Skin Cancer Awareness | 2,500 ಜನ ನಗ್ನರಾಗಿ ಕ್ಯಾಮೆರಾಗೆ ಪೋಸ್‌ ಕೊಟ್ಟು ಚರ್ಮದ ಕ್ಯಾನ್ಸರ್‌ ಕುರಿತು ಜಾಗೃತಿ - Vistara News

ಪ್ರಮುಖ ಸುದ್ದಿ

Skin Cancer Awareness | 2,500 ಜನ ನಗ್ನರಾಗಿ ಕ್ಯಾಮೆರಾಗೆ ಪೋಸ್‌ ಕೊಟ್ಟು ಚರ್ಮದ ಕ್ಯಾನ್ಸರ್‌ ಕುರಿತು ಜಾಗೃತಿ

ಸಿಡ್ನಿಯ ಬೊಂಡಿ ಬೀಚ್‌ನಲ್ಲಿ ಪುರುಷರು ಹಾಗೂ ಮಹಿಳೆಯರು ನಗ್ನರಾಗಿ ನಿಲ್ಲುವ ಮೂಲಕ ಚರ್ಮದ ಕ್ಯಾನ್ಸರ್‌ ಕುರಿತು ವಿಭಿನ್ನವಾಗಿ ಜಾಗೃತಿ (Skin Cancer Awareness) ಮೂಡಿಸಿದ್ದಾರೆ.

VISTARANEWS.COM


on

Skin Cancer Awareness
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಸಿಡ್ನಿ: ಜಗತ್ತಿನಾದ್ಯಂತ ಕೋಟ್ಯಂತರ ಜನ ಚರ್ಮದ ಕ್ಯಾನ್ಸರ್‌ನಿಂದ ಬಳಲುತ್ತಿದ್ದು, ಲಕ್ಷಾಂತರ ಜನ ಮೃತಪಟ್ಟಿದ್ದಾರೆ. ಇಂತಹ ಮಾರಣಾಂತಿಕ ಚರ್ಮದ ಕಾಯಿಲೆ (Skin Cancer Awareness) ಕುರಿತು ಆಸ್ಟ್ರೇಲಿಯಾದಲ್ಲಿ ವಿಭಿನ್ನವಾಗಿ ಜಾಗೃತಿ ಮೂಡಿಸಲಾಗಿದೆ. ಸುಮಾರು 2,500 ಜನ ಸಮುದ್ರ ತೀರದಲ್ಲಿ ಬೆತ್ತಲೆಯಾಗಿ ಕ್ಯಾಮೆರಾಗಿ ಪೋಸ್ಟ್‌ ಕೊಡುವ ಮೂಲಕ ಸ್ಕಿನ್‌ ಕ್ಯಾನ್ಸರ್‌ ಕುರಿತು ಜಾಗೃತಿ ಮೂಡಿಸಿದ್ದಾರೆ.

ಸಿಡ್ನಿಯ ಬೊಂಡಿ ಬೀಚ್‌ನಲ್ಲಿ ಪುರುಷರು ಹಾಗೂ ಮಹಿಳೆಯರು ಸೇರಿ 2,500ಕ್ಕೂ ಹೆಚ್ಚು ಜನ ಬೆತ್ತಲೆಯಾಗಿ ಕ್ಯಾಮೆರಾಗಿ ಪೋಸ್‌ ನೀಡಿದ್ದಾರೆ. ಬೆತ್ತಲೆ ಫೋಟೊ ತೆಗೆಯುವುದಕ್ಕೇ ಖ್ಯಾತಿ ಗಳಿಸಿರುವ ಫೋಟೊಗ್ರಾಫಿಕ್‌ ಆರ್ಟಿಸ್ಟ್‌ ಸ್ಪೆನ್ಸರ್‌ ಟ್ಯುನಿಕ್‌ ಅವರು 2,500 ಜನ ಬಟ್ಟೆ ಕಳಚಿ, ಸಮುದ್ರದ ಕಡೆ ಮುಖ ಮಾಡಿ ನಿಂತಿರುವ ಫೋಟೊ ತೆಗೆದಿದ್ದಾರೆ. ಹಾಗೆಯೇ, ಇವರು ತೆಗೆದ ಹಲವು ಫೋಟೊಗಳು ವೈರಲ್‌ ಆಗಿವೆ.

ಸ್ಪೆನ್ಸರ್‌ ಟ್ಯುನಿಕ್‌ ಅವರು ಅಮೆರಿಕದ ನ್ಯೂಯಾರ್ಕ್‌ ಮೂಲದ ಸಂಸ್ಥೆಯೊಂದಿಗೆ ಕೈ ಜೋಡಿಸಿದ್ದು, ಕ್ಯಾನ್ಸರ್‌ ಜಾಗೃತಿ ಮೂಡಿಸುತ್ತಿದ್ದಾರೆ. ಅದರಲ್ಲೂ, ಆಸ್ಟ್ರೇಲಿಯಾದಲ್ಲಿ ಮೆಲನೋಮ (ಚರ್ಮಕ್ಕೆ ಸಂಬಂಧಿಸಿದ ಕಾಯಿಲೆ- Melanoma) ಕಾಯಿಲೆಯಿಂದ ಬಳಲುತ್ತಿರುವವರ ಸಂಖ್ಯೆ ಜಾಸ್ತಿ ಇರುವ ಕಾರಣ ವಿಭಿನ್ನ ಪ್ರಯತ್ನದ ಮೂಲಕ ಜಾಗೃತಿ ಮೂಡಿಸಲಾಗಿದೆ. ಆಸ್ಟ್ರೇಲಿಯಾದಲ್ಲಿ ಪ್ರಸಕ್ತ ವರ್ಷದಲ್ಲಿ 17,756 ಮಂದಿ ಚರ್ಮದ ಕ್ಯಾನ್ಸರ್‌ನಿಂದ ಬಳಲುತ್ತಿದ್ದು, ಇವರಲ್ಲಿ 1,281 ಮಂದಿ ಮೃತಪಡಲಿದ್ದಾರೆ ಎಂದು ವರದಿ ತಿಳಿಸಿದೆ.

ಇದನ್ನೂ ಓದಿ | ಈಗೀಗ 30-40ನೇ ವಯಸ್ಸಿನಲ್ಲೇ ಸ್ತನ ಕ್ಯಾನ್ಸರ್‌ ಕಾಡುವುದೇಕೆ? ಎಲ್ಲಿ ಎಡವಿದ್ದೇವೆ ನಾವು?

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಪ್ರಮುಖ ಸುದ್ದಿ

Shiradi Landslide: ಹಳಿ ಮೇಲೆ ಭೂಕುಸಿತ, ಬೆಂಗಳೂರು- ಮಂಗಳೂರು ರೈಲುಗಳು 15 ದಿನ ಬಂದ್, 400 ಕಾರ್ಮಿಕರಿಂದ ತೆರವು ಕಾರ್ಯಾಚರಣೆ

Shiradi Landslide: ಶಿರಾಡಿ ಘಾಟಿಯ ಎಡಕುಮೇರಿ- ಕಡಗರವಳ್ಳಿ ಮಧ್ಯೆ ಭೂಕುಸಿತವಾಗಿ ರೈಲ್ವೆ ಹಳಿ ಮುಚ್ಚಿಹೋಗಿದೆ. ಆಗಸ್ಟ್ 10ರವರೆಗೆ ಈ ಮಾರ್ಗದಲ್ಲಿ ರೈಲು ಸಂಚಾರ ಅಸಾಧ್ಯ ಎಂದು ರೈಲ್ವೆ ಇಲಾಖೆ ಹೇಳಿದೆ. 14 ರೈಲುಗಳ ಸಂಚಾರ ರದ್ದುಪಡಿಸಲಾಗಿದೆ. 400 ಮಂದಿಯಿಂದ ರೈಲು ಹಳಿ ತೆರವು ಕಾಮಗಾರಿ ನಡೆಯುತ್ತಿದೆ. ಅದರೆ ಕಾಮಗಾರಿಗೆ ಭಾರಿ ಮಳೆ ಅಡ್ಡಿಯಾಗಿದೆ.

VISTARANEWS.COM


on

shiradi landslide railway track
Koo

ಬೆಂಗಳೂರು: ಶಿರಾಡಿ ಘಾಟಿಯಲ್ಲಿ (Shiradi Ghat) ರೈಲ್ವೇ ಹಳಿ (Railway Track) ಮೇಲೆ ಭಾರಿ ಭೂಕುಸಿತ (Shiradi Landslide) ಆಗಿರುವ ಪರಿಣಾಮ, ಬೆಂಗಳೂರು- ಮಂಗಳೂರು (Bengaluru Mangaluru Trains) ನಡುವೆ ಸಂಚರಿಸುವ ರೈಲುಗಳನ್ನು 15 ದಿನಗಳ ಕಾಲ ಬಂದ್ ಮಾಡಲಾಗಿದೆ. ಆಗಸ್ಟ್‌ 10ರವರೆಗೆ ಇಲ್ಲಿ ರೈಲು ಸಂಚಾರ (Trains Cancelled) ಇರುವುದಿಲ್ಲ.

ಶಿರಾಡಿ ಘಾಟಿಯ ಎಡಕುಮೇರಿ- ಕಡಗರವಳ್ಳಿ ಮಧ್ಯೆ ಭೂಕುಸಿತವಾಗಿ ರೈಲ್ವೆ ಹಳಿ ಮುಚ್ಚಿಹೋಗಿದೆ. ಆಗಸ್ಟ್ 10ರವರೆಗೆ ಈ ಮಾರ್ಗದಲ್ಲಿ ರೈಲು ಸಂಚಾರ ಅಸಾಧ್ಯ ಎಂದು ರೈಲ್ವೆ ಇಲಾಖೆ ಹೇಳಿದೆ. 14 ರೈಲುಗಳ ಸಂಚಾರ ರದ್ದುಪಡಿಸಲಾಗಿದೆ. 400 ಮಂದಿಯಿಂದ ರೈಲು ಹಳಿ ತೆರವು ಕಾಮಗಾರಿ ನಡೆಯುತ್ತಿದೆ. ಅದರೆ ಕಾಮಗಾರಿಗೆ ಭಾರಿ ಮಳೆ ಅಡ್ಡಿಯಾಗಿದೆ.

ರೈಲು ಸಂಚಾರ ರದ್ದಾದ ಬೆನ್ನಲ್ಲೇ ಬೆಂಗಳೂರು – ಮಂಗಳೂರು ನಡುವಿನ ಫ್ಲೈಟ್ ಟಿಕೇಟ್ ದರ ದುಪ್ಪಟ್ಟಾಗಿದೆ. ಸಾಮಾನ್ಯವಾಗಿ ಇರುತ್ತಿದ್ದ 3000- 3500 ರೂ. ದರ ಇದೀಗ 6604 ರೂಪಾಯಿಗೆ ಏರಿಕೆಯಾಗಿದೆ.

ಎಡಕುಮೇರಿ– ಕಡಗರವಳ್ಳಿ ನಡುವಿನ ದೋಣಿಗಲ್‌ನಲ್ಲಿ ಉಂಟಾಗಿರುವ ಗಂಭೀರ ಸ್ವರೂಪದ ಭೂಕುಸಿತದಿಂದ ಹಾನಿಗೀಡಾಗಿರುವ ರೈಲು ಮಾರ್ಗದ ದುರಸ್ತಿ ಕಾರ್ಯ ಹಗಲು ರಾತ್ರಿ ಸಮರೋಪಾದಿಯಲ್ಲಿ ನಡೆಯುತ್ತಿದೆ. ನಿರಂತರ ಮಳೆಯ ಸವಾಲಿನ ನಡುವೆಯೂ ದುರಸ್ತಿ ಕಾರ್ಯ ನಡೆಸಲಾಗುತ್ತಿದೆ. ಅಗತ್ಯ ಸಲಕರಣೆಗಳೊಂದಿಗೆ ಕಾರ್ಮಿಕರನ್ನು ಸ್ಥಳದಲ್ಲಿ ನಿಯೋಜಿಸಲಾಗಿದೆ. ಹಗಲು ಪಾಳಿಯಲ್ಲಿ 200, ರಾತ್ರಿ ಪಾಳಿಯಲ್ಲಿ 120 ಹಾಗೂ ಇತರ 110 ಸಿಬಂದಿಯನ್ನು ನಿಯೋಜಿಸಲಾಗಿದೆ. ಸುರಕ್ಷೆಗೆ ಆದ್ಯತೆ ನೀಡಿ ಕಾಮಗಾರಿ ನಿರ್ವಹಿಸಲಾಗುತ್ತಿದೆ.

ಶುಕ್ರವಾರ ಸಂಜೆ ವೇಳೆ ಭಾರೀ ಪ್ರಮಾಣದಲ್ಲಿ ಭೂ ಕುಸಿತ ಉಂಟಾಗಿ ರೈಲು ಹಳಿಗೆ ಅಪಾಯ ಉಂಟಾಗಿತ್ತು. ಆರು ಹಿಟಾಚಿ ಯಂತ್ರಗಳು, ಐದು ಪೋಕ್ಲೈನ್‌ ಯಂತ್ರಗಳೂ ತೆರವು ಕಾರ್ಯಾಚರಣೆಯಲ್ಲಿ ಭಾಗಿಯಾಗಿವೆ. ಭೂಕುಸಿತವಾದ ಜಾಗದಲ್ಲಿ ಮಣ್ಣನ್ನು ತಡೆದಿಡುವ ಕೆಲಸ ನಡೆಯುತ್ತಿದ್ದು, ಕಲ್ಲು ಬಂಡೆ, ಮರಳಿನ ಚೀಲ ಜೋಡಿಸಲಾಗುತ್ತಿದೆ. ಅದಕ್ಕೆ ಕಬ್ಬಿಣದ ನೆಟ್‌ (ಗೇಬಿಯನ್‌ ಮೆಷ್‌) ಮೂಲಕ ತಡೆಗೋಡೆ ನಿರ್ಮಿಸಲಾಗುತ್ತಿದೆ.

ಆಹಾರ ತಯಾರಿ, ಪೂರೈಕೆ ಹಾಗೂ ವೈದ್ಯಕೀಯ ತಂಡಗಳೂ ಸ್ಥಳದಲ್ಲಿವೆ. ಸುಬ್ರಹ್ಮಣ್ಯ ನಿಲ್ದಾಣದಿಂದ ಆಹಾರ, ನೀರು ಸರಬರಾಜು ಮಾಡಲಾಗುತ್ತಿದೆ. ದುರಸ್ತಿಗೆ ಬೇಕಾಗಿರುವ 8 ಜನರೇಟರ್‌ಗಳು, ಸಮರ್ಪಕ ಬೆಳಕಿನ ವ್ಯವಸ್ಥೆಯೊಂದಿಗೆ ಸಂಪರ್ಕ ನೆಟ್‌ವರ್ಕ್‌, ಇಂಟರ್‌ನೆಟ್‌ ವ್ಯವಸ್ಥೆಯನ್ನೂ ಮಾಡಲಾಗಿದೆ. ಸಂವಹನ ವ್ಯವಸ್ಥೆಗಳಾದ ಆಟೋ ಫೋನ್‌ಗಳು, ಕಂಟ್ರೋಲ್‌ ಫೋನ್‌, ಸ್ಯಾಟಲೈಟ್‌ ಫೋನ್‌, ವಿಎಸ್‌ಟಿಎ ಸಂವಹನ (ಲೈವ್‌ ಸ್ಟ್ರೀಮಿಂಗ್‌ಗಾಗಿ) ವ್ಯವಸ್ಥೆಗಳನ್ನು ಬಳಸಲಾಗುತ್ತಿದ್ದು, ಹುಬ್ಬಳ್ಳಿಯ ಕೇಂದ್ರ ಕಚೇರಿಯ ವಾರ್‌ ರೂಮ್‌ನಿಂದ ಸಂವಹನ ನಡೆಸಲಾಗುತ್ತಿದೆ.

ಯಾವ್ಯಾವ ರೈಲು ರದ್ದು?

ಮಂಗಳೂರು: ನಂ.16511 ಕೆಎಸ್‌ಆರ್‌ ಬೆಂಗಳೂರು- ಕಣ್ಣೂರು ಎಕ್ಸ್‌ಪ್ರೆಸ್‌ ರೈಲನ್ನು ಜು.29ರಿಂದ ಆ.3ರ ವರೆಗೆ ಸಂರ್ಪೂವಾಗಿ ರದ್ದು ಮಾಡಲಾಗಿದೆ.
ನಂ.16512 ಕಣ್ಣೂರು- ಕೆಎಸ್‌ಆರ್‌ ಬೆಂಗಳೂರು ಎಕ್ಸ್‌ಪ್ರೆಸ್‌ ರೈಲನ್ನು ಜು.30ರಿಂದ ಆ.4ರ ವರೆಗೆ ರದ್ದುಪಡಿಸಲಾಗಿದೆ.
ನಂ.07378 ಮಂಗಳೂರು ಸೆಂಟ್ರಲ್‌- ವಿಜಯಪುರ ವಿಶೇಷ ಎಕ್ಸ್‌ಪ್ರೆಸ್‌ ರೈಲನ್ನು ಜು.30ರಿಂದ ಆ.4 ವರೆಗೆ ಸಂಪೂರ್ಣ ರದ್ದುಪಡಿಸಲಾಗಿದೆ.
ನಂ.07377 ವಿಜಯಪುರ- ಮಂಗಳೂರು ಸೆಂಟ್ರಲ್‌ ರೈಲನ್ನು ಜು. 29ರಿಂದ ಆ. 3ರ ವರೆಗೆ ಸಂಪೂರ್ಣ ರದ್ದುಪಡಿಸಲಾಗಿದೆ.
ನಂ.16585 ಎಸ್‌ಎಂವಿಟಿ ಬೆಂಗಳೂರು – ಮುರುಡೇಶ್ವರ ಎಕ್ಸ್‌ಪ್ರೆಸ್‌ ರೈಲು ಜು. 29ರಿಂದ ಆ. 3ರ ವರೆಗೆ ಸಂಪೂರ್ಣ ರದ್ದಾಗಿದೆ.
ನಂ.16586 ಮುರುಡೇಶ್ವರ – ಎಸ್‌ಎಂವಿಟಿ ಬೆಂಗಳೂರು ಎಕ್ಸ್‌ಪ್ರೆಸ್‌ ರೈಲು ಜು.30ರಿಂದ ಆ. 4ರ ವರೆಗೆ ಸಂಪೂರ್ಣ ರದ್ದಾಗಿದೆ.
ನಂ.16595 ಕೆಎಸ್‌ಆರ್‌ ಬೆಂಗಳೂರು – ಕಾರವಾರ ವಿಶೇಷ ಎಕ್ಸ್‌ಪ್ರೆಸ್‌ ರೈಲು ಜು. 29 ರಿಂದ ಆ. 3ರ ವರೆಗೆ ರದ್ದಾಗಿದೆ.
ನಂ.16596 ಕಾರವಾರ -ಕೆಎಸ್‌ಆರ್‌ ಬೆಂಗಳೂರು ವಿಶೇಷ ಎಕ್ಸ್‌ಪ್ರೆಸ್‌ ರೈಲು ಜು.30ರಿಂದ ಆ.4ರ ವರೆಗೆ ಸಂಪೂರ್ಣ ರದ್ದಾಗಿದೆ.
ನಂ.16576 ಮಂಗಳೂರು ಜಂಕ್ಷನ್‌ – ಯಶವಂತಪುರ ಜಂಕ್ಷನ್‌ ಎಕ್ಸ್‌ಪ್ರಸ್‌ ರೈಲನ್ನು ಜು. 30 ಮತ್ತು ಆ. 1ರಂದು ರದ್ದುಗೊಳಿಸಿದೆ.
ನಂ.16575 ಯಶವಂತಪುರ ಜಂಕ್ಷನ್‌-ಮಂಗಳೂರು ಜಂಕ್ಷನ್‌ ಆ. 31 ಮತ್ತು ಜು. 2ರಂದು ರದ್ದುಪಡಿಸಲಾಗಿದೆ.
ನಂ.16539 ಯಶವಂತಪುರ ಜಂಕ್ಷನ್‌ – ಮಂಗಳೂರು ಜಂಕ್ಷನ್‌ ಎಕ್ಸ್‌ ಪ್ರಸ್‌ ರೈಲನ್ನು ಆ.3ರಂದು ರದ್ದುಪಡಿಸಿದೆ.
ನಂ.16540 ಮಂಗಳೂರು ಜಂಕ್ಷನ್‌ – ಯಶವಂತಪುರ ಜಂಕ್ಷನ್‌ ರೈಲನ್ನು ಆ.4ರಂದು ರದ್ದುಪಡಿಸಲಾಗಿದೆ.
ನಂ.16515 ಯಶವಂತಪುರ ಜಂಕ್ಷನ್‌- ಕಾರವಾರ ಎಕ್ಸ್‌ಪ್ರೆಸ್‌ ರೈಲನ್ನು ಜು. 29, 31 ಮತ್ತು ಆ.2ರಂದು ರದ್ದುಪಡಿಸಲಾಗಿದೆ.
ನಂ.16516 ಕಾರವಾರ -ಯಶವಂತಪುರ ಜಂಕ್ಷನ್‌ ರೈಲನ್ನು ಜು. 30, ಆ. 1 ಮತ್ತು ಆ.3ರಂದು ಸಂಪೂರ್ಣ ರದ್ದುಪಡಿಸಲಾಗಿದೆ.

ಇದನ್ನೂ ಓದಿ: Shiradi Ghat: ಭೂಕುಸಿತ; ಶಿರಾಡಿ ಘಾಟ್​ನಲ್ಲಿ ಸಂಚಾರ ನಿಷೇಧ ​; ಬೆಂಗಳೂರು- ಮಂಗಳೂರು ಸಂಪರ್ಕ ಬಹುತೇಕ ಕಟ್​

Continue Reading

ವಿದೇಶ

US Mass Shooting: ಅಮೆರಿಕದ ಪಾರ್ಕ್‌ನಲ್ಲಿ ಮತ್ತೆ ಸಾಮೂಹಿಕ ಗುಂಡಿನ ದಾಳಿ; ಒಬ್ಬ ವ್ಯಕ್ತಿ ಬಲಿ, 6 ಜನಕ್ಕೆ ಗಾಯ

US Mass Shooting: ರಾಚೆಸ್ಟರ್‌ನಲ್ಲಿರುವ ಮ್ಯಾಪಲ್‌ವುಡ್‌ ಉದ್ಯಾನದಲ್ಲಿ ಭಾನುವಾರ ಸಂಜೆ ನೂರಾರು ಜನ ಸೇರಿದ್ದರು. ಇದೇ ವೇಳೆ ಗುಂಪನಲ್ಲೇ ಗುಂಡಿನ ಮೊರೆತ ಶುರುವಾಗಿದೆ. ಇದರಿಂದಾಗಿ ಗಲಿಬಿಲಿಗೊಂಡ ಜನ ಓಡಿಹೋಗಿದ್ದಾರೆ. ಮೃತ ವ್ಯಕ್ತಿ ಹಾಗೂ ಗುಂಡಿನ ದಾಳಿ ನಡೆಸಿದ ದುಷ್ಕರ್ಮಿಗಳ ಕುರಿತು ಇದುವರೆಗೆ ಪೊಲೀಸರಿಗೆ ಹೆಚ್ಚಿನ ಮಾಹಿತಿ ಲಭ್ಯವಾಗಿಲ್ಲ.

VISTARANEWS.COM


on

US Mass Shooting
Koo

ವಾಷಿಂಗ್ಟನ್:‌ ಅಮೆರಿಕದಲ್ಲಿ ನಡೆಯುತ್ತಿರುವ ಸಾಮೂಹಿಕ ಗುಂಡಿನ ದಾಳಿಗಳ ಕುರಿತು ಜಾಗತಿಕವಾಗಿ ಚರ್ಚೆಯಾಗುತ್ತಿರುವ ಬೆನ್ನಲ್ಲೇ ನ್ಯೂಯಾರ್ಕ್‌ನಲ್ಲಿ ಭಾನುವಾರ (ಜುಲೈ 28) ನಡೆದ ಸಾಮೂಹಿಕ ಗುಂಡಿನ ದಾಳಿಗೆ (US Mass Shooting) ಒಬ್ಬ ವ್ಯಕ್ತಿ ಬಲಿಯಾಗಿದ್ದಾರೆ. ನ್ಯೂಯಾರ್ಕ್‌ನ ರಾಚೆಸ್ಟರ್‌ ಪಾರ್ಕ್‌ನಲ್ಲಿ (Rochester Park) ಗುಂಡಿನ ದಾಳಿ ನಡೆಸಿದ್ದು, ಆರು ಮಂದಿ ಗಾಯಗೊಂಡಿದ್ದಾರೆ. ಆರು ಗಾಯಾಳುಗಳಲ್ಲಿ ಒಬ್ಬನ ಸ್ಥಿತಿ ಗಂಭೀರವಾಗಿದ್ದರೆ, ಐವರಿಗೆ ಸಣ್ಣಪುಟ್ಟ ಗಾಯಗಳಾಗಿವೆ ಎಂದು ತಿಳಿದುಬಂದಿದೆ.

ರಾಚೆಸ್ಟರ್‌ನಲ್ಲಿರುವ ಮ್ಯಾಪಲ್‌ವುಡ್‌ ಉದ್ಯಾನದಲ್ಲಿ ಭಾನುವಾರ ಸಂಜೆ ನೂರಾರು ಜನ ಸೇರಿದ್ದರು. ಇದೇ ವೇಳೆ ಗುಂಪನಲ್ಲೇ ಗುಂಡಿನ ಮೊರೆತ ಶುರುವಾಗಿದೆ. ಇದರಿಂದಾಗಿ ಗಲಿಬಿಲಿಗೊಂಡ ಜನ ಓಡಿಹೋಗಿದ್ದಾರೆ. ಆದರೂ, ಗುಂಡಿನ ದಾಳಿಗೆ ಒಬ್ಬ ಯುವಕ ಮೃತಪಟ್ಟಿದ್ದಾನೆ. ಕೂಡಲೇ ಸ್ಥಳಕ್ಕೆ ಆಗಮಿಸಿದ ಪೊಲೀಸರು ಪರಿಸ್ಥಿತಿಯನ್ನು ನಿಯಂತ್ರಿಸಿದ್ದಾರೆ ಎಂದು ಪೊಲೀಸ್‌ ಮೂಲಗಳು ತಿಳಿಸಿವೆ.

ಮೃತ ವ್ಯಕ್ತಿ ಹಾಗೂ ಗುಂಡಿನ ದಾಳಿ ನಡೆಸಿದ ದುಷ್ಕರ್ಮಿಗಳ ಕುರಿತು ಇದುವರೆಗೆ ಪೊಲೀಸರಿಗೆ ಹೆಚ್ಚಿನ ಮಾಹಿತಿ ಲಭ್ಯವಾಗಿಲ್ಲ. ಒಬ್ಬನೇ ಗುಂಡಿನ ದಾಳಿ ನಡೆಸಿದ್ದಾನೋ ಅಥವಾ ಹಲವು ಜನ ದಾಳಿ ನಡೆಸಿದ್ದಾರೋ ಎಂಬುದು ಕೂಡ ಗೊತ್ತಾಗಿಲ್ಲ. ಭಾನುವಾರದ ಹಿನ್ನೆಲೆಯಲ್ಲಿ ಮಕ್ಕಳು ಸೇರಿ ಪಾರ್ಕ್‌ನಲ್ಲಿ ಹೆಚ್ಚಿನ ಜನ ಸೇರಿದ್ದರು ಎಂದು ತಿಳಿದುಬಂದಿದೆ.

ಅಮೆರಿಕದಲ್ಲಿ ಸಾಮೂಹಿಕ ಗುಂಡಿನ ದಾಳಿಗಳು ಸಾಮಾನ್ಯ ಎಂಬಂತಹ ಪರಿಸ್ಥಿತಿ ಸೃಷ್ಟಿಯಾಗಿದೆ. ಕಳೆದ ತಿಂಗಳಷ್ಟೇ ಲಾಸ್‌ ವೇಗಾಸ್‌ನಲ್ಲಿ ನಡೆದ ಗುಂಡಿನ ದಾಳಿಯಲ್ಲಿ ಐವರು ಮೃತಪಟ್ಟಿದ್ದರು. ವ್ಯಕ್ತಿಯೊಬ್ಬ ಎರಡು ಅಪಾರ್ಟ್‌ಮೆಂಟ್‌ ಸಂಕೀರ್ಣಗಳಲ್ಲಿ ಗುಂಡು ಹಾರಿಸಿ ನಾಲ್ವರನ್ನು ಕೊಂದು ಬಳಿಕ ಆತ್ಮಹತ್ಯೆಗೆ ಶರಣಾಗಿದ್ದ. ಕೃತ್ಯ ಎಸಗಿದವನನ್ನು 47 ವರ್ಷದ ಎರಿಕ್ ಆಡಮ್ಸ್ ಎಂದು ಗುರುತಿಸಲಾಗಿದೆ. ಘಟನೆಯಲ್ಲಿ 13 ವರ್ಷದ ಬಾಲಕಿ ಗಂಭೀರ ಗಾಯಗೊಂಡಿದ್ದು ಆಕೆಯನ್ನು ಸ್ಥಳೀಯ ಆಸ್ಪತೆಗೆ ದಾಖಲಿಸಲಾಗಿತ್ತು.

ಅಮೆರಿಕದ ಮೈನ್‌ ಪ್ರದೇಶದ ಲೆವಿಸ್ಟನ್‌ ಎಂಬಲ್ಲಿ ಕಳೆದ ಅಕ್ಟೋಬರ್‌ನಲ್ಲಿ ಅಪರಿಚಿತ ದುಷ್ಕರ್ಮಿಯೊಬ್ಬ ನಡೆಸಿದ ಸಾಮೂಹಿಕ ಗುಂಡಿನ ದಾಳಿಯಲ್ಲಿ ಕನಿಷ್ಠ 16 ಮಂದಿ ಮೃತಪಟ್ಟಿದ್ದರು. ಸುಮಾರು 60 ಜನರು ಗಾಯಗೊಂಡಿದ್ದರು. ಈ ವೇಳೆ ಬಾರ್‌ ಮತ್ತು ರೆಸ್ಟೋರೆಂಟ್‌ನ ಎರಡು ಕಡೆ ದಾಳಿ ನಡೆದಿತ್ತು. ಬಂದೂಕು ಸಂಸ್ಕೃತಿ ವ್ಯಾಪಕವಾಗಿರುವ ಅಮೆರಿಕದಲ್ಲಿ ಕಳೆದ ವರ್ಷ 500ಕ್ಕೂ ಹೆಚ್ಚು ಸಾಮೂಹಿಕ ಗುಂಡಿನ ದಾಳಿ ನಡೆದಿತ್ತು.

ಇದನ್ನೂ ಓದಿ: Trump Assassination Bid: ಟ್ರಂಪ್‌ ಮೇಲೆ ಗುಂಡಿನ ದಾಳಿ; ಶೂಟರ್‌ ಫೋಟೋ ರಿಲೀಸ್‌- ಆತನ ಸ್ನೇಹಿತರು ಹೇಳಿದ್ದೇನು?

Continue Reading

ಅಂಕಣ

ರಾಜಮಾರ್ಗ ಅಂಕಣ: ಮುಕೇಶ್ ಅಂದರೆ ಹಾಂಟಿಂಗ್ ಮೆಲಡಿ, ನೋವಿನಲ್ಲಿ ಅದ್ದಿ ತೆಗೆದ ದನಿ!

ರಾಜಮಾರ್ಗ ಅಂಕಣ: ʼದಿಲ್ ಜಲ್ತಾ ಹೆ ತೋ’ ಎಂದು ನೋವಿನಲ್ಲಿ ಹಾಡುತ್ತ ನಮ್ಮ ʼದಿಲ್ ತೋಡಕರ್’ ಆತನು ಹೊರಟು ಹೋಗಿ 46 ವರ್ಷಗಳೇ ಕಳೆದುಹೋದವು! ಆದ್ರೂ ನಾವು ʼಜಾನೆ ಕಹಾ ಗಯೇ ಓ ದಿನ್’ ಎಂದು ಹಾಡುತ್ತ, ʼಕಭಿ ಕಭಿ ಮೇರೆ ದಿಲ್ ಮೆ’ ಎಂದು ಗುನುಗುತ್ತ ಅವನಿಗೆ ಶ್ರದ್ಧಾಂಜಲಿ ಸಮರ್ಪಣೆ ಮಾಡುತ್ತಾ ಇದ್ದೇವೆ.

VISTARANEWS.COM


on

mukesh bollywood ರಾಜಮಾರ್ಗ ಅಂಕಣ
Koo

ಸಹಸ್ರಮಾನದ ಬಾಲಿವುಡ್ ಗಾಯಕ ಮುಕೇಶ್ – ನೂರಾ ಒಂದರ ನೆನಪು

Rajendra-Bhat-Raja-Marga-Main-logo

ರಾಜಮಾರ್ಗ ಅಂಕಣ: ಆತನು ಬದುಕಿದ್ದರೆ ಮೊನ್ನೆ ಜುಲೈ 22ಕ್ಕೆ ನೂರಾ ಒಂದು ವರ್ಷಗಳು ತುಂಬಿದ ಸಂಭ್ರಮವು ಇರುತ್ತಿತ್ತು! ಇಂದು ಮುಕೇಶ್ (Mukesh) ನಮ್ಮೊಂದಿಗಿಲ್ಲ! ಆದರೆ ಆ ಗಾಯಕ (Singer) ಹಾಡಿರುವ 1300 ಮಾಧುರ್ಯದ ಹಾಡುಗಳಿವೆ! ಸಾವಿಲ್ಲದ ಹಾಡುಗಳನ್ನು ಮುಕೇಶ್ ಬಾಲಿವುಡ್ (Bollywood) ಜಗತ್ತಿನಲ್ಲಿ ಹಾಡಿ ಸೂತಕದ ಛಾಯೆ ಮೂಡಿಸಿ ಹೊರಟೇ ಹೋದರು!

ದಿಲ್ ಜಲ್ತಾ ಹೈ ತೋ ಜಲನೇ ದೋ

ʼದಿಲ್ ಜಲ್ತಾ ಹೆ ತೋ’ ಎಂದು ನೋವಿನಲ್ಲಿ ಹಾಡುತ್ತ ನಮ್ಮ ʼದಿಲ್ ತೋಡಕರ್’ ಆತನು ಹೊರಟು ಹೋಗಿ 46 ವರ್ಷಗಳೇ ಕಳೆದುಹೋದವು! ಆದ್ರೂ ನಾವು ʼಜಾನೆ ಕಹಾ ಗಯೇ ಓ ದಿನ್’ ಎಂದು ಹಾಡುತ್ತ, ʼಕಭಿ ಕಭಿ ಮೇರೆ ದಿಲ್ ಮೆ’ ಎಂದು ಗುನುಗುತ್ತ ಅವನಿಗೆ ಶ್ರದ್ಧಾಂಜಲಿ ಸಮರ್ಪಣೆ ಮಾಡುತ್ತಾ ಇದ್ದೇವೆ. ಬಾಲಿವುಡ್ಡಿಗೆ ಇನ್ನೊಬ್ಬ ಮುಕೇಶ್ ಮತ್ತೆ ಹುಟ್ಟಿ ಬರಲಿ ಎಂಬ ಹಾರೈಕೆಯೊಂದಿಗೆ!

ಆವಾರಾ ಹೂಂ…ಆವಾರಾ ಹೂಂ!

ಅವನ ಪೂರ್ತಿ ಹೆಸರು ಮುಕೇಶ್ ಚಂದ್ ಮಾಥುರ್. ಹುಟ್ಟಿದ್ದು ದೆಹಲಿಯಲ್ಲಿ. ಓದಿದ್ದು ಎಸೆಸೆಲ್ಸಿ. ಉದ್ಯೋಗ ಮಾಡಿದ್ದು PWD ಇಲಾಖೆಯಲ್ಲಿ. ಅವನ ಅಕ್ಕ ಸುಂದರ ಪ್ಯಾರಿಗೆ ಸಂಗೀತ ಕಲಿಸಲು ಗುರುಗಳು ಪ್ರತೀ ದಿನ ಮನೆಗೆ ಬಂದಾಗ ಪಕ್ಕದ ಕೋಣೆಯಲ್ಲಿ ಹಾಡುಗಳನ್ನು ಗುನುಗುತ್ತ ಸಂಗೀತವನ್ನು ಕಲಿತವನು ಮುಕೇಶ್. ಅವನ ಅಕ್ಕನ ಮದುವೆಯ ರಸಮಂಜರಿಯ ವೇದಿಕೆಯಲ್ಲಿ ಆತನು ಹಾಡುವಾಗ ಕೇಳಿದ್ದ ಹಿಂದಿಯ ಖ್ಯಾತ ನಟ ಮೋತಿಲಾಲ್ ಅವನಿಗೆ ಹೇಳಿದ್ದು ‘ನೀನು ಇರಬೇಕಾದ್ದು ಇಲ್ಲಿ ಅಲ್ಲ! ನಡಿ ಮುಂಬೈಗೆ!’

ಮುಂಬೈಗೆ ಕರೆದುಕೊಂಡು ಬಂದ ಮೋತಿಲಾಲ್ ಅವರು ಅವನ ಸಂಗೀತ ಕಲಿಕೆಗೂ ಅವಕಾಶ ಮಾಡಿಕೊಟ್ಟರು.

ಅದರ ನಡುವೆ ಎರಡು ಸಿನೆಮಾದಲ್ಲಿ ಹೀರೋ ಆಗಿ ಅಭಿನಯ ಮಾಡಲು ಹೋಗಿ ಎಡವಟ್ಟು ಮಾಡಿಕೊಂಡಿದ್ದ ಮುಕೇಶ್! ಸಿನೆಮಾ ಓಡಲಿಲ್ಲ. ಅವನಿಗೆ ತಕ್ಷಣವೇ ಅರ್ಥ ಆಗಿತ್ತು, ಇದು ನನ್ನ ಕ್ಷೇತ್ರ ಅಲ್ಲ!

ಮತ್ತೆ ಅವಕಾಶ ಹುಡುಕುತ್ತ ಸ್ಟುಡಿಯೋಗಳಿಗೆ ಅಲೆದಾಟ ತಪ್ಪಲಿಲ್ಲ. ಅನಿಲ್ ಬಿಸ್ವಾಸ್ ಕಂಪೋಸ್ ಮಾಡಿದ ‘ಪೇಹ್ಲಿ ನಜರ್’ ಸಿನಿಮಾದ ಸ್ಮರಣೀಯ ಹಾಡು ‘ದಿಲ್ ಜಲ್ತಾ ಹೈ ತೋ ಜಲನೇ ದೋ’ ಮುಕೇಶ್ ಹಾಡಿದ್ದೇ ಹಾಡಿದ್ದು, ಬಂಪರ್ ಹೊಡೆಯಿತು! ಆ ಹಾಡನ್ನು ಕೇಳಿದ ಆಗಿನ ಲೆಜೆಂಡ್ ಸಿಂಗರ್ ಸೈಗಲ್ ಹೇಳಿದರಂತೆ, ‘ಈ ಹಾಡು ನಾನೇ ಹಾಡಿದ್ದಲ್ಲವಾ! ಯಾವಾಗ ಹಾಡಿದ್ದು ಎಂದು ಮರೆತುಹೋಗಿದೆ!’

ಆಗ ಅವನಿಗೆ ಅರ್ಥ ಆದದ್ದು ʼನಾನು ಅರಿವಿಲ್ಲದೆ ಸೈಗಲ್ ಅವರ ಅನುಕರಣೆಯನ್ನು ಮಾಡುತ್ತಿರುವೆ’ ಎಂದು!

ಮುಖೇಶಗೆ ಒಲಿದ ಗುರು ನೌಶಾದ್

ಅನುಕರಣೆಯಿಂದ ಹೊರಬಂದು ಅವನದ್ದೇ ವಾಯ್ಸ್ ಡೆವೆಲಪ್ ಮಾಡಲು ತರಬೇತಿ ನೀಡಿದವರು ನೌಶಾದ್ ಸಾಬ್. ಅವರನ್ನು ಮುಕೇಶ್ ಕೊನೆತನಕ ಮರೆಯಲಿಲ್ಲ. ಸಂಗೀತ ಕ್ಷೇತ್ರದಲ್ಲಿ ತಾನು ಮಾಡಿದ ಅಷ್ಟೂ ಸಾಧನೆಯನ್ನು ತನ್ನ ಗುರುವಿಗೆ ಸಮರ್ಪಣೆ ಮಾಡಿದ್ದಾನೆ ಮುಕೇಶ್.

ಚಂಚಲ್ ಶೀತಲ್ ಸರಲಾ!

ಬಾಲಿವುಡ್ಡಿನಲ್ಲಿ ಗಟ್ಟಿಯಾಗಿ ಕಾಲು ಊರುವ ಮೊದಲೇ ಆತ ಪ್ರೀತಿಯ ಬಲೆಗೆ ಬಿದ್ದಾಗಿತ್ತು. ಅವಳ ಹೆಸರು ಸರಲಾ. ಕೋಟ್ಯಾಧಿಪತಿ ಅಪ್ಪನ ಪ್ರೀತಿಯ ಒಬ್ಬಳೇ ಮಗಳು. ಇವನೋ ʼಮಾನಾ ಆಪ್ನಿ ಜೇಬ್ ಸೆ ಫಕೀರ್ ಹೆ’ ಎಂದು ಹಾಡುತ್ತಿದ್ದ ಐಡೆಂಟಿಟಿ ಇಲ್ಲದ ಹಿನ್ನೆಲೆ ಗಾಯಕ! ʼಮೈನಾ ಭೂಲೂಂಗಾ’ ಎಂದು ಹಾಡುತ್ತ ಮುಕೇಶ್ ಅವಳಿಗೆ ಮೋಡಿಯನ್ನು ಮಾಡಿದ್ದ! ʼಚಂಚಲ ಶೀತಲ್’ ಸರಲಾ ಅವನನ್ನು ಬಿಟ್ಟಿರಲು ಆಗದೇ ಒಂದು ದಿನ ʼಭಾಗ್ ಚಲೇ’ ಎಂದಳು!

ಸಾವನ್ ಕಾ ಮಹೀನಾ..

ಸರಳವಾಗಿ ಒಂದು ʼಸಾವನ ಕಾ ಮಹೀನಾ’ ಅವರು ಒಂದು ದೇವಸ್ಥಾನದಲ್ಲಿ ಮದುವೆ ಆದರು. ಕೊನೆಯವರೆಗೂ ಪ್ರೀತಿಯಿಂದ ಬಾಳಿದರು.

1945-1978ರ ಅವಧಿಯಲ್ಲಿ ಅವನು ಹಾಡಿದ್ದು 1300 ಅಮರವಾದ ಹಾಡುಗಳನ್ನು! ಅವನ ಸಮಕಾಲೀನ ಗಾಯಕರಾದ ರಫೀ ಮತ್ತು ಕಿಶೋರ್ ಕುಮಾರ್ ಅವರಿಗೆ ಹೋಲಿಸಿದರೆ ಈ ಸಂಖ್ಯೆಯು ತುಂಬಾ ಕಡಿಮೆ. ಆದರೆ ಮುಕೇಶ್ ಹಾಡಿದ ಹಾಡುಗಳು ಎಲ್ಲವೂ ಸೂಪರ್ ಹಿಟ್. ಮಾಧುರ್ಯದ ಪರಾಕಾಷ್ಠೆ!

ಶೋಕ ಗೀತೆಗಳ ಸಾಮ್ರಾಟ ಮುಕೇಶ್!

ಅವನ ಧ್ವನಿಯಲ್ಲಿ ರಫಿಯ ವೈವಿಧ್ಯತೆ ಇರಲಿಲ್ಲ. ಕಿಶೋರ್ ಕುಮಾರನ ಕಶಿಷ್ ಇರಲಿಲ್ಲ. ಆದರೆ ಒಂದು ಹಾಂಟಿಂಗ್ ಮೆಲಡಿಯು ಖಂಡಿತವಾಗಿಯು ಇರುತ್ತಿತ್ತು. ಅದರಲ್ಲಿ ಕೂಡ ಭಗ್ನಪ್ರೇಮಿಗಳಿಗೆ ಒಂದಿಷ್ಟು ಸಾಂತ್ವನ ನೀಡುವ ವಿಷಾದ ಭಾವ ಇರುತ್ತಿತ್ತು. ಅದಕ್ಕೆ ಅವನನ್ನು ‘ಶೋಕ ಗೀತೆಗಳ ಸಾಮ್ರಾಟ’ ಎಂದು ಜನರು ಕರೆದರು. ನೋವಿನಲ್ಲಿ ಅದ್ದಿ ತೆಗೆದ ಆ ಆರ್ದ್ರ ಧ್ವನಿಯು ಬೇರೆ ಯಾವ ಗಾಯಕನಲ್ಲೂ ಇರಲಿಲ್ಲ! ಒಂದು ರೀತಿಯಲ್ಲಿ ಆತನದ್ದು ನಶೆ ಏರಿಸುವ ಧ್ವನಿ ಆಗಿತ್ತು. ಶಂಕರ್ ಜೈಕಿಷನ್, ಕಲ್ಯಾಣ್ ಜಿ ಆನಂದ ಜಿ, ಸಚಿನ್ ದೇವ್ ಬರ್ಮನ್, ಖಯ್ಯಾಂ, ಸಲೀಲ್ ಚೌಧರಿ ಮೊದಲಾದ ಸಂಗೀತ ನಿರ್ದೇಶಕರು ಮುಕೇಶನ ಒಳಗಿದ್ದ ಅದ್ಭುತ ಗಾಯಕನನ್ನು ಕಡೆದು ನಿಲ್ಲಿಸಿದರು.

ಆಗಿನ ಕಾಲದಲ್ಲಿ ಸ್ಟುಡಿಯೋ ವ್ಯವಸ್ಥೆ ಹೇಗಿತ್ತು ಎಂದರೆ ಎಲ್ಲಾ ವಾದ್ಯಗಳ ಕಲಾವಿದರು ಸಾಕಷ್ಟು ರಿಹರ್ಸಲ್ ಮಾಡಿ ಲೈವ್ ಆಗಿ ನುಡಿಸಬೇಕಾಗಿತ್ತು. ಹಿನ್ನೆಲೆ ಗಾಯಕರು ರೀ ಟೇಕ್ ಮಾಡಲು ಅವಕಾಶ ಇಲ್ಲದೆ ಒಂದೇ ಉಸಿರಲ್ಲಿ ಹಾಡಿ ಮುಗಿಸಬೇಕು. ಮುಕೇಶ್ ಇಂತಹ ಸವಾಲನ್ನು ಗೆದ್ದು ಬಂದಿದ್ದವರು!

ʼಮುಕೇಶ್ ನನ್ನ ಆತ್ಮ’ ಎಂದರು ರಾಜಕಪೂರ್

ಹಿಂದಿ ಸಿನೆಮಾರಂಗದ ಮಹಾನಟ, ಶೋಮ್ಯಾನ್ ರಾಜ್ ಕಪೂರ್ ಅವರ ವ್ಯಕ್ತಿತ್ವಕ್ಕೆ ಮುಕೇಶ್ ಧ್ವನಿಯು ತುಂಬಾ ಚೆನ್ನಾಗಿಯೇ ಹೊಂದಾಣಿಕೆ ಆಗುತ್ತಿತ್ತು. ಅದರಿಂದ ಹುಟ್ಟಿ ಬಂದದ್ದು ಎವರ್ ಗ್ರೀನ್ ಆದ ನೂರಾರು ಹಾಡುಗಳು! ಆವಾರಾ, ಬರ್ಸಾತ್, ಶ್ರೀ 420, ಸಂಗಂ, ಮೇರಾ ನಾಮ್ ಜೋಕರ್, ಅನಾರಿ, ಆಗ್, ಜಿಸ್ ದೇಶ್ ಮೆ ಗಂಗಾ ಬಹತಿ ಹೈ……….. ಈ ಸಿನಿಮಾಗಳ ಹಾಡುಗಳನ್ನು ಕೇಳಿ ನೋಡಿ. ಅಂತಹ ಹಾಡುಗಳಿಗೆ ಸಾವಿಲ್ಲ. ಅದಕ್ಕಾಗಿ ಮುಂದೆ ಮುಕೇಶ್ ನಿಧನರಾದಾಗ ರಾಜಕಪೂರ್ ಹೇಳಿದ್ದು – ನಾನು ನನ್ನ ಆತ್ಮವನ್ನು ಕಳೆದುಕೊಂಡೆ!

ಕಯಿ ಬಾರ್ ಯೂ ಹಿ ದೇಖಾ ಹೈ..

ಮುಕೇಶನಿಗೆ ‘ರಜನಿ ಗಂಧಾ’ ಹಿಂದೀ ಸಿನಿಮಾದ ಹಾಡಿಗೆ ಅತ್ಯುತ್ತಮ ಗಾಯಕ ರಾಷ್ಟ್ರ ಪ್ರಶಸ್ತಿ ದೊರೆಯಿತು( ಕಯಿ ಬಾರ್ ಯೂ ಹಿ ದೇಖಾ ಹೈ). ನಾಲ್ಕು ಫಿಲ್ಮ್ ಫೇರ್ ಪ್ರಶಸ್ತಿ, ಬೆಂಗಾಲಿ ಪತ್ರಕರ್ತರ ಸಂಘದ ಮೂರು ಪ್ರಶಸ್ತಿಗಳು ಅವನಿಗೆ ದೊರೆತಿವೆ. ಇದೆಲ್ಲಕ್ಕಿಂತ ಹೆಚ್ಚಾಗಿ ಆತನ ಮೆಲಡಿ ಹಾಡುಗಳನ್ನು ಈಗಲೂ ಕೇಳುವ, ಆಸ್ವಾದಿಸುವ, ಫೀಲ್ ಮಾಡಿಕೊಳ್ಳುವ ಬಹು ದೊಡ್ಡ ಅಭಿಮಾನಿಗಳ ಪ್ರೀತಿಯು ದೊರೆತಿತು. ಮುಖೇಶನಿಗೆ ವಿದೇಶದಲ್ಲಿ ಕೂಡ ಬಹಳ ದೊಡ್ಡ ಸಂಖ್ಯೆಯ ಅಭಿಮಾನಿಗಳ ಬಳಗ ಇದೆ.

ʼದಿಲ್ ಜಲ್ತಾ ಹೈ’ ಮುಕೇಶ್ ಅವನ ಮೊದಲ ಮತ್ತು ಕೊನೆಯ ಹಾಡಾಯಿತು!

1976 ಆಗಸ್ಟ್ 27ರಂದು ಅಮೆರಿಕಾದ ಒಂದು ಆರ್ಕೆಸ್ಟ್ರಾ ಕಾರ್ಯಕ್ರಮಕ್ಕೆ ಹಾಡಲು ಹೋಗಿದ್ದಾಗ ಹೃದಯಾಘಾತಕ್ಕೆ ಒಳಗಾಗಿ ಮುಕೇಶ್ ಉಸಿರು ನಿಂತಿತು. ಅಲ್ಲಿ ಕೂಡಾ ಆತ ಹಾಡಿದ ಕೊನೆಯ ಹಾಡು – ದಿಲ್ ಜಲ್ತಾ ಹೈ ತೋ ಜಲನೆ ದೋ! ನೆನಪು ಮಾಡಿಕೊಳ್ಳಿ, ಅದು ಮುಕೇಶ್ ಹಾಡಿದ ಮೊದಲ ಹಾಡು ಕೂಡ ಆಗಿತ್ತು! ಉಸಿರು ನಿಂತಾಗ ಅವನಿಗೆ ಕೇವಲ 53 ವರ್ಷ ಆಗಿತ್ತು. ಮುಂದೆ ಆತನ ಮಗ ನಿತಿನ್ ಮುಕೇಶ್ ಅಪ್ಪನ ಹಾಗೆ ಹಿನ್ನೆಲೆ ಗಾಯಕರಾಗಿ ಜನಪ್ರಿಯತೆ ಪಡೆದರು.

ಮುಕೇಶನ ಹಾಡುಗಳನ್ನು ಆರಾಧಿಸುತ್ತಾ, ಅವುಗಳನ್ನು ನನಗೆ ದೊರೆತ ಎಲ್ಲಾ ಕಾಲೇಜಿನ ವೇದಿಕೆಯಲ್ಲಿ, ಸ್ಪರ್ಧೆಗಳಲ್ಲಿ ಆರ್ದ್ರವಾಗಿ ಹಾಡುತ್ತ ಇದ್ದ ನನ್ನ ಹಾಗೆ ಇರುವ ಕೋಟಿ ಕೋಟಿ ಅಭಿಮಾನಿಗಳ ಮೇಲೆ ಆತನು ದಟ್ಟವಾದ ಪ್ರಭಾವವನ್ನು ಬಿಟ್ಟು ಹೋಗಿದ್ದಾನೆ. ಆತನ ಟಾಪ್ 12 ಹಾಡುಗಳನ್ನು ಪಟ್ಟಿ ಮಾಡಿ ಇಲ್ಲಿಟ್ಟು ಅವನಿಗೆ ಶ್ರದ್ಧಾಂಜಲಿ ಕೊಡುತ್ತಿರುವೆ. ಅವನ ಸಾವಿರದ ಹಾಡುಗಳಿಗೆ ಕಿವಿ ಆಗಿ ಆಯ್ತಾ!

ಈ ಹಾಡುಗಳನ್ನೊಮ್ಮೆ ಕೇಳಿ, ನೀವು ಮುಕೇಶ್ ಫ್ಯಾನ್ ಆಗದಿದ್ದರೆ ಮತ್ತೆ ಹೇಳಿ!

1) ಹೊಂಟೋ ಪೆ ಸಚ್ಚಾಯಿ ರಹತಿ ಹೈ( ಜೀಸ್ ದೇಶ್ ಮೆ ಗಂಗಾ ಬೇಹತಿ ಹೈ)
2) ದೋಸ್ತ್ ದೋಸ್ತ್ ನಾ ರಹಾ( ಸಂಗಂ)
3) ಸಾವನ ಕಾ ಮಹೀನಾ ಪವನ್ ಕರೆ ಶೋರ್ (ಮಿಲನ್)
4) ಬಸ್ ಏಹಿ ಅಪರಾಧ್ ( ಪೆಹಾಚಾನ್)
5) ಜಾನೆ ಕಹಾನ್ ಗಯೇ ಓ ದಿನ್ (ಮೇರಾ ನಾಮ್ ಜೋಕರ್)
6) ಕಹೀನ್ ದೂರ್ ಜಬ್ ದಿನ್ ಧಲ ಜಾಯೆ ( ಆನಂದ್)
7) ಮೈ ನಾ ಭೂಲೂಂಗಾ(ರೋಟಿ ಕಪಡಾ ಔರ್ ಮಕಾನ್)
8) ಇಕ್ ದಿನ್ ಭಿಕ್ ಜಾಯೆಗಾ ( ಧರಂ ಕರಂ)
9) ಕಭೀ ಕಭಿ ಮೇರೆ ದಿಲ್ ಮೆ( ಕಭೀ ಕಭಿ)
10) ಮೇರಾ ಜೂತಾ ಹೈ ಜಪಾನಿ( ಆವಾರ)
11) ತಾಲ್ ಮಿಲೆ ನದೀ ಕೆ ಜಲ ಮೆ ( ಅನೋಖಿ ರಾತ)
12) ದಿಲ್ ತಡಪ್ ತಡಪ್ ಕೆ (ಮಧುಮತಿ)

ಸಹಸ್ರಮಾನದ ಮುಕೇಶ್ ಧ್ವನಿಗೆ ಕೋಟಿ ಪ್ರಣಾಮಗಳು.

ಇದನ್ನೂ ಓದಿ: ರಾಜಮಾರ್ಗ ಅಂಕಣ: ನಾಲ್ಕನೇ ತರಗತಿ ಮಾತ್ರ ಓದಿದ ಎನ್ ನರಸಿಂಹಯ್ಯ 550 ಪತ್ತೇದಾರಿ ಕಾದಂಬರಿ ಬರೆದರು!

Continue Reading

ದೇಶ

Kalika Temple: ಭಕ್ತರು ಈ ದೇವಾಲಯಕ್ಕೆ ತುಂಡುಡುಗೆ ಧರಿಸಿ ಬಂದರೆ ಪ್ರವೇಶ ಇಲ್ಲ; ಆಡಳಿತ ಮಂಡಳಿ ಆದೇಶ

Kalika Temple: ಸುಮಾರು 400 ವರ್ಷಗಳ ಹಿಂದೆ ರತ್ಲಾಮ್‌ ಅರಸನಾಗಿದ್ದ ರತನ್‌ ಸಿಂಗ್‌ ಅವರು ಕಾಳಿಕಾ ದೇವಿಯ ಆರಾಧಕರಾಗಿದ್ದು, ಅವರು ಈ ದೇವಾಲಯವನ್ನು ನಿರ್ಮಿಸಿದ್ದಾರೆ. ಈಗ ದೇವಾಲಯದ ಆಡಳಿತ ಮಂಡಳಿಯು ತುಂಡುಡುಗೆ, ಪಾಶ್ಚಿಮಾತ್ಯ ಉಡುಪುಗಳನ್ನು ನಿಷೇಧಿಸಿದೆ. ಭಕ್ತರು ಆಡಳಿತ ಮಂಡಳಿಯ ತೀರ್ಮಾನವನ್ನು ಸ್ವಾಗತಿಸಿದ್ದಾರೆ.

VISTARANEWS.COM


on

Kalika Temple
Koo

ಭೋಪಾಲ್:‌ ಬದಲಾದ ಕಾಲಘಟ್ಟದಲ್ಲಿ, ದೇವಾಲಯಗಳಿಗೂ ತುಂಡುಡುಗೆ ಧರಿಸಿ ಬರುವ ಭಕ್ತರ ಸಂಖ್ಯೆ ಜಾಸ್ತಿಯಾಗಿರುವ ಕಾರಣ ಭಾರತದ ಹಲವು ದೇವಾಲಯಗಳಲ್ಲಿ ವಸ್ತ್ರಸಂಹಿತೆ ಜಾರಿಗೆ ತರಲಾಗಿದೆ. ಸಾಂಪ್ರದಾಯಿಕ ಉಡುಪುಗಳನ್ನು ಧರಿಸಿ ದೇವಾಲಯಕ್ಕೆ ಆಗಮಿಸಬೇಕು ಎಂಬುದಾಗಿ ದೇವಾಲಯಗಳ ಆಡಳಿತ ಮಂಡಳಿಗಳು ಆದೇಶ ಹೊರಡಿಸಿವೆ. ಈಗ ಮಧ್ಯಪ್ರದೇಶದ (Madhya Pradesh) ರತ್ಲಾಮ್‌ನಲ್ಲಿರುವ (Ratlam), ಪ್ರಸಿದ್ಧ ಕಾಳಿಕಾ ದೇವಾಲಯವು (Kalika Temple) ಕೂಡ ವಸ್ತ್ರಸಂಹಿತೆ ಜಾರಿಗೊಳಿಸಿದ್ದು, ಭಕ್ತಾದಿಗಳು ವಿದೇಶಿ ಹಾಗೂ ತುಂಡುಡುಗೆ ಧರಿಸಿ ಬರುವಂತಿಲ್ಲ ಎಂದು ಆದೇಶಿಸಿದೆ.

ದೇವಾಲಯದ ಅರ್ಚಕ ರಾಜೇಂದ್ರ ಶರ್ಮಾ ಅವರು ವಸ್ತ್ರಸಂಹಿತೆ ಜಾರಿಗೊಳಿಸಿದ್ದಾರೆ. “ದೇವಾಲಯದ ಪಾವಿತ್ರ್ಯ ಕಾಪಾಡಲು, ಭಕ್ತರು ವಿದೇಶಿ ಹಾಗೂ ತುಂಡುಡುಗೆ, ಶಾರ್ಟ್ಸ್‌ಗಳನ್ನು ಧರಿಸಿ ಬಂದರೆ, ಅವರಿಗೆ ದೇವಾಲಯ ಪ್ರವೇಶಿಸಲು ಅನುಮತಿ ನೀಡುವುದಿಲ್ಲ. ಇಂತಹ ಉಡುಪು ಧರಿಸಿ ಬರುವ ಯಾರಿಗೂ ದೇವಾಲಯದ ಗರ್ಭಗುಡಿ ಪ್ರವೇಶಿಸಲು ಭದ್ರತಾ ಸಿಬ್ಬಂದಿಯು ಬಿಡುವುದಿಲ್ಲ. ಅಂತಹ ಭಕ್ತಾದಿಗಳು ದೇವಾಲಯದ ಹೊರಗಿನಿಂದಲೇ ದರ್ಶನ ಪಡೆದು ಹೋಗಬೇಕಾಗುತ್ತದೆ” ಎಂಬುದಾಗಿ ಅರ್ಚಕ ತಿಳಿಸಿದ್ದಾರೆ.

ಸುಮಾರು 400 ವರ್ಷಗಳ ಹಿಂದೆ ರತ್ಲಾಮ್‌ ಅರಸನಾಗಿದ್ದ ರತನ್‌ ಸಿಂಗ್‌ ಅವರು ಕಾಳಿಕಾ ದೇವಿಯ ಆರಾಧಕರಾಗಿದ್ದು, ಅವರು ದೇವಾಲಯವನ್ನು ನಿರ್ಮಿಸಿದ್ದಾರೆ. ಪ್ರಸಕ್ತ ದೇವಾಲಯದ ನಿರ್ವಹಣೆಯನ್ನು ಕೋರ್ಟ್‌ ಆಫ್‌ ವಾರ್ಡ್ಸ್‌ ಕಾಯ್ದೆ ಅಡಿಯಲ್ಲಿ ಜಿಲ್ಲಾಡಳಿತವೇ ನೋಡಿಕೊಳ್ಳುತ್ತದೆ. ತಹಸೀಲ್ದಾರ್‌ ರಿಷಭ್‌ ಠಾಕೂರ್‌ ಅವರು ಕೂಡ ವಸ್ತ್ರಸಂಹಿತೆ ಕುರಿತು ಮಾತನಾಡಿದ್ದಾರೆ. “ದೇವಾಲಯದ ನಿರ್ವಹಣಾ ಸಮಿತಿಯು ಪಾಶ್ಚಿಮಾತ್ಯ ಉಡುಪುಗಳನ್ನು ನಿರ್ಬಂಧಿಸಿದೆ” ಎಂದು ಹೇಳಿದ್ದಾರೆ.

ನಿರ್ಧಾರ ಸ್ವಾಗತಿಸಿದ ಭಕ್ತರು

ಕಾಳಿಕಾ ದೇವಾಲಯದಲ್ಲಿ ಪಾಶ್ಚಿಮಾತ್ಯ ಹಾಗೂ ತುಂಡುಡುಗೆಯನ್ನು ನಿಷೇಧಿಸಿರುವ ದೇವಾಲಯ ಆಡಳಿತ ಮಂಡಳಿ ತೀರ್ಮಾನವನ್ನು ಭಕ್ತರು ಸ್ವಾಗತಿಸಿದ್ದಾರೆ. ದೇಶ-ವಿದೇಶಗಳಿಂದ ದೇವಾಲಯಕ್ಕೆ ಭಕ್ತರು ಆಗಮಿಸುತ್ತಾರೆ. ಇತ್ತೀಚೆಗೆ ದೇವಾಲಯಕ್ಕೂ ತುಂಡುಡುಗೆ ಧರಿಸಿ ಬರುವವರ ಸಂಖ್ಯೆ ಜಾಸ್ತಿಯಾಗಿದೆ. ಹಾಗಾಗಿ, ದೇವಾಲಯವು ವಸ್ತ್ರಸಂಹಿತೆ ಜಾರಿಗೊಳಿಸಿರುವುದು ಉತ್ತಮ ನಿರ್ಧಾರವಾಗಿದೆ. ಭಕ್ತರು ಸಾಂಪ್ರದಾಯಿಕ ದಿರಸು ಧರಿಸಿ ದೇವಾಲಯಕ್ಕೆ ಆಗಮಿಸುವುದು ಉತ್ತಮ ಎಂದು ಭಕ್ತರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: 16 ದೇಗುಲಗಳಲ್ಲಿ ವಸ್ತ್ರಸಂಹಿತೆ; ಹರಿದ ಜೀನ್ಸ್‌, ಶಾರ್ಟ್ಸ್‌ ತೊಟ್ಟು ಹೋದರೆ ಹೆಣ್ಣುಮಕ್ಕಳಿಗಿಲ್ಲ ಪ್ರವೇಶ

Continue Reading
Advertisement
shiradi landslide railway track
ಪ್ರಮುಖ ಸುದ್ದಿ23 mins ago

Shiradi Landslide: ಹಳಿ ಮೇಲೆ ಭೂಕುಸಿತ, ಬೆಂಗಳೂರು- ಮಂಗಳೂರು ರೈಲುಗಳು 15 ದಿನ ಬಂದ್, 400 ಕಾರ್ಮಿಕರಿಂದ ತೆರವು ಕಾರ್ಯಾಚರಣೆ

US Mass Shooting
ವಿದೇಶ40 mins ago

US Mass Shooting: ಅಮೆರಿಕದ ಪಾರ್ಕ್‌ನಲ್ಲಿ ಮತ್ತೆ ಸಾಮೂಹಿಕ ಗುಂಡಿನ ದಾಳಿ; ಒಬ್ಬ ವ್ಯಕ್ತಿ ಬಲಿ, 6 ಜನಕ್ಕೆ ಗಾಯ

Janhvi Kapoor interview Kamiya Jani trolled for calling idli-chicken curry weird combination
ಬಾಲಿವುಡ್45 mins ago

Janhvi Kapoor: ಇಡ್ಲಿ- ಚಿಕನ್ ಕರಿ ಕಾಂಬಿನೇಶನ್‌ಗೆ ಮುಖ ಕಿವುಚಿಕೊಂಡ ಖ್ಯಾತ ಯುಟ್ಯೂಬರ್‌; ತಿನ್ನಲು ಕೈ ಬಳಸಿ ಎಂದ ಜಾಹ್ನವಿ ಕಪೂರ್!

mukesh bollywood ರಾಜಮಾರ್ಗ ಅಂಕಣ
ಅಂಕಣ56 mins ago

ರಾಜಮಾರ್ಗ ಅಂಕಣ: ಮುಕೇಶ್ ಅಂದರೆ ಹಾಂಟಿಂಗ್ ಮೆಲಡಿ, ನೋವಿನಲ್ಲಿ ಅದ್ದಿ ತೆಗೆದ ದನಿ!

ವೈರಲ್ ನ್ಯೂಸ್58 mins ago

Viral Video: 7ನೇ ಡಿವೋರ್ಸ್‌ಗೆ ಕೋರ್ಟ್‌ಗೆ ಬಂದ ಮಹಿಳೆ; ಈಕೆಯ ಕುತಂತ್ರ ಕಂಡು ಜಡ್ಜ್‌ಗೆ ಶಾಕ್‌!

Tourist Place
Latest1 hour ago

Tourist Place in Tamilnadu : ತಮಿಳುನಾಡಿಗೆ ಹೋದರೆ ಈ ಅದ್ಭುತ ತಾಣಗಳಿಗೆ ಭೇಟಿ ನೀಡುವುದನ್ನು ತಪ್ಪಿಸಬೇಡಿ!

Kalika Temple
ದೇಶ1 hour ago

Kalika Temple: ಭಕ್ತರು ಈ ದೇವಾಲಯಕ್ಕೆ ತುಂಡುಡುಗೆ ಧರಿಸಿ ಬಂದರೆ ಪ್ರವೇಶ ಇಲ್ಲ; ಆಡಳಿತ ಮಂಡಳಿ ಆದೇಶ

Kannada New Movie powder Movie release date announce
ಸ್ಯಾಂಡಲ್ ವುಡ್1 hour ago

Kannada New Movie: ‘ಪೌಡರ್’ ರಿಲೀಸ್ ಡೇಟ್ ಪೋಸ್ಟ್ ಪೋನ್: ತೆರೆಗೆ ಯಾವಾಗ?

14 hours work protest
ಪ್ರಮುಖ ಸುದ್ದಿ2 hours ago

14 Hours Work: 14 ಗಂಟೆಗಳ ಕೆಲಸ; ರಾಜ್ಯ ಸರ್ಕಾರದ ವಿರುದ್ಧ ಆಗಸ್ಟ್‌ 3ರಂದು ಐಟಿ ಉದ್ಯೋಗಿಗಳ ಪ್ರತಿಭಟನೆ

India Maldives
ದೇಶ2 hours ago

India Maldives: ದುರಹಂಕಾರ ಬಿಟ್ಟು ಭಾರತಕ್ಕೆ ಧನ್ಯವಾದ ತಿಳಿಸಿದ ಮಾಲ್ಡೀವ್ಸ್‌ ಅಧ್ಯಕ್ಷ ಮೊಹಮ್ಮದ್ ಮುಯಿಜು!

Sharmitha Gowda in bikini
ಕಿರುತೆರೆ10 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ10 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ9 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ8 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ10 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ8 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ8 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ11 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Tungabhadra Dam
ಕೊಪ್ಪಳ16 hours ago

Tungabhadra Dam: ಕಾಲುವೆಯಲ್ಲಿ ಬಾಲಕರ ಈಜಾಟ; ಅಧಿಕಾರಿಗಳಿಗೆ ಪೀಕಲಾಟ!

Elephant attack
ಮಳೆ18 hours ago

Elephant attack : ಮಳೆ ಮಧ್ಯೆ ಮಲೆನಾಡಿನಲ್ಲಿ ಕಾಡಾನೆಗಳ ಕಾಟ; ಪ್ರವಾಹಕ್ಕೆ ಸಿಲುಕಿದ ಪಟಗುಂದಿ ಗ್ರಾಮ

karnataka Rain
ಮಳೆ20 hours ago

Karnataka Rain : ಮಳೆ ನಿಂತರೂ ಕಡಿಮೆಯಾಗದ ಅನಾಹುತ; ಮಾದಪುರ ಟೌನ್ ಸಮೀಪ ಗುಡ್ಡ ಕುಸಿತ

karnataka Rain
ಮಳೆ21 hours ago

Karnataka Rain : ರಭಸವಾಗಿ ಬೀಸಿದ ಗಾಳಿಗೆ ಮನೆ ಮೇಲೆ ಬಿದ್ದ ತೆಂಗಿನ ಮರ; ನದಿ ನೀರು ಸೇವಿಸದಂತೆ ಸೂಚನೆ

Karnataka weather Forecast
ಮಳೆ2 days ago

Karnataka Weather : ವೀಕೆಂಡ್‌ ಮೋಜಿಗೆ ಮಳೆರಾಯ ಅಡ್ಡಿ; ಬೆಂಗಳೂರಲ್ಲಿ ಮೋಡ ಕವಿದ ವಾತಾವರಣ

ramanagara news
ರಾಮನಗರ2 days ago

Ramanagar News : ರಾಮನಗರದಲ್ಲಿ ಎರಡು ಜಡೆ ಹಾಕಿಲ್ಲವೆಂದು ವಿದ್ಯಾರ್ಥಿನಿಯರ ಕೂದಲು ಕತ್ತರಿಸಿದ ಶಿಕ್ಷಕರು ಅಮಾನತು

karnataka rain
ಮಳೆ2 days ago

Karnataka Rain : ಕಾವೇರಿ ನದಿ ತೀರದಲ್ಲಿ ಪ್ರವಾಹ ಭೀತಿ; ಮುತ್ತತ್ತಿಗೆ ಪ್ರವಾಸಿಗರ ನಿಷೇಧ, ಶ್ರೀರಂಗಪಟ್ಟಣದಲ್ಲಿ ಪಿಂಡ ಪ್ರದಾನಕ್ಕೆ ಬ್ರೇಕ್

Ankola landslide
ಉತ್ತರ ಕನ್ನಡ3 days ago

Ankola landslide: ಅಂಕೋಲಾ-ಶಿರೂರು ಗುಡ್ಡ ಕುಸಿತ; ನಾಳೆಯಿಂದ ಪ್ಲೋಟಿಂಗ್ ಪ್ಲಾಟ್‌ಫಾರಂ ಕಾರ್ಯಾಚರಣೆ

karnataka rain
ಮಳೆ3 days ago

Karnataka Rain : ಉಕ್ಕಿ ಹರಿಯುವ ನೇತ್ರಾವತಿ ನದಿಯಲ್ಲಿ ತೇಲಿ ಬಂದ ಜೀವಂತ ಹಸು

Karnataka Rain
ಮಳೆ3 days ago

Karnataka Rain: ವಿದ್ಯುತ್‌ ದುರಸ್ತಿಗಾಗಿ ಪ್ರಾಣದ ಹಂಗು ತೊರೆದು ಉಕ್ಕಿ ಹರಿಯುವ ನೀರಿಗೆ ಧುಮುಕಿದ ಲೈನ್‌ ಮ್ಯಾನ್‌!

ಟ್ರೆಂಡಿಂಗ್‌