Site icon Vistara News

America: ಶ್ವೇತಭವನದಲ್ಲಿ ಮೊಳಗಿದ ಸಾರೆ ಜಹಾನ್‌ ಸೇ ಅಚ್ಚಾ..ವಿಡಿಯೋ ನೋಡಿ

America

ವಾಷಿಂಗ್ಟನ್‌: ಅಮೆರಿಕ(America)ದಲ್ಲಿ ಆಯೋಜಿಸಲಾಗಿದ್ದ ಸರ್ಕಾರಿ ಕಾರ್ಯಕ್ರಮದಲ್ಲಿ ಭಾರತದ ದೇಶಭಕ್ತಿಗೀತೆ ಸಾರಾ ಜಹಾನ್‌ ಸೇ ಅಚ್ಛಾ ಹಾಡು ಮೊಳಗಿದೆ. ಶ್ವೇತಭವನದಲ್ಲಿ ಆಯೋಜನೆಗೊಂಡಿದ್ದ ಏಷಿಯನ್‌ ಅಮೆರಿಕನ್‌, ಸ್ಥಳೀಯ ಹವಾಯಿಯನ್‌ ಮತ್ತು ಪೆಸಿಫಿಕ್‌ ಐಲ್ಯಾಂಡರ್‌ (AANHPI) ಪಾರಂಪರ್ಯ ಮಾಸಾಚರಣೆ(Heritage Month) ಕಾರ್ಯಕ್ರಮದಲ್ಲಿ ಅಮೆರಿಕ ಅಧ್ಯಕ್ಷ ಜೋ ಬೈಡೆನ್‌(Joe Biden) ಮತ್ತು ಉಪಾಧ್ಯಕ್ಷ ಕಮಲಾ ಹ್ಯಾರೀಸ್‌(Kamala Harris) ಭಾಗಿಯಾಗಿದ್ದರು. ಈ ವೇಳೆ ಶ್ವೇತಭವನದ ಮೆರೈನ್ ಬ್ಯಾಂಡ್ ಸಾರೆ ಜಹಾನ್ ಸೆ ಅಚ್ಚಾ ಹಿಂದೂಸ್ತಾನ್ ಹಮಾರಾ(Sare Jahan Se Achha Hindustan Hamara) ಹಾಡನ್ನು ಹಾಡಿ ಎಲ್ಲರನ್ನು ರಂಜಿಸಿದೆ.

ಭಾರತದ ಸ್ವಾತಂತ್ರ್ಯ ಹೋರಾಟದ ಸಮಯದಲ್ಲಿ ಮೊಹಮ್ಮದ್ ಇಕ್ಬಾಲ್ ಬರೆದ ದೇಶಭಕ್ತಿ ಗೀತೆಯನ್ನು ವಾರ್ಷಿಕ ಕಾರ್ಯಕ್ರಮಕ್ಕೆ ಅಧ್ಯಕ್ಷರಿಂದ ಆಹ್ವಾನಿಸಲ್ಪಟ್ಟ ಭಾರತೀಯ ಅಮೆರಿಕನ್ನರ ಕೋರಿಕೆಯ ಮೇರೆಗೆ ಶ್ವೇತಭವನದ ಮೆರೈನ್ ಬ್ಯಾಂಡ್ ಎರಡು ಬಾರಿ ನುಡಿಸಿತು. ಇದೊಂದು ಹೆಮ್ಮೆಯ ವಿಚಾರವಾಗಿದ್ದು, ಇದರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದ್ದು, ಹಲವು ಭಾರತೀಯರು ಹೆಮ್ಮೆ ವ್ಯಕ್ತಪಡಿಸಿದ್ದಾರೆ.

ಶ್ವೇತಭವನದ ರೋಸ್‌ ಗಾರ್ಡನ್‌ ಪ್ರದೇಶದಲ್ಲಿ AANHPI ಪಾರಂಪರಿಕ ಮಾಸಾಚರಣೆಯನ್ನು ಬಹಳ ಅದ್ಭುತವಾಗಿ ಆಚರಣೆ ಮಾಡಲಾಗಿತ್ತು. ಅತ್ಯುತ್ತಮ ಭಾಗವೆಂದರೆ, ನಾನು ಶ್ವೇತಭವನಕ್ಕೆ ಕಾಲಿಟ್ಟಾಗ, ಸಂಗೀತಗಾರರು ನನ್ನನ್ನು ‘ಸಾರೆ ಜಹಾನ್ ಸೆ ಅಚ್ಚಾ ಹಿಂದೂಸ್ತಾನ್ ಹಮಾರಾ’ ನುಡಿಸುತ್ತಾ ಸ್ವಾಗತಿಸಿದರು. ಇಡೀ ವಿಶ್ವಕ್ಕಿಂತ ಉತ್ತಮವಾದುದು ನಮ್ಮ ಹಿಂದೂಸ್ತಾನ್” ಎಂದು ಭಾರತೀಯ ಅಮೆರಿಕನ್ ಸಮುದಾಯದ ನಾಯಕ ಅಜಯ್ ಜೈನ್ ಭುಟೋರಿಯಾ ರೋಸ್ ಗಾರ್ಡನ್ ಸ್ವಾಗತದ ನಂತರ ಮಾಧ್ಯಮಗಳಿಗೆ ನೀಡಿದ ಸಂದರ್ಶನವೊಂದರಲ್ಲಿ ತಿಳಿಸಿದರು. ಕಳೆದ ಒಂದು ವರ್ಷದಲ್ಲಿ ಇದು ಎರಡನೇ ಬಾರಿ ಶ್ವೇತಭವನದಲ್ಲಿ ಜನಪ್ರಿಯ ಭಾರತೀಯ ದೇಶಭಕ್ತಿ ಗೀತೆಯನ್ನು ನುಡಿಸಲಾಗಿದೆ. ಕಳೆದ ವರ್ಷ ಜೂನ್ 23 ರಂದು ಪ್ರಧಾನಿ ನರೇಂದ್ರ ಮೋದಿಯವರ ಐತಿಹಾಸಿಕ ಅಮೆರಿಕ ಭೇಟಿಯ ಸಮಯದಲ್ಲಿ ದೇಶಭಕ್ತಿಗೀತೆಯನ್ನು ಹಾಡಲಾಗಿತ್ತು.

ಇದನ್ನೂ ಓದಿ:Ramayana Movie: ದೇಶದ ಅತ್ಯಂತ ದುಬಾರಿ ಚಿತ್ರ ಎನಿಸಿಕೊಳ್ಳಲಿದೆ ʼರಾಮಾಯಣʼ; ಬಜೆಟ್‌ ನಿಮ್ಮ ಊಹೆಗೂ ನಿಲುಕದ್ದು

ಇನ್ನು ಅಜಯ್‌ ಜೈನ್‌ ಈ ಬಗ್ಗೆ ಎಕ್ಸ್‌ನಲ್ಲಿ ಪೋಸ್ಟ್‌ ಕೂಡ ಮಾಡಿದ್ದು, ಶ್ವೇತಭವನದಲ್ಲಿ ಜೋ ಬೈಡೆನ್‌ ಮತ್ತು ಕಮಲಾ ಹ್ಯಾರಿಸ್‌ ಇದ್ದ ಕಾರ್ಯಕ್ರಮದಲ್ಲಿ ಭಾರತೀಯ ದೇಶಭಕ್ತಿಗೀತೆ ಸಾರಾ ಜಹಾನ್‌ ಸೇ ಅಚ್ಛಾ ಗೀತೆಯನ್ನು ಹಾಡಲಾಯಿತು. ಕಾರ್ಯಕ್ರಮದಲ್ಲಿ ದೇಶೀಯ ಆಹಾರವಾದ ಪಾನಿಪುರಿ ಮತ್ತು ಖೋಯಾಗಳನ್ನು ಸರ್ವ್‌ ಮಾಡಲಾಯಿತು. ಭಾರತ ಮತ್ತು ಅಮೆರಿಕದ ನಂಟು ಭದ್ರವಾಗಿದೆ ಎಂದು ಹೇಳಿದರು.

Exit mobile version