ಸಿಡ್ನಿ: ವೃದ್ಧರು ಕೂಡ ಇಳಿ ವಯಸ್ಸಿನಲ್ಲಿ ಕೂಡ ಕಾಮಾಸಕ್ತಿ ಹೊಂದಿದ್ದರೆ, ಅವರಿಗೆ “ಹುಣಸೆ ಮುಪ್ಪಾದರೂ ಹುಳಿ ಮುಪ್ಪೇ” ಎಂಬ ಗಾದೆಯ ಮೂಲಕ ಛೇಡಿಸಲಾಗುತ್ತದೆ. ಇದಕ್ಕೆ ನಿದರ್ಶನ ಎಂಬಂತೆ, ಆಸ್ಟ್ರೇಲಿಯಾದಲ್ಲಿ 73 ವರ್ಷದ ವೃದ್ಧರೊಬ್ಬರು (Australia Man) ಲೈಂಗಿಕ ತೃಪ್ತಿಗಾಗಿ (Sexual Gratification) ಶಿಶ್ನಕ್ಕೆ ಬ್ಯಾಟರಿಗಳನ್ನು ಅಳವಡಿಸಿಕೊಳ್ಳುವ (Battery To Private Part) ಮೂಲಕ ವೈದ್ಯರನ್ನೇ ಅಚ್ಚರಿಯ ಮಡುವಿನಲ್ಲಿ ಸಿಲುಕಿಸಿದ್ದಾರೆ. ಹಲವು ಗಂಟೆಗಳ ಶಸ್ತ್ರಚಿಕಿತ್ಸೆಯ ಬಳಿಕ ವ್ಯಕ್ತಿಯ ಗುಪ್ತಾಂಗದಿಂದ ಬ್ಯಾಟರಿಗಳನ್ನು ಹೊರತೆಗೆಯಲಾಗಿದ್ದು, ವೃದ್ಧರೋ, “ಬದುಕಿದೆಯಾ ಬಡ ಜೀವವೇ” ಎಂದು ನಿಟ್ಟುಸಿರು ಬಿಟ್ಟಿದ್ದಾರೆ.
ಹೌದು, 73 ವರ್ಷದ ವೃದ್ಧರೊಬ್ಬರು ಮಾಡಿಕೊಂಡ ಭಾನಗಡಿ ಕುರಿತು ಯೂರಾಲಜಿ ಕೇಸ್ ರಿಪೋರ್ಟ್‌ನಲ್ಲಿ ಉಲ್ಲೇಖಿಸಲಾಗಿದೆ. ಈ ಸುದ್ದಿ ಈಗ ಸಾಮಾಜಿಕ ಜಾಲತಾಣಗಳಲ್ಲೂ ವೈರಲ್ ಆಗಿದೆ. ಲೈಂಗಿಕ ತೃಪ್ತಿಯನ್ನು ಅನುಭವಿಸಲು ಅವರು ಗುಪ್ತಾಂಗಕ್ಕೆ ಬಟನ್ ಬ್ಯಾಟರಿಗಳನ್ನು ಅಳವಡಿಸಿಕೊಂಡಿದ್ದಾರೆ. ಆದರೆ, ಕಾಮದ ನಶೆ ಇಳಿದ ಬಳಿಕ ಅವರು ಬ್ಯಾಟರಿಗಳನ್ನು ತೆಗೆಯಲು ಮುಂದಾದಾಗ ಆಘಾತ ಎದುರಾಗಿದೆ. ಎಷ್ಟೇ ಪ್ರಯತ್ನಿಸಿದರೂ ಬ್ಯಾಟರಿ ತೆಗೆಯಲು ಆಗದ ಕಾರಣ ಕೂಡಲೇ ವೈದ್ಯರನ್ನು ಸಂಪರ್ಕಿಸಿದ್ದಾರೆ.
ವ್ಯಕ್ತಿಯು ಗುಪ್ತಾಂಗಕ್ಕೆ ಬ್ಯಾಟರಿ ಅಳವಡಿಸಿಕೊಂಡಿದ್ದನ್ನು ಕಂಡ ವೈದ್ಯರು ಅಚ್ಚರಿಗೀಡಾಗಿದ್ದಾರೆ. ಅಲ್ಲದೆ, ಕೂಡಲೇ ಶಸ್ತ್ರಚಿಕಿತ್ಸೆ ಕೈಗೊಳ್ಳುವ ಮೂಲಕ ಬ್ಯಾಟರಿಯನ್ನು ತೆಗೆದಿದ್ದಾರೆ. ಒಂದಲ್ಲ, ಎರಡಲ್ಲ, ಮೂರು ಬ್ಯಾಟರಿಗಳನ್ನು ವೈದ್ಯರು ತೆಗೆದಿದ್ದಾರೆ. ಗುಪ್ತಾಂತಕ್ಕೆ ಬ್ಯಾಟರಿಗಳನ್ನು ಅಳವಡಿಸಿಕೊಂಡ ಕಾರಣ ವ್ಯಕ್ತಿಯ ಶಿಶ್ನದ ಮೂತ್ರನಾಳಕ್ಕೆ ಹಾನಿಯಾಗಿದ್ದು, ಮೂರು ಬಾರಿ ಚಿಕಿತ್ಸೆ ನೀಡಬೇಕಿದೆ ಎಂದು ವೈದ್ಯರು ತಿಳಿಸಿದ್ದಾರೆ. ಸದ್ಯ, ವ್ಯಕ್ತಿಯು ಅಪಾಯದಿಂದ ಪಾರಾಗಿದ್ದಾರೆ ಎಂದು ವೈದ್ಯಕೀಯ ಮೂಲಗಳು ತಿಳಿಸಿವೆ.
ಇದನ್ನೂ ಓದಿ: Viral News: ‘ಅಸ್ವಾಭಾವಿಕ ಲೈಂಗಿಕಕ್ರಿಯೆ’ಗೆ ಒತ್ತಾಯಿಸುತ್ತಿದ್ದ ಗಂಡನ ಶಿಶ್ನವನ್ನೇ ಬಾಯಿಂದ ಕತ್ತರಿಸಿದ ಹೆಂಡತಿ!
“ಇದೇ ಮೊದಲ ಬಾರಿಗೆ ವ್ಯಕ್ತಿಯೊಬ್ಬರು ಗುಪ್ತಾಂಗಕ್ಕೆ ಬ್ಯಾಟರಿಗಳನ್ನು ಅಳವಡಿಸಿಕೊಂಡ ಪ್ರಕರಣವನ್ನು ನಾವು ನೋಡಿದ್ದೇವೆ. ಗುಪ್ತಾಂಗದ ಚರ್ಮಕ್ಕೆ ಬ್ಯಾಟರಿಗಳು ಭಾರಿ ಹಾನಿ ಮಾಡಿದ್ದವು. ಅದರಲ್ಲೂ ಅವರೇ ಬ್ಯಾಟರಿಗಳನ್ನು ತೆಗೆಯಲು ಹಲವು ಬಾರಿ ಯತ್ನಿಸಿದ ಕಾರಣ ಗಾಯವಾಗಿದೆ. ಕೊನೆಗೆ, ವಿಧಿ ಇಲ್ಲದೆ ನಾವು ಶಸ್ತ್ರಚಿಕಿತ್ಸೆ ಕೈಗೊಳ್ಳಬೇಕಾಯಿತು” ಎಂದು ವೈದ್ಯರು ಅಚ್ಚರಿ ವ್ಯಕ್ತಪಡಿಸಿದ್ದಾರೆ. ಒಟ್ಟಿನಲ್ಲಿ 73ನೇ ವಯಸ್ಸಿನಲ್ಲೂ ಕಾಮ ತೃಪ್ತಿಯ ಆತುರದಲ್ಲಿ ಇಲ್ಲದ ಉಪದ್ವ್ಯಾಪ ಮಾಡಿದ ವ್ಯಕ್ತಿ ಈಗ ಸಂಕಷ್ಟದಿಂದ ಹೊರಬಂದಿದ್ದಾರೆ. ಕಾಮದ ತೃಷೆಗಾಗಿ ಯಾರೂ ಇಂತಹ ಅಪಾಯಕ್ಕೆ ಸಿಲುಕಬಾರದು ಎಂದು ವೈದ್ಯರು ಸೂಚಿಸಿದ್ದಾರೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ