Site icon Vistara News

Ram Mandir: ಕರ್ನಾಟಕದವರು ಸೇರಿ ಪ್ರಾಣಪ್ರತಿಷ್ಠೆಯಲ್ಲಿ 14 ದಂಪತಿ ಭಾಗಿ; ಇವರೇ ಯಜಮಾನರು!

Ram Mandir

Ram Mandir: 14 Couples From Across Country To Be Yajmans For Pran Pratishtha Ceremony

ಅಯೋಧ್ಯೆ: ಭವ್ಯ ರಾಮಮಂದಿರದಲ್ಲಿ (Ram Mandir) ಸೋಮವಾರ ರಾಮಲಲ್ಲಾನಿಗೆ (ಜನವರಿ 22) ಪ್ರಾಣಪ್ರತಿಷ್ಠಾಪನೆ ನಡೆಯಲಿದೆ. ಇದಕ್ಕಾಗಿ ಸಕಲ ಸಿದ್ಧತೆ ಕೈಗೊಳ್ಳಲಾಗುತ್ತಿದೆ. ದೇಶ-ವಿದೇಶಗಳ ಗಣ್ಯರು, ಲಕ್ಷಾಂತರ ಭಕ್ತರು ರಾಮಮಂದಿರ ಉದ್ಘಾಟನೆಗೆ ಸಾಕ್ಷಿಯಾಗಲಿದ್ದಾರೆ. ಇನ್ನು ರಾಮಲಲ್ಲಾನ ಪ್ರಾಣ ಪ್ರತಿಷ್ಠಾಪನೆ (Pran Pratishtha) ಕಾರ್ಯಕ್ರಮದ ಪೂಜೆಯಲ್ಲಿ ಪಾಲ್ಗೊಳ್ಳಲು ದೇಶದ ನಾನಾ ಭಾಗಗಳಿಂದ 14 ದಂಪತಿಗಳಿಗೆ ವಿಶೇಷ ಆಹ್ವಾನ ನೀಡಲಾಗಿದೆ. ಕರ್ನಾಟಕದ ದಂಪತಿಯೂ ಇದ್ದಾರೆ ಎಂಬುದು ವಿಶೇಷವಾಗಿದೆ. ಪೂಜೆಯಲ್ಲಿ ಇವರೇ ಯಜಮಾನರಾಗಿ ಪಾಲ್ಗೊಳ್ಳಲಿದ್ದಾರೆ. 14 ಜೋಡಿಗಳ ಪಟ್ಟಿ ಇಲ್ಲಿದೆ.

ಇಲ್ಲಿದೆ ದಂಪತಿಗಳ ಪಟ್ಟಿ

  1. ಲಿಂಗರಾಜ್‌ ಬಸವರಾಜ್ ದಂಪತಿ-‌ ಕರ್ನಾಟಕ
  2. ದಿಲೀಪ್‌ ವಾಲ್ಮೀಕಿ- ಲಖನೌ
  3. ಅನಿಲ್‌ ಚೌಧರಿ- ಡೋಮ್‌ ರಾಜಾ ಕುಟುಂಬ (ಉತ್ತರ ಪ್ರದೇಶ)
  4. ಕೈಲಾಶ್‌ ಯಾದವ್-‌ ಕಾಶಿ
  5. ಅರುಣ್‌ ಚೌಧರಿ- ಹರಿಯಾಣ
  6. ಕವಿಂದ್ರ ಪ್ರತಾಪ್‌ ಸಿಂಗ್‌- ಕಾಶಿ
  7. ರಾಮಚಂದ್ರ ಖರಾಡಿ- ರಾಜಸ್ಥಾನ
  8. ರಾಮ್‌ ಕುಯಿ ಜಮೀ – ಅಸ್ಸಾಂ
  9. ಗುರುಚರಣ್‌ ಸಿಂಗ್‌- ಜೈಪುರ
  10. ಕೃಷ್ಣ ಮೋಹನ್-‌ ಹರ್ದೋಯಿ
  11. ರಮೇಶ್‌ ಜೈನ್-‌ ಮುಲ್ತಾನಿ
  12. ಆದಲರಸನ್-‌ ತಮಿಳುನಾಡು
  13. ವಿಠಲ್‌ ಕಾಮನ್ಲೆ- ಮಹಾರಾಷ್ಟ್ರ
  14. ಮಹಾದೇವ್‌ ರಾವ್-‌ ಲಾಥೂರ್

ಪ್ರಾಣ ಪ್ರತಿಷ್ಠೆ ಎಷ್ಟು ಗಂಟೆಗೆ?

ಮಧ್ಯಾಹ್ನ 12.20ರಿಂದ 12.45ರ ಅವಧಿಯಲ್ಲಿ ರಾಮಲಲ್ಲಾ ಮೂರ್ತಿಗೆ ಪ್ರಾಣ ಪ್ರತಿಷ್ಠಾಪನೆ ನೆರವೇರಿಸಲಾಗುತ್ತದೆ. ಪ್ರಧಾನಿ ನರೇಂದ್ರ ಮೋದಿ ಸೇರಿ ಕೆಲವರು ಮಾತ್ರ ಗರ್ಭಗುಡಿಯಲ್ಲಿ ಪ್ರಾಣ ಪ್ರತಿಷ್ಠೆ ನೆರವೇರಿಸಲಿದ್ದಾರೆ. ಪ್ರಾಣಪ್ರತಿಷ್ಠಾಪನೆ ನೆರವೇರಿದ ಬಳಕ ಮಧ್ಯಾಹ್ನ 2 ಗಂಟೆಯಿಂದ ಸಂಜೆ 7 ಗಂಟೆವರೆಗೆ ಮತ್ತೆ ಸಾರ್ವಜನಿಕರ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. ಸಂಜೆ 7.30ಕ್ಕೆ ಸಂಧ್ಯಾರತಿಯೊಂದಿಗೆ ರಾಮಮಂದಿರದಲ್ಲಿ ಪ್ರಾಣಪ್ರತಿಷ್ಠಾಪನೆ ಕಾರ್ಯಕ್ರಮವು ಸಮಾರೋಪವಾಗಲಿದೆ.

ಇದನ್ನೂ ಓದಿ: Ram Mandir : ರಾಮಮಂದಿರ ನಿರ್ಮಾಣದ ವೆಚ್ಚ ಎಷ್ಟು? ಇಂಥ ಹಲವು ಪ್ರಶ್ನೆಗಳಿಗೆ ಇಲ್ಲಿದೆ ಉತ್ತರ

ಪ್ರಾಣ ಪ್ರತಿಷ್ಠಾ ಎಂದರೇನು?

ಪ್ರಾಣ ಪ್ರತಿಷ್ಠಾ ಎನ್ನುವುದು ಹಿಂದೂ ಮತ್ತು ಜೈನ ಧರ್ಮದಲ್ಲಿನ ಜನಪ್ರಿಯ ಆಚರಣೆಯಾಗಿದ್ದು, ದೇವರ ವಿಗ್ರಹವನ್ನು ಪವಿತ್ರಗೊಳಿಸಿದ ನಂತರ ದೇವಾಲಯದ ಗರ್ಭಗುಡಿಯಲ್ಲಿ ಸ್ಥಾಪಿಸಲಾಗುತ್ತದೆ. ವಿಗ್ರಹಗಳನ್ನು ಹೀಗೆ ಪ್ರತಿಷ್ಠಾಪಿಸುವ ಸಮಯದಲ್ಲಿ ಪುರೋಹಿತರು ವೈದಿಕ ಸ್ತೋತ್ರಗಳ ಪಠಣ ನಡೆಸುವುದು ವಾಡಿಕೆ. ಪ್ರಾಣ್ ಎಂಬ ಪದದ ಅರ್ಥ ಜೀವಶಕ್ತಿ ಮತ್ತು ಪ್ರತಿಷ್ಠಾ ಎಂದರೆ ಸ್ಥಾಪನೆ. ಪ್ರಾಣ ಪ್ರತಿಷ್ಠಾ ಅಥವಾ ಪ್ರತಿಷ್ಠಾಪನಾ ಸಮಾರಂಭ ಎಂದರೆ ವಿಗ್ರಹಕ್ಕೆ ಜೀವಶಕ್ತಿಯನ್ನು ತುಂಬುವ ಆಚರಣೆ ಎಂದು ಹಿರಿಯರು ಹೇಳುತ್ತಾರೆ.

ಪ್ರಾಣ ಪ್ರತಿಷ್ಠಾ ಪ್ರಕ್ರಿಯೆಯ ಮೊದಲು ವಿಗ್ರಹಕ್ಕೆ ಯಾವುದೇ ವಿಶೇಷ ಶಕ್ತಿ ಇರುವುದಿಲ್ಲ ಎನ್ನಲಾಗಿದೆ. ಪ್ರಾಣ ಪ್ರತಿಷ್ಠಾನದ ಮೂಲಕ ವಿಗ್ರಹಕ್ಕೆ ವಿಶೇಷ ಶಕ್ತಿಗಳನ್ನು ತುಂಬಲಾಗುತ್ತದೆ. ಬಳಿಕವೇ ವಿಗ್ರಹ ದೈವಿಕ ಶಕ್ತಿಯಾಗಿ ರೂಪಾಂತರಗೊಳ್ಳುತ್ತದೆ. ಈ ಪ್ರಕ್ರಿಯೆಯ ನಂತರ ಭಕ್ತರು ಈ ವಿಗ್ರಹಗಳನ್ನು ಪೂಜಿಸಬಹುದು ಎಂದು ನಂಬಲಾಗಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version