ಬೆಂಗಳೂರು: ನವರಾತ್ರಿ(Navaratri) ಸಂಭ್ರಮಕ್ಕೆ ಇನ್ನಷ್ಟು ಕಳೆ ತಂದಿದ್ದು ವಿಸ್ತಾರ ನ್ಯೂಸ್ ಆಯೋಜಿಸಿದ್ದ ʼನವವರ್ಣʼ ಅಭಿಯಾನ. ನವರಾತ್ರಿಯ ಒಂಬತ್ತು ದಿನ ನಾವು ಸೂಚಿಸುವ ಬಣ್ಣದ ಉಡುಪು ತೊಟ್ಟು ಗ್ರೂಪ್ ಫೋಟೊ, ವಿಡಿಯೊ ಕಳುಹಿಸುವಂತೆ ಕೋರಲಾಗಿತ್ತು. ಅದಕ್ಕೆ ಮಹಿಳೆಯರಿಂದ ಭರ್ಜರಿ ಸ್ಪಂದನೆ ವ್ಯಕ್ತವಾಗಿದೆ. ಮೂರನೇ ದಿನ ಕೆಂಪು ಬಣ್ಣದ ಉಡುಪು ಧರಿಸಿದ ಮಹಿಳೆಯರು ತಮ್ಮ ಕುಟುಂಬ, ಸ್ನೇಹಿತೆಯರ ಜತೆ ಸೇರಿ ಸಂಭ್ರಮಿಸಿದ್ದು, ಅದರ ಝಲಕ್ ಇಲ್ಲಿದೆ.
ನವರಾತ್ರಿ ಆಚರಣೆಯಲ್ಲಿ ಕೆಂಪು ಬಣ್ಣಕ್ಕೆ ಮಹತ್ವವಿದೆ. ಕೆಂಪು ಧೈರ್ಯ ಮತ್ತು ಶಕ್ತಿಯ ಸಂಕೇತ. ನವರಾತ್ರಿಯ ಮೂರನೇ ದಿನ ಮಾತಾ ಚಂದ್ರಘಂಟಾ ದೇವಿಯನ್ನು ಪೂಜಿಸಲಾಗುತ್ತದೆ. ಈ ಅವತಾರದಲ್ಲಿ ದೇವಿ ಕೆಂಪು ಬಣ್ಣದ ಉಡುಗೆ ಧರಿಸಿರುತ್ತಾಳೆ ಎನ್ನುವುದು ಭಕ್ತರ ನಂಬಿಕೆ.
ನೀವೂ ಭಾಗಗಿಗಳಾಗಿ
ಈ ಡಿಜಿಟಲ್ ಸಂಭ್ರಮದಲ್ಲಿ ನೀವೂ ಕೂಡ ಭಾಗವಹಿಸಬಹುದು. ನಿಮ್ಮ ಕುಟುಂಬದ ಮಹಿಳಾ ಸದಸ್ಯರು, ಬಂಧುಗಳು, ಸ್ನೇಹಿತರು, ಅಕ್ಕ-ಪಕ್ಕದ ಮನೆಯವರು, ಕಾಲೇಜು ಸಹಪಾಠಿಗಳು, ಸಹೋದ್ಯೋಗಿಗಳು, ಸಂಘ ಸಂಸ್ಥೆಯ ಸದಸ್ಯರು ಹೀಗೆ ನಿಮ್ಮ ಆಪ್ತರೊಂದಿಗೆ ನೀವು ಆ ದಿನದ ಬಣ್ಣದ ಉಡುಗೆ ತೊಟ್ಟು (ನೆನಪಿರಲಿ ಎಲ್ಲರೂ ನಿಗದಿತ ಒಂದೇ ವರ್ಣದ ದಿರಸು ಧರಿಸಿರಬೇಕು) ವಿಶೇಷ ರೀತಿಯಲ್ಲಿ ನಿಮ್ಮ ಮೊಬೈಲ್‌ನಲ್ಲಿಯೇ ವಿಡಿಯೊ ಮಾಡಿ ನಮಗೆ ಕಳುಹಿಸಿ. ನಿಮ್ಮ ವಿಡಿಯೊ ಇನ್ನಷ್ಟು ಆಕರ್ಷಕವಾಗಿ ವಿಸ್ತಾರ ಯುಟ್ಯೂಬ್ ಚಾನೆಲ್‌ನಲ್ಲಿ ಪ್ರಸಾರವಾಗುತ್ತದೆ.
ಕಳುಹಿಸಬೇಕಾದ ಫೋನ್ ನಂಬರ್
ಈ ಕೆಳಗಿನ ವಾಟ್ಸ್ ಆ್ಯಪ್ ನಂಬರ್‌ಗೆ ವಿಡಿಯೊವನ್ನು ಕಳುಹಿಸಿ. ವಿಡಿಯೊ ಕಳುಹಿಸುವಾಗ ನಿಮ್ಮ ತಂಡದ ಒಬ್ಬರ ಹೆಸರು ಮತ್ತು ಊರನ್ನು ತಿಳಿಸಲು ಮರೆಯಬೇಡಿ.
ವಾಟ್ಸ್ ಆ್ಯಪ್ ನಂಬರ್: 9481024181
ಇದು ನೆನಪಿರಲಿ
- ಮಹಿಳೆಯರು, ಯುವತಿಯರು ಮತ್ತು ಬಾಲಕಿಯರಿಗೆ ಮಾತ್ರ ಅವಕಾಶ.
- ಗುಣಮಟ್ಟದ ಕ್ಯಾಮೆರಾ ಇರುವ ಮೊಬೈಲ್ನಿಂದ ವಿಡಿಯೊ ಮಾಡಿ, ವಿಡಿಯೊ ಗುಣಮಟ್ಟ ಉತ್ತಮವಾಗಿರಲಿ, ಹಾಗೂ ನೀವು ಚಿತ್ರಿಸಿದ ವಿಡಿಯೊದ ಅವಧಿ ಒಂದು ನಿಮಿಷದೊಳಗಿರಲಿ.
- ನವರಾತ್ರಿಯ ಪ್ರತಿದಿನ ಕೂಡ ನೀವು ವಿಡಿಯೊ ಮಾಡಿಕಳುಹಿಸಬಹುದು. ಆದರೆ ನಿಮ್ಮ ವಿಡಿಯೊ ಮಧ್ಯಾಹ್ನ 2 ಗಂಟೆಯ ಒಳಗೆ ನಮಗೆ ತಲುಪಿರಬೇಕು.
- ನೀವು ಒಬ್ಬರೋ, ಇಬ್ಬರೋ ವಿಡಿಯೊ ಮಾಡಿ ಕಳುಹಿಸಿದರೆ ಸಾಲದು. ನಿಮ್ಮ ವಿಡಿಯೊದಲ್ಲಿ ಕನಿಷ್ಠ ಐದು ಮಂದಿಯಾದರೂ ಇರಬೇಕು.