ನವದೆಹಲಿ: ಅದೊಂದು ಮೃಗಾಲಯ. ಅಲ್ಲಿನ ಪಂಜರದಲ್ಲಿ ಒಂಟಿ ಹೆಣ್ಣು ಚಿಂಪಾಂಜಿ(Ape) ವಾಸವಿದೆ. ಅದರ ಹೆಸರು ಮೋಮೋ(Momo). ವಯಸ್ಸು 12. ಇತ್ತೀಚೆಗೆ ಈ ಮೃಗಾಲಯದ ಪಾಲಕರಿಗೆ ಅದು ಸಡನ್ ಶಾಕ್ ನೀಡಿತು! ಏನೆಂದರೆ, ಯಾವುದೇ ಗಂಡು ಚಿಂಪಾಂಜಿ ಸಂಪರ್ಕ ಇಲ್ಲದೇ ಮೋಮೋ ಮಗು ಚಿಂಪಾಂಜಿಗೆ ಜನ್ಮ ನೀಡಿದೆ! ಗಂಡು ಚಿಂಪಾಂಜಿ ಜತೆ ಸರಸ ಸಲ್ಲಾಪ ನಡೆಸದೆಯೇ ಈ ಮೋಮೋ ಹೇಗೆ ಗರ್ಭ ಧರಿಸಿತು ಎಂಬುದೇ ಮಿಲಿಯನ್ ಡಾಲರ್ ಪ್ರಶ್ನೆಗೆ ಕೊನೆಗೂ ಉತ್ತರ ಕಂಡುಕೊಳ್ಳಲಾಗಿದೆ(Who is Father?).
ಅಂದ ಹಾಗೆ, ಈ ಘಟನೆ ನಡೆದಿದ್ದು ಜಪಾನ್‌ನ ನಾಗಸಾಕಿಯ ಕುಜುಕುಶಿಮಾ ಮೃಗಾಲಯ ಮತ್ತು ಸಸ್ಯಶಾಸ್ತ್ರೀಯ ಉದ್ಯಾನದಲ್ಲಿ. ಜನ್ಮ ನೀಡಿದ ಮೋಮೋ 2021, ಫೆಬ್ರವರಿಯಿಂದ ಯಾವುದೇ ಗಂಡು ಚಿಂಪಾಂಜಿಯೊಂದಿಗೆ ಒಡನಾಟವನ್ನೇ ಇಟ್ಟುಕೊಂಡಿಲ್ಲ. ಹಾಗಿದ್ದೂ, ಗರ್ಭಧರಿಸಿದ್ದು ಎಂಬ ಪ್ರಶ್ನೆಗೆ ಝೂ ಕೊನೆಗೂ ಉತ್ತರ ಕಂಡುಕೊಂಡಿದೆ.
ಚಿಂಪಾಂಜಿ ಮೋಮೋ ಹೇಗೆ ಗರ್ಭ ಧರಿಸಿತು ಎಂಬುದನ್ನು ಕಂಡು ಹಿಡಿಯಲು ಝೂ ಅಧಿಕಾರಿಗಳು ಡಿಎನ್ಎ ಪರೀಕ್ಷೆ ನಡೆಸಿದರು. ಮಗು ಚಿಂಪಾಂಜಿಯ ಅಪ್ಪ ಯಾರು, ಈ ಎರಡೂ ಚಿಂಪಾಂಜಿ ಲೈಂಗಿಕ ಕ್ರಿಯೆ ಹೇಗೆ ನಡೆಸಿದವು ಎಂಬುದನ್ನು ಕಂಡು ಹಿಡಿಯುವುದು ಅವರ ಪ್ರಯತ್ನವಾಗಿತ್ತು ಎಂದು ಸಿಎನ್ಎನ್ ವರದಿ ಮಾಡಿದೆ.
ಡಿಎನ್ಎ ಪರೀಕ್ಷೆಯಲ್ಲಿ, ಚಿಂಪಾಂಜಿ ಮೋಮೋ ಗರ್ಭ ಧರಿಸಲು ಕಾರಣವಾದ ಚಿಂಪಾಂಜಿ ಯಾವುದು ಎಂಬುದು ಗೊತ್ತಾಗಿದೆ. 12 ವರ್ಷದ ಮೋಮೋ ಗರ್ಭ ಧರಿಸಲು 34 ವರ್ಷದ ಚುರುಕುಬುದ್ಧಿಯ ಗಂಡು ಚಿಂಪಾಂಜಿ ಎಂಬುದು ಗೊತ್ತಾಗಿದೆ. ಈ ಎರಡೂ ಚಿಂಪಾಂಜಿಗಳು ಅಕ್ಕ ಪಕ್ಕದ ಪಂಜರದಲ್ಲಿದ್ದವು.
ಇದನ್ನೂ ಓದಿ: ಸೈಕಲ್ ಓಡಿಸುತ್ತಿದ್ದ ಗೋರಿಲ್ಲಾ ಕೆಳಗೆ ಬಿದ್ದ ಬಳಿಕ ಮಾಡಿದ್ದೇನು?-ನಗು ತರಿಸುವ ವಿಡಿಯೋ ವೈರಲ್
ಮೊಮೊ ಮತ್ತು ಗಂಡು ಚಿಂಪಾಂಜಿ ವಾಸವಾಗಿದ್ದ ಪಂಜರದ ಆವರಣವನ್ನು ಬೇರ್ಪಡಿಸುವ ಉಕ್ಕಿನ ತಟ್ಟೆಯಲ್ಲಿನ ಸಣ್ಣ ರಂಧ್ರವಿತ್ತು. ಈ ರಂಧ್ರದ ವ್ಯಾಸ ಸುಮಾರು 9 ಮಿಲಿಮೀಟರ್. ಇಷ್ಟು ಸಣ್ಣ ರಂಧ್ರವನ್ನು ಬಳಸಿಕೊಂಡು ಗಂಡು ಚಿಂಪಾಜಿ ಮೋಮೋ ಚಿಂಪಾಂಜಿ ಜತೆ ಲೈಂಗಿಕ ಸಂಯೋಗ ಮಾಡಿದೆ! ಕಿಲಾಡಿ ಗಂಡು ಚಿಂಪಾಂಜಿ, ಸಿಕ್ಕ ರಂಧ್ರವನ್ನು ಬಳಸಿಕೊಂಡು ತನ್ನ ಕೆಲಸವನ್ನು ಮುಗಿಸಿಕೊಂಡು, ಯಾರಿಗೂ ಏನೂ ಗೊತ್ತಿಲ್ಲದ ಹಾಗೆ ಆರಾಮವಾಗಿದ್ದದ್ದನ್ನು ಕಂಡು ಮೃಗಾಲಯದ ಸಿಬ್ಬಂದಿ ಹೌಹಾರಿದ್ದಾರೆ.
ಅಂದ ಹಾಗೆ, ಗಂಡು ಚಿಂಪಾಂಜಿಯ ಚಾಣಾಕ್ಷತನದಿಂದ ಜನಿಸಿರುವ, ಮಗು ಚಿಂಪಾಂಜಿ 2 ಕೆ ಜಿ ತೂಗುತ್ತಿದ್ದು, ಆರೋಗ್ಯವಾಗಿದೆ ಎಂದು ಝೂ ಕೀಪರ್ಸ್ ತಿಳಿಸಿದ್ದಾರೆ.