Site icon Vistara News

varamahalakshmi festival : ವರಮಹಾಲಕ್ಷ್ಮಿ ಹಬ್ಬಕ್ಕೆ ದುಬಾರಿಯಾಯ್ತು ಹೂವು, ಹಣ್ಣಿನ ದರ

Flowers in Market

ಬೆಂಗಳೂರು: ರಾಜ್ಯಾದ್ಯಂತ ವರಮಹಾಲಕ್ಷ್ಮಿ ಹಬ್ಬವನ್ನು (varamahalakshmi festival) ಅದ್ಧೂರಿಯಾಗಿ ಆಚರಿಸಲು ಜನರು ಸಿದ್ಧತೆ ನಡೆಸುತ್ತಿದ್ದಾರೆ. ಇದರ ನಡುವೆ ಹಬ್ಬಕ್ಕೆ ಅತ್ಯಂತ ಪ್ರಮುಖವಾಗಿರುವ ಹೂವು ಮತ್ತು ಹಣ್ಣಿನ ದರಗಳು ಹೆಚ್ಚಾಗಿವೆ. ಬೆಂಗಳೂರಿನ ಕೆ.ಆರ್‌. ಮಾರ್ಕೆಟ್‌ (KR Market) ಸೇರಿದಂತೆ ಎಲ್ಲ ಕಡೆ ಹೂವು-ಹಣ್ಣುಗಳ (Flowers and Fruits) ಖರೀದಿ ಭರಾಟೆ ಜೋರಾಗಿದೆ. ರಾಜ್ಯದ ಇತರ ಭಾಗಗಳಲ್ಲೂ ಗುರುವಾರ ಬೆಳಗ್ಗಿನಿಂದಲೇ ಜನರು ಖರೀದಿಯಲ್ಲಿ ತೊಡಗಿದ್ದಾರೆ.

ಸಂಜೆಯ ಹೊತ್ತಿಗೆ ಬೆಲೆ ಏರಬಹುದು ಎಂಬ ಸಂಶಯದಲ್ಲಿ ಬೆಳಗ್ಗೆಯೇ ಬಂದು ಖರೀದಿ ಮಾಡಿದವರಿಗೂ ಬೆಲೆ ಏರಿಕೆ ಬಿಸಿ ತಟ್ಟಿದೆ. ನಿಜವೆಂದರೆ ಬುಧವಾರದಿಂದಲೇ ಹೂವು, ಹಣ್ಣುಗಳ ಬೆಲೆ ಗಗನಕ್ಕೇರಿದೆ. ರೇಟು ಹೆಚ್ಚಾದರೂ ಖರೀದಿ ಮಾಡದೆ ಇರುವುದಕ್ಕಾಗುತ್ತದೆಯೇ ಎಂದು ಕೇಳುವ ಜನ ಕೊಳ್ಳುವ ಪ್ರಮಾಣದಲ್ಲಿ ಕಡಿಮೆ ಮಾಡುತ್ತಿದ್ದಾರೆ.

ಹೂವುಗಳಲ್ಲಿ ಕನಕಾಂಬರ ಮತ್ತು ಹಣ್ಣುಗಳಲ್ಲಿ ಬಾಳೆ ಹಣ್ಣು ಹೆಚ್ಚು ದುಬಾರಿಯಾಗಿವೆ. ಕನಕಾಂಬ ಒಂದು ಕೆಜಿಗೆ 1500 ರೂ. ಆಗಿದ್ದರೆ, ಏಲಕ್ಕಿ ಬಾಳೆ ಹಣ್ಣಿನ ದರ 140ನ್ನೂ ಮೀರಿಸಿದೆ.

ಭಾರವಾದ ಹೂವು

-ಕನಕಾಂಬರ- ಕೆಜಿಗೆ 1,200 ರಿಂದ 1,500
-ಮಲ್ಲಿಗೆ ಕೆಜಿಗೆ 600ರಿಂದ 800 ರೂ.
-ಗುಲಾಬಿ-150 ರಿಂದ 200 ರೂ.
-ಚಿಕ್ಕ ಹೂವಿನ ಹಾರ-150ರಿಂದ 200 ರೂ.
-ದೊಡ್ಡ ಹೂವಿನ ಹಾರ-300 ರಿಂದ 500 ರೂ.
-ಸೇವಂತಿಗೆ-250 ರಿಂದ 300 ರೂ.
-ತಾವರೆ ಹೂ-ಜೋಡಿ-50 ರಿಂದ 100 ರೂ.

ಹಣ್ಣುಗಳ ಬೆಲೆಯೂ ಗಗನಕ್ಕೆ

-ಏಲಕ್ಕಿ ಬಾಳೆ-120 ರಿಂದ 150 ರೂ.
-ಸೀಬೆ-120 ರೂ.
-ಸೇಬು-200-300 ರೂ.
-ಕಿತ್ತಲೆ-150 ರಿಂದ 200 ರೂ.
-ದ್ರಾಕ್ಷಿ-180-200 ರೂ.
-ಪೈನಾಪಲ್-80/1pc ರೂ.
-ದಾಳಿಂಬೆ-150-200 ರೂ.

ಉಳಿದ ಸಾಮಗ್ರಿಗಳೂ ದುಬಾರಿನೇ

-ಬಾಳೆ ಕಂಬ -ಜೋಡಿಗೆ-50 ರೂ.
-ಮಾವಿನ ತೋರಣ-20 ರೂ.
-ವೀಳ್ಯದೆಲೆ-100 ಕ್ಕೆ 150 ರೂ.
-ತೆಂಗಿನಕಾಯಿ-5ಕ್ಕೆ 100 ರೂ.

ಇರುವುದರಲ್ಲಿ ತರಕಾರಿಯೇ ಅಗ್ಗ!

ನಿಜವೆಂದರೆ, ಈ ಹಬ್ಬದ ಹೊತ್ತಿನಲ್ಲಿ ಎಲ್ಲವೂ ದುಬಾರಿಯಾಗಿದ್ದರೂ ಇರುವುದರಲ್ಲಿ ತರಕಾರಿಯೇ ಸ್ವಲ್ಪ ಅಗ್ಗವಾಗಿದೆ. ಕೆಲವು ವಾರಗಳ ಹಿಂದೆ 40 ರೂ.ಯ ಒಳಗೆ ಯಾವ ತರಕಾರಿಯೂ ಸಿಗುತ್ತಿರಲಿಲ್ಲ. ಈಗ ಕ್ಯಾರೇಟ್‌, ಕ್ಯಾಪ್ಸಿಕಂ ಮತ್ತಿತರ ಕೆಲವು ತರಕಾರಿ ಬಿಟ್ಟರೆ ಉಳಿದವುಗಳ ಬೆಲೆ 50 ರೂ.ಯ ಒಳಗೇ ಇವೆ.

ಇದನ್ನೂ ಓದಿ : Varamahalaxmi Festival: ರೆಡಿಮೇಡ್‌ ವರಮಹಾಲಕ್ಷ್ಮಿ ಅಲಂಕಾರಿಕ ಸಾಮಗ್ರಿಗಳು ಮಾರುಕಟ್ಟೆಗೆ ಎಂಟ್ರಿ

ಚಿಕ್ಕಬಳ್ಳಾಪುರದಲ್ಲಿ ಹೂವು ಖರೀದಿಗೆ ಮುಗಿಬಿದ್ದ ಜನರು

ವರಮಹಾಲಕ್ಷ್ಮಿ ಹಬ್ಬದ ನಿಮಿತ್ತ ಚಿಕ್ಕಬಳ್ಳಾಪುರದಲ್ಲಿ ಹೂವಿನ ವ್ಯಾಪಾರ ಜೋರಾಗಿದೆ. ಬೆಲೆ ಗಗನಕ್ಕೇರಿದ್ದರೂ ಜನರ ಉತ್ಸಾಹ ಕಡಿಮೆಯಾಗಿಲ್ಲ. ಹೂ ಖರೀದಿಸಲು ಮುಗಿಬಿದ್ದ ಸಾರ್ವಜನಿಕರಿಂದಾಗಿ ಚಿಕ್ಕಳ್ಳಾಪುರದಿಂದ ಬೆಂಗಳೂರಿಗೆ ಹೋಗುವ ಮುಖ್ಯ ರಸ್ತೆಯಲ್ಲೇ ಟ್ರಾಫಿಕ್ ಜಾಮ್ ಉಂಟಾಗಿದೆ. ಚಿಕ್ಕಬಳ್ಳಾಪುರ ನಗರದ ಸೋಲಾಲಪ್ಪನ ದಿನ್ನೆಯಲ್ಲಿರುವ ಹೂ ಮಾರುಕಟ್ಟೆಯಲ್ಲಿ ಜನ ಸಾಗರವೇ ನೆರೆದಿದೆ.

Exit mobile version