Site icon Vistara News

Ram Mandir : ರಾಮ ಮಂದಿರ ಉದ್ಘಾಟನೆ ವೇಳೆ ನಡೆಯಲಿದೆ 1 ಲಕ್ಷ ಕೋಟಿ ರೂ. ಆರ್ಥಿಕ ಚಟುವಟಿಕೆ

ISVACU will build tallest Ram Mandir in Perth, Australia

ವಿಸ್ತಾರನ್ಯೂಸ್​ ಬೆಂಗಳೂರು: ಜನವರಿ 22ರಂದು ಅಯೋಧ್ಯೆಯಲ್ಲಿ ರಾಮ್ ಮಂದಿರದ (Ram Mandir) ಪ್ರಾಣ ಪ್ರತಿಷ್ಠಾಪನಾ ಸಮಾರಂಭದ ವೇಳೆ 1 ಲಕ್ಷ ಕೋಟಿ ರೂ.ಗಳ ಆರ್ಥಿಕ ಚಟುವಟಿಕೆ ನಡೆಯುವ ನಿರೀಕ್ಷೆಯಿದೆ ಎಂದು ವ್ಯಾಪಾರಿಗಳ ಸಂಸ್ಥೆ ಸಿಎಐಟಿ ಸೋಮವಾರ ತಿಳಿಸಿದೆ. ವಿವಿಧ ರಾಜ್ಯಗಳ 30ನಗರಗಳ ವ್ಯಾಪಾರ ಸಂಘಗಳಿಂದ ಪಡೆದ ಪ್ರತಿಕ್ರಿಯೆಯ ಆಧಾರದ ಮೇಲೆ ಕಾನ್ಫೆಡರೇಶನ್ ಆಫ್ ಆಲ್ ಇಂಡಿಯಾ ಟ್ರೇಡರ್ಸ್ (ಸಿಎಐಟಿ) ತನ್ನ ಅಂದಾಜನ್ನು ಹೇಳಿದೆ.

ಅಯೋಧ್ಯೆಯ ರಾಮಮಂದಿರ ನಿರ್ಮಾಣ ಕಾರ್ಯವು ಕೇವಲ ಧಾರ್ಮಿಕ ಭಾವನೆಗಳಾಗದೇ ದೇಶದ ಆರ್ಥಿಕ ಚಟುವಟಿಕೆಗಳಿಗೆ ಪ್ರೋತ್ಸಾಹ ನೀಡಲಿದೆ. ಜನರ ನಂಬಿಕೆ ಮತ್ತು ವಿಶ್ವಾಸವು ದೇಶದ ಸಾಂಪ್ರದಾಯಿಕ ಆರ್ಥಿಕ ವ್ಯವಸ್ಥೆಯ ಆಧಾರದ ಮೇಲೆ ಅನೇಕ ಹೊಸ ವ್ಯವಹಾರಗಳ ಸೃಷ್ಟಿಗೆ ಕಾರಣವಾಗುತ್ತಿದೆ ಎಂದು ಸಿಎಐಟಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಪ್ರವೀಣ್ ಖಂಡೇಲ್ವಾಲ್ ಹೇಳಿದರು.

ರಾಮ ಮಂದಿರ ಪ್ರತಿಷ್ಠಾಪನೆ ಹಿನ್ನೆಲೆಯಲ್ಲಿ ದೇಶಾದ್ಯಂತ ವ್ಯಾಪಾರ ಸಂಘಗಳಿಂದ ಸುಮಾರು 30,000 ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿದೆ ಎಂದು ಅವರು ಇದೇ ವೇಳೆ ಹೇಳಿದ್ದಾರೆ. ಮೆರವಣಿಗೆಗಳು, ಶ್ರೀ ರಾಮ ಚೌಕಿ, ಶ್ರೀ ರಾಮ ರ್ಯಾಲಿಗಳು, ಶ್ರೀ ರಾಮ ಪಾದ ಯಾತ್ರೆ, ಸ್ಕೂಟರ್ ಮತ್ತು ಕಾರು ರ್ಯಾಲಿಗಳು ಮತ್ತು ಶ್ರೀ ರಾಮ ಸಭೆಗಳು ಸೇರಿಕೊಂಡಿವೆ . ಶ್ರೀ ರಾಮನ ಧ್ವಜಗಳು, ಬ್ಯಾನರ್​ಗಳು, ಟೋಪಿಗಳು, ಟೀ ಶರ್ಟ್​ಗಳು ಮತ್ತು ರಾಮ ದೇವಾಲಯದ ಚಿತ್ರವನ್ನು ಹೊಂದಿರುವ ಮುದ್ರಿತ ‘ಕುರ್ತಾ’ಗಳಿಗೆ ಮಾರುಕಟ್ಟೆಗಳಲ್ಲಿ ಹೆಚ್ಚಿನ ಬೇಡಿಕೆ ಇದೆ.

ಮಂದಿರ ಮಾದರಿಗೆ ವಿಪರೀತ ಬೇಡಿಕೆ

ರಾಮ ಮಂದಿರದ ಮಾದರಿಗಳ ಬೇಡಿಕೆಯೂ ವೇಗವಾಗಿ ಹೆಚ್ಚಾಗಿದೆ ಮತ್ತು ದೇಶಾದ್ಯಂತ 5 ಕೋಟಿಗೂ ಹೆಚ್ಚು ಮಾದರಿಗಳನ್ನು ಮಾರಾಟವಾಗುವ ನಿರೀಕ್ಷೆಯಿದೆ. ಇದಕ್ಕಾಗಿ ಸಣ್ಣ ಉತ್ಪಾದನಾ ಘಟಕಗಳು ವಿವಿಧ ರಾಜ್ಯಗಳ ಅನೇಕ ನಗರಗಳಲ್ಲಿ ಹಗಲು ರಾತ್ರಿ ಕೆಲಸ ಮಾಡುತ್ತಿವೆ ಎಂದು ಖಂಡೇಲ್ವಾಲ್ ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ : Ayodhya Ram Mandir: ರಾಮನನ್ನು ಸ್ವಾಗತಿಸಲು ಕಾಶ್ಮೀರಿ ಹುಡುಗಿ ಹಾಡಿದ ಹಾಡು ವೈರಲ್

ಮುಂದಿನ ವಾರದಲ್ಲಿ, ದೆಹಲಿಯ 200ಕ್ಕೂ ಹೆಚ್ಚು ಪ್ರಮುಖ ಮಾರುಕಟ್ಟೆಗಳು ಮತ್ತು ಹೆಚ್ಚಿನ ಸಂಖ್ಯೆಯ ಸಣ್ಣ ಮಾರುಕಟ್ಟೆಗಳು ಶ್ರೀ ರಾಮ ಧ್ವಜಗಳು ಮತ್ತು ಅಲಂಕಾರಗಳಿಗೆ ಸಾಕ್ಷಿಯಾಗಲಿವೆ ಎಂದು ಅವರು ಮಾಹಿತಿ ನೀಡಿದರು. ದೆಹಲಿ ಹಲವಾರು ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಸಾಕ್ಷಿಯಾಗಲಿದೆ, ಜಾನಪದ ನೃತ್ಯಗಾರರು ಮತ್ತು ಗಾಯಕರು ವೃಂದಾವನ ಮತ್ತು ಜೈಪುರದಿಂದ ಅನೇಕ ಮಾರುಕಟ್ಟೆಗಳಲ್ಲಿ ಪ್ರದರ್ಶನಗಳಿಗಾಗಿ ಬರುತ್ತಾರೆ ಎಂದು ಅವರು ಹೇಳಿದರು.

ಮಂದಿರ ಉದ್ಘಾಟನೆಯ ಧಾರ್ಮಿಕ ಕಾರ್ಯಕ್ರಮಗಳು ಶುರು; ಏನೇನು ವಿಧಿವಿಧಾನ?

ಜನವರಿ 16
ದೇವಸ್ಥಾನದ ಟ್ರಸ್ಟ್ ನೇಮಿಸಿದ ಆತಿಥೇಯರಿಂದ ಸರಯೂ ನದಿಯ ದಡದಲ್ಲಿ ದಶವಿದ್ ಸ್ನಾನ, ವಿಷ್ಣು ಪೂಜೆ ಮತ್ತು ಗೋದಾನ.

ಜನವರಿ 17
ರಾಮಲಲ್ಲಾ ಮೂರ್ತಿಯೊಂದಿಗೆ ಅಯೋಧ್ಯೆಯಲ್ಲಿ ಮೆರವಣಿಗೆ ನಡೆಯಲಿದ್ದು, ಭಕ್ತರು ಮಂಗಲ ಕಲಶದಲ್ಲಿ ಸರಯು ಜಲವನ್ನು ಹೊತ್ತು ದೇವಸ್ಥಾನಕ್ಕೆ ಬರಲಿದ್ದಾರೆ.

ಜನವರಿ 18
ಗಣೇಶ ಅಂಬಿಕಾ ಪೂಜೆಗಳೊಂದಿಗೆ ಔಪಚಾರಿಕ ಪೂಜಾ ವಿಧಿ ವಿಧಾನಗಳು ಶುರುವಾಗಲಿವೆ. ವರುಣ ಪೂಜೆ, ಮತ್ರಿಕಾ ಪೂಜೆ, ಬ್ರಾಹ್ಮಿಣ್ ವರನ್, ವಾಸ್ತು ಪೂಜೆ ಸೇರಿದಂತೆ ವಿವಿಧ ಪೂಜೆ ಕಾರ್ಯಕ್ರಮಗಳು ನಡೆಯಲಿವೆ.

ಜನವರಿ 19
ಅಗ್ನಿ ಸ್ಥಾಪನೆ, ನವಗ್ರಹ ಸ್ಥಾಪನೆ ಮತ್ತು ಹವನ ಪೂಜಾ ಕಾರ್ಯಕ್ರಮಗಳು ನಡೆಯಲಿವೆ.

ಜನವರಿ 20
ದೇವಾಲಯದ ಗರ್ಭಗುಡಿಯನ್ನು ಸರಯುವಿನ ಪವಿತ್ರ ನೀರಿನಿಂದ ತೊಳೆದ ನಂತರ ವಾಸ್ತು ಶಾಂತಿ ಪೂಜಾ ವಿಧಿವಿಧಾನಗಳು ನಡೆಯಲಿವೆ.

ಜನವರಿ 21
125 ಕಲಶಗಳಿರುವ ದೈವ ಸ್ನಾನದ ನಂತರ ಶಯಾಧಿವಾಸ ನಡೆಯಲಿದೆ.

ಜನವರಿ 22
ಬೆಳಗಿನ ಪೂಜೆಯ ನಂತರ ಮಧ್ಯಾಹ್ನ ಮೃಗಶಿರ ನಕ್ಷತ್ರದಲ್ಲಿ ರಾಮಲಲ್ಲಾ ದೇವರ ಪ್ರತಿಷ್ಠಾಪನೆ ನಡೆಯಲಿದೆ.

Exit mobile version