Site icon Vistara News

Vastu Tips : ಕಚೇರಿಯ ವಾಸ್ತು ಹೀಗಿದ್ದರೆ ಯಶಸ್ಸು ಖಚಿತವಂತೆ!

Vastu Tips Office Vastu Directions and useful tips to bring prosperity at work

ವಾಸ್ತು ಸಲಹೆ

ವಾಸ್ತು ಶಾಸ್ತ್ರ ಕೇವಲ ಮನೆಗಷ್ಟೇ ಸೀಮಿತವಲ್ಲ. ನೀವು ಕೆಲಸ ಮಾಡುವ ಕಚೇರಿ, ಓದುವ ಶಾಲೆ- ಕಾಲೇಜು, ವ್ಯಾಪಾರದ ಸ್ಥಳ ಹೀಗೆ ಎಲ್ಲ ಕಡೆಗಳಲ್ಲೂ ಈ ಶಾಸ್ತ್ರಕ್ಕೆ ಮಹತ್ವವಿದೆ. ನೀವಿರುವ ಕಡೆ ವಾಸ್ತು ಸರಿಯಾಗಿದ್ದರಷ್ಟೇ, ನಿಮ್ಮ ಕೆಲಸಗಳಲ್ಲಿ ಯಶಸ್ಸು ಸಾಧಿಸಬಹುದು (Vastu Tips), ನಿಮ್ಮ ಆರ್ಥಿಕ ಸ್ಥಿತಿ ಉತ್ತಮವಾಗಿರುತ್ತದೆ.

ಮನೆಯಲ್ಲಿ ತೊಂದರೆ ತಾಪತ್ರಯಗಳಾದಾಗ ತಕ್ಷಣವೇ ಜ್ಯೋತಿಷ್ಯ ಅಥವಾ ವಾಸ್ತು ತಜ್ಞರನ್ನು ಸಂಪರ್ಕಿಸುತ್ತೇವೆ. ಹಾಗೆಯೇ ವ್ಯವಹಾರಗಳಲ್ಲಿ, ವ್ಯಾಪಾರದಲ್ಲಿ ತೊಂದರೆಗಳಾದರೆ, ಕಚೇರಿಯಲ್ಲಿ ಸಮಸ್ಯೆಗಳು ಎದುರಾಗುತ್ತಿದ್ದರೆ ಅದಕ್ಕೆ ವಾಸ್ತು ದೋಷವು ಕಾರಣವಾಗಿರಬಹುದು. ಹಾಗಾಗಿ ಕಚೇರಿ ನಿರ್ಮಾಣದ ವೇಳೆ ವಾಸ್ತು ಪ್ರಕಾರ ನಿರ್ಮಾಣ ಮಾಡಿದರೆ ಉತ್ತಮ.

ಕಚೇರಿಯ ವಾಸ್ತು ಬಗ್ಗೆ ತಿಳಿದುಕೊಂಡಲ್ಲಿ ನಿಮ್ಮ ಕಚೇರಿಯನ್ನು ಅದಕ್ಕೆ ತಕ್ಕಂತೆ ಬದಲಾಯಿಸಿಕೊಳ್ಳಬಹುದು ಅಥವಾ ಮರು ನಿರ್ಮಿಸಬಹುದು. ಕಚೇರಿಗೆ ಸಂಬಂಧಿಸಿದ ವಾಸ್ತುವಿನ ಕುರಿತು ವಾಸ್ತು ತಜ್ಞರು ಏನು ಹೇಳುತ್ತಾರೆ ನೋಡೋಣ;

ಕಚೇರಿ ಮುಖ್ಯದ್ವಾರ ಯಾವ ದಿಕ್ಕಿನಲ್ಲಿರಬೇಕು?

ವಾಸ್ತು ಶಾಸ್ತ್ರದ ಅನುಸಾರ ಕಚೇರಿಯ ಮುಖ್ಯ ದ್ವಾರ ಪೂರ್ವ ಅಥವಾ ಉತ್ತರ ದಿಕ್ಕಿಗಿದ್ದರೆ ಉತ್ತಮ. ಜೊತೆಗೆ ಕಚೇರಿಯಲ್ಲಿ ಹಣಕಾಸಿಗೆ ಸಂಬಂಧಿಸಿದ ಕೆಲಸಗಳನ್ನು ಮಾಡುವವರು ಆದಷ್ಟು ಉತ್ತರ ದಿಕ್ಕಿಗೆ ಕುಳಿತುಕೊಂಡರೆ ಉತ್ತಮ. ಉತ್ತರ ದಿಕ್ಕಿಗೆ ಸಂಪತ್ತಿನ ಒಡೆಯ ಕುಬೇರ ದೇವರ ಕೃಪೆ ಇರುತ್ತದೆ.

ಕಚೇರಿಯಲ್ಲಿ ಮುಖ್ಯಸ್ಥರು ಕುಳಿತುಕೊಳ್ಳುವ ಸ್ಥಳದ ಹಿಂದೆ ಕಿಟಕಿ ಇರುವುದು ಒಳ್ಳೆಯದಲ್ಲ. ಗೋಡೆಯಷ್ಟೆ ಇದ್ದು ಎದುರಿಗೆ ಕಿಟಕಿ ಇದ್ದರೆ ಉತ್ತಮ. ಗೋಡೆಗೆ ಹಸಿರಿನಿಂದ ಕಂಗೊಳಿಸುವ ಪೇಂಟಿಂಗ್‌ಗಳನ್ನು ಹಾಕಿಕೊಳ್ಳಬಹುದಾಗಿದೆ.
ಕಂಪ್ಯೂಟರ್ ಈ ದಿಕ್ಕಿನಲ್ಲಿರಲಿ.

ಕಚೇರಿಯಲ್ಲಿ ಕಂಪ್ಯೂಟರ್ ಮತ್ತು ಇತರೇ ಎಲೆಕ್ಟ್ರಾನಿಕ್ ಉಪಕರಣಗಳನ್ನು ಆಗ್ನೇಯ ದಿಕ್ಕಿನಲ್ಲಿ ಇಟ್ಟುಕೊಳ್ಳಬೇಕು. ಇದು ಅಗ್ನಿದೇವನ ದಿಕ್ಕಾಗಿರುವುದರಿಂದ ಈ ವಸ್ತುಗಳಿಗೆ ಅಗ್ನಿ ಮೂಲೆ ಸೂಕ್ತವಾಗಿರುತ್ತದೆ.

ವೇಯಿಂಟ್ ಅಥವಾ ಮೀಟಿಂಗ್ ರೂಮ್ ಇದ್ದಲ್ಲಿ ಅದನ್ನು ವಾಯುವ್ಯ ದಿಕ್ಕಿಗೆ ಮಾಡಿದರೆ ಉತ್ತಮ. ವಾಸ್ತು ಪ್ರಕಾರ ವಾಯುವ್ಯ ದಿಕ್ಕು ಶುಭವೆಂದು ಹೇಳಲಾಗುತ್ತದೆ.

ವಾಸ್ತು ಶಾಸ್ತ್ರದ ಪ್ರಕಾರ ಒಂದು ಟೇಬಲ್‌ನಲ್ಲಿ ಒಬ್ಬ ಅಧಿಕಾರಿ ಮಾತ್ರ ಕುಳಿತುಕೊಳ್ಳಬೇಕು. ಒಂದಕ್ಕಿಂತ ಹೆಚ್ಚು ಜನರು ಕುಳಿತುಕೊಂಡಲ್ಲಿ ಕೆಲಸದ ಒತ್ತಡ ಹೆಚ್ಚುತ್ತದೆ.

Office Vastu Directions and useful tips to bring prosperity at work

ಕಚೇರಿಯಲ್ಲಿ ಕುಳಿತುಕೊಳ್ಳುವವರು ಮುಖ್ಯ ದ್ವಾರಕ್ಕೆ ಬೆನ್ನು ಹಾಕಿ ಕುಳಿತುಕೊಳ್ಳುವುದು ಅಶುಭ.

ಕಚೇರಿಯ ಅಡುಗೆ ಮನೆ ಅಥವಾ ಕ್ಯಾಂಟೀನ್ ಆಗ್ನೇಯ ದಿಕ್ಕಿಗಿದ್ದರೆ ಶುಭ.

ಕಚೇರಿಯ ಬಾತ್‌ರೂಮ್ ಈಶಾನ್ಯ ಮೂಲೆಯಲ್ಲಿ ಇರುವುದು ಒಳ್ಳೆಯದಲ್ಲ. ವಾಸ್ತುವಿನಲ್ಲಿ ಈ ದಿಕ್ಕನ್ನು ಅತ್ಯಂತ ಶುಭವೆಂದು ಪರಿಗಣಿಸಲಾಗುತ್ತದೆ.

ಕಚೇರಿಯ ಗೋಡೆ, ಕರ್ಟನ್, ಟೇಬಲ್‌ಗಳು ತಿಳಿ ಬಣ್ಣದ್ದಾಗಿದ್ದರೆ ಉತ್ತಮ.

ಕಚೇರಿಯಲ್ಲಿ ಹಿಂಸೆಯನ್ನು ಬಿಂಬಿಸುವ ಪಶು-ಪಕ್ಷಿಗಳು, ಅಳುತ್ತಿರುವ ದೃಶ್ಯ, ಮುಳುಗುತ್ತಿರುವ ಹಡಗು ಇತ್ಯಾದಿ ಪೇಂಟಿಂಗ್‌ಗಳನ್ನು ಇಟ್ಟುಕೊಳ್ಳಬಾರದು. ಇದರಿಂದ ಕಚೇರಿಯಲ್ಲಿ ನೆಗೆಟಿವ್ ಎನರ್ಜಿ ಹೆಚ್ಚುತ್ತದೆ.

ನಗುತ್ತಿರುವ ಮಗು, ಮಹಾ ಪುರುಷರ ಚಿತ್ರಗಳು, ಹರಿಯುತ್ತಿರುವ ನೀರು ಇತ್ಯಾದಿ ಪೇಂಟಿಂಗ್‌ಗಳನ್ನು ಇಟ್ಟುಕೊಳ್ಳುವುದು ಶುಭ. ಇದರಿಂದ ಕಚೇರಿಯಲ್ಲಿ ಪಾಸಿಟಿವ್ ಎನರ್ಜಿ ಹೆಚ್ಚುತ್ತದೆ.

ಕಚೇರಿಯಲ್ಲಿ ಕೆಲಸಕ್ಕೆ ಉಪಯೋಗವಾಗುವ ಫ್ಯಾಕ್ಸ್, ಕಂಪ್ಯೂಟರ್, ಗಡಿಯಾರ, ಸ್ಕ್ಯಾನರ್, ಪ್ರಿಂಟರ್ ಇತ್ಯಾದಿ ಉಪಕರಣಗಳನ್ನು ಸ್ವಚ್ಛವಾಗಿಟ್ಟುಕೊಳ್ಳಬೇಕು.

ಕಚೇರಿಯ ಸ್ವಚ್ಛತೆಯು ಮುಖ್ಯ

ಕಚೇರಿಯು ಸ್ವಚ್ಛವಾಗಿದ್ದರೆ ಪಾಸಿಟಿವ್ ಎನರ್ಜಿ ಇರುತ್ತದೆ. ಇದರಿಂದ ಕೆಲಸದಲ್ಲಿ ಆಸಕ್ತಿ ಹೆಚ್ಚುತ್ತದೆ. ಕಚೇರಿಯ ಟೇಬಲ್ ಅಥವಾ ಕಬೋರ್ಡ್‌ಗಳಲ್ಲಿ ಅಗತ್ಯವಿರುವ ವಸ್ತುಗಳನ್ನು ಮಾತ್ರ ಇಟ್ಟುಕೊಳ್ಳಬೇಕು. ಅದನ್ನು ಕೂಡಾ ಸ್ವಚ್ಛವಾಗಿಟ್ಟುಕೊಳ್ಳಬೇಕು.

ಕಚೇರಿಯ ಗಡಿಯಾರ ಸದಾ ಪೂರ್ವ ಅಥವಾ ಉತ್ತರ ದಿಕ್ಕಿಗೆ ಇರಬೇಕು. ಇದು ಸಕಾರಾತ್ಮಕತೆಯ ಸ್ಥಾನವಾದ್ದರಿಂದ ಸಮಯವನ್ನು ತೋರಿಸುವ ಗಡಿಯಾರ ಇದೇ ದಿಕ್ಕಿನಲ್ಲಿರಬೇಕು. ಕಚೇರಿಯ ಈಶಾನ್ಯ ಕೋಣೆಯಲ್ಲಿ ದೇವರ ಮೂರ್ತಿಗಳನ್ನು ಇಟ್ಟುಕೊಳ್ಳಬಹುದು.

ಇದನ್ನೂ ಓದಿ : Vastu Tips : ಆರ್ಥಿಕ ಲಾಭ ಪಡೆಯಲು ಮನೆಯ ಉತ್ತರ ದಿಕ್ಕಿನಲ್ಲಿ ಹೀಗೆ ಮಾಡಿ!

Exit mobile version