ನವದೆಹಲಿ: ಅಬುಧಾಬಿಯಲ್ಲಿ (Abu Dhabi) ನಿರ್ಮಾಣ ಮಾಡಲಾಗಿರುವ ಬಿಎಪಿಎಸ್ ಹಿಂದೂ ಮಂದಿರವನ್ನು (BAPS Hindu Mandir) ಪ್ರಧಾನಿ ನರೇಂದ್ರ ಮೋದಿ (PM Narendra Modi) ಅವರು ಫೆಬ್ರವರಿ 14ರಂದು ಉದ್ಗಾಟಿಸಲಿದ್ದಾರೆ. ಸ್ವಾಮಿ ಈಶ್ವರಚರಣದಾಸ್ (Swami Ishwarcharandas) ಮತ್ತು ಸ್ವಾಮಿ ಬ್ರಹ್ಮವಿಹರಿದಾಸ್ (Swami Brahmaviharidas) ಹಾಗೂ ಆಡಳಿತ ಮಂಡಳಿಯ ಸದಸ್ಯರು ನೀಡಿದ ಆಮಂತ್ರಣವನ್ನು ಪ್ರಧಾನಿ ಮೋದಿ ಅವರು ಸ್ವೀಕರಿಸಿದ್ದಾರೆ ಎಂದು ಬಿಎಪಿಎಸ್ ಸ್ವಾಮಿನಾರಾಯಣ್ ಸಂಸ್ಥಾ (BAPS Swaminarayan Sanstha) ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.
ಪ್ರಧಾನಿ ಮೋದಿ ಮತ್ತು ಬಿಎಪಿಎಸ್ ಸ್ವಾಮಿ ಈಶ್ವರಚರಣದಾಸ್ ಅವರು ಬುಧವಾರ ಪ್ರಧಾನಮಂತ್ರಿ ನಿವಾಸದ ಕಚೇರಿಯಲ್ಲಿ ಭೇಟಿಯಾದರು ಮತ್ತು ಪ್ರಧಾನಿ ಮೋದಿ ಅವರು ಆಹ್ವಾನವನ್ನು ಸ್ವೀಕರಿಸಿದರು, ಐತಿಹಾಸಿಕ ಮತ್ತು ಸಾಂಪ್ರದಾಯಿಕ ದೇವಾಲಯಕ್ಕೆ ತಮ್ಮ ಬೆಂಬಲವನ್ನು ವ್ಯಕ್ತಪಡಿಸಿದರು.
PM Modi accepts invitation to inaugurate the BAPS Hindu Mandir in Abu Dhabi, Delhi, India https://t.co/4OjdYUOm4u pic.twitter.com/ZluAL4xWDK
— BAPS (@BAPS) December 28, 2023
ಸ್ವಾಮಿ ಈಶ್ವರಚರಣದಾಸ್ ಅವರು ಪ್ರಧಾನಿಯವರಿಗೆ ಹಾರ ಹಾಕಿ, ಕೇಸರಿ ಶಾಲು ಹೊದಿಸಿ ಸನ್ಮಾನಿಸಿದರು. ನಮ್ಮ ರಾಷ್ಟ್ರ ಮತ್ತು ಜಗತ್ತಿಗೆ ಅವರು ನೀಡಿದ ಮಹತ್ವದ ಕೊಡುಗೆಗಳನ್ನು ಶ್ಲಾಘಿಸಿದರು. ಭಾರತದಾದ್ಯಂತ ಯಾತ್ರಾ ಸ್ಥಳಗಳ ಗಮನಾರ್ಹ ನವೀಕರಣ ಮತ್ತು ಅಭಿವೃದ್ಧಿಗಾಗಿ ಪ್ರಧಾನಮಂತ್ರಿಯವರನ್ನು ವಿಶೇಷವಾಗಿ ಶ್ಲಾಘಿಸಿದರು, ಇದು ಇತ್ತೀಚಿನ ಶತಮಾನಗಳಲ್ಲಿ ಸಾಟಿಯಿಲ್ಲದ ಸಾಧನೆಯಾಗಿದೆ ಎಂದು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಲಾಗಿದೆ.
ಪ್ರಧಾನಿ ಜತೆಗಿನ ಭೇಟಿಯಲ್ಲಿ ಜಾಗತಿಕ ಸಾಮರಸ್ಯಕ್ಕಾಗಿ ಅಬುಧಾಬಿ ದೇವಾಲಯದ ಮಹತ್ವ ಮತ್ತು ಜಾಗತಿಕ ವೇದಿಕೆಯಲ್ಲಿ ಭಾರತದ ಆಧ್ಯಾತ್ಮಿಕ ನಾಯಕತ್ವಕ್ಕಾಗಿ ಮೋದಿಯವರ ದೃಷ್ಟಿಯ ಬಗೆಗಿ ಚರ್ಚೆ ನಡೆಯಿತು ಎಂದು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಲಾಗಿದೆ.
ಬಿಎಪಿಎಸ್ ನಿಯೋಗವು ಪ್ರಧಾನ ಮಂತ್ರಿಯವರ ಆರೋಗ್ಯಕ್ಕಾಗಿ ಪ್ರಾರ್ಥಿಸಿತು ಮತ್ತು ಅವರ ಅಸಾಧಾರಣ ಜಾಗತಿಕ ಸಾಧನೆಗಳನ್ನು ಹೊಗಳಿತು. ವಿಶೇಷವಾಗಿ ಯುಎಇ ಮತ್ತು ಇತರ ಮಧ್ಯಪ್ರಾಚ್ಯ ದೇಶಗಳೊಂದಿಗೆ ಸಂಬಂಧವನ್ನು ಮೋದಿ ಬಲಪಡಿಸಿದ್ದಾರೆ. ಅವರು ಮೋದಿಯವರ ನಾಯಕತ್ವವು ವಿಶ್ವಾದ್ಯಂತ ಭಾರತೀಯರಲ್ಲಿ ತುಂಬಿದ ಹೆಮ್ಮೆ ಮತ್ತು ಸ್ಫೂರ್ತಿಯ ಬಗ್ಗೆ ಚರ್ಚಿಸಿದರು ಎಂದು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಲಾಗಿದೆ.
ಈ ಸುದ್ದಿಯನ್ನೂ ಓದಿ: Rama Mandir : ರಾಮ ಮಂದಿರ ಉದ್ಘಾಟನೆಗೆ ಆಹ್ವಾನ ; ಸಂತೋಷದಿಂದ ಪಾಲ್ಗೊಳ್ಳುವೆ ಎಂದ HDK