ವಾರಾಣಸಿ, ಉತ್ತರ ಪ್ರದೇಶ: ದೀಪಾವಳಿ (Diwali 2023) ಹಿಂದೂಗಳ ಆಚರಿಸುವ ಅತ್ಯಂತ ಪ್ರಮುಖ ಹಬ್ಬ (Hindu Festival). ಆದರೆ, ಭಾರತದಲ್ಲೂ ಈ ಹಬ್ಬದ ಆಚರಣೆಯಲ್ಲಿ ಮುಸ್ಲಿಮ್‌ರು ಪಾಲ್ಗೊಳ್ಳುತ್ತಾರೆ. ಇದಕ್ಕೆ ಉತ್ತರ ಪ್ರದೇಶದ ವಾರಾಣಸಿಯಲ್ಲಿ (Varanasi Uttar Pradesh) ತಾಜಾ ಉದಾಹರಣೆ ದೊರೆತಿದೆ. ಕೆಲವು ಮುಸ್ಲಿಮ್ ಮಹಿಳೆಯರ ಗುಂಪು (Muslim Woman), ಭಗವಾನ್ ರಾಮನ ಭಜನೆ ಹಾಡಿ ಮತ್ತು ಆರತಿಯನ್ನು (Ram Aarti) ಮಾಡಿದ ಘಟನೆ ವಾರಾಣಸಿಯ ವಿಶಾಲ ಭಾರತ ಸಂಸ್ಥಾನದಲ್ಲಿ ಭಾನುವಾರ ನಡೆದಿದೆ.
ಮುಸ್ಲಿಮ್ ಮಹಿಳೆಯರು “ಅಯೋಧ್ಯಾ ಹೈ ಹುಮಾರೇ ಜಿಯರತ್ಗಾ ಕಾ ನಾಮ್, ರಹತೇ ಹೈ ವಹಾನ್ ಇಮಾಮ್-ಎ-ಹಿಂದ್ ಶ್ರೀ ರಾಮ್” ಎಂಬ ಭಜನೆಯನ್ನು ಭಕ್ತಿಪೂರ್ವಕವಾಗಿ ಹಾಡಿದರು. ಮುಸ್ಲಿಂ ಮಹಿಳಾ ಫೌಂಡೇಶನ್‌ನ ಅಧ್ಯಕ್ಷೆ ನಜ್ನೀನ್ ಅನ್ಸಾರಿ ಅವರು, ಇಂತಹ ಕಾರ್ಯಕ್ರಮಗಳ ಮೂಲಕ ಹಿಂದೂಗಳು ಮತ್ತು ಮುಸ್ಲಿಮರ ಸಾಂಸ್ಕೃತಿಕ ಮತ್ತು ಸಾಮಾಜಿಕ ಸಂಯೋಜನೆ ಹೆಚ್ಚುತ್ತದೆ ಎಂಬುತ್ತಾರೆ.
ಶ್ರೀರಾಮನು ನಮ್ಮ ಪೂರ್ವಜ. ನಾವು ನಮ್ಮ ಹೆಸರು ಮತ್ತು ಧರ್ಮವನ್ನು ಬದಲಾಯಿಸಬಹುದು. ಆದರೆ ನಾವು ನಮ್ಮ ಪೂರ್ವಜರನ್ನು ಹೇಗೆ ಬದಲಾಯಿಸಬಹುದು ಎಂದು ನಜ್ನೀನ್ ಅನ್ಸಾರಿ ಅವರು ಪ್ರಶ್ನಿಸುತ್ತಾರೆ. ರಾಮನನ್ನು ಸ್ತುತಿಸಿ ಹಾಡುವುದು ಹಿಂದೂಗಳು ಮತ್ತು ಮುಸ್ಲಿಮರ ನಡುವಿನ ಅಂತರವನ್ನು ಕಡಿಮೆ ಮಾಡುತ್ತದೆ. ಆದರೆ ಉದಾರತೆಯನ್ನು ಪ್ರತಿಬಿಂಬಿಸುತ್ತದೆ ಎಂದು ಅವರು ತಿಳಿಸುತ್ತಾರೆ.
ರಾಮನ ನಾಮದ ಬೆಳಕಿನಿಂದ ಅಧರ್ಮದ ಕತ್ತಲೆ ಮಾಯವಾಗುತ್ತದೆ. ರಾಮನ ಹೆಸರನ್ನು ಎಲ್ಲೆಡೆ ಪಸರಿಸುವ ಅಗತ್ಯವಿದೆ. ರಾಮನಿಂದ ದೂರವಿರುವವರು ಬಲವಂತವಾಗಿ ಹಿಂಸಾಚಾರಕ್ಕೆ ಮುಂದಾಗುತ್ತಾರೆ. ಪ್ಯಾಲೆಸ್ತೀನ್ ಮತ್ತು ಇಸ್ರೇಲ್ ತಮ್ಮ ನಡುವೆ ರಕ್ತ ಚೆಲ್ಲುತ್ತಿದೆ. ಇಬ್ಬರೂ ಭಗವಾನ್ ರಾಮನ ಮಾರ್ಗವನ್ನು ಅನುಸರಿಸಬೇಕು, ಆಗ ಮಾತ್ರ ಶಾಂತಿ ನೆಲೆಸಲು ಸಾಧ್ಯ ಎಂಬುದು ಇವರ ಅಚಲ ನಂಬಿಕೆಯಾಗಿದೆ.
ಈ ಕಾರ್ಯಕ್ರಮದಲ್ಲಿ ಅರ್ಚನಾ ಭಾರತವಂಶಿ, ರಜಿಯಾ ಸುಲ್ತಾನಾ, ಶಬಾನಾ ಬೇಗಂ, ಶಮಾ ಅಫ್ರೋಜ್, ರೇಷ್ಮಾ ಖುರೇಷಿ, ರಜಿಯಾ, ಜಲಿಯಾ ಬೇಗಂ, ನಗೀನಾ ಬೇಗಂ, ರಬೀನಾ, ಶಂಶುನ್ನಿಶಾ, ಸೋನಂ, ಮೃದುಲಾ ಜೈಸ್ವಾಲ್, ಅಭಾ ಭಾರತವಂಶಿ ಸೇರಿದಂತೆ ಮತ್ತಿತರು ಪಾಲ್ಗೊಂಡಿದ್ದರು.
ಆರತಿ ತಟ್ಟೆಯಯೊಂದಿಗೆ ಮಹಿಳೆಯರು ಶ್ರೀರಾಮನ ಆರತಿಯನ್ನು ಮಾಡಿದರು ಮತ್ತು ಕೋಮು ಸೌಹಾರ್ದತೆಯ ಸಂದೇಶವನ್ನು ನೀಡಲು ಹನುಮಾನ್ ಚಾಲೀಸಾ ಮತ್ತು ಪ್ರಾರ್ಥನೆಯನ್ನು ಪಠಿಸಿದರು. 2006ರಲ್ಲಿ ಸಂಕಟ್ ಮೋಚನ್ ದೇವಾಲಯವು ಭಯೋತ್ಪಾದಕ ಸ್ಫೋಟದಿಂದ ತತ್ತರಿಸಿದಾಗಿನಿಂದ ಶ್ರೀರಾಮ ಆರತಿಯ ಸಂಪ್ರದಾಯವನ್ನು ಮುಂದುವರೆಸಿಕೊಂಡು ಬರಲಾಗುತ್ತಿದೆ.
ಅಯೋಧ್ಯೆಯ ದೀಪೋತ್ಸವ ಅದ್ಭುತ, ದೈವಿಕ! ಪ್ರಧಾನಿ ಮೋದಿ ಬಣ್ಣನೆ
ಉತ್ತರ ಪ್ರದೇಶದ (Uttar Pradesh) ಅಯೋಧ್ಯೆಯಲ್ಲಿ (Ayodhya) ನಡೆದ ದೀಪೋತ್ಸವನ್ನು (Deepostsava) ಕಂಡು ಪ್ರಧಾನಿ ನರೇಂದ್ರ ಮೋದಿ (PM Narendra Modi) ಅವರು ಬೆರಗಾಗಿದ್ದಾರೆ. ಅಯೋಧ್ಯೆಯಲ್ಲಿ ನಡೆದ ದೀಪೋತ್ಸವನ್ನು ಪ್ರಧಾನಿ ಮೋದಿ ಅವರು “ಅದ್ಭುತ(Amazing), ದೈವಿಕ ಮತ್ತು ಮರೆಯಲಾಗದ ವಿಸ್ಮಯ(Unforgettable)” ಎಂದು ಕರೆದಿದ್ದಾರೆ. ಅಲ್ಲದೇ ದೀಪೋತ್ಸವದ ಕೆಲವು ಚಿತ್ರಗಳನ್ನು ಎಕ್ಸ್ ವೇದಿಕೆಯಲ್ಲಿ ಹಂಚಿಕೊಂಡಿದ್ದಾರೆ.
ತಮ್ಮ ಅಧಿಕೃತ ಎಕ್ಸ್ ವೇದಿಕೆ ಖಾತೆಯಲ್ಲಿ ಪೋಸ್ಟ್ ಮಾಡಿರುವ ಪ್ರಧಾನಿ ನರೇಂದ್ರ ಮೋದಿ ಅವರು, ಅಯೋಧ್ಯೆಯಲ್ಲಿ ಬೆಳಗಿದ ಲಕ್ಷಾಂತರ “ದಿಯಾಗಳ” (ಮಣ್ಣಿನ ದೀಪಗಳು) ಮೂಲಕ ಇಡೀ ದೇಶವು “ಪ್ರಕಾಶಮಾನವಾಗಿದೆ” ಎಂದು ಹೇಳಿದ್ದಾರೆ.
ದಿಯಾಗಳಿಂದ ಹೊರಹೊಮ್ಮುವ ಶಕ್ತಿಯು ಭಾರತದಾದ್ಯಂತ ಹೊಸ ಉತ್ಸಾಹ ಮತ್ತು ಉತ್ಸಾಹವನ್ನು ಹರಡುತ್ತಿದೆ. ಭಗವಾನ್ ಶ್ರೀರಾಮನು ಎಲ್ಲಾ ದೇಶವಾಸಿಗಳಿಗೆ ಒಳ್ಳೆಯದನ್ನು ಮಾಡಲಿ ಮತ್ತು ನನ್ನ ಎಲ್ಲಾ ಕುಟುಂಬ ಸದಸ್ಯರಿಗೆ ಸ್ಫೂರ್ತಿಯಾಗಲಿ ಎಂದು ನಾನು ಬಯಸುತ್ತೇನೆ. ಜೈ ಸಿಯಾ ರಾಮ್ ಎಂದು ಪ್ರಧಾನಿ ಮೋದಿ ಹಿಂದಿಯಲ್ಲಿ ಟ್ವೀಟ್ ಮಾಡಿದ್ದಾರೆ.
ಈ ಸುದ್ದಿಯನ್ನೂ ಓದಿ: Deepavali 2023: ಈ ದೀಪಾವಳಿಗೆ ಪರ್ಫೆಕ್ಟ್ ಲಡ್ಡುಗಳನ್ನು ಮಾಡಬೇಕೇ? ಹಾಗಿದ್ದರೆ, ಈ ತಪ್ಪುಗಳನ್ನು ಮಾಡಬೇಡಿ!