Site icon Vistara News

9/11 Attack: ನ್ಯೂಯಾರ್ಕ್‌ ಅವಳಿ ಗೋಪುರಗಳ ಮೇಲೆ ಉಗ್ರ ದಾಳಿಯ ಹೊಸ ವಿಡಿಯೋ ವೈರಲ್‌

9/11 attack

ವಾಷಿಂಗ್ಟನ್‌: ಅಮೆರಿಕದ ನ್ಯೂಯಾರ್ಕ್‌ನ ವರ್ಲ್ಡ್‌ ಟ್ರೇಡ್‌ ಸೆಂಟರ್(World trade center) ಅವಳಿ ಗೋಪುರ ಗುರಿಯಾಗಿಸಿ ಸೆ.11, 20011(9/11 Attack) ರಂದು ನಡೆದ ಉಗ್ರರ ದಾಳಿಯ ಹೊಸ ವಿಡಿಯೋವೊಂದು ಬರೋಬ್ಬರಿ 23 ವರ್ಷಗಳ ಬಳಿಕ ಸಾಮಾಜಿಕ ಜಾಲತಾಣದಲ್ಲಿ ವೈರಲ್‌(Viral Video) ಆಗುತ್ತಿದೆ.

ಕೀ ಸುಗಿಮೋಟೊ ಎಂಬವರು ಸಾಮಾಜಿಕ ಜಾಲತಾಣದಲ್ಲಿ ಈ ವಿಡಿಯೋ ಅಪ್‌ಲೋಡ್‌ ಮಾಡಿದ್ದು, ಬೇರೆ ಆಂಗಲ್‌ನಲ್ಲಿ ಈ ದಾಳಿಯ ದೃಶ್ಯವನ್ನು ರೆಕಾರ್ಡ್‌ ಮಾಡಲಾಗಿದೆ. ಈ ಆಯಾಮದಲ್ಲಿ ಇದುವರೆಗೆ ದಾಳಿಯ ವಿಡಿಯೋ ಕಂಡುಬಂದಿಲ್ಲ. ಈ ಗೋಪುರ ಕುಸಿತದ ದೃಶ್ಯವನ್ನು ದಕ್ಷಿಣ ಅಥವಾ ಪೂರ್ವದಿಂದ ಚಿತ್ರೀಕರಿಸಿಲ್ಲ. ಈ ಹಿಂದಿನ ಎಲ್ಲಾ ದೃಶ್ಯಗಳನ್ನು ದಕ್ಷಿಣ ಅಥವಾ ಪೂರ್ವದಿಂದಲೇ ಚಿತ್ರೀಕರಿಸಲಾಗಿತ್ತು.

ಬಿಡುಗಡೆಯು ಸಾಮಾಜಿಕ ಮಾಧ್ಯಮ ಬಳಕೆದಾರರಲ್ಲಿ ಚರ್ಚೆಗಳು ಮತ್ತು ಊಹಾಪೋಹಗಳನ್ನು ಹುಟ್ಟುಹಾಕಿದೆ ಇನ್ನು ಈ ವಿಡಿಯೋ ತುಣುಕನ್ನು ವ್ಯಾಪಕವಾಗಿ ಹಂಚಿಕೊಳ್ಳಲಾಗಿದೆ ಮತ್ತು ವಿವಿಧ ವೇದಿಕೆಗಳಲ್ಲಿ ಚರ್ಚಿಸಲಾಗಿದೆ, 9/11 ಘಟನೆಗಳ ಸುತ್ತಲಿನ ಆಸಕ್ತಿ ಮತ್ತು ಚರ್ಚೆಯನ್ನು ಎತ್ತಿ ತೋರಿಸುತ್ತದೆ.

ಘಟನೆ ಹಿನ್ನೆಲೆ ಏನು?

ಅಲ್‌ಖೈದಾ ಎಂಬ ಇಸ್ಲಾಮಿಕ್ ಉಗ್ರ ಸಂಘಟನೆ ವಿಮಾನದ ಮೂಲಕ ವಿಶ್ವದ ದೊಡ್ಡಣ್ಣ ಅಮೆರಿಕದ ಮೇಲೆ ದಾಳಿ ನಡೆಸಿ ಇಂದಿಗೆ 20 ವರ್ಷ ಸಂದಿದೆ. ಸೆಪ್ಟೆಂಬರ್ 11, 2001ರಂದು ನ್ಯೂಯಾರ್ಕ್‌ನ ವರ್ಲ್ಡ್‌ ಟ್ರೇಡ್‌ ಸೆಂಟರ್ ಅವಳಿ ಗೋಪುರಕ್ಕೆ ವಿಮಾನದ ಮೂಲಕ ದಾಳಿ ನಡೆಸಿ ಅಮೆರಿಕಗೆ ಅಲ್‌ಕೈದಾ ಉಗ್ರ ಸಂಘಟನೆ ಶಾಕ್‌ ಕೊಟ್ಟಿತ್ತು. ಈ ಭೀಕರ ಉಗ್ರ ದಾಳಿಯಲ್ಲಿ 2977 ಅಮಾಯಕರು ಮೃತರಾಗಿದ್ದರು. ಈ ಕರಾಳ ಘಟನೆ ನಡೆದು 20 ವರ್ಷವಾಗಿದೆ. ಅಮೆರಿಕ ಈ ದಿನವನ್ನು ಅಮೆರಿಕದ ಕರಾಳ ದಿನ ಎಂದು ಕರೆದಿತ್ತು.

ಅಲ್‌ಖೈದಾ ಎಂಬ ಇಸ್ಲಾಮಿಕ್ ಉಗ್ರ ಸಂಘಟನೆ ಅಧಿನಾಯಕ ಒಸಾಮಾ ಬಿನ್ ಲಾಡೆನ್ ನೇತೃತ್ವದಲ್ಲಿ ಅಮೆರಿಕದ ಮೇಲೆ ಉಗ್ರ ದಾಳಿ ನಡೆಸಿತ್ತು. ನ್ಯೂಯಾರ್ಕ್‌ನ ವರ್ಲ್ಡ್‌ ಟ್ರೇಡ್‌ ಸೆಂಟರ್ ಅವಳಿ ಗೋಪುರದ ಮೇಲೆ ವಿಮಾನ ದಾಳಿ ನಡೆದಿತ್ತು. ಸೆಪ್ಟೆಂಬರ್ 11, 2001 ಈ ಘಟನೆ ನಡೆದಿದ್ದು ಇಡೀ ಜಗತ್ತನ್ನೇ ಬೆಚ್ಚಿಬೀಳಿಸಿತ್ತು.

ಈ ಭೀಕರ ಭಯೋತ್ಪಾದಕ ದಾಳಿ ನಡೆದು ಎರಡು ದಶಕಗಳ ನಂತರ, ವಿಶ್ವ ವ್ಯಾಪಾರ ಕೇಂದ್ರದ ಮೇಲಿನ 9/11 ದಾಳಿಯಲ್ಲಿ ಸಾವನ್ನಪ್ಪಿದ ಇಬ್ಬರು ವ್ಯಕ್ತಿಗಳನ್ನು ಇದೀಗ ಗುರುತಿಸಲಾಗಿದೆ. ದಾಳಿಗಳಲ್ಲಿ ಮೃತಪಟ್ಟವರನ್ನು ಗುರುತಿಸಿ ಅವರ ಮೃತದೇಹಗಳನ್ನು ಸಂಬಂಧಿಕರಿಗೆ ಹಸ್ತಾಂತರಿಸುವ ನಿಟ್ಟಿನಲ್ಲಿ ಪ್ರಯತ್ನಗಳು ನಡೆಯುತ್ತಲೇ ಇವೆ. ಇದೀಗ ದಾಳಿ ನಡೆದು 22ನೇ ವರ್ಷ ತುಂಬುವ ಮೊದಲು ಓರ್ವ ಪುರುಷ ಮತ್ತು ಓರ್ವ ಮಹಿಳೆಯ ಅವಶೇಷಗಳನ್ನು ಗುರುತಿಸಲಾಗಿದೆ ಎಂದು ಅಧಿಕಾರಿಗಳು ದೃಢಪಡಿಸಿದ್ದಾರೆ. ಅವರ ಕುಟುಂಬಗಳ ಕೋರಿಕೆಯ ಮೇರೆಗೆ ಅಧಿಕಾರಿಗಳು ಅವರ ಹೆಸರುಗಳನ್ನು ಬಹಿರಂಗ ಪಡಿಸಿಲ್ಲ.

ಇದನ್ನೂ ಓದಿ: Kargil Vijay Diwas 2024: ದೇಶಕ್ಕಾಗಿ ಪ್ರಾಣ ತ್ಯಾಗ ಮಾಡಲು ಕ್ಷಣವೂ ಯೋಚಿಸದ ಈ ವೀರ ಯೋಧರಿಗೊಂದು ಸಲಾಮ್

Exit mobile version