Site icon Vistara News

ಕುರಾನ್‌ ಕಲಿಯಲು ಹೋದ ಬಾಲಕನ ಮೇಲೆ ಮಸೀದಿಯಲ್ಲೇ ಅತ್ಯಾಚಾರ; ಇದೆಂಥ ಅನಾಚಾರ!

Pakistan Quran

13-Year-Old Boy Raped Inside Mosque While Learning Quran During Ramzan In Pakistan

ಇಸ್ಲಾಮಾಬಾದ್:‌ ರಂಜಾನ್‌ ಹಬ್ಬದ (Ramzan) ಸಂದರ್ಭದಲ್ಲಿ ಮುಸ್ಲಿಮರು ನಿತ್ಯವೂ ಮಸೀದಿಗಳಿಗೆ ಹೋಗುವುದು, ಕಡ್ಡಾಯವಾಗಿ ನಮಾಜ್‌ ಮಾಡುವುದು ಸಹಜ. ಮಕ್ಕಳು ಕೂಡ ಮಸೀದಿಗಳಿಗೆ ತೆರಳಿ, ಕುರಾನ್‌ (Quran) ಅಧ್ಯಯನ ಮಾಡುವುದು, ಪವಿತ್ರ ಸಂದೇಶಗಳನ್ನು ಅರಿಯುವುದು, ಕಲಿಯುವುದು ಕೂಡ ಮಹತ್ವದ ಸಂಗತಿಯಾಗಿದೆ. ಆದರೆ, ಪಾಕಿಸ್ತಾನದಲ್ಲಿ (Pakistan) ಕುರಾನ್‌ ಕಲಿಯಲೆಂದು ಮಸೀದಿಗೆ ತೆರಳಿದ 13 ವರ್ಷದ ಬಾಲಕನ ಮೇಲೆ ದುರುಳನೊಬ್ಬ ಅತ್ಯಾಚಾರ ಎಸಗಿದ್ದಾನೆ. ಇದು ಈಗ ಪಾಕಿಸ್ತಾನದಲ್ಲಿ ಸಂಚಲನ ಮೂಡಿಸಿದೆ. ಮಸೀದಿಯ ಬಾತ್‌ರೂಮ್‌ನಲ್ಲಿ ದುಷ್ಟನು ಅತ್ಯಾಚಾರ ಎಸಗಿದ್ದಾನೆ ಎನ್ನಲಾಗಿದೆ.

ಹೌದು, ಪಾಕಿಸ್ತಾನದ ಮುಜಫ್ಫರ್‌ಗಢದ ಕೋಟ್‌ ಅಡ್ಡುಸ್‌ ಪಟ್ಟಣದಲ್ಲಿರುವ ಮಸೀದಿಯಲ್ಲಿ 28 ವರ್ಷದ ವ್ಯಕ್ತಿಯೊಬ್ಬ 13 ವರ್ಷದ ಬಾಲಕನ ಮೇಲೆ ಅತ್ಯಾಚಾರ ಎಸಗಿದ್ದಾನೆ. ರಂಜಾನ್‌ ಹಿನ್ನೆಲೆಯಲ್ಲಿ ಕುರಾನ್‌ ಕಲಿಯಲು ಬಾಲಕನು ಮಸೀದಿಗೆ ತೆರಳಿದ್ದಾಗ ವಿಕೃತ ಕಾಮಿಯು ಇಂತಹ ಕೃತ್ಯ ಎಸಗಿದ್ದಾನೆ. ಬಾಲಕನ ಮೇಲೆ ಅತ್ಯಾಚಾರ ಎಸಗಿದ್ದನ್ನು ಮಸೀದಿಯ ಮೌಲ್ವಿಯು ನೋಡಿದ್ದಾರೆ. ಬಳಿಕ ಅವರು ವಿಕೃತ ಕಾಮಿಯನ್ನು ಪೊಲೀಸರಿಗೆ ಒಪ್ಪಿಸಿದ್ದಾರೆ. ಮಾಡಿದ ತಪ್ಪಿಗೆ ಈಗ ದುರುಳನು ಕಂಬಿ ಎಣಿಸುತ್ತಿದ್ದಾನೆ.

ಮೌಲ್ವಿಗೇ ಬೆದರಿಕೆ ಹಾಕಿದ ದುಷ್ಟ

ಬಾಲಕನ ಮೇಲೆ ಅತ್ಯಾಚಾರ ಎಸಗಿದ ಕೃತ್ಯವನ್ನು ನೋಡಿದ ಮೌಲ್ವಿಗೇ ದುಷ್ಟನು ಬೆದರಿಕೆ ಹಾಕಿದ್ದಾನೆ. “ಇದರ ಬಗ್ಗೆ ಯಾರಿಗಾದರೂ ಹೇಳಿದರೆ ನಿನ್ನನ್ನು ಕೊಂದು ಹಾಕುತ್ತೇನೆ” ಎಂಬುದಾಗಿ ಮೌಲ್ವಿಗೆ ಬೆದರಿಕೆ ಹಾಕಿದ ಕಾಮುಕನು ಅಲ್ಲಿಂದ ಕಾಲ್ಕಿತ್ತಿದ್ದಾನೆ. ಈತನ ಬೆದರಿಕೆಯನ್ನು ಲೆಕ್ಕಿಸದ ಮೌಲ್ವಿಯು ನಾಚಿಕೆಗೇಡಿನ ಕೃತ್ಯದ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಬಳಿಕ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ ಎಂದು ತಿಳಿದುಬಂದಿದೆ.

ಮಸೀದಿಯಲ್ಲಿಯೇ ಅತ್ಯಾಚಾರಕ್ಕೀಡಾದ ಬಾಲಕನನ್ನು ಆಸ್ಪತ್ರೆಗೆ ಕರೆದೊಯ್ಯಲಾಗಿದ್ದು, ವೈದ್ಯಕೀಯ ಪರೀಕ್ಷೆ ನಡೆಸುತ್ತಿದ್ದಾರೆ. ಅತ್ಯಾಚಾರ ಪ್ರಕರಣ ಮೊದಲು ಮೌಲ್ವಿಗೆ ಗೊತ್ತಾಗುತ್ತಲೇ ಅವರು ಅಲ್ಲಿದ್ದ ಜನರಿಗೆ ತಿಳಿಸಿದ್ದಾರೆ. ಎಲ್ಲರೂ ಒಗ್ಗೂಡಿ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಇದಾದ ಬಳಿಕ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ ಎಂದು ತಿಳಿದುಬಂದಿದೆ. ಈ ಪ್ರಕರಣ ಬಯಲಾಗುತ್ತಲೇ ಸುತ್ತಮುತ್ತಲಿನ ಜನ ಮಕ್ಕಳನ್ನು ಮಸೀದಿಗೆ ಕಳುಹಿಸಲು ಹಿಂಜರಿಯುತ್ತಿದ್ದಾರೆ ಎಂದು ತಿಳಿದುಬಂದಿದೆ.

ಇದನ್ನೂ ಓದಿ: 5 ವರ್ಷದ ಬಾಲಕಿ ಮೇಲೆ ಅತ್ಯಾಚಾರ ಎಸಗಿ ಕೊಂದ ಪಾಪಿ; ಸಿನಿಮೀಯ ರೀತಿಯಲ್ಲಿ ಬಂಧಿಸಿದ ಪೊಲೀಸರು

Exit mobile version