Site icon Vistara News

Walking Snake | ಹರಿದಾಡುವ ಹಾವು ನೋಡಿದ್ದೀರಿ, ಆದರೆ ನಡೆದಾಡುವ ಹಾವು ನೋಡಿದ್ದೀರಾ? ಇಲ್ಲಿದೆ ವಿಡಿಯೊ

Walking Snake

ವಾಷಿಂಗ್ಟನ್:‌ ಇದುವರೆಗೆ ನಾವು ನೆಲದ ಮೇಲೆ ಹರಿದಾಡುವ, ನೀರಿನಲ್ಲಿ ಈಜಾಡುವ ಹಾವುಗಳನ್ನು ನೋಡಿದ್ದೇವೆ, ಕೇಳಿದ್ದೇವೆ. ಆದರೆ, ಎಂದಾದರೂ ನಡೆದಾಡುವ ಹಾವನ್ನು ನೋಡಿದ್ದೇವಾ? ಖಂಡಿತ ಇಲ್ಲ. ಆದರೆ, ಅಮೆರಿಕದ ಎಂಜಿನಿಯರ್‌ ಹಾಗೂ ಯುಟ್ಯೂಬರ್‌ ಅಲೆನ್‌ ಪ್ಯಾನ್‌ ಅವರು ನಡೆದಾಡುವ ಹಾವನ್ನೂ (Walking Snake) ನೋಡುವಂತೆ ಮಾಡಿದ್ದಾರೆ.

ಹಾವುಗಳೂ ನಡೆದಾಡುವಂತೆ ಮಾಡಲು ಅಲೆನ್‌ ಪ್ಯಾನ್‌ ಅವರು ರೊಬೊಟಿಕ್‌ ಕಾಲುಗಳನ್ನು ತಯಾರಿಸಿದ್ದು, ಇವುಗಳ ಸಹಾಯದಿಂದ ಹಾವುಗಳು ನಡೆಯಬಹುದಾಗಿದೆ. ಮೊದಲಿಗೆ ಹಾವಿನ ಟಾಯ್‌ಗೆ ರೊಬೊಟಿಕ್‌ ಕಾಲುಗಳನ್ನು ಅಭಿವೃದ್ಧಿಪಡಿಸಿದ್ದ ಅಲೆನ್‌, ಅದರ ಪ್ರಯೋಗದಲ್ಲಿ ವಿಫಲರಾದರು. ಇದಾದ ಬಳಿಕ ಜೀವಂತ ಹಾವುಗಳಿಗಾಗಿಯೇ ಬೇರೆ ರೊಬೊಟಿಕ್‌ ಕಾಲುಗಳನ್ನು ತಯಾರಿಸಿದ್ದು, ಅದಕ್ಕೆ “Snake legs 2.0” ಎಂದು ಹೆಸರಿಟಿದ್ದಾರೆ. ಹೊಸ ರೊಬೊಟಿಕ್‌ ಕಾಲುಗಳನ್ನು ಜೀವಂತ ಹಾವುಗಳಿಗೆ ಯಶಸ್ವಿಯಾಗಿ ಅಳವಡಿಸಲಾಗಿದ್ದು, ಪ್ರಯೋಗ ಯಶಸ್ವಿಯಾಗಿದೆ.

ನಕಲಿ ಹಾವುಗಳಿಗೆ ತಯಾರಿಸಿದ ರೊಬೊಟಿಕ್‌ ಕಾಲುಗಳು ಹಾಗೂ ಜೀವಂತ ಹಾವುಗಳಿಗಾಗಿಯೇ ತಯಾರಿಸಿದ ರೊಬೊಟಿಕ್‌ ಕಾಲುಗಳು, ಅವು ಹೇಗೆ ಹಾವುಗಳು ನಡೆದಾಡುತ್ತವೆ ಎಂಬುದರ ವಿಡಿಯೊವನ್ನು ಯುಟ್ಯೂಬ್‌ನಲ್ಲಿ ಅಪ್‌ಲೋಡ್‌ ಮಾಡಿದ್ದು, ಜನರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ೩೦ ಲಕ್ಷಕ್ಕೂ ಅಧಿಕ ಜನ ವಿಡಿಯೊವನ್ನು ವೀಕ್ಷಿಸಿದ್ದಾರೆ.

ಇದನ್ನೂ ಓದಿ | Animal Trafficking | ಬ್ಯಾಂಕಾಕ್‌ನಿಂದ ಬಂದವನ ಬ್ಯಾಗ್‌ನಲ್ಲಿತ್ತು ಹಾವು, ಕೋತಿ, ಆಮೆ

Exit mobile version