ವಿದೇಶ
Walking Snake | ಹರಿದಾಡುವ ಹಾವು ನೋಡಿದ್ದೀರಿ, ಆದರೆ ನಡೆದಾಡುವ ಹಾವು ನೋಡಿದ್ದೀರಾ? ಇಲ್ಲಿದೆ ವಿಡಿಯೊ
ಅಮೆರಿಕದ ಯುಟ್ಯೂಬರ್ ಒಬ್ಬರು ಹಾವುಗಳು ನಡೆದಾಡಲು (Walking Snake) ನೆರವಾಗಲಿ ಎಂದು ರೊಬೊಟಿಕ್ ಕಾಲುಗಳನ್ನು ತಯಾರಿಸಿದ್ದು, ಯುಟ್ಯೂಬ್‌ನಲ್ಲಿ ವಿಡಿಯೊಗೆ ಹೆಚ್ಚಿನ ಮೆಚ್ಚುಗೆ ವ್ಯಕ್ತವಾಗಿದೆ.
ವಾಷಿಂಗ್ಟನ್: ಇದುವರೆಗೆ ನಾವು ನೆಲದ ಮೇಲೆ ಹರಿದಾಡುವ, ನೀರಿನಲ್ಲಿ ಈಜಾಡುವ ಹಾವುಗಳನ್ನು ನೋಡಿದ್ದೇವೆ, ಕೇಳಿದ್ದೇವೆ. ಆದರೆ, ಎಂದಾದರೂ ನಡೆದಾಡುವ ಹಾವನ್ನು ನೋಡಿದ್ದೇವಾ? ಖಂಡಿತ ಇಲ್ಲ. ಆದರೆ, ಅಮೆರಿಕದ ಎಂಜಿನಿಯರ್ ಹಾಗೂ ಯುಟ್ಯೂಬರ್ ಅಲೆನ್ ಪ್ಯಾನ್ ಅವರು ನಡೆದಾಡುವ ಹಾವನ್ನೂ (Walking Snake) ನೋಡುವಂತೆ ಮಾಡಿದ್ದಾರೆ.
ಹಾವುಗಳೂ ನಡೆದಾಡುವಂತೆ ಮಾಡಲು ಅಲೆನ್ ಪ್ಯಾನ್ ಅವರು ರೊಬೊಟಿಕ್ ಕಾಲುಗಳನ್ನು ತಯಾರಿಸಿದ್ದು, ಇವುಗಳ ಸಹಾಯದಿಂದ ಹಾವುಗಳು ನಡೆಯಬಹುದಾಗಿದೆ. ಮೊದಲಿಗೆ ಹಾವಿನ ಟಾಯ್‌ಗೆ ರೊಬೊಟಿಕ್ ಕಾಲುಗಳನ್ನು ಅಭಿವೃದ್ಧಿಪಡಿಸಿದ್ದ ಅಲೆನ್, ಅದರ ಪ್ರಯೋಗದಲ್ಲಿ ವಿಫಲರಾದರು. ಇದಾದ ಬಳಿಕ ಜೀವಂತ ಹಾವುಗಳಿಗಾಗಿಯೇ ಬೇರೆ ರೊಬೊಟಿಕ್ ಕಾಲುಗಳನ್ನು ತಯಾರಿಸಿದ್ದು, ಅದಕ್ಕೆ “Snake legs 2.0” ಎಂದು ಹೆಸರಿಟಿದ್ದಾರೆ. ಹೊಸ ರೊಬೊಟಿಕ್ ಕಾಲುಗಳನ್ನು ಜೀವಂತ ಹಾವುಗಳಿಗೆ ಯಶಸ್ವಿಯಾಗಿ ಅಳವಡಿಸಲಾಗಿದ್ದು, ಪ್ರಯೋಗ ಯಶಸ್ವಿಯಾಗಿದೆ.
ನಕಲಿ ಹಾವುಗಳಿಗೆ ತಯಾರಿಸಿದ ರೊಬೊಟಿಕ್ ಕಾಲುಗಳು ಹಾಗೂ ಜೀವಂತ ಹಾವುಗಳಿಗಾಗಿಯೇ ತಯಾರಿಸಿದ ರೊಬೊಟಿಕ್ ಕಾಲುಗಳು, ಅವು ಹೇಗೆ ಹಾವುಗಳು ನಡೆದಾಡುತ್ತವೆ ಎಂಬುದರ ವಿಡಿಯೊವನ್ನು ಯುಟ್ಯೂಬ್‌ನಲ್ಲಿ ಅಪ್‌ಲೋಡ್ ಮಾಡಿದ್ದು, ಜನರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ೩೦ ಲಕ್ಷಕ್ಕೂ ಅಧಿಕ ಜನ ವಿಡಿಯೊವನ್ನು ವೀಕ್ಷಿಸಿದ್ದಾರೆ.
ಇದನ್ನೂ ಓದಿ | Animal Trafficking | ಬ್ಯಾಂಕಾಕ್‌ನಿಂದ ಬಂದವನ ಬ್ಯಾಗ್‌ನಲ್ಲಿತ್ತು ಹಾವು, ಕೋತಿ, ಆಮೆ
ಪ್ರಮುಖ ಸುದ್ದಿ
Fact Check: ಸ್ವೀಡನ್‌ನಲ್ಲಿ ‘ಸೆಕ್ಸ್ ಚಾಂಪಿಯನ್‌ಶಿಪ್’, ರತಿಕ್ರೀಡೆ ಟೂರ್ನಿ ಗೆಲ್ಲಲು ರೆಡಿಯಾಗಿದ್ರು 20 ಮಂದಿ!
Fact Check:ಸ್ವೀಡನ್‌ನಲ್ಲಿ ಈ ತಿಂಗಳು ಸೆಕ್ಸ್ ಚಾಂಪಿಯನ್‌ಶಿಪ್ ನಡೆಯಲಿದೆ ಎಂಬ ಸುದ್ದಿ ಸಾಕಷ್ಟು ಸದ್ದು ಮಾಡಿತ್ತು. ಆದರೆ, ಈ ಬಗ್ಗೆ ಯಾವುದೇ ಖಚಿತ ಮಾಹಿತಿಗಳು ಇರಲಿಲ್ಲ.
ನವದೆಹಲಿ: ಸಾಮಾನ್ಯವಾಗಿ ಚಾಂಪಿಯನ್‌ಶಿಪ್ ಎಂದ ಕೂಡಲೇ ಕ್ರೀಡೆಗೆ ಸಂಬಂಧಿಸಿದ ಯಾವುದೇ ಪಂದ್ಯಾವಳಿ ಇರಬಹುದು ಎಂದು ಭಾವಿಸುತ್ತೇವೆ. ಸ್ವೀಡನ್‌ನಲ್ಲಿ (Sweden) ಆಯೋಜಿಸಲಾಗುತ್ತಿದೆ ಎನ್ನಲಾದ ಸೆಕ್ಸ್ ಚಾಂಪಿಯನ್‌ಶಿಪ್ (Sex Championship) ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ. ಅಂದ ಹಾಗೆ, ಇದು ಸಾಮಾನ್ಯ ಕ್ರೀಡೆ ಅಲ್ಲ, ‘ರತಿಕ್ರೀಡೆ’ಗೆ ಸಂಬಂಧಿಸಿದ ಚಾಂಪಿಯನ್‌ಶಿಪ್! ಹೌದು, ಸ್ವೀಡನ್‌ನಲ್ಲಿ ಜೂನ್ ತಿಂಗಳಲ್ಲಿ ಸೆಕ್ಸ್ ಚಾಂಪಿಯನ್‌ಶಿಪ್ ಆಯೋಜಿಸಲಾಗುತ್ತಿದೆ ಎಂಬ ಸುದ್ದಿ ಸಖತ್ ವೈರಲ್ ಆಗಿದೆ(Fact Check).
ಟ್ವಿಟರ್‌ನಲ್ಲಿ ಮೊದಲು ಪ್ರಕಟವಾದ ಸುದ್ದಿಯ ವಿವರಗಳನ್ನು ಹಲವಾರು ಸುದ್ದಿವಾಹಿನಿಗಳು ಪ್ರಕಟಿಸಿದವು. ಈ ಸೆಕ್ಸ್ ಚಾಂಪಿಯನ್‌ಶಿಪ್ ಜೂನ್ 8 ರಂದು ಪ್ರಾರಂಭವಾಗುತ್ತದೆ ಮತ್ತು ಹಲವಾರು ವಾರಗಳವರೆಗೆ ಇರುತ್ತದೆ, ಭಾಗವಹಿಸುವವರು ಪ್ರತಿದಿನ ಆರು ಗಂಟೆಗಳ ಕಾಲ ಸ್ಪರ್ಧೆ ಮಾಡಬೇಕಾಗುತ್ತದೆ ಎಂದು ವರದಿಯಲ್ಲಿ ತಿಳಿಸಲಾಗಿತ್ತು. ಆದರೆ, ಈ ಸುದ್ದಿಯು ನಕಲಿ ಎಂದು ತಿಳಿದುಬಂದಿದೆ. ಸ್ವೀಡಿಷ್‌ನ ಗೋಟರ್ಬೋರ್ಗ್ಸ್-ಪೋಸ್ಟೆನ್ ಪ್ರಕಾರ, ಸೆಕ್ಸ್ ಚಾಂಪಿಯನ್‌ಶಿಪ್ ನಡೆಸುವ ಪ್ರಸ್ತಾಪಕ್ಕೆ ಅಲ್ಲಿ ಸರ್ಕಾರವು ಕಳೆದ ಏಪ್ರಿಲ್‌ನಲ್ಲಿ ಅನುಮತಿಯನ್ನು ನೀಡಿಲ್ಲ ಎನ್ನಲಾಗಿದೆ.
ಈಗಿರುವ ರದಿಗಳ ಪ್ರಕಾರ, ಸ್ವೀಡನ್‌ನಲ್ಲಿ ಫೆಡರೇಷನ್ ಆಫ್ ಸೆಕ್ಸ್ ಸಂಸ್ಥೆ ಇದೆ. ಅದರ ಮುಖ್ಸ್ಥ ಡ್ರಾಗನ್ ಬ್ರಾಸ್ಟಿಕ್ ಸೆಕ್ಸ್ ಚಾಂಪಿಯನ್‌ಶಿಪ್ ಆಯೋಜಿಸುವ ಬಗ್ಗೆ ನಿರ್ಧಾರ ಮಾಡಿದ್ದರು. ಆ ಮೂಲಕ ಮಾನವರ ಮೇಲೆ ಲೈಂಗಿಕತೆಯ ದೈಹಿಕ ಮತ್ತು ಮಾನಸಿಕ ಆರೋಗ್ಯದ ಪ್ರಭಾವವನ್ನು ಎತ್ತಿ ತೋರಿಸುವುದಾಗಿತ್ತು. ಆದರೆ, ರಾಷ್ಟ್ರೀಯ ಕ್ರೀಡಾ ಒಕ್ಕೂಟದ ಸದಸ್ಯರಾಗಲು ಸೆಕ್ಸ್ ಫೆಡರೇಶನ್‌ನ ಅರ್ಜಿಯನ್ನು ನಿರಾಕರಿಸಲಾಗಿದೆ ಎಂದು ಗೊಟರ್‌ಬೋರ್ಗ್ಸ್-ಪೋಸ್ಟನ್ ತನ್ನ ವರದಿಯಲ್ಲಿ ತಿಳಿಸಿತ್ತು. ಈ ವರ್ಷದ ಆರಂಭದಲ್ಲೇ ಬ್ರಾಸ್ಟಿಕ್ ಅವರು ತಮ್ಮ ಅರ್ಜಿಯನ್ನು ಸಲ್ಲಿಸಿದ್ದರು.
ಸೆಕ್ಸ್ ಚಾಂಪಿಯನ್ ಶಿಪ್ ನಮ್ಮ ಅವಶ್ಯಕತೆಗಳನ್ನು ಪೂರೈಸುವುದಿಲ್ಲ ಮತ್ತು ಈ ಅರ್ಜಿಯನ್ನು ತಿರಸ್ಕರಿಸಲಾಗಿದೆ. ನಾವು ಇತರ ಕೆಲಸಗಳನ್ನು ಮಾಡಬೇಕಾಗಿದೆ ಎಂದು ಕ್ರೀಡಾ ಒಕ್ಕೂಟದ ಮುಖ್ಯಸ್ಥ ಜಾರ್ನ್ ಎರಿಕ್ಸನ್ ಸ್ಥಳೀಯ ಸುದ್ದಿ ಔಟ್ಲೆಟ್ಗೆ ತಿಳಿಸಿದ್ದರು. ಫೆಡರೇಷನ್ ಆಫ್ ಸೆಕ್ಸ್‌ನ ಅಧ್ಯಕ್ಷ ಬ್ರಾಕ್ಟಿಕ್ ಅವರು ಸ್ವೀಡನ್‌ನಲ್ಲಿ ಸ್ಟ್ರಿಪ್ ಕ್ಲಬ್‌ಗಳನ್ನು ನಡೆಸುತ್ತಿದ್ದಾರೆ ಮತ್ತು ಲೈಂಗಿಕತೆಯನ್ನು ಕ್ರೀಡೆಯಾಗಿ ಪರಿಗಣಿಸಬೇಕೆಂದು ಅವರು ಒತ್ತಾಯಿಸುತ್ತಾರೆ.
ಇದನ್ನೂ ಓದಿ: Same Sex Marriage: ಸಲಿಂಗ ವಿವಾಹ ಕಾನೂನುಬದ್ಧಗೊಳಿಸಿದರೆ ಲೈಂಗಿಕ ರೋಗ ಉಲ್ಬಣ: ಆರ್‌ಎಸ್‌ಎಸ್ ಸಮೀಕ್ಷೆ ವರದಿ
ಚಟುವಟಿಕೆಗಳು ಅಥವಾ ‘ರತಿಕ್ರೀಡೆಗಳು’ 45 ನಿಮಿಷದಿಂದ 1 ಗಂಟೆಯ ಅವಧಿಯಾಗಿರುವ ಸಾಧ್ಯತೆಗಳಿರುತ್ತವೆ ಎಂಬ ಮಾಹಿತಿ ಇರುವ ಟ್ವೀಟ್‌ಗಳು ವೈರಲ್ ಆಗಿದ್ದವು. ಪ್ರತಿ ಭಾಗವಹಿಸುವವರು 5 ರಿಂದ 10 ಅಂಕಗಳನ್ನು ಗಳಿಸುವ ಮೂಲಕ 16 ವಿಭಾಗಗಳು ಇರುತ್ತವೆ ಎಂದು ತಿಳಿಸಲಾಗಿತ್ತು. ಮಜಾ ಅಂದರೆ, ಅಧಿಕೃತವಲ್ಲದೇ ಈ ಸುದ್ದಿಯನ್ನು ನಂಬಿ 20 ಜನರು ನೋಂದಣಿ ಕೂಡ ಮಾಡಿಸಿಕೊಂಡಿದ್ದರು.
ಗ್ಯಾಜೆಟ್ಸ್
Nothing Phone: ಐಫೋನ್ ಬೆನ್ನಲ್ಲೇ ಭಾರತದಲ್ಲಿ ಮತ್ತೊಂದು ಕಂಪನಿಯಿಂದ ಸ್ಮಾರ್ಟ್‌ಫೋನ್ ತಯಾರಿಕಾ ಘಟಕ
Nothing Phone: ಇತ್ತೀಚೆಗಷ್ಟೇ ಆ್ಯಪಲ್ ಕಂಪನಿಯು ಐಫೋನ್ ತಯಾರಿಕೆಯಲ್ಲಿ ಭಾರತದಲ್ಲೇ ಆರಂಭಿಸಲಾಗುವುದು ಎಂದು ಘೋಷಿಸಿತ್ತು. ಈಗ ಇಂಗ್ಲೆಂಡ್ ಮೂಲದ ನಥಿಂಗ್ ಟೆಕ್ನಾಲಜಿ ಕೂಡ ಇದೇ ಹಾದಿಯನ್ನು ತುಳಿದಿದೆ.
ನವದೆಹಲಿ: ಚೀನಾ ಬಿಟ್ಟು ಭಾರತದಲ್ಲೇ ಐಫೋನ್‌ಗಳನ್ನು ಉತ್ಪಾದಿಸಲು ಆ್ಯಪಲ್ ಕಂಪನಿ (Apple Inc) ಮುಂದಾದ ಬೆನ್ನಲ್ಲೇ, ಮತ್ತೊಂದು ಸ್ಮಾರ್ಟ್‌ಫೋನ್ (Smartphone) ತಯಾರಿಕಾ ಕಂಪನಿಯು ಇದೇ ಹಾದಿಯನ್ನು ತುಳಿದಿದೆ. ನಥಿಂಗ್ ಫೋನ್ (2) Nothing Phone (2) ಸ್ಮಾರ್ಟ್‌ಫೋನ್‌ವನ್ನು ಭಾರತದಲ್ಲಿ (India) ತಯಾರಿಸಲಾಗುವುದು ಎಂದು ನಥಿಂಗ್ ಟೆಕ್ನಾಲಜಿ (Nothing Technology Company) ಕಂಪನಿ ಹೇಳಿದೆ. ಈ ಮಾರುಕಟ್ಟೆಯ ಬೇಡಿಕೆಗಳನ್ನು ಪೂರೈಸಲು ತನ್ನ ಮುಂಬರುವ 5ಜಿ ಸ್ಮಾರ್ಟ್‌ಫೋನ್ ಅನ್ನು ಭಾರತದಲ್ಲಿ ತಯಾರಿಸಲಾಗುವುದು ಎಂದು ನಥಿಂಗ್ ಫೋನ್ ಕಂಪನಿಯು ಮಾಧ್ಯಮಗಳಿಗೆ ಖಚಿತಪಡಿಸಿದೆ. ಹೊಸ ಫೋನ್ ಬಿಡುಗಡೆಗೆ ಮುಂಚೆಯೇ ಕೆಲವು ಫೀಚರ್‌ಗಳನ್ನು ಕಂಪನಿಯು ಬಹಿರಂಗಪಡಿಸಿದೆ. ಆದರೆ, ಯಾವ ದಿನದಂದು ಈ ಫೋನ್ ಲಾಂಚ್ ಆಗಲಿದೆ ಎಂಬ ಖಚಿತ ಮಾಹಿತಯನ್ನು ಕಂಪನಿ ಬಿಟ್ಟು ಕೊಟ್ಟಿಲ್ಲ. ಮುಂದಿನ ತಿಂಗಳು ಅಂದರೆ ಜುಲೈನಲ್ಲಿ ನಥಿಂಗ್ ಫೋನ್ (2) ಭಾರತ ಮತ್ತು ಇತರ ಮಾರುಕಟ್ಟೆಗಳಲ್ಲಿ ಬಿಡುಗಡೆಯಾಗಲಿದೆ ಎಂದು ಕಂಪನಿಯು ಘೋಷಿಸಿದೆ.
ನಥಿಂಗ್ ಫೋನ್ (1) ಅನ್ನು ಭಾರತದಲ್ಲಿ ತಯಾರಿಸಲಾಗಿಲ್ಲ. ಈ ಸ್ಮಾರ್ಟ್‌ಫೋನ್ ಉತ್ತರಾಧಿಕಾರಿ ಅರ್ಥಾತ್ ಹೊಸ ಫೋನ್ ಭಾರತದಲ್ಲಿ ತಯಾರಾಗಲಿದೆ. ಭಾರತದಲ್ಲಿ ಉತ್ಪಾದನೆಯಾಗಲಿದೆ ಎಂದು ಫೋನ್ ಬೆಲೆಯ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ. ಅಗ್ಗದ ಬೆಲೆಗೆ ಫೋನ್ ಸಿಗುತ್ತದೆ ಎಂದು ಭಾವಿಸಬೇಕಿಲ್ಲ. ಯಾಕೆಂದರೆ ಭಾರತದಲ್ಲಿ ಸಾಧನವನ್ನು ಜೋಡಿಸಲಾಗುತ್ತಿಲ್ಲ. ನಥಿಂಗ್ ಫೋನ್ (2) ಜುಲೈನಲ್ಲಿ ಬಿಡುಗಡೆಯಾದಾಗ ಭಾರತದಲ್ಲಿ 40,000 ರೂ.ಕ್ಕಿಂತ ಕಡಿಮೆ ಬೆಲೆಯನ್ನು ನಿರೀಕ್ಷಿಸಲಾಗಿದೆ.
ನಥಿಂಗ್ ಸ್ಮಾರ್ಟ್‌ಫೋನ್‌ಗಳು ತಮ್ಮ ಸಾಂಪ್ರದಾಯಿಕ ಪಾರದರ್ಶಕ ವಿನ್ಯಾಸಕ್ಕೆ ಹೆಸರುವಾಸಿಯಾಗಿವೆ. ಈ ವಿನ್ಯಾಸಗಳಿಗೆ ಹೈಟೆಕ್ ಉತ್ಪಾದನಾ ಪ್ರಕ್ರಿಯೆಗಳು ಮತ್ತು ನಿಖರವಾದ ಎಂಜಿನಿಯರಿಂಗ್ ಅಗತ್ಯವಿರುತ್ತದೆ. ಹಾಗಾಗಿ, ಭಾರತದಲ್ಲಿ ಸ್ಮಾರ್ಟ್‌ಫೋನ್ ಉತ್ಪಾದನಾ ಸಾಮರ್ಥ್ಯಗಳನ್ನು ಹೆಚ್ಚಿಸಲು ಕಾರಣವಾಗಿದೆ. ಭಾರತದಲ್ಲಿ ಉತ್ಪಾದನೆಗೆ ನಮ್ಮ ಚಾಲನೆಯು ಸ್ಥಳೀಯ ಗ್ರಾಹಕರು ಮತ್ತು ಅವರ ಬೇಡಿಕೆಗಳ ಕಡೆಗೆ ನಮ್ಮ ಬದ್ಧತೆಯನ್ನು ಪ್ರತಿಬಿಂಬಿಸುತ್ತದೆ. ಫೋನ್ (2) ಅನ್ನು ಭಾರತದಲ್ಲಿ ತಯಾರಿಸಲಾಗುವುದು ಎಂದು ಘೋಷಿಸಲು ನಾವು ಹೆಮ್ಮೆಪಡುತ್ತೇವೆ ಎಂದು ನಥಿಂಗ್ ಇಂಡಿಯಾದ ಉಪಾಧ್ಯಕ್ಷ ಮತ್ತು ಜನರಲ್ ಮ್ಯಾನೇಜರ್ ಮನು ಶರ್ಮಾ ಅವರು ಹೇಳಿದ್ದಾರೆ.
ಹೊಸ ಬ್ರ್ಯಾಂಡ್ ಆಗಿರುವ ನಥಿಂಗ್ ಫೋನ್ ಹೊಸ ಹೊಸ ಆವಿಷ್ಕಾರಗಳಲ್ಲಿ ನಂಬಿಕೆಯನ್ನು ಇಟ್ಟಿದೆ. ಫೋನ್ (2) ಅನ್ನು ಮಾರುಕಟ್ಟೆಯಲ್ಲಿ ಅತ್ಯಂತ ಸಮರ್ಥನೀಯ ಸ್ಮಾರ್ಟ್‌ಫೋನ್‌ಗಳಲ್ಲಿ ಒಂದಾಗಿ ವಿನ್ಯಾಸಗೊಳಿಸಲಾಗಿದೆ ಎಂದು ಮನು ಶರ್ಮಾ ಅವರು ಹೇಳಿದರು.
ಇದನ್ನೂ ಓದಿ: Apple India: ಭಾರತದಲ್ಲಿ ಆ್ಯಪಲ್ ಕಂಪನಿಗೆ ಕೇವಲ 2 ಸ್ಟೋರ್‌ಗಳಲ್ಲಿ ತಿಂಗಳಿಗೆ ಸೇಲ್ಸ್ ಎಷ್ಟು ಕೋಟಿ?
2020ರಲ್ಲಿ ಆರಂಭವಾದ ನಥಿಂಗ್ ಕಂಪನಿಯು ಇಂಗ್ಲೆಂಡ್‌ನಲ್ಲಿ ಕೇಂದ್ರ ಕಚೇರಿಯನ್ನು ಹೊಂದಿದೆ. ಮಾರುಕಟ್ಟೆಗೆ ಪ್ರವೇಶಿಸಿದ ಎರಡೇ ವರ್ಷಗಳಲ್ಲಿ ತನ್ನದೇ ಬ್ರ್ಯಾಂಡ್ ಬಿಲ್ಡ್ ಮಾಡಿಕೊಂಡಿದೆ. ಹೊಸ ವಿನ್ಯಾಸದ ಸ್ಮಾರ್ಟ್‌ಫೋನ್‌ಗಳ ಮೂಲಕ ಭಾರತವು ಸೇರಿದಂತೆ ಜಗತ್ತಿನಾದ್ಯಂತ ತನ್ನದೇ ಪಾಲು ಪಡೆದುಕೊಂಡಿದೆ. ಆಪಲ್, ಸ್ಯಾಮ್ಸಂಗ್ ಕಂಪನಿಯ ಫೋನುಗಳಿಗೆ ತೀವ್ರ ಸ್ಪರ್ಧೆಯನ್ನು ಒಡ್ಡಿದೆ.
ತಂತ್ರಜ್ಞಾನ ಇನ್ನಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
ಕರ್ನಾಟಕ
ವಿಸ್ತಾರ TOP 10 NEWS: ರೈಲು ದುರಂತ ಕೇಸ್ CBI ತನಿಖೆಯಿಂದ, ರಾಜ್ಯದಲ್ಲಿ ಮಳೆ ಮುನ್ಸೂಚನೆವರೆಗಿನ ಪ್ರಮುಖ ಸುದ್ದಿಗಳಿವು
ದೇಶ, ವಿದೇಶ, ರಾಜ್ಯದಲ್ಲಿ ದಿನಪೂರ್ತಿ ನಡೆದ ಘಟನಾವಳಿಗಳಲ್ಲಿ ಆಯ್ದ ಪ್ರಮುಖ ಸುದ್ದಿಗಳು ವಿಸ್ತಾರ TOP 10 NEWS ನಲ್ಲಿ.
1. Odisha Train Accident: ತಪ್ಪಿತಸ್ಥರಿಗೆ ಕ್ರಮ ಎಂದು ಮೋದಿ ಎಚ್ಚರಿಕೆ ಬೆನ್ನಲ್ಲೇ ರೈಲು ದುರಂತ ಕೇಸ್ ಸಿಬಿಐಗೆ
ಒಡಿಶಾದ ಬಾಲಾಸೋರ್ ಜಿಲ್ಲೆ ಬಹನಗ ರೈಲು ನಿಲ್ದಾಣದ ಬಳಿ ಸಂಭವಿಸಿದ (Odisha Train Accident) ಭೀಕರ ರೈಲು ಅಪಘಾತದಲ್ಲಿ ಸುಮಾರು 288 ಜನ ಮೃತಪಟ್ಟಿದ್ದಾರೆ. ಸಾವಿರಕ್ಕೂ ಅಧಿಕ ಜನ ಗಾಯಗೊಂಡಿದ್ದು, ಹಲವರ ಸ್ಥಿತಿ ಇನ್ನೂ ಗಂಭೀರವಾಗಿದೆ. ಇನ್ನು ಅಪಘಾತ ನಡೆದ ಸ್ಥಳದಲ್ಲಿ ಹಳಿ ಜೋಡಣೆ ಸೇರಿ ಮರುನಿರ್ಮಾಣ ಕಾರ್ಯ ನಡೆಯುತ್ತಿದೆ. ಇದರ ಬೆನ್ನಲ್ಲೇ, ಪ್ರಕರಣದ ಕುರಿತು ಸಿಬಿಐ ತನಿಖೆಗೆ ರೈಲ್ವೆ ಮಂಡಳಿ ಶಿಫಾರಸು ಮಾಡಿದೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ.
2. Odisha Train Accident: ರೈಲುಗಳಿಗೆ ಅಲ್ಲ, ಪ್ರಧಾನಿ ಮೋದಿಗೇ ‘ಕವಚ’ದ ರಕ್ಷಣೆ! ಪಿಎಂಗೆ ಕಾಂಗ್ರೆಸ್ ಸಖತ್ ಟಾಂಗ್
ಶುಕ್ರವಾರ ಸಂಜೆ ಒಡಿಶಾದಲ್ಲಿ ಸಂಭವಿಸಿದ ತ್ರಿವಳಿ ರೈಲು ಅಪಘಾತಕ್ಕೆ (Odisha Train Accident) ಸಂಬಂಧಿಸಿದಂತೆ ಪ್ರಧಾನಿ ನರೇಂದ್ರ ಮೋದಿ (PM Narendra Modi) ವಿರುದ್ಧ ಕಾಂಗ್ರೆಸ್ (Congress) ಹರಿಹಾಯ್ದಿದೆ. ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಸುತ್ತ ಸೃಷ್ಟಿಸಿಕೊಂಡಿರುವ ‘ಕವಚ್’ (Kavach) ಅವರನ್ನು ಎಲ್ಲ ಸಾರ್ವಜನಿಕ ವಿಮರ್ಶೆ ಮತ್ತು ದೂರದರ್ಶನಗಳ ಚರ್ಚೆಯಿಂದ ರಕ್ಷಿಸುತ್ತಿದೆ. ಅದು ದೇಶದ ಜನರನ್ನು ರಕ್ಷಿಸುವುದಿಲ್ಲ ಎಂದು ಟಾಂಗ್ ಕೊಟ್ಟಿದೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ.
3. Cow slaughter: ಗೋಹತ್ಯೆ ಹೇಳಿಕೆ ನೀಡಿದ್ದು ಖಾತೆ ಬದಲಾವಣೆಗಾಗಿ: ಸಚಿವ ಕೆ. ವೆಂಕಟೇಶ್ ಕುರಿತು ಮಾಜಿ ಸಿಎಂ ಹೇಳಿದ್ದೇನು?
ಗೋವುಗಳನ್ನು ಏಕೆ ಕಡಿಯಬಾರದು ಎಂಬ ಪಶು ಸಂಗೋಪನಾ ಸಚಿವ ಕೆ. ವೆಂಕಟೇಶ್ ಹೇಳಿಕೆಯನ್ನು ಖಂಡಿಸಿರುವ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ, ತಮ್ಮ ಖಾತೆಯನ್ನು ಬದಲಾಯಿಸಲಿ ಎಂಬ ಕಾರಣಕ್ಕೆ ಸಚಿವರು ಈ ಹೇಳಿಕೆ ನೀಡಿರುವ ಸಾಧ್ಯತೆಯಿದೆ ಎಂದಿದ್ದಾರೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ.
4. Congress Guarantee: ಮಹಿಳೆಯರೂ ಬಸ್ ಟಿಕೆಟ್ ಪಡೆಯಲೇಬೇಕು: ಟಿಕೆಟ್‌ನಲ್ಲೂ ಪ್ರಚಾರ ಗಿಟ್ಟಿಸಿಕೊಂಡ ಕಾಂಗ್ರೆಸ್!
ಚುನಾವಣಾ ಪ್ರಣಾಳಿಕೆಯಲ್ಲಿ ಘೋಷಣೆ ಮಾಡಿದಂತೆ ಕಾಂಗ್ರೆಸ್ ಸರ್ಕಾರವು ಗ್ಯಾರಂಟಿ (Congress Guarantee) ಯೋಜನೆಗಳನ್ನು ಘೋಷಣೆ ಮಾಡಲಿದ್ದು, ಮೊದಲ ಯೋಜನೆಯಾಗಿ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ ಆರಂಭವಾಗಲಿದೆ. ಇದೀಗ ಬಿಎಂಟಿಸಿಯು ಮಾದರಿ ಉಚಿತ ಟಿಕೆಟನ್ನು ಬಿಡುಗಡೆ ಮಾಡಿದೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ.
5. bamul: ಹೇಳ್ದೇ ಕೇಳ್ದೇ ನಿರ್ಧಾರ ಮಾಡಿದ್ರೆ ಸರಿ ಇರೋಲ್ಲ: ಹಾಲಿನ ಸಬ್ಸಿಡಿ ಇಳಿಸಿದ ಬಮುಲ್‌ಗೆ ಸಿದ್ದರಾಮಯ್ಯ ವಾರ್ನಿಂಗ್
ಹಾಲಿನ ಉತ್ಪಾದನೆ ಹೆಚ್ಚಾಗಿದೆ ಎಂಬ ಕಾರಣಕ್ಕೆ, ರೈತರಿಗೆ ನೀಡುತ್ತಿದ್ದ ಪ್ರೋತ್ಸಾಹ ಧನವನ್ನು ಕಡಿತ ಮಾಡಿದ್ದ ಬೆಂಗಳೂರು ಜಿಲ್ಲಾ ಸಹಕಾರ ಹಾಲು ಒಕ್ಕೂಟಕ್ಕೆ (Bamul) ಸಿದ್ದರಾಮಯ್ಯ ಎಚ್ಚರಿಕೆ ನೀಡಿದ್ದಾರೆ. ಯಾವುದೇ ಕಾರಣಕ್ಕೆ ಪ್ರೋತ್ಸಾಹಧನ ಕಡಿತ ಮಾಡಬಾರದು ಎಂದು ಸೂಚಿಸಿದ್ದಾರೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ.
6. Google Wallet: ಗೂಗಲ್ ವಾಲೆಟ್‌ಗೆ 5 ಹೊಸ ಫೀಚರ್ಸ್, ಇವುಗಳಿಂದ ಏನೆಲ್ಲ ಉಪಯೋಗ?
ಟೆಕ್ ದೈತ್ಯ ಕಂಪನಿ ಗೂಗಲ್ ಕಳೆದ ವರ್ಷವಷ್ಟೇ ಗೂಗಲ್ ವಾಲೆಟ್ ಸೇವೆಯನ್ನು ಆರಂಭಿಸಿತ್ತು. ಇದೀಗ, ಐದು ಹೊಸ ಫೀಚರ್‌ಗಳನ್ನು ಜಾರಿ ಮಾಡಿದೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ.
7. Viral Video: ಪಾಕ್ ಪ್ರಧಾನಿಗೆ ಹಗ್ ಮಾಡಲು ಒಪ್ಪದ ಟರ್ಕಿ ಅಧ್ಯಕ್ಷ! ಪಾಕ್ ಪಿಎಂಗೆ ನೆಟ್ಟಿಗರಿಂದ ಮಂಗಳಾರತಿ
ಪಾಕಿಸ್ತಾನದ ಪ್ರಧಾನಿ ಶಹಬಾಜ್ ಷರೀಫ್ (pakistan prime minister Shehbaz Sharif) ಆಗಾಗ ತಮ್ಮ ವಿಚಿತ್ರ ನಡವಳಿಕೆ ಹಾಗೂ ಎದುರಿಸಿದ ಮುಜುಗರಗಳಿಂದಾಗಿ ಸೋಷಿಯಲ್ ಮೀಡಿಯಾದಲ್ಲಿ ಟ್ರೋಲ್ ಆಗುತ್ತಲೇ ಇರುತ್ತಾರೆ. ಈ ಹಿಂದೆ ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಜತೆಗಿನ ಮಾತುಕತೆ ವೇಳೆ, ಇಯರ್ ಫೋನ್ ಸಿಕ್ಕಿಸಿಕೊಳ್ಳಲು ಪರದಾಡಿದ ವಿಡಿಯೋ ಭಾರೀ ವೈರಲ್ ಆಗಿತ್ತು. ಈಗ ಅಂಥದ್ದೇ ಮತ್ತೊಂದು ಮುಜುಗರ ಪರಿಸ್ಥಿತಿಯನ್ನು ಪಾಕ್ ಪ್ರಧಾನಿ ಶಹಬಾಜ್ ಷರೀಫ್ ಅವರು ಎದುರಿಸಿದ್ದಾರೆ. ಟರ್ಕಿಯ ಅಧ್ಯಕ್ಷರಾಗಿ ಮರು ಆಯ್ಕೆಯಾದ ರೆಸಿಪ್ ತಾಯಿಪ್ ಎರ್ಡೋವನ್ (turkish president recep tayyip erdogan) ಅವರ ಪದಗ್ರಹಣ ಸಮಾರಂಭಕ್ಕೆ ಹೋದಾಗ ಈ ಟ್ರೋಲ್ ಘಟನೆ ನಡೆದಿದೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ.
8. ವಿಶ್ವ ಪರಿಸರ ದಿನ: ಸಸಿ ನೆಡಿ, ಫೋಟೊ ಕಳುಹಿಸಿ; ವಿಸ್ತಾರ ನ್ಯೂಸ್ ಅಭಿಯಾನ
ಳೆದ ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ ʼಮತ ಹಾಕಿ ಫೋಟೊ ಕಳುಹಿಸಿʼ ಅಭಿಯಾನದ ಮೂಲಕ ಕನ್ನಡಿಗರ ಮನ ಗೆದ್ದಿದ್ದ ವಿಸ್ತಾರ ನ್ಯೂಸ್ ಈಗ ಮತ್ತೊಂದು ಅಭಿಯಾನ ಆಯೋಜಿಸಿದೆ. ಪರಿಸರ ದಿನದಂದು ನೀವು ಸಸಿ ನೆಟ್ಟು ನಮಗೆ ಫೋಟೊ ಕಳುಹಿಸಿಕೊಡಿ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ.
9. Weather report: 13 ಜಿಲ್ಲೆಗಳಲ್ಲಿ ಆರ್ಭಟಿಸಲಿದ್ದಾನೆ ವರುಣ; ಇರಲಿದೆ ಗುಡುಗು, ಸಿಡಿಲು, ಬೀಸಲಿದೆ ಬಿರುಗಾಳಿ
ಮುಂದಿನ 24 ಗಂಟೆಯಲ್ಲಿ (Weather report) ದಕ್ಷಿಣ ಒಳನಾಡಿನ ಕೆಲವು ಕಡೆಗಳಲ್ಲಿ ಹಾಗೂ ಕರಾವಳಿ ಮತ್ತು ಉತ್ತರ ಒಳನಾಡಿನ ಒಂದೆರಡು ಕಡೆಗಳಲ್ಲಿ ಗುಡುಗು ಸಹಿತ ಮಳೆಯಾಗುವ (Rain alert) ಸಾಧ್ಯತೆ ಇದೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ.
10. ಮೊದಲ ರಾತ್ರಿಯಲ್ಲಿ ಹೃದಯಾಘಾತದಿಂದ ಮೃತಪಟ್ಟ ನವದಂಪತಿ; ಅಂಥದ್ದೇನಾಯ್ತು ಕೋಣೆಯಲ್ಲಿ!
ಅವತ್ತೇ ಈ ಜೋಡಿ ದಾಂಪತ್ಯಕ್ಕೆ ಕಾಲಿಟ್ಟಿದ್ದರು. ಅಂದೇ ಮೊದಲ ರಾತ್ರಿ ಸಂಭ್ರಮವೂ ಅವರದ್ದಾಗಿತ್ತು. ಆದರೆ ಮರುದಿನ ಅವರು ಮಲಗಿದ್ದ ಕೋಣೆಯಲ್ಲಿ ಶವವಾಗಿದ್ದರು. ಇವರಿಬ್ಬರ ಸಾವು ವಿಚಿತ್ರ ಎನ್ನಿಸಲು ಕಾರಣ, ಪೋಸ್ಟ್ಮಾರ್ಟಮ್ ರಿಪೋರ್ಟ್. ಏನೋ ಒಟ್ಟಾಗಿ ಆತ್ಮಹತ್ಯೆ ಮಾಡಿಕೊಂಡಿರಬೇಕು ಎಂಬ ಅನುಮಾನ ಮೊದಲು ಎಲ್ಲರಿಗೂ ಕಾಡಿತ್ತು. ಆದರೆ ಸತ್ಯ ಬೇರೆಯಿತ್ತು. ಇವರಿಬ್ಬರೂ ಹೃದಯಾಘಾತದಿಂದ (Couple dies Due to Heart Attack) ಮೃತಪಟ್ಟಿದ್ದಾಗಿ ಪೋಸ್ಟ್ಮಾರ್ಟಮ್ ವರದಿ ಹೇಳಿತ್ತು. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ.
ಪ್ರಮುಖ ಸುದ್ದಿ
Viral Video: ಪಾಕ್ ಪ್ರಧಾನಿಗೆ ಹಗ್ ಮಾಡಲು ಒಪ್ಪದ ಟರ್ಕಿ ಅಧ್ಯಕ್ಷ! ಪಾಕ್ ಪಿಎಂಗೆ ನೆಟ್ಟಿಗರಿಂದ ಮಂಗಳಾರತಿ
Viral Video: ಜಾಗತಿಕ ವೇದಿಕೆಗಳಲ್ಲಿ ಪಾಕಿಸ್ತಾನದ ಪ್ರಧಾನಿ ಶಹಬಾಜ್ ಷರೀಫ್ ಅವರು ಆಗಾಗ ಮುಜುಗರದ ಸಂದರ್ಭಗಳನ್ನು ಎದುರಿಸುತ್ತಲೇ ಇರುತ್ತಾರೆ. ಅಂಥದ್ದೇ ಮತ್ತೊಂದು ಪ್ರಸಂಗವನ್ನು ಅವರು ಟರ್ಕಿಯಲ್ಲಿ ಅನುಭವಿಸಿದ್ದಾರೆ.
ಬೆಂಗಳೂರು, ಕರ್ನಾಟಕ: ಪಾಕಿಸ್ತಾನದ ಪ್ರಧಾನಿ ಶಹಬಾಜ್ ಷರೀಫ್ (pakistan prime minister Shehbaz Sharif) ಆಗಾಗ ತಮ್ಮ ವಿಚಿತ್ರ ನಡವಳಿಕೆ ಹಾಗೂ ಎದುರಿಸಿದ ಮುಜುಗರಗಳಿಂದಾಗಿ ಸೋಷಿಯಲ್ ಮೀಡಿಯಾದಲ್ಲಿ ಟ್ರೋಲ್ ಆಗುತ್ತಲೇ ಇರುತ್ತಾರೆ. ಈ ಹಿಂದೆ ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಜತೆಗಿನ ಮಾತುಕತೆ ವೇಳೆ, ಇಯರ್ ಫೋನ್ ಸಿಕ್ಕಿಸಿಕೊಳ್ಳಲು ಪರದಾಡಿದ ವಿಡಿಯೋ ಭಾರೀ ವೈರಲ್ ಆಗಿತ್ತು. ಈಗ ಅಂಥದ್ದೇ ಮತ್ತೊಂದು ಮುಜುಗರ ಪರಿಸ್ಥಿತಿಯನ್ನು ಪಾಕ್ ಪ್ರಧಾನಿ ಶಹಬಾಜ್ ಷರೀಫ್ ಅವರು ಎದುರಿಸಿದ್ದಾರೆ. ಟರ್ಕಿಯ ಅಧ್ಯಕ್ಷರಾಗಿ ಮರು ಆಯ್ಕೆಯಾದ ರೆಸಿಪ್ ತಾಯಿಪ್ ಎರ್ಡೋವನ್ (turkish president recep tayyip erdogan) ಅವರ ಪದಗ್ರಹಣ ಸಮಾರಂಭಕ್ಕೆ ಹೋದಾಗ ಈ ಟ್ರೋಲ್ ಘಟನೆ ನಡೆದಿದೆ (Viral Video). ಈ ವಿಡಿೋಯ ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ಪಾಕಿಸ್ತಾನ ಪ್ರಧಾನಿಯನ್ನು ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡಿದ್ದಾರೆ.
ಇತ್ತೀಚೆಗಷ್ಟೇ ಮುಕ್ತಾಯವಾದ ಚುನಾವಣೆಯಲ್ಲಿ ಟರ್ಕಿಯ ಅಧ್ಯಕ್ಷ ರೆಸಿಪ್ ತಾಯಿಪ್ ಎರ್ಡೋವನ್ ಮೂರನೇ ಅವಧಿಗೆ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಅವರು ತಮ್ಮ ಅಧಿಕಾರ ಸ್ವೀಕಾರ ಸಮಾರಂಭಕ್ಕೆ ಪಾಕಿಸ್ತಾನ ಪ್ರಧಾನಿ ಶಹಬಾಜ್ ಷರೀಫ್ ಅವರಿಗೆ ಆಹ್ವಾನ ನೀಡಿದ್ದರು. ಈ ಹಿನ್ನೆಲೆಯಲ್ಲಿ ಪಾಕಿಸ್ತಾನದ ಪ್ರಧಾನಿ ಷರೀಫ್ ಅವರು ಟರ್ಕಿಗೆ ಹೋಗಿದ್ದರು. ತಮ್ಮ ಪದಗ್ರಹಣಕ್ಕೆ ಆಗಮಿಸಿದ ಎಲ್ಲ ಗಣ್ಯರನ್ನು ಭೇಟಿ ಮಾಡುತ್ತಾ ಬರುವಾಗ ಟರ್ಕಿ ಅಧ್ಯಕ್ಷ ಎರ್ಡೋವನ್ ಅವರು, ಪಾಕಿಸ್ತಾನ ಪ್ರಧಾನಿ ಶಹಬಾಜ್ ಷರೀಫ್ ಅವರೊಂದಿಗೆ ಉಭಯ ಕುಶಲೋಪರಿ ಮಾತನಾಡುತ್ತಾರೆ. ಈ ವೇಳೆ, ಪಾಕ್ ಪಿಎಂ ಷರೀಫ್ ಅವರು ಎರ್ಡೋವನ್ ಅವರು ತಬ್ಬಿಕೊಂಡು ಶುಭಾಶಯ ಕೋರಲು ಹೋಗುತ್ತಾರೆ. ಆದರೆ, ಇದಕ್ಕೆ ನಿರೀಕ್ಷಿತ ಮಟ್ಟದಲ್ಲಿ ಎರ್ಡೋವನ್ ಪ್ರತಿಕ್ರಿಯಿಸುವುದಿಲ್ಲ. ಷರೀಫ್ ಎರಡು ಬಾರಿ ಪ್ರಯತ್ನಿಸಿದರೂ ಅದಕ್ಕೆ ಅವರು ಕ್ಯಾರೆ ಎನ್ನುವುದಿಲ್ಲ. ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಸಖತ್ ಟ್ರೋಲ್ ಆಗುತ್ತಿದೆ.
ಪಾಕಿಸ್ತಾನದ ಮಾಹಿತಿ ಮತ್ತು ವಾರ್ತಾ ಸಚಿವ ಮಾಡಿರುವ ಟ್ವೀಟ್
PM Shehbaz Sharif felicitates Turkey's long-serving president, Recep Tayyip Erdogan, who has been sworn in for his third term in office at historic inaugural ceremony 🇹🇷 🇵🇰 pic.twitter.com/zoU4Bf657C
— Marriyum Aurangzeb (@Marriyum_A) June 3, 2023
ಪಾಕಿಸ್ತಾನದ ಮಿತ್ರ ರಾಷ್ಟ್ರವಾಗಿರುವ ಟರ್ಕಿ ಹೇಗೆ ಪಾಕಿಸ್ತಾನದ ಪ್ರಧಾನಿಗೆ ಸ್ವಾಗತ ನೀಡಿದೆ ಎಂಬುದನ್ನು ತಿಳಿಸಲು ಪಾಕಿಸ್ತಾನದ ಮಾಹಿತಿ ಮತ್ತು ವಾರ್ತಾ ಸಚಿವೆ ಮರಿಯೂಮ್ ಔರಂಗಜೇಬ್ ಅವರು ಈ ವಿಡಿಯೋವನ್ನು ಟ್ವಿಟರ್‌ನಲ್ಲಿ ಷೇರ್ ಮಾಡಿಕೊಂಡಿದ್ದಾರೆ. ಆದರೆ, ನೆಟ್ಟಿಗರು ಮಾತ್ರ ಈ ವಿಡಿಯೋವನ್ನು ಫುಲ್ ಟ್ರೋಲ್ ಮಾಡುತ್ತಿದ್ದಾರೆ. ಹಲವು ಬಳಕೆದಾರರು, ಪಾಕಿಸ್ತಾನದ ಪ್ರಧಾನಿ ಶಹಬಾಜ್ ಷರೀಪ್ ಅವರು ತಮ್ಮ ಮಾನವನ್ನು ಕಳೆದುಕೊಳ್ಳುವುದು ಮಾತ್ರವಲ್ಲದೇ, ಪಾಕಿಸ್ತಾನ ಮಾನವನ್ನು ಜಾಗತಿಕವಾಗಿ ಹರಾಜು ಹಾಕಿದ್ದಾರೆಂದು ಟೀಕಿಸಿದ್ದಾರೆ.
ಇದನ್ನೂ ಓದಿ: Video Viral: ಅಯ್ಯೋ ಭಗವಂತ, ಆನೆ ಓಡೋಡಿ ಬಂದೇ ಬಿಡ್ತು, ಇನ್ನೇನು ಗತಿ?; ವಿಚಾರವಾದಿ ಭಗವಾನ್ ಜಸ್ಟ್ ಸೇವ್!
ಟ್ವೀಟ್ ಮಾಡಿರುವ ಪಾಕಿಸ್ತಾನದ ಮಾಹಿತಿ ಮತ್ತು ವಾರ್ತಾ ಸಚಿವೆ ಮರಿಯೂಮ್ ಔರಂಗಜೇಬ್ ಅವರು ಟ್ವೀಟ್ ಮಾಡಿ, ಐತಿಹಾಸಿಕ ಉದ್ಘಾಟನಾ ಸಮಾರಂಭದಲ್ಲಿ ತಮ್ಮ ಮೂರನೇ ಅವಧಿಗೆ ಅಧಿಕಾರಕ್ಕೆ ಪ್ರಮಾಣವಚನ ಸ್ವೀಕರಿಸಿದ ಟರ್ಕಿಯ ಸುದೀರ್ಘ ಸೇವೆ ಸಲ್ಲಿಸಿದ ಅಧ್ಯಕ್ಷ ರೆಸೆಪ್ ತಯ್ಯಿಪ್ ಎರ್ಡೋಗನ್ ಅವರನ್ನು ಪ್ರಧಾನಮಂತ್ರಿ ಶೆಹಬಾಜ್ ಷರೀಫ್ ಅವರು ಅಭಿನಂದಿಸಿದರು ಎಂದು ಬರೆದುಕೊಂಡಿದ್ದಾರೆ. ಆದರೆ, ಈ ವಿಡಿಯೋ ಮಾತ್ರ ಫುಲ್ ಟ್ರೋಲ್ ಆಗುತ್ತಿದೆ. ಪಾಕಿಸ್ತಾನದ ಬಹಳಷ್ಟು ಬಳಕೆದಾರರು ತಮ್ಮ ಪ್ರಧಾನಿ ಶಹಬಾಜ್ ಷರೀಪ್ ವಿರುದ್ಧ ಕೆಂಡ ಕಾರಿದ್ದಾರೆ.
ಇನ್ನಷ್ಟು ಕುತೂಹಲಕರ ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
-
ಕರ್ನಾಟಕ19 hours ago
Odisha Train Accident: ಒಡಿಶಾ ರೈಲು ದುರಂತಕ್ಕೆ ಕೋಮು ಬಣ್ಣ ನೀಡಿದ ಮಹಿಳೆ, ಒಡಿಶಾ ಪೊಲೀಸರಿಂದ ತನಿಖೆ
-
ಕರ್ನಾಟಕ17 hours ago
ವಿಶ್ವ ಪರಿಸರ ದಿನ: ಸಸಿ ನೆಡಿ, ಫೋಟೊ ಕಳುಹಿಸಿ; ವಿಸ್ತಾರ ನ್ಯೂಸ್ ಅಭಿಯಾನ
-
ಕರ್ನಾಟಕ14 hours ago
Murder Case: ಟೋಲ್ ವಿಚಾರಕ್ಕೆ ಕಿರಿಕ್; ಹಾಕಿ ಸ್ಟಿಕ್ನಿಂದ ಬಡಿದು ಕೊಂದೇಬಿಟ್ಟರು ದುರುಳರು
-
ಕರ್ನಾಟಕ10 hours ago
DK Shivakumar: ಹೊಸಕೆರೆಹಳ್ಳಿ ಕೆರೆ ಮಧ್ಯೆ ರಸ್ತೆ ಮಾಡಿದ್ದಕ್ಕೆ ಜಾಡಿಸಿದ ಡಿಕೆಶಿ; ಅಧಿಕಾರಿಗಳ ಅಮಾನತಿಗೆ ಆದೇಶ
-
ದೇಶ15 hours ago
Odisha Train Accident: ಗಾಯದ ಮೇಲೆ ಬರೆ ಎಂದರೆ ಇದೇ; ಒಡಿಶಾದಲ್ಲಿ ಹಳಿ ತಪ್ಪಿದ ಮತ್ತೊಂದು ರೈಲು
-
ದೇಶ18 hours ago
world environment day : ಇಂದು ವಿಶ್ವ ಪರಿಸರ ದಿನ 2023: ಈ ದಿನದ ಮಹತ್ವ, ಇತಿಹಾಸ, ಥೀಮ್ ತಿಳಿಯಿರಿ
-
ಕರ್ನಾಟಕ7 hours ago
ಸರ್ಕಾರಿ ಬಸ್ ಓಡಿಸಿದ ಖಾಸಗಿ ವ್ಯಕ್ತಿ; ಕ್ರೂಸರ್ಗೆ ಡಿಕ್ಕಿ, ತಪ್ಪಿತು ಭಾರೀ ಅನಾಹುತ
-
ಪರಿಸರ10 hours ago
ವಿಶ್ವ ಪರಿಸರ ದಿನ: ‘ಸಸಿ ನೆಡಿ, ಫೋಟೊ ಕಳುಹಿಸಿ’ ವಿಸ್ತಾರ ಅಭಿಯಾನ; ನಿಮ್ಮ ಮತ್ತಷ್ಟು ಫೋಟೊಗಳು ಇಲ್ಲಿವೆ