Site icon Vistara News

Peshawar Blast: ಪಾಕಿಸ್ತಾನದ ಪೇಶಾವರ ಮಸೀದಿಯಲ್ಲಿ ಸ್ಫೋಟ, 61 ಜನರ ಸಾವು, 150ಕ್ಕೂ ಅಧಿಕ ಮಂದಿಗೆ ಗಾಯ

Peshawar Blast

#image_title

ಇಸ್ಲಾಮಾಬಾದ್‌: ಎರಡು ದಶಕದಲ್ಲಿಯೇ ಕಂಡು ಕೇಳರಿಯದ ಆರ್ಥಿಕ ಬಿಕ್ಕಟ್ಟಿನಿಂದ ಪಾಕಿಸ್ತಾನದ ಜನ ಪರದಾಡುತ್ತಿರುವ ಬೆನ್ನಲ್ಲೇ ಪೇಶಾವರದ ಮಸೀದಿಯಲ್ಲಿ ಆತ್ಮಾಹುತಿ ದಾಳಿ (Peshawar Blast) ನಡೆದಿದೆ. ಪೇಶಾವರದ ಮಸೀದಿಯಲ್ಲಿ ವ್ಯಕ್ತಿಯೊಬ್ಬ ಆತ್ಮಾಹುತಿ ದಾಳಿ ನಡೆಸಿದ್ದು, ಸ್ಫೋಟದಿಂದಾಗಿ 61 ಜನ ಮೃತಪಟ್ಟರೆ, 150ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ.

“ಪೇಶಾವರದ ಮಸೀದಿಯಲ್ಲಿ ಮಧ್ಯಾಹ್ನ 1.40ರ ಸುಮಾರಿಗೆ ವ್ಯಕ್ತಿಯೊಬ್ಬ ತನ್ನನ್ನು ತಾನು ಸ್ಫೋಟಿಸಿಕೊಂಡಿದ್ದಾನೆ. ಆಗಷ್ಟೇ, ಪ್ರಾರ್ಥನೆ ಮುಗಿಸಿದ್ದರಿಂದ ಹೆಚ್ಚಿನ ಜನ ಮಸೀದಿಯಲ್ಲಿದ್ದರು. ಇದರಿಂದಾಗಿ ಸಾವಿನ ಸಂಖ್ಯೆ ಹೆಚ್ಚಾಗಿದೆ. ಮಸೀದಿಯ ಸುತ್ತ ಬಿಗುವಿನ ವಾತಾವರಣವಿದ್ದು, ಗಾಯಾಳುಗಳ ರಕ್ಷಣೆಗೆ ಹೆಚ್ಚಿನ ಕಾರ್ಯಾಚರಣೆ ನಡೆಯುತ್ತಿದೆ. ಗಾಯಾಳುಗಳನ್ನು ಕ್ಷಿಪ್ರವಾಗಿ ಆಸ್ಪತ್ರೆಗೆ ಸಾಗಿಸಲಾಗುತ್ತಿದೆ” ಎಂದು ಪೊಲೀಸರು ತಿಳಿಸಿದ್ದಾರೆ.

ಮಸೀದಿಯಲ್ಲಿ ಸುಮಾರು 260 ಜನ ಇದ್ದರು. ಎಲ್ಲರೂ ಆಗಷ್ಟೇ ಪ್ರಾರ್ಥನೆ ಮುಗಿಸಿದ್ದರು. ಇದೇ ವೇಳೆ ಆತ್ಮಾಹುತಿ ದಾಳಿ ನಡೆದಿದೆ ಎಂದು ತಿಳಿದುಬಂದಿದೆ. ಇನ್ನು ಗಾಯಗೊಂಡವರಲ್ಲಿ ಹೆಚ್ಚಿನ ಜನರ ಪರಿಸ್ಥಿತಿ ಗಂಭೀರವಾಗಿರುವುದರಿಂದ ಸಾವಿನ ಸಂಖ್ಯೆ ಹೆಚ್ಚಾಗುವ ಸಾಧ್ಯತೆ ಇದೆ. ಆದಾಗ್ಯೂ, ದಾಳಿಯ ಕುರಿತು ಇದುವರೆಗೆ ಯಾವುದೇ ಉಗ್ರ ಸಂಘಟನೆಯು ಹೊಣೆ ಹೊತ್ತುಕೊಂಡಿಲ್ಲ.

ಇದನ್ನೂ ಓದಿ: Balochistan Blast | ಬಲೂಚಿಸ್ತಾನದಲ್ಲಿ ಬಾಂಬ್‌ ದಾಳಿ, ಪಾಕ್‌ನ ಐವರು ಯೋಧರ ಸಾವು, 12 ಜನಕ್ಕೆ ಗಾಯ

Exit mobile version