. ರಾಡಿಸನ್ ಪಾರ್ಕ್ ಇನ್ ಹೋಟೆಲ್ ಪ್ರಾರಂಭವಾದ ಕೂಡಲೇ ಬುಕಿಂಗ್ ಗಳ ಆರಂಭಗೊಂಡಿತ್ತು. ಜನವರಿ 21 ರಿಂದ 22 ರವರೆಗೆ ಎಲ್ಲಾ ಹೋಟೆಲ್ ಕೊಠಡಿಗಳನ್ನು ಕಾಯ್ದಿರಿಸಲಾಗಿದೆ. ಹೋಟೆಲ್ ತನ್ನ ಕೋಣೆಯ ಬೆಲೆಗಳನ್ನು ಇನ್ನೂ ಯಾವುದೇ ಸಾರ್ವಜನಿಕ ವೇದಿಕೆಯಲ್ಲಿ ಹಂಚಿಕೊಂಡಿಲ್ಲ. ರಾಮ ಮಂದಿರದ ಉದ್ಘಾಟನೆಯೊಂದಿಗೆ ಹೆಚ್ಚುತ್ತಿರುವ ಪ್ರವಾಸೋದ್ಯಮವನ್ನು ಗಮನದಲ್ಲಿಟ್ಟುಕೊಂಡು ಅಯೋಧ್ಯೆ ಅಭಿವೃದ್ಧಿ ಪ್ರಾಧಿಕಾರ (ಎಡಿಎ) ಕಳೆದ ಕೆಲವು ತಿಂಗಳುಗಳಿಂದ ಹೋಂಸ್ಟೇ ಮಾದರಿಗೆ ಒತ್ತು ನೀಡುತ್ತಿದೆ ಸಿಎನ್ಬಿಸಿ ವರದಿ ಮಾಡಿದೆ.