Site icon Vistara News

Solar Eclipse 2022 | ಗೋಕರ್ಣ ಮಹಾಬಲೇಶ್ವರ ದೇಗುಲದಲ್ಲಿ ಆತ್ಮಲಿಂಗ ಸ್ಪರ್ಶ, ದರ್ಶನಕ್ಕೆ ಅವಕಾಶ

gokarna temple

ಕಾರವಾರ: ಮಂಗಳವಾರ (ಅ.೨೫) 27 ವರ್ಷಗಳ ಬಳಿಕ ಬಂದಿರುವ ಕೇತುಗ್ರಸ್ತ ಸೂರ್ಯಗ್ರಹಣ (Solar Eclipse 2022) ಹಿನ್ನೆಲೆಯಲ್ಲಿ ಉತ್ತರ ಕನ್ನಡ ಜಿಲ್ಲೆಯ ಗೋಕರ್ಣ ಮಹಾಬಲೇಶ್ವರ ದೇವಸ್ಥಾನದಲ್ಲಿ ಮಂಗಳವಾರ ಅ. ೨೫ ಗ್ರಹಣ ಕಾಲದಲ್ಲೂ ಆತ್ಮಲಿಂಗ ದರ್ಶನ ಮತ್ತು ಸ್ಪರ್ಶಸಹಿತ ಪೂಜೆಗೆ ಅವಕಾಶ ಕಲ್ಪಿಸಲಾಗಿದೆ. ಆದರೆ, ಇದಕ್ಕೆ ಸಮಯವನ್ನು ನಿಗದಿ ಮಾಡಲಾಗಿದೆ.

ಕುಮಟಾ ತಾಲೂಕಿನ ಗೋಕರ್ಣದ ಮಹಾಬಲೇಶ್ವರ ದೇವಸ್ಥಾನದಲ್ಲಿ ಅಂದು ಬೆಳಗ್ಗೆಯಿಂದಲೂ ದೇವಸ್ಥಾನದಲ್ಲಿ ಸ್ವಚ್ಛತೆ, ಪೂಜೆ ಸಹಿತ ವಿವಿಧ ಧಾರ್ಮಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಗ್ರಹಣದ ಮಧ್ಯ ಕಾಲದಿಂದ ಮುಕ್ತಾಯದವರೆಗೆ ಭಕ್ತರಿಗೆ ವಿಶೇಷ ಅವಕಾಶವನ್ನು ದೇವಸ್ಥಾನದ ಆಡಳಿತ ಮಂಡಳಿಯವರು ಕಲ್ಪಿಸಿದ್ದಾರೆ. ಈ ಬಗ್ಗೆ ದೇವಸ್ಥಾನದಲ್ಲಿ ಪ್ರಕಟಣೆಯನ್ನೂ ಹೊರಡಿಸಲಾಗಿದೆ.

ಮುಂಜಾನೆಯಿಂದ ಪ್ರವೇಶ
ಮುಂಜಾನೆ 6:30ರಿಂದ 9:30ರ ವರಗೆ ಭಕ್ತರಿಗೆ ಅವಕಾಶ ಕಲ್ಪಿಸಲಾಗಿದ್ದು, ಈ ವೇಳೆ ಭಕ್ತರು ಬಂದು ಮಹಾಬಲೇಶ್ವರ ದೇವರ ದರ್ಶವನ್ನು ಪಡೆದುಕೊಳ್ಳಬಹುದಾಗಿದೆ. ಪೂಜೆಗಳಲ್ಲಿ ಭಾಗಿಯಾಗಬಹುದಾಗಿದೆ. ನಂತರ 9:30ರಿಂದ ಮಧ್ಯಾಹ್ನ 4 ಗಂಟೆವರೆಗೆ ದರ್ಶಕ್ಕೆ ಭಕ್ತರಿಗೆ ಪ್ರವೇಶ ನಿರ್ಬಂಧ ಮಾಡಲಾಗಿದೆ.

ಆತ್ಮಲಿಂಗ ದರ್ಶನ, ಸ್ಪರ್ಶಕ್ಕೆ ಅವಕಾಶ
ಗ್ರಹಣದ ಮಧ್ಯಕಾಲ ಅಂದರೆ, ಸಂಜೆ 4ರಿಂದ 6 ಗಂಟೆವರಗೆ ಆತ್ಮಲಿಂಗ ದರ್ಶನ ಮತ್ತು ಸ್ಪರ್ಶಕ್ಕೆ ಭಕ್ತರಿಗೆ ಅವಕಾಶ ಕಲ್ಪಿಸಲಾಗಿದೆ. ಇದರ ಸದುಪಯೋಗವನ್ನು ಭಕ್ತರು ಪಡೆದುಕೊಳ್ಳಬಹುದಾಗಿದೆ. ಗ್ರಹಣ ಹಿನ್ನೆಲೆಯಲ್ಲಿ ಮಧ್ಯಾಹ್ನದ ಅಮೃತಾನ್ನ ಪ್ರಸಾದ ಮತ್ತು ರಾತ್ರಿ ಪ್ರಸಾದ ಭೋಜನದ ವ್ಯವಸ್ಥೆ ಇರುವುದಿಲ್ಲ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಇದನ್ನೂ ಓದಿ | Solar Eclipse 2022 | ಗ್ರಹಣದ ಸಂದರ್ಭದಲ್ಲಿ ಸೂರ್ಯನನ್ನು ಕೇತು ನುಂಗುತ್ತಾನಾ? ಈ ಪುರಾಣ ಕಥೆ ಓದಿ

Exit mobile version