Site icon Vistara News

Navratri 2022 | ನವರಾತ್ರಿ ನವವರ್ಣ: ವಿಸ್ತಾರ ಡಿಜಿಟಲ್ ಸಂಭ್ರಮ

Navratri 2022

ಮತ್ತೆ ನವರಾತ್ರಿ (Navratri 2022) ಬಂದಿದೆ. ಕಾಶ್ಮೀರದಿಂದ ಹಿಡಿದು ಕನ್ಯಾಕುಮಾರಿಯವರೆಗೆ ಭಾರತದ ಪ್ರತಿಯೊಂದು ರಾಜ್ಯದಲ್ಲೂ ಸಂಭ್ರಮದಿಂದ ಆಚರಿಸುವ ಹಬ್ಬವಿದು. ಅತಿದೀರ್ಘಕಾಲ ನಡೆಯುವ ಧಾರ್ಮಿಕ ಹಬ್ಬ ಎಂಬ ಹೆಗ್ಗಳಿಕೆಯೂ ಈ ನವರಾತ್ರಿಯದು.

ದೇವಿಯ ಒಂಬತ್ತು ರೂಪಗಳಲ್ಲಿ ಪ್ರತಿದಿನ ಒಂದೊಂದು ರೂಪದಂತೆ ಆವಾಹಿಸಿ ಪೂಜಿಸುವ ಈ ಪದ್ಧತಿ ಸನಾತನವಾದುದು. ಪ್ರತಿಯೊಂದು ರೂಪಕ್ಕೂ ವಿಶೇಷವಾಗಿ ಪೂಜೆ ನಡೆಯುತ್ತದೆ. ಪ್ರತಿ ದೇವಿಗೆ ವಿಶೇಷವಾದ ಸ್ತ್ರೋತ್ರಗಳಿರುವಂತೆ ವಿಶೇಷವಾದ ವರ್ಣ, ಪುಷ್ಪ, ನೈವೇದ್ಯ, ರಾಗಗಳೂ ಇವೆ.

ಆಶ್ವಯುಜ ಮಾಸದ ಮೊದಲ ಒಂಬತ್ತು ದಿನಗಳ ಈ ಹಬ್ಬಕ್ಕೆ ಧಾರ್ಮಿಕತೆಯಂತೆಯೇ ಸಾಂಸ್ಕೃತಿಕ ಆಯಾಮಗಳೂ ಇವೆ. ಹಾಡು, ಕುಣಿತ, ಹೊಸ ದಿರಸು, ಪ್ರಯಾಣ ಹೀಗೆ ಒಂದೆರಡಲ್ಲ, ನಾನಾ ಬಗೆಯಲ್ಲಿ ಜೀವನುತ್ಸಾಹವನ್ನು ಚಿಮ್ಮಿಸುತ್ತದೆ.

ನವರಾತ್ರಿಯಲ್ಲಿ ಗೊಂಬೆಗಳನ್ನು ಕೂರಿಸಿ ಅಕ್ಕ-ಪಕ್ಕದ ಮನೆಯ ಮಕ್ಕಳನ್ನು ಕರೆಸಿ ಆರತಿ ಮಾಡುವುದು, ಹಾಡು ಹೇಳಿಸುವುದು, ಮನೆಯಲ್ಲಿ ಪೂಜೆ ಮಾಡುವುದು ವಾಡಿಕೆ. ಈ ವೇಳೆ ಮಕ್ಕಳು, ಮಹಿಳೆಯರು ಬಣ್ಣ ಬಣ್ಣದ ಬಟ್ಟೆಗಳನ್ನು ಉಟ್ಟು, ಅದಕ್ಕೊಪ್ಪುವ ಒಡವೆಗಳನ್ನು ಧರಿಸಿ ಸಂಭ್ರಮದಿಂದ ಪಾಲ್ಗೊಳ್ಳುತ್ತಾರೆ.

Navratri 2022

ಅದೇ ರೀತಿ ಇದೀಗ ಬೊಂಬೆ ಕೂರಿಸಲಿ, ಕೂರಿಸದಿರಲಿ, ದಸರಾ ಆಚರಿಸಲಿ, ಇಲ್ಲದಿರಲಿ, ಯಾವುದೇ ಜಾತಿ-ಧರ್ಮದವರಿರಲಿ… ಆದರೆ ಒಂಬತ್ತು ದಿನವೂ ಒಂದೊಂದು ಬಣ್ಣದ ಸೀರೆ, ಉಡುಗೆಗಳನ್ನು ತೊಟ್ಟು ನಿತ್ಯವೂ ನವರಾತ್ರಿ ಆಚರಿಸುತ್ತಿದ್ದಾರೆ.

ನವರಾತ್ರಿಯ ಸಂಭ್ರಮವನ್ನು ಈ ಬಾರಿ ಇನ್ನಷ್ಟು ಹೆಚ್ಚಿಸಲು ನಿಮ್ಮ ವಿಸ್ತಾರ ನ್ಯೂಸ್‌ ನವರಾತ್ರಿ ನವವರ್ಣ ಎಂಬ ಡಿಜಿಟಲ್‌ ವೇದಿಕೆ ಸೃಷ್ಟಿಸಿದೆ. ನೀವು ಒಂಬತ್ತು ದಿನಗಳ ಕಾಲ ಒಂಬತ್ತು ಬಣ್ಣಗಳ ದಿರಸು ಧರಿಸಿ, ಹಬ್ಬದ ರಂಗೇರಿಸಬಹುದು.

ನೀವು ಭಾಗವಹಿಸುವುದು ಹೇಗೆ?
ನಿಮ್ಮ ಕುಟುಂಬದ ಮಹಿಳಾ ಸದಸ್ಯರು, ಬಂಧುಗಳು, ಸ್ನೇಹಿತರು, ಅಕ್ಕ-ಪಕ್ಕದ ಮನೆಯವರು, ಕಾಲೇಜು ಸಹಪಾಠಿಗಳು, ಸಹೋದ್ಯೋಗಿಗಳು, ಸಂಘ ಸಂಸ್ಥೆಯ ಸದಸ್ಯರು ಹೀಗೆ ನಿಮ್ಮ ಆಪ್ತರೊಂದಿಗೆ ನೀವು ಆ ದಿನದ ಬಣ್ಣದ ಉಡುಗೆ ತೊಟ್ಟು (ನೆನಪಿರಲಿ ಎಲ್ಲರೂ ನಿಗದಿತ ಒಂದೇ ವರ್ಣದ ದಿರಸು ಧರಿಸಿರಬೇಕು) ವಿಶೇಷ ರೀತಿಯಲ್ಲಿ ನಿಂತು ನೀವೇ ನಿಮ್ಮ ಮೊಬೈಲ್‌ನಲ್ಲಿ ವಿಡಿಯೊ ಮಾಡಿಕೊಳ್ಳಿ. ಅದನ್ನು ನಮಗೆ ಕಳುಹಿಸಿ.
ನಿಮ್ಮ ವಿಡಿಯೊವನ್ನು ಇನ್ನಷ್ಟು ಆಕರ್ಷಣೀಯವಾಗಿಸಿ ವಿಸ್ತಾರ ಯೂಟ್ಯೂಬ್‌ನಲ್ಲಿ ಪ್ರಸಾರ ಮಾಡಲಾಗುತ್ತದೆ. ನೀವು ನಿಮ್ಮವರೊಂದಿಗೆ ಯೂಟ್ಯೂಬ್‌ ಲಿಂಕ್‌ ಹಂಚಿಕೊಂಡು ಅವರೂ ಸಂಭ್ರಮ ಪಡುವಂತೆ ಮಾಡಬಹುದು.

ವಿಡಿಯೊ ಕಳುಹಿಸುವುದು ಹೇಗೆ?
ಸಿಂಪಲ್. ಈ ಕೆಳಗಿನ ವಾಟ್ಸ್‌ ಆ್ಯಪ್‌ ನಂಬರ್‌ಗೆ ವಿಡಿಯೊವನ್ನು ಕಳುಹಿಸಿ. ವಿಡಿಯೊ ಕಳುಹಿಸುವಾಗ ನಿಮ್ಮ ತಂಡದ ಒಬ್ಬರ ಹೆಸರು ಮತ್ತು ಊರನ್ನು ತಿಳಿಸಲು ಮರೆಯಬೇಡಿ.
ವಾಟ್ಸ್‌ ಆ್ಯಪ್‌ ನಂಬರ್‌: 96069 42037

ಈ ವಿಷಯ ನಿಮ್ಮ ಗಮನದಲ್ಲಿರಲಿ…

ಯಾವ ದಿನ ಯಾವ ಬಣ್ಣ?

Navratri 2022

ಇದನ್ನೂ ಓದಿ | Navaratri Saree trend | ಸಾದಾ ನವವರ್ಣ ಸೀರೆಗಳಿಗೆ ಭಾರಿ ಡಿಮ್ಯಾಂಡ್‌

Exit mobile version