Site icon Vistara News

Vastu Tips: ನೆಲ ಒರೆಸುವಾಗಲೂ ವಾಸ್ತು ನಿಯಮ ಪಾಲಿಸಲೇಬೇಕು!

Vastu Tips

ಮನೆಯ (home) ಒಳಾಂಗಣ, ಹೊರಾಂಗಣ ಸ್ವಚ್ಛತೆ (cleaning) ಬಗ್ಗೆ ನಾವೆಲ್ಲ ಅತೀ ಹೆಚ್ಚು ಕಾಳಜಿ ವಹಿಸುತ್ತೇವೆ. ಆದರೆ ಇದರಲ್ಲೂ ವಾಸ್ತು ನಿಯಮ (Vastu Tips) ಪಾಲಿಸುವುದು ಬಹು ಮುಖ್ಯ ಎಂಬುದನ್ನು ಮರೆಯಬಾರದು. ಮನೆಯಲ್ಲಿ ಸುಖ, ಶಾಂತಿ, ನೆಮ್ಮದಿ ಇರಬೇಕಾದರೆ ಮನೆಯಿಂದ ಕಸ (garbage) ಹೊರಗೆ ಹಾಕುವ, ಕೊಳಕು ನೀರು ಹೊರ ಚೆಲ್ಲುವ ಬಗ್ಗೆಯೂ ವಾಸ್ತು ಶಾಸ್ತ್ರದಲ್ಲಿ ನಿಯಮಗಳಿವೆ. ಇದನ್ನು ಪಾಲಿಸಿದರೆ ಮನೆಯ ವಾಸ್ತುವಿಗೆ ಬಹಳ ಒಳ್ಳೆಯದು.

ಲಕ್ಷ್ಮಿ ದೇವಿಯು ಯಾವಾಗಲೂ ಸ್ವಚ್ಛವಾಗಿರುವ ಮನೆಗಳಲ್ಲಿ ನೆಲೆಸುತ್ತಾಳೆ. ಮನೆಯನ್ನು ಸ್ವಚ್ಛಗೊಳಿಸುವುದು ಮತ್ತು ಒರೆಸುವುದು ನಿತ್ಯ ಮಾಡಲೇಬೇಕಾದ ಸಾಮಾನ್ಯ ವಿಷಯ. ಮನೆಯ ಕೊಳೆಯನ್ನು ನಿತ್ಯ ಶುಚಿಗೊಳಿಸುವುದರಿಂದ ಮನೆಯಿಂದ ರೋಗಗಳನ್ನು ದೂರ ಮಾಡಬಹುದು ಮತ್ತು ಲಕ್ಷ್ಮಿ ದೇವಿಯು ಮನೆಯಲ್ಲಿ ಸಂತೋಷವಾಗಿ ನೆಲೆಯಾಗುವಂತೆ ಮಾಡಬಹುದು. ವಾಸ್ತು ಶಾಸ್ತ್ರದಲ್ಲಿ ನೆಲ ಒರೆಸುವ ಕೆಲವು ನಿಯಮಗಳನ್ನು ಉಲ್ಲೇಖಿಸಲಾಗಿದೆ. ಮನೆಯ ಸ್ವಚ್ಛತೆ ಮಾಡುವ ನೆಲ ಒರೆಸುವಾಗ ಕೆಲವು ತಪ್ಪುಗಳನ್ನು ಅಪ್ಪಿತಪ್ಪಿಯೂ ಮಾಡಬಾರದು.


ಮಾಪ್ ಅನ್ನು ಬಾಲ್ಕನಿಯಲ್ಲಿ ಇಡಬೇಡಿ

ಮನೆಯ ಬಾಲ್ಕನಿಯಲ್ಲಿ ಮಾಪ್ ಅನ್ನು ಎಂದಿಗೂ ನಿಲ್ಲಿಸಬಾರದು. ಮಾಪ್ ಮಾಡುವಾಗ ಬಟ್ಟೆಯನ್ನು ಹಿಸುಕಿ ಮತ್ತು ಸರಿಯಾದ ಸ್ಥಳದಲ್ಲಿ ಇರಿಸಿ. ಇದನ್ನು ಮಾಡದಿದ್ದರೆ, ಭಾರೀ ನಷ್ಟವನ್ನು ಅನುಭವಿಸಬೇಕಾಗಬಹುದು.

ತಕ್ಷಣ ಮಾಪ್ ಮಾಡಬಾರದು

ಮನೆಯಿಂದ ಯಾರಾದರೂ ಹೊರಗೆ ಹೋಗುತ್ತಿದ್ದರೆ ಅವರು ಹೋದ ತಕ್ಷಣ ನೆಲವನ್ನು ಒರೆಸಬಾರದು. ಹೀಗೆ ಮಾಡುವುದರಿಂದ ಹೊರಗೆ ಹೋದವರ ಆರೋಗ್ಯ ಕೆಡುತ್ತದೆ. ಅವರು ತಮ್ಮ ಕೆಲಸ ಅಥವಾ ವ್ಯವಹಾರದಲ್ಲಿ ತೊಂದರೆಗಳನ್ನು ಎದುರಿಸಬೇಕಾಗಬಹುದು.

ಮುರಿದ ಬಕೆಟ್ ಬಳಸದಿರಿ

ಜ್ಯೋತಿಷ್ಯಶಾಸ್ತ್ರದ ಪ್ರಕಾರ ನೆಲವನ್ನು ಒರೆಸುವಾಗ ತಪ್ಪಾಗಿಯೂ ಮುರಿದ ಬಕೆಟ್‌ನಲ್ಲಿ ನೆಲವನ್ನು ಒರೆಸದಂತೆ ವಿಶೇಷ ಕಾಳಜಿ ವಹಿಸಿ. ಮುರಿದ ಬಕೆಟ್ ಕೆಂಪು ಬಣ್ಣದಲ್ಲಿರಬಾರದು. ಅಪ್ಪಿತಪ್ಪಿಯೂ ಮಧ್ಯಾಹ್ನ ನೆಲವನ್ನು ಒರೆಸಬಾರದು. ಬೆಳಗ್ಗೆ ನೆಲವನ್ನು ಒರೆಸುವುದು ಸರಿಯಾದ ಸಮಯ ಎಂದು ಪರಿಗಣಿಸಲಾಗಿದೆ.

ಇದನ್ನು ಓದಿ Vastu Tips: ಮನೆಯಲ್ಲಿ ಚಪ್ಪಲಿ, ಶೂ ಎಲ್ಲೆಂದರಲ್ಲಿ ಇಟ್ಟು ಸಂಕಷ್ಟ ಮೈಮೇಲೆ ಎಳೆದುಕೊಳ್ಳಬೇಡಿ!

ಹೊಸ್ತಿಲಲ್ಲಿ ನೀರು ಸುರಿಯಬಾರದು

ಹೆಚ್ಚಿನ ಜನರು ಇದನ್ನು ಮಾಡುತ್ತಾರೆ. ನೆಲವನ್ನು ಒರೆಸಿದ ಅನಂತರ ಅವರು ಹೊಸ್ತಿಲಲ್ಲಿ ಕೊಳಕು ನೀರನ್ನು ಸುರಿಯುತ್ತಾರೆ. ಆದರೆ ಇದನ್ನು ಮಾಡುವುದು ತುಂಬಾ ಅಶುಭವೆಂದು ಪರಿಗಣಿಸಲಾಗಿದೆ. ವಾಸ್ತವವಾಗಿ, ಮನೆಯ ಹೊಸ್ತಿಲನ್ನು ಲಕ್ಷ್ಮಿ ದೇವಿಯ ಪ್ರವೇಶ ಎಂದು ಪರಿಗಣಿಸಲಾಗುತ್ತದೆ. ಅಲ್ಲಿ ಕೊಳಕು ನೀರನ್ನು ಸುರಿದರೆ ಲಕ್ಷ್ಮಿ ದೇವಿಗೆ ಅವಮಾನ ಮಾಡಿದಂತೆ. ಇದರಿಂದ ಲಕ್ಷ್ಮಿ ದೇವಿಯು ನಿಮ್ಮ ಮೇಲೆ ಕೋಪಗೊಳ್ಳಬಹುದು.

Exit mobile version