ತುಮಕೂರು: ಹಿಂದೂ-ಮುಸ್ಲಿಂ ಭಾವೈಕ್ಯತೆಯ ಹಬ್ಬವಾಗಿ ಆಚರಿಸಲ್ಪಡುವ ಮೊಹರಂ ಹಬ್ಬದಲ್ಲಿ ಶಾಸಕರೊಬ್ಬರು ಕುಣಿದು ಕುಪ್ಪಳಿಸಿದ ವಿಡಿಯೊ ಈಗ ಸಖತ್ ವೈರಲ್ ಆಗುತ್ತಿದೆ.
ತುಮಕೂರು ಗ್ರಾಮಾಂತರ ಶಾಸಕ ಡಿ.ಸಿ.ಗೌರಿಶಂಕರ್ ಅವರು ಹೆಬ್ಬೂರಿನಲ್ಲಿ ನಡೆದ ಮೊಹರಂ ಆಚರಣೆ ವೇಳೆ ಕುಣಿದು ಕುಪ್ಪಳಿಸಿ ಸಖತ್ ಸ್ಟೆಪ್ ಹಾಕಿದ್ದಾರೆ. ಈ ವೇಳೆ ಅವರು ಸಾಂಪ್ರದಾಯಿಕ ತಲ್ವಾರ್ ಹಿಡಿದು ಕುಣಿದದ್ದು ಗಮನ ಸೆಳೆದಿದೆ.
ರಾಜ್ಯದ ಹಲವು ಭಾಗಗಳಲ್ಲಿ ಮೊಹರಂನ್ನು ಒಂದು ಸಾರ್ವಜನಿಕ ಹಬ್ಬವಾಗಿ ಆಚರಿಸಲಾಗುತ್ತಿದೆ. ಹಿಂದೂಗಳು ಮತ್ತು ಮುಸ್ಲಿಮರು ಸೇರಿ ಹಬ್ಬ ಮಾಡುವುದು ಇದರ ವಿಶೇಷ. ಕೆಲವು ಊರುಗಳಲ್ಲಿ ಮುಸ್ಲಿಮರೇ ಇಲ್ಲದಿದ್ದರೂ ಹಿಂದುಗಳು ತಾವಾಗಿಯೇ ಆಚರಣೆ ಮಾಡುವುದನ್ನು ರೂಢಿಸಿಕೊಂಡಿದ್ದಾರೆ. ಹೆಬ್ಬೂರಿನಲ್ಲಿ ಹಿಂದೂ-ಮುಸ್ಲಿಮರು ಸೇರಿ ಹಬ್ಬಾಚರಣೆಗೆ ವ್ಯವಸ್ಥೆ ಮಾಡಿದ್ದರು.
ಅಲ್ಲಿಗೆ ಬಂದ ಜೆಡಿಎಸ್ ಶಾಸಕ ಗೌರಿಶಂಕರ್ ಅವರು ಮುಸ್ಲಿಂ ಬಾಂಧವರ ಭೇಟಿ ಬಳಿಕ ಕುಣಿತಕ್ಕೆ ಮುಂದಾದರು. ಅವರು ಹೆಜ್ಜೆ ಹಾಕುತ್ತಿದ್ದಂತೆಯೇ ಸಾಂಪ್ರದಾಯಿಕ ತಲ್ವಾರನ್ನು ಅವರ ಕೈಗೆ ನೀಡಲಾಯಿತು. ಮುಸ್ಲಿಂ ಹಾಗೂ ಹಿಂದುಗಳು ಶಾಸಕರ ಸ್ಟೆಪ್ ಗೆ ಕೇಕೆ ಹಾಕಿ ಪ್ರೋತ್ಸಾಹಿಸಿದರು. ಜನರೂ ಅವರೊಂದಿಗೆ ಕುಣಿದರು.
ಇದನ್ನೂ ಓದಿ| ಮೊಹರಂನಲ್ಲಿ ಮೆರೆದ ಅಪ್ಪು ಪ್ರೀತಿ: ಮೆರವಣಿಗೆಯಲ್ಲಿ ಪುನೀತ್ ಫೋಟೊ ಹಿಡಿದು ಕುಣಿದ ಅಭಿಮಾನಿಗಳು