ನವದೆಹಲಿ: ರೇಪ್ ಆರೋಪ ಹೊತ್ತು ದೇಶ ಪಲಾಯನ ಮಾಡಿದ ನಿತ್ಯಾನಂದ ಸ್ವಾಮಿ ಈಕ್ವೆಡಾರ್ ಕರಾವಳಿಯಲ್ಲಿ ಕೈಲಾಸ ಎಂಬ ತನ್ನದೇ ಆದ ಸ್ವಂತ ದೇಶ ನಿರ್ಮಾಣ ಮಾಡಿದ್ದು ಭಾರತೀಯರಿಗೆ ಗೊತ್ತೇ ಇರುತ್ತದೆ. ಅದೇ ರೀತಿ, ಅಮೆರಿಕ ವ್ಯಕ್ತಿಯೊಬ್ಬ ಸ್ವಂತ ದೇಶವನ್ನು (New Country) ಸೃಷ್ಟಿಸಿಕೊಂಡಿದ್ದಾನೆ. ವೃತ್ತಿಯಿಂದ ಡಿಜೆ ಆಗಿರುವ ಆರ್ ಡಬ್ ವಿಲಿಯಮ್ಸ್(R Dub Williams), ತಮ್ಮ ಪ್ರದರ್ಶನಕ್ಕೆ ಸ್ಲೋ ಜಾಮ್ಸ್ ಎಂದು ಹೆಸರಿಟ್ಟಿದ್ದಾರೆ. ಈಗ ಅದೇ ಹೆಸರನ್ನು ತಮ್ಮ ದೇಶಕ್ಕೆ ಇಟ್ಟಿದ್ದಾರೆ(Viral News). ಅಂದರೆ, ವಿಲಿಯಮ್ಸ್ ಅವರ ದೇಶದ ಹೆಸರು ಸ್ಲೋಜಾಮ್‌ಸ್ತಾನ (Slowjamastan).
ಸಿಎನ್ಎನ್ ಟ್ರಾವೆಲ್ಲರ್ ಜತೆ ಮಾತನಾಡಿರುವ ವಿಲಿಯಮ್ಸ್, ನನಗೆ ಪ್ರವಾಸ ಮಾಡಲು ಈಗ ದೇಶಗಳೇ ಉಳಿದಿಲ್ಲ. ಹಾಗಾಗಿ, ನನ್ನದೇ ಆದ ಸ್ವಂತ ನಿರ್ಮಾಣ ಮಾಡಿದ್ದೇನೆ ಎಂದು ತಿಳಿಸಿದ್ದಾರೆ. ವಿಶ್ವಸಂಸ್ಥೆ ಗುರುತಿಸಿರುವ 193 ರಾಷ್ಟ್ರಗಳ ಪೈಕಿ 192 ರಾಷ್ಟ್ರಗಳನ್ನು ಈ ಮಿಲಿಯಮ್ಸ್ ಭೇಟಿ ನೀಡಿದ್ದಾರೆ. ತಮ್ಮ ಈ ಪ್ರವಾಸದ ಪಟ್ಟಿಯಲ್ಲಿ ತುರ್ಕಮೇನಿಸ್ತಾನ ಕೊನೆಯ ರಾಷ್ಟ್ರವಾಗಿದ್ದು, ಶೀಘ್ರವೇ ಆ ರಾಷ್ಟ್ರಕ್ಕೂ ಅವರ ಭೇಟಿ ನೀಡಲಿದ್ದಾರೆ. ಈ ಕಾರಣಕ್ಕಾಗಿಯೇ ಅವರು 194ನೇ ರಾಷ್ಟ್ರವಾಗಿ ತಮ್ಮದೇ ಸ್ವಂತ ದೇಶವನ್ನು ನಿರ್ಮಾಣ ಮಾಡಿದ್ದಾರೆಂದು ಸಿಎನ್ಎನ್ ವರದಿ ಮಾಡಿದೆ.
ಅಮೆರಿಕದ ಕ್ಯಾಲಿಫೋರ್ನಿಯಾದ ಮರಳುಗಾಡಿನಲ್ಲಿ 11.07 ಎಕರೆ ಭೂಮಿಯನ್ನು ಖರೀದಿಸಿ ವಿಲಿಯಮ್ಸ್ ಅದಕ್ಕೆ ತಾವು ನಡೆಸಿಕೊಡುವ ಶೋ ಹೆಸರನ್ನೇ ಇಟ್ಟಿದ್ದಾರೆ. ಸ್ಲೋಜಾಮ್‌ಸ್ತಾನ್ ಸುಲ್ತಾನ್ ಆಗಿರುವ ವಿಲಿಯಮ್ಸ್, 2021 ಡಿಸೆಂಬರ್ 1ರಂದ ಅಮೆರಿಕದಿಂದ ಪ್ರತ್ಯೇಕಗೊಂಡ ಸ್ವತಂತ್ರ ರಾಷ್ಟ್ರ ಎಂದು ಘೋಷಿಸಿಕೊಂಡಿದ್ದಾರೆ. ದುಬ್ಲಾಂಡಿಯಾ, ಸ್ಲೋಜಾಮ್‌ಸ್ತಾನ್ ರಾಷ್ಟ್ರದ ರಾಜಧಾನಿಯಾಗಿದೆ. ಅಲ್ಲಿಂದಲೇ ಲೈವ್ ಮೂಲಕ ಸ್ವತಂತ್ರ ರಾಷ್ಟ್ರ ಎಂದು ಘೋಷಿಸಿದ್ದಾರೆ.
ಇದನ್ನೂ ಓದಿ: Swami Nithyananda: ʼಕೈಲಾಸʼದಿಂದ ವಿಶ್ವಸಂಸ್ಥೆಗೆ ಬಂದ ನಿತ್ಯಾನಂದನ ಪ್ರತಿನಿಧಿ ಯಾರೀಕೆ?
ಈ ಹೊಸ ರಾಷ್ಟ್ರವು ತನ್ನದೇ ಪಾಸ್‌ಪೋರ್ಟ್, ಸ್ವಂತ ಧ್ವಜ, ಸ್ವಂತ ಕರೆನ್ಸ್, ರಾಷ್ಟ್ರಗೀತೆ ಸೇರಿದಂತೆ ಸಾರ್ವಭೌಮ ರಾಷ್ಟ್ರಕ್ಕಿರುವ ಎಲ್ಲ ಸಂಗತಿಗಳನ್ನು ಒಳಗೊಂಡಿದೆ. ಸಿಎನ್ಎನ್ ಟ್ರಾವಲರ್ ವರದಿಯ ಪ್ರಕಾರ, ಸದ್ಯ 500 ನೋಂದಾಯಿತ ನಾಗರಿಕರಿದ್ದರು, ನೋಂದಣಿಗೆ ಇನ್ನೂ 4500 ಜನರು ಕಾಯ್ದು ಕುಳಿತಿದ್ದಾರೆ. ಅಂದ ಹಾಗೆ, ಹೊಸ ದೇಶ ನಿರ್ಮಾಣಕ್ಕೆ ವಿಲಿಯಮ್ಸ್ ಕೇವಲ 15 ಲಕ್ಷ ವೆಚ್ಚವಾಗಿದೆ.
ವಿದೇಶದ ಇನ್ನಷ್ಟು ಕುತೂಹಲಕರ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.