Site icon Vistara News

Skin Cancer Awareness | 2,500 ಜನ ನಗ್ನರಾಗಿ ಕ್ಯಾಮೆರಾಗೆ ಪೋಸ್‌ ಕೊಟ್ಟು ಚರ್ಮದ ಕ್ಯಾನ್ಸರ್‌ ಕುರಿತು ಜಾಗೃತಿ

Skin Cancer Awareness

ಸಿಡ್ನಿ: ಜಗತ್ತಿನಾದ್ಯಂತ ಕೋಟ್ಯಂತರ ಜನ ಚರ್ಮದ ಕ್ಯಾನ್ಸರ್‌ನಿಂದ ಬಳಲುತ್ತಿದ್ದು, ಲಕ್ಷಾಂತರ ಜನ ಮೃತಪಟ್ಟಿದ್ದಾರೆ. ಇಂತಹ ಮಾರಣಾಂತಿಕ ಚರ್ಮದ ಕಾಯಿಲೆ (Skin Cancer Awareness) ಕುರಿತು ಆಸ್ಟ್ರೇಲಿಯಾದಲ್ಲಿ ವಿಭಿನ್ನವಾಗಿ ಜಾಗೃತಿ ಮೂಡಿಸಲಾಗಿದೆ. ಸುಮಾರು 2,500 ಜನ ಸಮುದ್ರ ತೀರದಲ್ಲಿ ಬೆತ್ತಲೆಯಾಗಿ ಕ್ಯಾಮೆರಾಗಿ ಪೋಸ್ಟ್‌ ಕೊಡುವ ಮೂಲಕ ಸ್ಕಿನ್‌ ಕ್ಯಾನ್ಸರ್‌ ಕುರಿತು ಜಾಗೃತಿ ಮೂಡಿಸಿದ್ದಾರೆ.

ಸಿಡ್ನಿಯ ಬೊಂಡಿ ಬೀಚ್‌ನಲ್ಲಿ ಪುರುಷರು ಹಾಗೂ ಮಹಿಳೆಯರು ಸೇರಿ 2,500ಕ್ಕೂ ಹೆಚ್ಚು ಜನ ಬೆತ್ತಲೆಯಾಗಿ ಕ್ಯಾಮೆರಾಗಿ ಪೋಸ್‌ ನೀಡಿದ್ದಾರೆ. ಬೆತ್ತಲೆ ಫೋಟೊ ತೆಗೆಯುವುದಕ್ಕೇ ಖ್ಯಾತಿ ಗಳಿಸಿರುವ ಫೋಟೊಗ್ರಾಫಿಕ್‌ ಆರ್ಟಿಸ್ಟ್‌ ಸ್ಪೆನ್ಸರ್‌ ಟ್ಯುನಿಕ್‌ ಅವರು 2,500 ಜನ ಬಟ್ಟೆ ಕಳಚಿ, ಸಮುದ್ರದ ಕಡೆ ಮುಖ ಮಾಡಿ ನಿಂತಿರುವ ಫೋಟೊ ತೆಗೆದಿದ್ದಾರೆ. ಹಾಗೆಯೇ, ಇವರು ತೆಗೆದ ಹಲವು ಫೋಟೊಗಳು ವೈರಲ್‌ ಆಗಿವೆ.

ಸ್ಪೆನ್ಸರ್‌ ಟ್ಯುನಿಕ್‌ ಅವರು ಅಮೆರಿಕದ ನ್ಯೂಯಾರ್ಕ್‌ ಮೂಲದ ಸಂಸ್ಥೆಯೊಂದಿಗೆ ಕೈ ಜೋಡಿಸಿದ್ದು, ಕ್ಯಾನ್ಸರ್‌ ಜಾಗೃತಿ ಮೂಡಿಸುತ್ತಿದ್ದಾರೆ. ಅದರಲ್ಲೂ, ಆಸ್ಟ್ರೇಲಿಯಾದಲ್ಲಿ ಮೆಲನೋಮ (ಚರ್ಮಕ್ಕೆ ಸಂಬಂಧಿಸಿದ ಕಾಯಿಲೆ- Melanoma) ಕಾಯಿಲೆಯಿಂದ ಬಳಲುತ್ತಿರುವವರ ಸಂಖ್ಯೆ ಜಾಸ್ತಿ ಇರುವ ಕಾರಣ ವಿಭಿನ್ನ ಪ್ರಯತ್ನದ ಮೂಲಕ ಜಾಗೃತಿ ಮೂಡಿಸಲಾಗಿದೆ. ಆಸ್ಟ್ರೇಲಿಯಾದಲ್ಲಿ ಪ್ರಸಕ್ತ ವರ್ಷದಲ್ಲಿ 17,756 ಮಂದಿ ಚರ್ಮದ ಕ್ಯಾನ್ಸರ್‌ನಿಂದ ಬಳಲುತ್ತಿದ್ದು, ಇವರಲ್ಲಿ 1,281 ಮಂದಿ ಮೃತಪಡಲಿದ್ದಾರೆ ಎಂದು ವರದಿ ತಿಳಿಸಿದೆ.

ಇದನ್ನೂ ಓದಿ | ಈಗೀಗ 30-40ನೇ ವಯಸ್ಸಿನಲ್ಲೇ ಸ್ತನ ಕ್ಯಾನ್ಸರ್‌ ಕಾಡುವುದೇಕೆ? ಎಲ್ಲಿ ಎಡವಿದ್ದೇವೆ ನಾವು?

Exit mobile version