Site icon Vistara News

Senior Citizens: 65 ವರ್ಷ ದಾಟಿದವರಿಗೆ ಡೈರೆಕ್ಟ್‌ ದೇವರ ಸಾನ್ನಿಧ್ಯ!

Senior citizens visiting temple

#image_title

ಬೆಂಗಳೂರು: ರಾಜ್ಯದ ಮುಜರಾಯಿ ದೇವಸ್ಥಾನಗಳಲ್ಲಿ ಹಿರಿಯ ನಾಗರಿಕ (Senior Citizens) ಭಕ್ತರಿಗಾಗಿ ರಾಜ್ಯ ಸರ್ಕಾರ ಹೊಸ ಸೌಲಭ್ಯ ಕಲ್ಪಿಸಲು ಮುಂದಾಗಿದೆ. 65 ವರ್ಷ ದಾಟಿದವರು ಇನ್ನುಮುಂದೆ ಕ್ಯೂನಲ್ಲಿ ನಿಲ್ಲದೆ ನೇರ ದೇವರ ದರ್ಶನಕ್ಕೆ ತೆರಳಲು ಅವಕಾಶ ನೀಡಬೇಕು ಎಂದು ಸರ್ಕಾರ ಸುತ್ತೋಲೆ ಹೊರಡಿಸಿದೆ.

ಇತ್ತೀಚೆಗೆ, ಅದರಲ್ಲೂ ರಾಜ್ಯ ಸರ್ಕಾರವು ಮಹಿಳೆಯರಿಗೆ ಉಚಿತ ಬಸ್‌ ಪ್ರಯಾಣಕ್ಕೆ ಅವಕಾಶ ನೀಡಿದ ಮೇಲೆ ದೇವಸ್ಥಾನಕ್ಕೆ ಭೇಟಿ ನೀಡುವವರ ಸಂಕ್ಯೆ ಹೆಚ್ಚಾಗಿದೆ. ಇದರಿಂದಾಗಿ ದೇವಸ್ಥಾನಗಳಲ್ಲಿ ಕ್ಯೂ ಸಾಕಷ್ಟು ಉದ್ದವಾಗುತ್ತಿದ್ದು, ಹಿರಿಯ ನಾಗರಿಕರು ಕ್ಯೂನಲ್ಲಿ ನಿಲ್ಲುವುದು ಕಷ್ಟವಾಗುತ್ತಿದೆ.

ಹಿರಿಯ ನಾಗರಿಕರು ಕ್ಯೂನಲ್ಲಿ ನಿಲ್ಲುವುದು ಕಷ್ಟವಾಗುತ್ತಿರುವುದರಿಂದ ಅವರಿಗೆ ನೇರವಾಗಿ ದರ್ಶನಕ್ಕೆ ಅವಕಾಶ ನೀಡಬೇಕು ಎಂದು ಜೂನ್‌ 20ರಂದು ಅಖಿಲ ಕರ್ನಾಟಕ ಹಿಂದೂ ದೇವಾಲಯಗಳ ಅರ್ಚಕರ , ಆಗಮಿಕರ ಹಾಗೂ ಉಪಾಧಿವಂತರ ಒಕ್ಕೂಟವು ಸರ್ಕಾರಕ್ಕೆ ಮನವಿ ಮಾಡಿತ್ತು.

ರಾಜ್ಯ ಸರ್ಕಾರದ ಮುಜರಾಯಿ ಇಲಾಖೆ ವ್ಯಾಪ್ತಿಯಲ್ಲಿರುವ ಎ ಮತ್ತು ಬಿ ವರ್ಗದ ದೇವಾಲಯಗಳಲ್ಲಿ 65 ವರ್ಷ ದಾಟಿದ ಭಕ್ತರಿಗೆ ನೇರವಾಗಿ ದರ್ಶನಕ್ಕೆ ಅವಕಾಶ ನೀಡಲು ಸುತ್ತೋಲೆ ಹೊರಡಿಸಲಾಗಿದೆ. 65 ವರ್ಷ ದಾಟಿದವರು ತಮ್ಮ ವಯಸ್ಸಿನ ದೃಢೀಕರಣಕ್ಕೆ ಯಾವುದೇ ಸರ್ಕಾರಿ ದಾಖಲಾತಿಯನ್ನು ತೋರಿಸಬೇಕು. ಸಾಧ್ಯವಿರುವ ದೇವಾಲಯಗಳಲ್ಲಿ, ಹಿರಿಯ ನಾಗರಿಕರಿಗೆಂದು ಪ್ರತ್ಯೇಕ ಸ್ಥಳ ಕಾಯ್ದಿರಿಸಬೇಕು ಎಂದು ತಿಳಿಸಲಾಗಿದೆ.

ದೇವಾಲಯಗಳಲ್ಲಿ ಹಿರಿಯ ನಾಗರಿಕರ ಸಮಸ್ಯೆಗಳನ್ನು ಆಲಿಸಿ ಪರಿಹರಿಸಲು ಹೆಲ್ಪ್‌ ಡೆಸ್ಕ್‌ ಸ್ಥಾಪಿಸಬೇಕು ಹಾಗೂ ಇದಕ್ಕೆ ಜವಾಬ್ದಾರಿಯುತ ಅಧಿಕಾರಿಯನ್ನು ನೇಮಿಸಬೇಕು ಎಂದೂ ಸುತ್ತೋಲೆಯಲ್ಲಿ ತಿಳಿಸಲಾಗಿದೆ.

ಇದನ್ನೂ ಓದಿ: Temples of India: ಜೀವನದಲ್ಲೊಮ್ಮೆ ನೋಡಲೇಬೇಕಾದ ಭಾರತದ ಅತ್ಯಂತ ಸುಂದರ ಟಾಪ್‌ 10 ದೇವಾಲಯಗಳಿವು!

Exit mobile version