1. ನಾನೂ ಕರ ಸೇವಕ, ನನ್ನನ್ನೂ ಬಂಧಿಸಿ; ಬಿಜೆಪಿಯಿಂದ ಹೋರಾಟ ತೀವ್ರ
ಹುಬ್ಬಳ್ಳಿಯಲ್ಲಿ ನಡೆದ ಗಲಭೆ ಪ್ರಕರಣಕ್ಕೆ ಸಂಬಂಧಿಸಿ 31 ವರ್ಷಗಳ ಬಳಿಕ ಶ್ರೀಕಾಂತ್ ಪೂಜಾರಿ (Shrikant Poojari) ಎಂಬವರನ್ನು ಬಂಧಿಸಿದ ಘಟನೆ ವಿರುದ್ಧ ಬಿಜೆಪಿಯು ಕಾಂಗ್ರೆಸ್ ಸರ್ಕಾರದ (Congress Government) ವಿರುದ್ಧ ದೊಡ್ಡ ಹೋರಾಟಕ್ಕೆ ಮುಂದಾಗಿದೆ. ಜನವರಿ ಮೂರರಂದು ಬೆಂಗಳೂರು, ಹುಬ್ಬಳ್ಳಿ ಸೇರಿದಂತೆ ರಾಜ್ಯಾದ್ಯಂತ ದೊಡ್ಡ ಮಟ್ಟದ ಪ್ರತಿಭಟನೆ ನಡೆಸಿದ ಬಿಜೆಪಿ ನಾಯಕರು ಇದೀಗ ಗುರುವಾರ ʻನಾನೂ ಕರಸೇವಕ ನನ್ನನ್ನೂ ಬಂಧಿಸಿʼ ಎಂಬ ಹೋರಾಟ ಶುರು ಮಾಡಿದ್ದಾರೆ. ಪೂರ್ಣ ಸುದ್ದಿಗೆ ಈ ಲಿಂಕ್ ಕ್ಲಿಕ್ ಮಾಡಿ
ಈ ಸುದ್ದಿಯನ್ನೂ ಓದಿ: ಬಿ ಕೆ ಹರಿಪ್ರಸಾದ್ ಅವರೇ ಒಬ್ಬ ಭಯೋತ್ಪಾದಕ, ಪೇಜಾವರ ಶ್ರೀ ವಾಗ್ದಾಳಿ
2. ರಾಮ್ ಲಲ್ಲಾನ ಯಾವ ವಿಗ್ರಹ ಪ್ರತಿಷ್ಠಾಪಿಸಲಾಗುತ್ತದೆ? ಜ.17ರಂದು ಘೋಷಣೆ
ಅಯೋಧ್ಯೆಯಲ್ಲಿ ಪ್ರತಿಷ್ಠಾಪನೆಗೊಳ್ಳಲಿರುವ ರಾಮ ಲಲ್ಲಾನ ಮೂರ್ತಿ ಯಾವುದು ಎನ್ನುವುದು ಜನವರಿ 17ರಂದು ಘೋಷಣೆಯಾಗಲಿದೆ ಎಂದು ಪೇಜಾವರ ಶ್ರೀಗಳು ತಿಳಿಸಿದ್ದಾರೆ. ಮೈಸೂರಿನ ಶಿಲ್ಪಿ ಅರುಣ್ ಯೋಗಿರಾಜ್ ಅವರು ಕೆತ್ತಿದ ಮೂರ್ತಿಯೇ ಬಹುತೇಕ ಫೈನಲ್ ಎನ್ನಲಾಗಿದೆ. ಪೂರ್ಣ ಸುದ್ದಿಗೆ ಈ ಲಿಂಕ್ ಕ್ಲಿಕ್ ಮಾಡಿ
ಈ ಸುದ್ದಿಯನ್ನೂ ಓದಿ: ರಾಮ ಮಂದಿರ ಉದ್ಘಾಟನೆಯ ಆಹ್ವಾನಪತ್ರ ಹೇಗಿದೆ? ಇಲ್ಲಿದೆ ವಿಡಿಯೊ
3. ಶ್ರೀರಾಮ ಮಾಂಸ ಸೇವಿಸುತ್ತಿದ್ದ; ವಿವಾದದ ಕಿಡಿ ಹೊತ್ತಿಸಿದ ಎನ್‌ಸಿಪಿ ನಾಯಕ
ಮುಂಬೈ: ಅಯೋಧ್ಯೆಯಲ್ಲಿ ನಿರ್ಮಾಣವಾಗಿರುವ ರಾಮಮಂದಿರದ (Ram Mandir) ಉದ್ಘಾಟನೆಗೆ ಕೆಲವೇ ದಿನಗಳು ಬಾಕಿ ಉಳಿದಿವೆ. ಈ ನಡುವೆ “ಶ್ರೀರಾಮನು (Lord Ram) ಮಾಂಸಾಹಾರಿಯಾಗಿದ್ದ” ಎಂದು ಎನ್‌ಸಿಪಿ (ಶರದ್ ಪವಾರ್ ಬಣ) ನಾಯಕ ಜಿತೇಂದ್ರ ಅವ್ಹಾದ್ (Jitendra Awhad) ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಪೂರ್ಣ ಸುದ್ದಿಗೆ ಈ ಲಿಂಕ್ ಕ್ಲಿಕ್ ಮಾಡಿ
ಈ ಸುದ್ದಿಯನ್ನೂ ಓದಿ: ರಾಮ ಮಾಂಸಾಹಾರಿ ಎಂದ ಜಿತೇಂದ್ರನನ್ನು ಕೊಲ್ಲುವೆ: ಅಯೋಧ್ಯೆ ಸಂತನ ಎಚ್ಚರಿಕೆ
ಈ ಸುದ್ದಿಯನ್ನೂ ಓದಿ: ನಾನು ರಾಮ ಭಕ್ತ, ರಾಮನೇ ನನ್ನ ಮನೆ ದೇವರು ಎಂದ ಕಾಂಗ್ರೆಸ್ ಮುಸ್ಲಿಂ ಶಾಸಕ
4. ರಾಜ್ಯ ಬಿಜೆಪಿ ವಕ್ತಾರರಾಗಿ ಹರಿಪ್ರಕಾಶ್ ಕೋಣೆಮನೆ ನೇಮಕ
ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ (BY Vijayendra) ಅವರು ಪಕ್ಷದ ಸಾಮಾಜಿಕ ಜಾಲತಾಣ ಸಂಚಾಲಕರು, ಸಹ-ಸಂಚಾಲಕರು, ಮಾಹಿತಿ ತಂತ್ರಜ್ಞಾನ ವಿಭಾಗದ (ಐಟಿ) ಸಂಚಾಲಕರು, ಸಹ-ಸಂಚಾಲಕರು ಮತ್ತು ಮಾಧ್ಯಮ ವಿಭಾಗ ಸಂಚಾಲಕರನ್ನು ಸಹ ನಿಯುಕ್ತಿಗೊಳಿಸಿದ್ದಾರೆ. ಹಿರಿಯ ಪತ್ರಕರ್ತರಾದ ಹರಿಪ್ರಕಾಶ್ ಕೋಣೆಮನೆ ಅವರು ರಾಜ್ಯ ಬಿಜೆಪಿ ವಕ್ತಾರರಾಗಿ ನೇಮಕಗೊಂಡಿದ್ದಾರೆ. ಪೂರ್ಣ ಸುದ್ದಿಗೆ ಈ ಲಿಂಕ್ ಕ್ಲಿಕ್ ಮಾಡಿ
- 5.ಕಾಂಗ್ರೆಸ್‌ನ ಈ 1೦ ಸಚಿವರು ಲೋಕಸಭಾ ಕಣಕ್ಕೆ? ಹೈಕಮಾಂಡ್ ಪಟ್ಟು, ಮಂತ್ರಿಗಳ ಇಕ್ಕಟ್ಟು
ಲೋಕಸಭಾ ಚುನಾವಣೆ (Lok Sabha Election 2024) ಹಿನ್ನೆಲೆಯಲ್ಲಿ ಕಾಂಗ್ರೆಸ್ ಭರ್ಜರಿ ತಯಾರಿ ನಡೆಸುತ್ತಿದೆ. ಹೈಕಮಾಂಡ್ ಬುಲಾವ್ ಮೇರೆಗೆ ಸಿಎಂ ಸಿದ್ದರಾಮಯ್ಯ (CM Siddaramaiah) ಹಾಗೂ ಡಿಸಿಎಂ ಡಿ.ಕೆ. ಶಿವಕುಮಾರ್ (DCM DK Shivakumar) ಅಲ್ಲಿಗೆ ತೆರಳಿದ್ದಾರೆ. ಇನ್ನು ರಾಜ್ಯ ನಾಯಕರ ನಿರಾಸಕ್ತಿ ನಡುವೆಯೂ 10ಕ್ಕೂ ಹೆಚ್ಚು ಸಚಿವರನ್ನು ಲೋಕಸಭಾ ಕಣಕ್ಕೆ ಇಳಿಸಲು ಕಾಂಗ್ರೆಸ್ ಹೈಕಮಾಂಡ್ ಆಸಕ್ತಿ ತೋರಿದೆ ಎಂಬ ವಿಷಯ ಗೊತ್ತಾಗಿದೆ. ಪೂರ್ಣ ಸುದ್ದಿಗೆ ಈ ಲಿಂಕ್ ಕ್ಲಿಕ್ ಮಾಡಿ
ಈ ಸುದ್ದಿಯನ್ನೂ ಓದಿ: ದಕ್ಷಿಣ ಭಾರತದ ಮೇಲೆ ಬಿಜೆಪಿ ಕಣ್ಣು; 50 ಸೀಟು ಗೆಲ್ಲುವ ಗುರಿ!
6. ದಿಲ್ಲಿಯಲ್ಲಿ ಹಿಜ್ಬುಲ್ ಉಗ್ರ ಜಾವೇದ್ ಮಟ್ಟೂ ಅರೆಸ್ಟ್
ಹಲವು ಉಗ್ರ ಕೃತ್ಯಗಳ(Terror Incidents) ಪ್ರಕರಣಗಳಿಗೆ ಸಂಬಂಧಿಸಿದಂತೆ ಪೊಲೀಸರಿಗೆ ಬೇಕಾಗಿದ್ದ ಹಿಜ್ಬುಲ್ ಮುಜಾಹಿದ್ದೀನ್(Hizbul Mujahideen) ಸಂಘಟನೆಯ ಭಯೋತ್ಪಾದಕ ಜಾವೇದ್ ಮಟ್ಟೂನನ್ನು (Terrorist Javed Mattoo) ದಿಲ್ಲಿಯಲ್ಲಿ ಗುರುವಾರ ಬಂಧಿಸಲಾಗಿದೆ(Delhi Police). ಜಮ್ಮು ಕಾಶ್ಮೀರದಲ್ಲಿ ನಡೆದ ಅನೇಕ ಭಯೋತ್ಪಾದಕ ಚಟುವಟಿಕೆಗಳಲ್ಲಿ ಈತನ ಕೈವಾಡವಿದೆ. ಪೂರ್ಣ ಸುದ್ದಿಗೆ ಈ ಲಿಂಕ್ ಕ್ಲಿಕ್ ಮಾಡಿ
7. ಲಕ್ಷದ್ವೀಪದಲ್ಲಿ ಮೋದಿ ಮಸ್ತ್ ಸ್ವಿಮ್ಮಿಂಗ್; ಫೋಟೊಗಳು ವೈರಲ್
ಪ್ರಧಾನಿ ನರೇಂದ್ರ ಮೋದಿ ಅವರು ಅಬ್ಬರದ ಭಾಷಣ, ಶಿಸ್ತಿನ ಆಡಳಿತಕ್ಕೆ ಎಷ್ಟು ಪ್ರಸಿದ್ಧವೋ, ಬಗೆಯ ಬಗೆಯ ದಿರಸು ಧರಿಸುವುದು, ಕಾಡಿನಲ್ಲಿ ಸುತ್ತಾಡುವುದು ಸೇರಿ ಹಲವು ಹವ್ಯಾಸಗಳನ್ನು ಹೊಂದಿದ್ದಾರೆ. ಇಂತಹ ನರೇಂದ್ರ ಮೋದಿ ಅವರೀಗ ಲಕ್ಷದ್ವೀಪದಲ್ಲಿ ಈಜಾಡುವ (Snorkelling-ನೀರಿನ ಮೇಲ್ಮೈನಲ್ಲಿ ಕೃತಕ ಆಮ್ಲಜನಕದ ಮಾಸ್ಕ್, ಸ್ವಿಮ್ಮಿಂಗ್ ದಿರಸು ಧರಿಸಿ ಈಜಾಡುವುದು) ಮೂಲಕ ಗಮನ ಸೆಳೆದಿದ್ದಾರೆ. ಪೂರ್ಣ ಸುದ್ದಿಗೆ ಈ ಲಿಂಕ್ ಕ್ಲಿಕ್ ಮಾಡಿ
8. ನಾಳೆ ಭಾರಿ ಮಳೆ ಎಚ್ಚರಿಕೆ! 6 ಜಿಲ್ಲೆಗಳಲ್ಲಿ ಯೆಲ್ಲೋ ಅಲರ್ಟ್
ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತ ಹಿನ್ನೆಲೆಯಲ್ಲಿ ರಾಜ್ಯದ ಹಲವೆಡೆ ಮಳೆ (Rain News) ಸುರಿಯುತ್ತಿದ್ದು, ಇನ್ನೊಂದು ವಾರವೂ ಮಳೆಯ (Karnataka weather Forecast) ಸಿಂಚನವಾಗಲಿದೆ. ಪೂರ್ಣ ಸುದ್ದಿಗೆ ಈ ಲಿಂಕ್ ಕ್ಲಿಕ್ ಮಾಡಿ
9. ದಕ್ಷಿಣ ಆಫ್ರಿಕಾ ವಿರುದ್ಧದ ಎರಡನೇ ಟೆಸ್ಟ್ ಪಂದ್ಯ ಗೆದ್ದು ನೂತನ ದಾಖಲೆ ಬರೆದ ಭಾರತ ತಂಡ
ಆತಿಥೇಯ ದಕ್ಷಿಣ ಆಫ್ರಿಕಾ ವಿರುದ್ಧದ ದ್ವಿತೀಯ ಟೆಸ್ಟ್(IND vs SA 2nd Test) ಪಂದ್ಯದಲ್ಲಿ 7 ವಿಕೆಟ್ಗಳ ಗೆಲುವು ಸಾಧಿಸಿದ ಭಾರತ ತಂಡ ನೂತನ ದಾಖಲೆಯೊಂದನ್ನು ತನ್ನ ಹೆಸರಿಗೆ ಬರೆದಿದೆ. ಕೇಪ್ ಟೌನ್ನಲ್ಲಿ ಟೆಸ್ಟ್ ಪಂದ್ಯ ಗೆದ್ದ ಏಷ್ಯಾದ ಮೊದಲ ತಂಡ ಎಂಬ ಹಿರಿಮೆಗೆ ಪಾತ್ರವಾಗಿದೆ. ಪೂರ್ಣ ಸುದ್ದಿಗೆ ಈ ಲಿಂಕ್ ಕ್ಲಿಕ್ ಮಾಡಿ
- 10. ಕಣ್ಣೆದುರಿದ್ದರೂ ಬೆಕ್ಕನ್ನು ಬೇಟೆಯಾಡದ ಗಿಡುಗ; ಈ ಕಾರಣಕ್ಕಾಗಿ ವಿಡಿಯೊ ನೋಡಿ
ಬೇಟೆಯಾಡುವ ವಿಚಾರದಲ್ಲಿ ಹದ್ದು, ಗಿಡುಗ ಎತ್ತಿದ ಕೈ. ಆಗಸದಲ್ಲಿ ಹಾರಾಡುವ ಅವು ಭೂಮಿಯ ಮೇಲೆ ಓಡಾಡುವ ಸಣ್ಣ ಪ್ರಾಣಿಗಳನ್ನೂ ಗುರುತಿಸಿ ಆಕ್ರಮಣ ಮಾಡುತ್ತವೆ. ಆದರೆ ನುರಿತ ಬೇಟೆಗಾರ ಎಂದೇ ಪರಿಗಣಿಸಲ್ಪಡುವ ಗಿಡುಗ ಇಲ್ಲಿ ಬೆಕ್ಕೊಂದನ್ನು ಬೇಟೆಯಾಡಲು ವಿಫಲವಾಗುತ್ತದೆ. ಅದು ಹೇಗೆ ಎನ್ನುವುದನ್ನು ತಿಳಿಯಲು ವಿಡಿಯೊ ನೋಡಿ (Viral Video). ಪೂರ್ಣ ಸುದ್ದಿಗೆ ಈ ಲಿಂಕ್ ಕ್ಲಿಕ್ ಮಾಡಿ