Site icon Vistara News

Amrit Mahotsav | ವಿದೇಶಿ ನೆಲದಲ್ಲಿ ಭಾರತೀಯರ ಅಮೃತ ಮಹೋತ್ಸವದ ಸಂಭ್ರಮ, ಸಡಗರ

ಅಮೃತ ಮಹೋತ್ಸವ

ಸಿಯಾಟಲ್‌(ಅಮೆರಿಕಾ): ಭಾರತದ 75ನೇ ಸ್ವಾತಂತ್ರ್ಯೋತ್ಸವದ ಸಂಭ್ರಮವನ್ನು (Amrit Mahotsav) ದೇಶದಲ್ಲಿ ಎಷ್ಟು ಅದ್ಧೂರಿಯಾಗಿ ಆಚರಿಸಲಾಯಿತೋ, ಹಾಗೆಯೇ ವಿದೇಶದಲ್ಲಿ ನೆಲೆಸಿರುವ ಭಾರತೀಯರು ಈ ದಿನವನ್ನು ಸಂಭ್ರಮದಿಂದ ಬರಮಾಡಿಕೊಂಡರು.

ಅಮೆರಿಕಾದ ಸಿಯಾಟಲ್ ನಗರದಲ್ಲಿ ಅತಿ ಹೆಚ್ಚು ಭಾರತೀಯರು ಕಾರ್ಯನಿರ್ವಹಿಸುತ್ತಿದ್ದು, 75ನೇ ಸ್ವಾತಂತ್ರ್ಯ ದಿನಾಚರಣೆಯ ಅಮೃತ ಮಹೋತ್ಸವವನ್ನು ರಿಮ್ ಜಿಮ್ ತಂಡದ ಸಂಗೀತ ರಸಸಂಜೆಯೊಂದಿಗೆ ವಿಜೃಂಭಣೆಯಿಂದ ಆಚರಿಸಲಾಯಿತು.

ವಿದೇಶಿ ನೆಲದಲ್ಲಿ ಅಮೃತ ಮಹೋತ್ಸವ ಆಚರಿಸಿದ ಭಾರತೀಯರು

ಈ ಅಮೃತ ಮಹೋತ್ಸವ ಆಚರಣೆಯಲ್ಲಿ ಸುಮಾರು 2000ಕ್ಕೂ ಹೆಚ್ಚು ಜನರು ಪಾಲ್ಗೊಂಡಿದ್ದರು. ಮೈಕ್ರೋಸಾಫ್ಟ್‌ (Microsoft) ಹಾಗೂ ಅಮೆಜಾನ್‌ (Amazon) ನೆಲೆ ಇರುವ ಈ ನಗರದಲ್ಲಿ ಭಾರತೀಯರು ಗಣನೀಯ ಸಂಖ್ಯೆಯಲ್ಲಿ ವಾಸಿಸುತ್ತಿದ್ದಾರೆ.

ಈ ಸಂಗೀತ ರಸಸಂಜೆಯ ಮೂಲಕ ಅಲ್ಲಿಯ ಜನರಿಗೆ ಕನ್ನಡ, ಹಿಂದಿ, ತಮಿಳು, ತೆಲುಗು, ಬಂಗಾಳಿ ಹಾಡುಗಳನ್ನು ಕೇಳುವ ಅವಕಾಶ ದೊರೆತಂತಾಯಿತು. ವೇದಿಕೆಯ ಸುತ್ತ ಭಾರತದ ತ್ರಿವರ್ಣ ಧ್ವಜ ಹಾರಾಡಿತು. ಕೈಯಲ್ಲಿ ಧ್ವಜವನ್ನು ಹಿಡಿದು ವಂದೇ ಮಾತರಂ ಹಾಡಿಗೆ ಘೋಷಣೆ ಕೂಗುತ್ತ ವಿದೇಶದಲ್ಲಿ ಭಾರತ ಮಾತೆಯನ್ನು ನೆನೆದು ಕುಣಿದು ಕುಪ್ಪಳಿಸಿದರು.

ಇದನ್ನೂ ಓದಿ | ನನ್ನ ದೇಶ ನನ್ನ ದನಿ ಅಂಕಣ | ಸ್ವಾತಂತ್ರ್ಯ ಸೇನಾನಿಗಳ ರುಧಿರಾಭಿಷೇಕ

Exit mobile version