ಕಾಮದ ತೃಪ್ತಿಗಾಗಿ ಶಿಶ್ನಕ್ಕೆ ಬ್ಯಾಟರಿ ಅಳವಡಿಸಿಕೊಂಡ ವೃದ್ಧ; ಮುಂದಾಗಿದ್ದು ಎಂಥ ಅನಾಹುತ? - Vistara News

ವಿದೇಶ

ಕಾಮದ ತೃಪ್ತಿಗಾಗಿ ಶಿಶ್ನಕ್ಕೆ ಬ್ಯಾಟರಿ ಅಳವಡಿಸಿಕೊಂಡ ವೃದ್ಧ; ಮುಂದಾಗಿದ್ದು ಎಂಥ ಅನಾಹುತ?

ಕಾಮದ ಸುಖ ಅನುಭವಿಸಲು ಆಸ್ಟ್ರೇಲಿಯಾದಲ್ಲಿ 73 ವರ್ಷದ ವ್ಯಕ್ತಿಯೊಬ್ಬರು ಶಿಶ್ನಕ್ಕೆ ಬ್ಯಾಟರಿ ಅಳವಡಿಸಿಕೊಂಡಿದ್ದಾರೆ. ಇದರಿಂದ ಅವರು ಅನುಭವಿಸಿದ ಪಾಡು ಅಷ್ಟಿಷ್ಟಲ್ಲ. ಮುಂದೆ ಓದಿ…

VISTARANEWS.COM


on

Man
ಸಾಂದರ್ಭಿಕ ಚಿತ್ರ.
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಸಿಡ್ನಿ: ವೃದ್ಧರು ಕೂಡ ಇಳಿ ವಯಸ್ಸಿನಲ್ಲಿ ಕೂಡ ಕಾಮಾಸಕ್ತಿ ಹೊಂದಿದ್ದರೆ, ಅವರಿಗೆ “ಹುಣಸೆ ಮುಪ್ಪಾದರೂ ಹುಳಿ ಮುಪ್ಪೇ” ಎಂಬ ಗಾದೆಯ ಮೂಲಕ ಛೇಡಿಸಲಾಗುತ್ತದೆ. ಇದಕ್ಕೆ ನಿದರ್ಶನ ಎಂಬಂತೆ, ಆಸ್ಟ್ರೇಲಿಯಾದಲ್ಲಿ 73 ವರ್ಷದ ವೃದ್ಧರೊಬ್ಬರು (Australia Man) ಲೈಂಗಿಕ ತೃಪ್ತಿಗಾಗಿ (Sexual Gratification) ಶಿಶ್ನಕ್ಕೆ ಬ್ಯಾಟರಿಗಳನ್ನು ಅಳವಡಿಸಿಕೊಳ್ಳುವ (Battery To Private Part) ಮೂಲಕ ವೈದ್ಯರನ್ನೇ ಅಚ್ಚರಿಯ ಮಡುವಿನಲ್ಲಿ ಸಿಲುಕಿಸಿದ್ದಾರೆ. ಹಲವು ಗಂಟೆಗಳ ಶಸ್ತ್ರಚಿಕಿತ್ಸೆಯ ಬಳಿಕ ವ್ಯಕ್ತಿಯ ಗುಪ್ತಾಂಗದಿಂದ ಬ್ಯಾಟರಿಗಳನ್ನು ಹೊರತೆಗೆಯಲಾಗಿದ್ದು, ವೃದ್ಧರೋ, “ಬದುಕಿದೆಯಾ ಬಡ ಜೀವವೇ” ಎಂದು ನಿಟ್ಟುಸಿರು ಬಿಟ್ಟಿದ್ದಾರೆ.

ಹೌದು, 73 ವರ್ಷದ ವೃದ್ಧರೊಬ್ಬರು ಮಾಡಿಕೊಂಡ ಭಾನಗಡಿ ಕುರಿತು ಯೂರಾಲಜಿ ಕೇಸ್‌ ರಿಪೋರ್ಟ್‌ನಲ್ಲಿ ಉಲ್ಲೇಖಿಸಲಾಗಿದೆ. ಈ ಸುದ್ದಿ ಈಗ ಸಾಮಾಜಿಕ ಜಾಲತಾಣಗಳಲ್ಲೂ ವೈರಲ್‌ ಆಗಿದೆ. ಲೈಂಗಿಕ ತೃಪ್ತಿಯನ್ನು ಅನುಭವಿಸಲು ಅವರು ಗುಪ್ತಾಂಗಕ್ಕೆ ಬಟನ್‌ ಬ್ಯಾಟರಿಗಳನ್ನು ಅಳವಡಿಸಿಕೊಂಡಿದ್ದಾರೆ. ಆದರೆ, ಕಾಮದ ನಶೆ ಇಳಿದ ಬಳಿಕ ಅವರು ಬ್ಯಾಟರಿಗಳನ್ನು ತೆಗೆಯಲು ಮುಂದಾದಾಗ ಆಘಾತ ಎದುರಾಗಿದೆ. ಎಷ್ಟೇ ಪ್ರಯತ್ನಿಸಿದರೂ ಬ್ಯಾಟರಿ ತೆಗೆಯಲು ಆಗದ ಕಾರಣ ಕೂಡಲೇ ವೈದ್ಯರನ್ನು ಸಂಪರ್ಕಿಸಿದ್ದಾರೆ.

ವ್ಯಕ್ತಿಯು ಗುಪ್ತಾಂಗಕ್ಕೆ ಬ್ಯಾಟರಿ ಅಳವಡಿಸಿಕೊಂಡಿದ್ದನ್ನು ಕಂಡ ವೈದ್ಯರು ಅಚ್ಚರಿಗೀಡಾಗಿದ್ದಾರೆ. ಅಲ್ಲದೆ, ಕೂಡಲೇ ಶಸ್ತ್ರಚಿಕಿತ್ಸೆ ಕೈಗೊಳ್ಳುವ ಮೂಲಕ ಬ್ಯಾಟರಿಯನ್ನು ತೆಗೆದಿದ್ದಾರೆ. ಒಂದಲ್ಲ, ಎರಡಲ್ಲ, ಮೂರು ಬ್ಯಾಟರಿಗಳನ್ನು ವೈದ್ಯರು ತೆಗೆದಿದ್ದಾರೆ. ಗುಪ್ತಾಂತಕ್ಕೆ ಬ್ಯಾಟರಿಗಳನ್ನು ಅಳವಡಿಸಿಕೊಂಡ ಕಾರಣ ವ್ಯಕ್ತಿಯ ಶಿಶ್ನದ ಮೂತ್ರನಾಳಕ್ಕೆ ಹಾನಿಯಾಗಿದ್ದು, ಮೂರು ಬಾರಿ ಚಿಕಿತ್ಸೆ ನೀಡಬೇಕಿದೆ ಎಂದು ವೈದ್ಯರು ತಿಳಿಸಿದ್ದಾರೆ. ಸದ್ಯ, ವ್ಯಕ್ತಿಯು ಅಪಾಯದಿಂದ ಪಾರಾಗಿದ್ದಾರೆ ಎಂದು ವೈದ್ಯಕೀಯ ಮೂಲಗಳು ತಿಳಿಸಿವೆ.

ಇದನ್ನೂ ಓದಿ: Viral News: ‘ಅಸ್ವಾಭಾವಿಕ ಲೈಂಗಿಕಕ್ರಿಯೆ’ಗೆ ಒತ್ತಾಯಿಸುತ್ತಿದ್ದ ಗಂಡನ ಶಿಶ್ನವನ್ನೇ ಬಾಯಿಂದ ಕತ್ತರಿಸಿದ ಹೆಂಡತಿ!

“ಇದೇ ಮೊದಲ ಬಾರಿಗೆ ವ್ಯಕ್ತಿಯೊಬ್ಬರು ಗುಪ್ತಾಂಗಕ್ಕೆ ಬ್ಯಾಟರಿಗಳನ್ನು ಅಳವಡಿಸಿಕೊಂಡ ಪ್ರಕರಣವನ್ನು ನಾವು ನೋಡಿದ್ದೇವೆ. ಗುಪ್ತಾಂಗದ ಚರ್ಮಕ್ಕೆ ಬ್ಯಾಟರಿಗಳು ಭಾರಿ ಹಾನಿ ಮಾಡಿದ್ದವು. ಅದರಲ್ಲೂ ಅವರೇ ಬ್ಯಾಟರಿಗಳನ್ನು ತೆಗೆಯಲು ಹಲವು ಬಾರಿ ಯತ್ನಿಸಿದ ಕಾರಣ ಗಾಯವಾಗಿದೆ. ಕೊನೆಗೆ, ವಿಧಿ ಇಲ್ಲದೆ ನಾವು ಶಸ್ತ್ರಚಿಕಿತ್ಸೆ ಕೈಗೊಳ್ಳಬೇಕಾಯಿತು” ಎಂದು ವೈದ್ಯರು ಅಚ್ಚರಿ ವ್ಯಕ್ತಪಡಿಸಿದ್ದಾರೆ. ಒಟ್ಟಿನಲ್ಲಿ 73ನೇ ವಯಸ್ಸಿನಲ್ಲೂ ಕಾಮ ತೃಪ್ತಿಯ ಆತುರದಲ್ಲಿ ಇಲ್ಲದ ಉಪದ್ವ್ಯಾಪ ಮಾಡಿದ ವ್ಯಕ್ತಿ ಈಗ ಸಂಕಷ್ಟದಿಂದ ಹೊರಬಂದಿದ್ದಾರೆ. ಕಾಮದ ತೃಷೆಗಾಗಿ ಯಾರೂ ಇಂತಹ ಅಪಾಯಕ್ಕೆ ಸಿಲುಕಬಾರದು ಎಂದು ವೈದ್ಯರು ಸೂಚಿಸಿದ್ದಾರೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ದೇಶ

Maldives: ಭಾರತೀಯರೇ, ದಯಮಾಡಿ ಬನ್ನಿ ಎಂದ ಮಾಲ್ಡೀವ್ಸ್‌ ಸಚಿವ; ಬಾಯ್ಕಾಟ್‌ ಪೆಟ್ಟಿಗೆ ಥಂಡಾ!

Maldives: ಲಕ್ಷದ್ವೀಪದಲ್ಲಿ ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡುವುದಾಗಿ ಫೆಬ್ರವರಿ 1ರಂದು ಮಂಡಿಸಿದ ಬಜೆಟ್‌ನಲ್ಲೂ ಘೋಷಿಸಲಾಗಿದೆ. “ದೇಶದ ಪ್ರವಾಸೋದ್ಯಮಕ್ಕೆ ಕೇಂದ್ರ ಸರ್ಕಾರ ಹೆಚ್ಚಿನ ಆದ್ಯತೆ ನೀಡುತ್ತಿದೆ. ಬಂದರು ಸಂಪರ್ಕ, ಪ್ರವಾಸೋದ್ಯಮ ಮೂಲ ಸೌಕರ್ಯಗಳ ಅಭಿವೃದ್ಧಿ, ಲಕ್ಷದ್ವೀಪ ಸೇರಿ ದೇಶದ ಎಲ್ಲ ದ್ವೀಪಗಳನ್ನು ಅಭಿವೃದ್ಧಿಗೊಳಿಸಲಾಗುವುದು” ಎಂದು ನಿರ್ಮಲಾ ಸೀತಾರಾಮನ್‌ ಹೇಳಿದ್ದರು. ಭಾರತದ ಆಂತರಿಕ ವಿಚಾರದಲ್ಲಿ ಸುಖಾಸುಮ್ಮನೆ ಮೂಗು ತೂರಿಸಿದ್ದ ಮಾಲ್ಡೀವ್ಸ್‌ಗೆ ಇದರಿಂದ ಭಾರಿ ಹಿನ್ನಡೆಯಾಗಿದೆ. ಹಾಗಾಗಿ, ಮಾಲ್ಡೀವ್ಸ್‌ ಈಗ ಭಾರತೀಯರ ಮನವೊಲಿಸಲು ಯತ್ನಿಸುತ್ತಿದೆ.

VISTARANEWS.COM


on

Narendra Modi
Koo

ನವದೆಹಲಿ/ಮಾಲೆ: ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ಇತ್ತೀಚೆಗೆ ಲಕ್ಷದ್ವೀಪಕ್ಕೆ ತೆರಳಿ, ಅಲ್ಲಿನ ಪ್ರವಾಸೋದ್ಯಮಕ್ಕೆ (Lakshadweep) ಉತ್ತೇಜನ ನೀಡಬೇಕು ಎಂದಿದ್ದಕ್ಕೇ ತಗಾದೆ ತೆಗೆದಿದ್ದ ಮಾಲ್ಡೀವ್ಸ್‌ ಪ್ರವಾಸೋದ್ಯಮಕ್ಕೆ (Maldives Tourism) ಭಾರಿ ಹೊಡೆತ ಬಿದ್ದಿದೆ. ಭಾರತ ಹಾಗೂ ಮೋದಿ ಕುರಿತು ಮಾಲ್ಡೀವ್ಸ್‌ ಅಸಮಾಧಾನದ ಹೇಳಿಕೆ ನೀಡಿದ ಬಳಿಕ ದೇಶದಲ್ಲಿ ಬಾಯ್ಕಾಟ್‌ ಮಾಲ್ಡೀವ್ಸ್‌ ಅಭಿಯಾನ ಶುರುವಾದ ಕಾರಣ ಆ ದೇಶಕ್ಕೆ ತೆರಳುವವರ ಸಂಖ್ಯೆ ಭಾರಿ ಕುಸಿದಿದೆ. ಭಾರತೀಯರ ಬಾಯ್ಕಾಟ್‌ ಏಟಿಗೆ ಈಗ ಮಾಲ್ಡೀವ್ಸ್‌ ಥಂಡಾ ಹೊಡೆದಿದ್ದು, “ಭಾರತೀಯರೇ, ದಯಮಾಡಿ ಮಾಲ್ಡೀವ್ಸ್‌ ಪ್ರವಾಸಕ್ಕೆ ಬನ್ನಿ” ಎಂದು ಅಲ್ಲಿನ ಪ್ರವಾಸೋದ್ಯಮ ಸಚಿವ ಇಬ್ರಾಹಿಂ ಫೈಸಲ್‌ (Ibrahim Faisal) ಮನವಿ ಮಾಡಿದ್ದಾರೆ.

“ಭಾರತ ಹಾಗೂ ಮಾಲ್ಡೀವ್ಸ್‌ ಸಂಬಂಧಕ್ಕೆ ಉತ್ತಮ ಇತಿಹಾಸವಿದೆ. ನಮ್ಮ ನೂತನ ಸರ್ಕಾರವೂ ಭಾರತದ ಜತೆ ಕೆಲಸ ಮಾಡಲು ಬಯಸುತ್ತದೆ. ನಾವು ಎಂದಿಗೂ ಸ್ನೇಹಯುತ ವಾತಾವರಣ, ಸಂಬಂಧ ಇಟ್ಟುಕೊಳ್ಳಲು ಬಯಸುತ್ತೇವೆ. ಹಾಗಾಗಿ, ಭಾರತೀಯರನ್ನು ನಮ್ಮ ಸರ್ಕಾರ ಹಾಗೂ ಇಲ್ಲಿನ ಜನರು ಆತ್ಮೀಯವಾಗಿ ಸ್ವಾಗತಿಸುತ್ತಾರೆ. ನಾನೊಬ್ಬ ಪ್ರವಾಸೋದ್ಯಮ ಸಚಿವನಾಗಿ ಮನವಿ ಮಾಡಿಕೊಳ್ಳುತ್ತಿದ್ದೇನೆ, ದಯಮಾಡಿ ಮಾಲ್ಡೀವ್ಸ್‌ಗೆ ಬನ್ನಿ. ಮಾಲ್ಡೀವ್ಸ್‌ ಪ್ರವಾಸೋದ್ಯಮದ ಭಾಗವಾಗಿ” ಎಂಬುದಾಗಿ ಅಂಗಲಾಚಿಕೊಂಡಿದ್ದಾರೆ.

narendra modi maldives president mohammed Muizzu

ಭಾರತೀಯರ ಭೇಟಿ ಕುಸಿತ

ಮಾಲ್ಡೀವ್ಸ್‌ಗೆ ತೆರಳುವ ಪ್ರವಾಸಿಗರಲ್ಲಿ ಭಾರತೀಯರ ಸಂಖ್ಯೆಯೇ ಹೆಚ್ಚಿತ್ತು. ಆದರೆ, ಬಾಯ್ಕಾಟ್‌ ಅಭಿಯಾನದ ಬಳಿಕ ಪ್ರವಾಸಿಗರ ಸಂಖ್ಯೆ ಗಣನೀಯವಾಗಿ ಕುಸಿದಿದೆ. 2024ರ ಏಪ್ರಿಲ್‌ 10ರವರೆಗೆ ಮಾಲ್ಡೀವ್ಸ್‌ಗೆ 6.63 ಲಕ್ಷ ಪ್ರವಾಸಿಗರು ಭೇಟಿ ನೀಡಿದ್ದಾರೆ. ಚೀನಾದ 71 ಸಾವಿರ ಪ್ರವಾಸಿಗರು ಭೇಟಿ ನೀಡಿದ್ದು, ಮೊದಲ ಸ್ಥಾನದಲ್ಲಿದ್ದಾರೆ. ನಂತರದ ಸ್ಥಾನದಲ್ಲಿ ಬ್ರಿಟನ್‌, ರಷ್ಯಾ, ಇಟಲಿ, ಜರ್ಮನಿ ಹಾಗೂ ಭಾರತದ ಪ್ರವಾಸಿಗರಿದ್ದಾರೆ.

ಮಾಲ್ಡೀವ್ಸ್‌ ಪ್ರವಾಸೋದ್ಯಮ ಸಚಿವಾಲಯ ನೀಡಿದ ಮಾಹಿತಿ ಪ್ರಕಾರ, 2023ರಲ್ಲಿ ಭಾರತೀಯರೇ ಹೆಚ್ಚಿನ ಸಂಖ್ಯೆಯಲ್ಲಿ ಮಾಲ್ಡೀವ್ಸ್‌ಗೆ ತೆರಳಿದ್ದಾರೆ. 2023ರಲ್ಲಿ ಭಾರತದಿಂದ ಮಾಲ್ಡೀವ್ಸ್‌ಗೆ 2,09,198 ಜನ ಭೇಟಿ ನೀಡಿದರೆ, ರಷ್ಯಾದಿಂದ 2,09,146 ಪ್ರವಾಸಿಗರು ಭೇಟಿ ನೀಡಿದ್ದಾರೆ. ಇನ್ನು, ಚೀನಾದಿಂದ ಕಳೆದ ವರ್ಷ 1,87,118 ಮಂದಿ ಮಾಲ್ಡೀವ್ಸ್‌ಗೆ ಭೇಟಿ ನೀಡಿದ್ದಾರೆ. ಇದೇ ಕಾರಣಕ್ಕಾಗಿಯೇ ಮಾಲ್ಡೀವ್ಸ್‌ನ ಪ್ರವಾಸೋದ್ಯಮ ಸಂಘವು, ಭಾರತದ ವಿರುದ್ಧ ಸಚಿವರು ನೀಡಿದ ಉದ್ಧಟತನದ ಹೇಳಿಕೆಯನ್ನು ಖಂಡಿಸಿದೆ. ಅಲ್ಲದೆ, ಭಾರತದ ಮನವೊಲಿಸಲು ಯತ್ನಿಸುತ್ತಿದೆ.

ನರೇಂದ್ರ ಮೋದಿ ಅವರು ಲಕ್ಷದ್ವೀಪಕ್ಕೆ ಭೇಟಿ ನೀಡಿದ ಬಳಿಕ ಭಾರತ ಹಾಗೂ ಮೋದಿ ವಿರುದ್ಧ ಮಾಲ್ಡೀವ್ಸ್‌ ಸಚಿವರು ಅವಹೇಳನಕಾರಿ ಹೇಳಿಕೆ ನೀಡಿದ್ದಕ್ಕೆ ಮಾಲ್ಡೀವ್ಸ್‌ನಲ್ಲಿಯೇ ಟೀಕೆಗಳು ವ್ಯಕ್ತವಾಗಿದ್ದವು ಮಾಲ್ಡೀವ್ಸ್‌ ಸಂಸದರು ಭಾರತದ ಕ್ಷಮೆಯಾಚಿಸಿದ್ದರು. ಭಾರತದಲ್ಲಂತೂ ಮಾಲ್ಡೀವ್ಸ್‌ ವಿರುದ್ಧ ಅಭಿಯಾನವೇ ಶುರುವಾಗಿತ್ತು. ನೂರಾರು ಸೆಲೆಬ್ರಿಟಿಗಳು, ನಟರು ಅಭಿಯಾನಕ್ಕೆ ಬೆಂಬಲ ಸೂಚಿಸಿದ್ದರು. ಇದಾದ ಬಲಿಕ ಮಾಲ್ಡೀವ್ಸ್‌ ಟ್ರಿಪ್‌ ಕ್ಯಾನ್ಸಲ್‌ ಮಾಡಿಕೊಂಡಿದ್ದರು. ಈಗ ಅದರ ಪರಿಣಾಮವನ್ನು ಮಾಲ್ಡೀವ್ಸ್‌ ಎದುರಿಸುತ್ತಿದೆ.

ಇದನ್ನೂ ಓದಿ: Maldives Minister: ಭಾರತದ ತಿರಂಗಾಕ್ಕೆ ಅವಮಾನ; ಕ್ಷಮೆ ಕೇಳಿದ ಮಾಲ್ಡೀವ್ಸ್‌ ಸಚಿವೆ!

Continue Reading

Latest

Press Freedom: ಚೀನಾ ಸೇರಿದಂತೆ ಈ ದೇಶಗಳು ಪತ್ರಕರ್ತರಿಗೆ ಸುರಕ್ಷಿತವಲ್ಲ

ಏಷ್ಯಾದ 31 ದೇಶಗಳ ಪೈಕಿ 26 ದೇಶಗಳಲ್ಲಿ ಪತ್ರಿಕಾ ಸ್ವಾತಂತ್ರ್ಯವು (Press Freedom) ಅವನತಿಯಲ್ಲಿದೆ ಎಂದು ಆರ್‌ಎಸ್‌ಎಫ್ ವರದಿ ಮಾಡಿದ್ದು, ಪತ್ರಕರ್ತರಿಗೆ ಸುರಕ್ಷಿತವಲ್ಲದ ದೇಶಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ.

VISTARANEWS.COM


on

By

Press Freedom
Koo

ಬೀಜಿಂಗ್: ಪತ್ರಕರ್ತರಿಗೆ (journalists) ವಿಶ್ವದ ಅತ್ಯಂತ ಅಪಾಯಕಾರಿ ರಾಷ್ಟ್ರಗಳಲ್ಲಿ (dangerous countries) ಚೀನಾ (china) ಕೂಡ ಒಂದಾಗಿದೆ ಎಂದು ವಾಯ್ಸ್ ಆಫ್ ಅಮೆರಿಕ (VOA) ವರದಿ ಮಾಡಿದೆ. 2024ರ ಶ್ರೇಯಾಂಕ ಪ್ರಕಟಿಸಿರುವ ಗ್ಲೋಬಲ್ ಮೀಡಿಯಾ ವಾಚ್‌ಡಾಗ್ ರಿಪೋರ್ಟರ್ಸ್ ವಿಥೌಟ್ ಬಾರ್ಡರ್ಸ್ (RSF) ಏಷ್ಯಾದಲ್ಲಿ ಪತ್ರಿಕಾ ಸ್ವಾತಂತ್ರ್ಯವು ಅವನತಿಯಾಗುತ್ತಿದೆ. ಇದರಲ್ಲಿ ಒಟ್ಟು 31 ದೇಶಗಳಲ್ಲಿ 26 ವಾರ್ಷಿಕ ಸೂಚ್ಯಂಕದಲ್ಲಿದೆ ಎಂದು ಹೇಳಿದೆ.

ಪತ್ರಿಕಾ ಸ್ವಾತಂತ್ರ್ಯ (Press Freedom) ಸೂಚ್ಯಂಕದ ಪ್ರಕಾರ, ಏಷ್ಯಾವು ಪತ್ರಿಕೋದ್ಯಮ ವೃತ್ತಿ ನಡೆಸಲು ಎರಡನೇ ಅತ್ಯಂತ ಕಷ್ಟಕರವಾದ ಪ್ರದೇಶವಾಗಿದೆ. ಈ ಪ್ರದೇಶದ ಐದು ದೇಶಗಳಾದ ಮ್ಯಾನ್ಮಾರ್ ( Myanmar), ಚೀನಾ (China), ಉತ್ತರ ಕೊರಿಯಾ (North Korea) ಮತ್ತು ವಿಯೆಟ್ನಾಂ (Vietnam) ಸೇರಿದೆ. 2024ರ ಶ್ರೇಯಾಂಕದಲ್ಲಿ ಮಾಧ್ಯಮ ವೃತ್ತಿಪರರಿಗೆ ವಿಶ್ವದ 10 ಅತ್ಯಂತ ಅಪಾಯಕಾರಿ ದೇಶಗಳಲ್ಲಿ ಮ್ಯಾನ್ಮಾರ್, ಚೀನಾ, ಉತ್ತರ ಕೊರಿಯಾ ಮತ್ತು ವಿಯೆಟ್ನಾಂ ಕೂಡ ಸೇರಿದೆ.


ಏಷ್ಯಾ-ಪೆಸಿಫಿಕ್ ಪ್ರದೇಶದ ಯಾವುದೇ ದೇಶಗಳು ಪತ್ರಿಕಾ ಸ್ವಾತಂತ್ರ್ಯದ ಟಾಪ್ 15 ರಾಂಕ್‌ನಲ್ಲಿ ಇಲ್ಲ. ವಿಶ್ವದ ಮೂರು ಕಮ್ಯುನಿಸ್ಟ್ ಸರ್ಕಾರಗಳು ಚೀನಾ, ಉತ್ತರ ಕೊರಿಯಾ ಮತ್ತು ವಿಯೆಟ್ನಾಂ 180 ದೇಶಗಳ ಆರ್ ಎಸ್ ಎಫ್ ನ ಪತ್ರಿಕಾ ಸ್ವಾತಂತ್ರ್ಯ ಸೂಚ್ಯಂಕ ಶ್ರೇಯಾಂಕದ ಕೆಳಭಾಗದಲ್ಲಿ ಬಹಳ ಹಿಂದಿನಿಂದಲೂ ಇವೆ. ಈ ವರ್ಷ ಚೀನಾ 172, ವಿಯೆಟ್ನಾಂ 174 ಮತ್ತು ಉತ್ತರ ಕೊರಿಯಾ 177ನೇ ಸ್ಥಾನದಲ್ಲಿದೆ.

ಈ ದೇಶಗಳು ಮತ್ತು ಪ್ರಾಂತ್ಯಗಳು ಇತ್ತೀಚಿನ ವರ್ಷಗಳಲ್ಲಿ ಪತ್ರಿಕಾ ಸ್ವಾತಂತ್ರ್ಯದಲ್ಲಿ ಕುಸಿತವನ್ನು ತೋರಿಸಿವೆ. ಪೂರ್ವ ಏಷ್ಯಾದಲ್ಲಿ ಮಾಧ್ಯಮವು ಕಾರ್ಯನಿರ್ವಹಿಸಲು ಕಷ್ಟಕರವಾದ ಸ್ಥಳವಾಗಿದೆ. ಹೆಚ್ಚುವರಿಯಾಗಿ, ಹಾಂಗ್ ಕಾಂಗ್ ಒಮ್ಮೆ ಏಷ್ಯಾ ಪ್ರದೇಶದಲ್ಲಿ ಪತ್ರಿಕಾ ಸ್ವಾತಂತ್ರ್ಯಕ್ಕೆ ಮಾದರಿಯಾಗಿತ್ತು. ಆದರೆ ರಾಜಕೀಯ ಅಶಾಂತಿ ಮತ್ತು ಮಾಧ್ಯಮ ಸ್ವಾತಂತ್ರ್ಯದ ಮೇಲೆ ಪರಿಣಾಮ ಬೀರುವ ಹೊಸ ಕಾನೂನುಗಳ ಅನಂತರ ನಗರದ ಶ್ರೇಯಾಂಕವು ಇತ್ತೀಚೆಗೆ 80 ರಿಂದ 148ಕ್ಕೆ ಇಳಿಯಿತು. ಅಂದಹಾಗೆ ಭಾರತ 162ನೇ ರ್ಯಾಂಕ್‌ನಲ್ಲಿದೆ.

2020ರಲ್ಲಿ ರಾಷ್ಟ್ರೀಯ ಭದ್ರತಾ ಕಾನೂನನ್ನು ಹೇರಲು ಬೀಜಿಂಗ್‌ನ ಕ್ರಮದಿಂದ ಕನಿಷ್ಠ 12ಕ್ಕೂ ಹೆಚ್ಚು ಮಾಧ್ಯಮಗಳು ಮುಚ್ಚಲ್ಪಟ್ಟಿವೆ. 2019ರಲ್ಲಿ ಸಾಮೂಹಿಕ ರಾಜಕೀಯ ಅಶಾಂತಿಯ ಅನಂತರ ನಗರವನ್ನು ಸ್ಥಿರಗೊಳಿಸಲು ಕಾನೂನು ಅಗತ್ಯವಾಗಿದೆ ಎಂದು ಬೀಜಿಂಗ್ ಹೇಳಿದೆ ಎಂದು VOA ವರದಿ ಮಾಡಿದೆ.

ಇದನ್ನೂ ಓದಿ: Al Jazeera: ಹಮಾಸ್‌ ಉಗ್ರರ ಪರ ನಿಲುವು; ಇಸ್ರೇಲ್‌ನಲ್ಲಿ ಅಲ್‌ಜಜೀರಾ ಚಾನೆಲ್‌ ಬಂದ್‌ ಮಾಡಿದ ನೆತನ್ಯಾಹು!

ಹಾಂಗ್ ಕಾಂಗ್‌ನ ಮಾಧ್ಯಮ ಸ್ವಾತಂತ್ರ್ಯಗಳು ಇನ್ನೂ ಸುಧಾರಿಸಿಲ್ಲ ಎಂದು ಆರ್‌ಎಸ್‌ಎಫ್‌ನ ವಕೀಲ ಅಲೆಕ್ಸಾಂಡ್ರಾ ಬಿಲಾಕೋವ್ಸ್ಕಾ ಹೇಳಿದ್ದಾರೆ. ಹಾಂಗ್ ಕಾಂಗ್‌ಗೆ ಕೆಟ್ಟದ್ದು ರಾಜಕೀಯ ಮತ್ತು ಕಾನೂನು ಅಂಶಗಳಾಗಿವೆ. ಹಾಂಗ್ ಕಾಂಗ್‌ನ ಸ್ಥಾನವು ತುಂಬಾ ಕಡಿಮೆಯಾಗಿದೆ. ಇಲ್ಲಿನ ಪರಿಸ್ಥಿತಿಯು ತುಂಬಾ ಕಷ್ಟಕರವಾಗಿದೆ ಎಂದು ಅವರು ತಿಳಿಸಿದ್ದಾರೆ.

Continue Reading

ವಿದೇಶ

Sunita Williams: 3ನೇ ಬಾರಿಗೆ ಬಾಹ್ಯಾಕಾಶಕ್ಕೆ ತೆರಳಲು ಸುನೀತಾ ವಿಲಿಯಮ್ಸ್‌ ಸಜ್ಜು

Sunita Williams:ಭಾರತ ಮೂಲದ ವಿಶ್ವವಿಖ್ಯಾತ ಗಗನಯಾತ್ರಿ ಸುನೀತಾ ವಿಲಿಯಮ್ಸ್‌ ಇದೀಗ ಮತ್ತೆ ಬಾಹ್ಯಾಕಾಶಕ್ಕೆ ಹಾರಲು ರೆಡಿ ಆಗಿದ್ದಾರೆ. ಮೂರನೇ ಬಾರಿ ಗಗನಯಾತ್ರೆ ಕೈಗೊಳ್ಳುತ್ತಿರುವ ಸುನೀತಾ ವಿಲಿಯಮ್ಸ್‌ ನಾಳೆ ಬಾಹ್ಯಾಕಾಶಕ್ಕೆ ಹಾರಲಿದ್ದಾರೆ. ನಾಳೆ ಬೆಳಗ್ಗೆ 8.34 ಕ್ಕೆ ಕೆನೆಡಿ ಬಾಹ್ಯಕಾಶ ಕೇಂದ್ರದಿಂದ ಅವರು ನೂತನವಾಗಿ ನಿರ್ಮಿಸಿರುವ ಬಾಹ್ಯಾಕಾಶ ನೌಕೆಯಲ್ಲಿ ಗಗನಯಾತ್ರೆ ಕೈಗೊಳ್ಳಲಿದ್ದಾರೆ.

VISTARANEWS.COM


on

Sunita Williams
Koo

ನ್ಯೂಯಾರ್ಕ್‌: ಭಾರತ ಮೂಲದ ವಿಶ್ವವಿಖ್ಯಾತ ಗಗನಯಾತ್ರಿ ಸುನೀತಾ ವಿಲಿಯಮ್ಸ್‌(Sunita Williams) ಇದೀಗ ಮತ್ತೆ ಬಾಹ್ಯಾಕಾಶ(Astronaut)ಕ್ಕೆ ಹಾರಲು ರೆಡಿ ಆಗಿದ್ದಾರೆ. ಮೂರನೇ ಬಾರಿ ಗಗನಯಾತ್ರೆ ಕೈಗೊಳ್ಳುತ್ತಿರುವ ಸುನೀತಾ ವಿಲಿಯಮ್ಸ್‌ ನಾಳೆ ಬಾಹ್ಯಾಕಾಶಕ್ಕೆ ಹಾರಲಿದ್ದಾರೆ. ನಾಳೆ ಬೆಳಗ್ಗೆ 8.34 ಕ್ಕೆ ಕೆನೆಡಿ ಬಾಹ್ಯಕಾಶ ಕೇಂದ್ರ(Kennedy Space Center)ದಿಂದ ಅವರು ನೂತನವಾಗಿ ನಿರ್ಮಿಸಿರುವ ಬಾಹ್ಯಾಕಾಶ ನೌಕೆ(spacecraft)ಯಲ್ಲಿ ಗಗನಯಾತ್ರೆ ಕೈಗೊಳ್ಳಲಿದ್ದಾರೆ. ತಮ್ಮ ಮೂರನೇ ಬಾರಿಯ ಗಗನಯಾತ್ರೆ ಬಗ್ಗೆ ಪ್ರತಿಕ್ರಿಯಿಸಿರುವ ಸುನೀತಾ, ಅಂತಾರಾಷ್ಟ್ರೀಯ ಬಾಹ್ಯಾಕಾಶ ಸಂಸ್ಥೆಗೆ ಕಾಲಿಟ್ಟಾಗ ಮತ್ತೆ ಮನೆಗೆ ಮರಳಿದ ಅನುಭವಾಗುತ್ತದೆ. ಈ ಬಾರಿ ಹೊಸ ಬಾಹ್ಯಾಕಾಶ ನೌಕೆಯಲ್ಲಿ ತೆರಳುತ್ತಿರುವ ಬಗ್ಗೆ ಸ್ವಲ್ಪ ಅಂಜಿಕೆ ಇದ್ದೇ ಇರುತ್ತದೆ. ಎಂದು ಹೇಳಿದ್ದಾರೆ.

ಡಾ. ದೀಪಕ್‌ ಪಾಂಡ್ಯಾ ಮತ್ತು ಬೋನಿ ಪಾಂಡ್ಯ ಪುತ್ರಿಯಾಗಿರುವ 59 ವರ್ಷದ ಸುನೀತಾ, ಬಾಹ್ಯಾಕಾಶಕ್ಕೆ ಹೋದ ಮೊದಲ ಮಹಿಳಾ ಗಗನಯಾತ್ರಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಇವರು ಮೊದಲ ಬಾರಿಗೆ 2006ರಲ್ಲಿ ಯಶಸ್ವಿ ಗಗನಯಾತ್ರೆ ಕೈಗೊಂಡಿದ್ದರು. ಇದಾದ ಬಳಿಕ 2012ರಲ್ಲಿ ಮತ್ತೆ ಗಗನಯಾತ್ರೆ ಕೈಗೊಂಡಿದ್ದರು. ಅವರು ಬಾಹ್ಯಾಕಾಶದಲ್ಲಿ ಬರೋಬ್ಬರಿ 322 ದಿನಗಳನ್ನು ಅಲ್ಲಿ ಕಳೆದಿದ್ದರು. ಸುನೀತಾ ವಿಲಿಯಮ್ಸ್ ಅತೀ ಹೆಚ್ಚು ಬಾರಿ ಬಾಹ್ಯಾಕಾಶ ಹಾರಿದ ಹಾಗೂ ಬಾಹ್ಯಾಕಾಶದಲ್ಲಿ ಅಧ್ಯಯನ ನಡೆಸಿದ ಮಹಿಳಾ ಗನನ ಯಾತ್ರಿ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದಾರೆ. ಇದುವರೆಗೆ ಸುನಿತಾ ವಿಲಿಯಮ್ಸ್ ಗರಿಷ್ಠ ಬಾಹ್ಯಾಕಾಶ ಪ್ರಯಾಣ ಮಾಡಿದ್ದಾರೆ. ಒಟ್ಟು 50 ಗಂಟೆ 40 ನಿಮಿಷ ಕಾಲ ಬಾಹ್ಯಾಕಾಶದಲ್ಲಿ ಕಳೆದಿದ್ದಾರೆ. ಇದೀಗ ಮಹತ್ವದ ಅಧ್ಯಯನಕ್ಕಾಗಿ ಬಾಹ್ಯಾಕಾಶಕ್ಕೆ ಹಾರಲಿರುವ ಸುನೀತಾ ವಿಲಿಯಮ್ಸ್ ಎಲ್ಲಾ ತಯಾರಿ ಮಾಡಿಕೊಂಡಿದ್ದಾರೆ. ಕೊಂಚ ನರ್ವಸ್ ಆಗಿದ್ದೇನೆ. ಆದರೆ ಮತ್ತೆ ತವರಿಗೆ ಮರಳು ಅನುಭವವಾಗುತ್ತಿದೆ. ಬಾಹ್ಯಕಾಶವೇ ನನಗೆ ತವರಾಗಿದೆ ಎಂದು ಸುನೀತಾ ವಿಲಿಯಮ್ಸ್ ಹೇಳಿದ್ದಾರೆ. 2006ರಲ್ಲಿ ಮೊದಲ ಬಾರಿಗೆ ಸುನೀತಾ ವಿಲಿಯಮ್ಸ್ ಬಾಹ್ಯಾಕಾಶ ಯಾತ್ರೆ ನಡೆಸಿದ್ದರು. ಸಮೋಸಾ ಪ್ರಿಯೆ ಆಗಿರುವ ಸುನೀತಾ ವಿಲಿಯಮ್ಸ್ ಬಾಹ್ಯಾಕಾಶದಲ್ಲಿ ಸಮೋಸ ಸವಿಯುವ ಮಜವೇ ಬೇರೆ ಎಂದಿದ್ದಾರೆ.

ಗಣೇಶನೇ ಶುಭ ಸಂಕೇತ ಎಂದು ಸುನೀತಾ

ಸುನೀತಾ ವಿಲಿಯಮ್ಸ್ ಯಾವುದೇ ಕೆಲಸಕ್ಕೂ ಮೊದಲು ಗಣೇಶನ ಪ್ರಾರ್ಥಿಸುತ್ತೇನೆ. ಸಿದ್ಧಿ ವಿನಾಯಕ ನನ್ನ ಶುಭಸಂಕೇತ ಎಂದು ಹೇಳಿದ್ದಾರೆ. ಬಾಹ್ಯಾಕಾಶ ಪ್ರಯಾಣ ಸೇರಿದಂತೆ ಯಾವುದೇ ಕೆಲಸಕ್ಕೂ ಗಣೇಶನ ಆಶೀರ್ವಾದ ನನಗೆ ಬೇಕು. ಗಣೇಶನ ಎಲ್ಲಾ ಎಲ್ಲಾ ಕಾರ್ಯಗಳಿಗೆ ಶಕ್ತಿಯಾಗಿದ್ದಾನೆ. ಪ್ರತಿ ಬಾರಿ ನಾನು ಬಾಹ್ಯಾಕಾಶ ಪ್ರಯಾಣದಲ್ಲೂ ಸಣ್ಣ ಗಣೇಶನ ವಿಗ್ರಹವನ್ನು ತೆಗೆದುಕೊಂಡು ಹೋಗುತ್ತೇನೆ. ಗಣೇಶ ನನ್ನ ಎಲ್ಲಾ ಕೆಲಸಗಳಿಗೆ ಶುಭಹಾರೈಸಿದ್ದಾನೆ ಎಂದು ಸುನೀತಾ ವಿಲಿಯಮ್ಸ್ ಹೇಳಿದ್ದಾರೆ. ಈ ಹಿಂದೆ ಸುನೀತಾ ವಿಲಿಯಮ್ಸ್ ಬಾಹ್ಯಾಕಾಶಕ್ಕೆ ಭಗವದ್ಗೀತೆ ಒಯ್ದಿದ್ದರು.

ಇದನ್ನೂ ಓದಿ:http:Viral News: ಅವಳಿ-ತ್ರಿವಳಿ ಅಲ್ಲ.. ಏಕಕಾಲದಲ್ಲಿ ಐದು ಮಕ್ಕಳಿಗೆ ಜನ್ಮಕೊಟ್ಟ ಮಹಾತಾಯಿ

ಪ್ರಶಸ್ತಿಗಳು ಮತ್ತು ಗೌರವಗಳು

ಅವರಿಗೆ ಅನೇಕ ಪ್ರಶಸ್ತಿಗಳು ಮತ್ತು ಗೌರವ ಸಂದಿವೆ. ಅವರು US ನೌಕಾಪಡೆಯ ನಿವೃತ್ತ ಕ್ಯಾಪ್ಟನ್ ಆಗಿರುವ ಅವರಿಗೆ ಎರಡು ಬಾರಿ ರಕ್ಷಣಾ ಉನ್ನತ ಸೇವಾ ಪದಕ, ಲೀಜನ್ ಆಫ್ ಮೆರಿಟ್, ನೌಕಾಪಡೆಯ ಪ್ರಶಂಸಾ ಪದಕ ಎರಡು ಬಾರಿ, ನೌಕಾಪಡೆ ಮತ್ತು ಮೆರೈನ್ ಕಾರ್ಪ್ಸ್ ಸಾಧನೆ ಪದಕ ಮತ್ತು ಮಾನವೀಯ ಸೇವಾ ಪದಕ ನೀಡಿ ಗೌರವಿಸಲಾಗಿದೆ. ಭಾರತದ ಚಂದ್ರಯಾನ ಯಶಸ್ವಿಗೆ ಸಂತಸ ವ್ಯಕ್ತಪಡಿಸಿದ್ದ ಸುನೀತಾ ವಿಲಿಯಮ್ಸ್, ಇಸ್ರೋ ಭಾಗೂ ಭಾರತ ಸರ್ಕಾರಕ್ಕೆ ಅಭಿನಂದನೆ ಸಲ್ಲಿಸಿದ್ದರು.

Continue Reading

ವೈರಲ್ ನ್ಯೂಸ್

Boat Capsizes: ಜಲಾವೃತ ಸೇತುವೆಗೆ ದೋಣಿ ಡಿಕ್ಕಿ; ಶಾಕಿಂಗ್‌ ವಿಡಿಯೋ ವೈರಲ್‌

Boat Capsizes: ಬ್ರೆಜಿಲ್‌ನ ರಿಯೊ ಗ್ರಾಂಡೆ ಡೊ ಸುಲ್ ನಲ್ಲಿ ನಿರಂತರವಾಗಿ ಸುರಿಯುತ್ತಿರುವ ಮಳೆಗೆ ಪ್ರವಾಹ ಸ್ಥಿತಿ ನಿರ್ಮಾಣವಾಗಿದೆ. ಪ್ರವಾಹಕ್ಕೆ ತುತ್ತಾಗಿ ಒಂದೇ ಪ್ರದೇಶದಲ್ಲಿ ಸಿಲುಕಿಕೊಂಡಿದ್ದ ಸಾವಿರಾರು ಜನರನ್ನು ಸುರಕ್ಷಿತ ಜಾಗಕ್ಕೆ ಸ್ಥಳಾಂತರ ಮಾಡಲಾಗುತ್ತಿತ್ತು. ಈ ವೇಳೆ ಒಂದು ದೋಣಿ ಮುಗುಚಿದೆ ಎನ್ನಲಾಗಿದೆ. ಜನರನ್ನು ಹೊತ್ತು ಸಾಗುತ್ತಿದ್ದ ದೋಣಿ ಜಲಾವೃತಗೊಂಡಿದ್ದ ಸೇತುವೆಗೆ ಡಿಕ್ಕಿ ಹೊಡೆದಿದ್ದು, ಬಳಿಕ ಮಗುಚಿ ಬೀಳುತ್ತಿರುವ ಭಯಾನಕ ದೃಶ್ಯವನ್ನು ವೈರಲ್‌ ಆಗಿರುವ ವಿಡಿಯೋದಲ್ಲಿ ಕಾಣಬಹುದಾಗಿದೆ.

VISTARANEWS.COM


on

Boat Capsize
Koo

ಬ್ರೆಜಿಲ್‌: ಭೀಕರ ಪ್ರವಾಹದ ರಭಸಕ್ಕೆ ದೋಣಿಯೊಂದು ಮಗುಚಿರುವ ಘಟನೆ (Boat Capsizes) ಬ್ರೆಜಿಲ್‌(Brazil)ನಲ್ಲಿ ನಡೆದಿದೆ. ಭಾರೀ ಮಳೆಯಿಂದ ಪ್ರವಾಹ ಸ್ಥಿತಿ(Flood situation) ಎದುರಿಸುತ್ತಿರುವ ಬ್ರೆಜಿಲ್‌ನಲ್ಲಿ ನೂರಾರು ಜನರನ್ನು ಹೊತ್ತು ಸಾಗುತ್ತಿದ್ದ ದೋಣಿಯೊಂದು ಜಲಾವೃತಗೊಂಡಿದ್ದ ಸೇತುವೆಯಿಂದ ಕೆಳಗೆ ಬಿದ್ದಿದೆ. ಪರಿಣಾಮವಾಗಿ ಮಳೆಯಿಂದಾಗಿ ಸಾವನ್ನಪ್ಪಿರುವವರ ಸಂಖ್ಯೆ 56ಕ್ಕೆ ಏರಿಕೆಯಾಗಿದ್ದು, 74 ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಇನ್ನು 67 ಮಂದಿ ಕಣ್ಮರೆಯಾಗಿದ್ದಾರೆ ಬ್ರೆಜಿಲ್‌ ಅಧಿಕಾರಿಗಳು ಹೇಳಿದ್ದಾರೆ. ಇನ್ನು ಈ ಭೀಕರ ದುರ್ಘಟನೆ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ಫುಲ್‌ ವೈರಲ್‌ ಆಗುತ್ತಿದೆ.

ಬ್ರೆಜಿಲ್‌ನ ರಿಯೊ ಗ್ರಾಂಡೆ ಡೊ ಸುಲ್ ನಲ್ಲಿ ನಿರಂತರವಾಗಿ ಸುರಿಯುತ್ತಿರುವ ಮಳೆಗೆ ಪ್ರವಾಹ ಸ್ಥಿತಿ ನಿರ್ಮಾಣವಾಗಿದೆ. ಪ್ರವಾಹಕ್ಕೆ ತುತ್ತಾಗಿ ಒಂದೇ ಪ್ರದೇಶದಲ್ಲಿ ಸಿಲುಕಿಕೊಂಡಿದ್ದ ಸಾವಿರಾರು ಜನರನ್ನು ಸುರಕ್ಷಿತ ಜಾಗಕ್ಕೆ ಸ್ಥಳಾಂತರ ಮಾಡಲಾಗುತ್ತಿತ್ತು. ಈ ವೇಳೆ ಒಂದು ದೋಣಿ ಮುಗುಚಿದೆ ಎನ್ನಲಾಗಿದೆ. ಜನರನ್ನು ಹೊತ್ತು ಸಾಗುತ್ತಿದ್ದ ದೋಣಿ ಜಲಾವೃತಗೊಂಡಿದ್ದ ಸೇತುವೆಗೆ ಡಿಕ್ಕಿ ಹೊಡೆದಿದ್ದು, ಬಳಿಕ ಮಗುಚಿ ಬೀಳುತ್ತಿರುವ ಭಯಾನಕ ದೃಶ್ಯವನ್ನು ವೈರಲ್‌ ಆಗಿರುವ ವಿಡಿಯೋದಲ್ಲಿ ಕಾಣಬಹುದಾಗಿದೆ. ಬ್ರೆಜಿಲ್‌ನಲ್ಲಿ ಕಳೆದ ಅನೇಕ ದಿನಗಳಿಂದ ಎಡೆಬಿಡದೇ ಮಳೆಯಾಗುತ್ತಿದ್ದು, ಭೂಕುಸಿತ, ಪ್ರವಾಹಕ್ಕೆ ಸಿಲುಕಿ ಜನ ತತ್ತರಿಸಿದ್ದಾರೆ.

ಇನ್ನು ನಾಲ್ಕು ತಿಂಗಳ ಹಿಂದೆ ಇಂತಹದ್ದೇ ಒಂದು ದುರಂತ ನಡೆದಿತ್ತು. ಗುಜರಾತ್‌ನ ವಡೋದಾರದ ಹರಿಣಿ ಸರೋವರದಲ್ಲಿ ಬೋಟ್ ಮಗುಚಿ 13 ಶಾಲಾ ಮಕ್ಕಳು ಹಾಗೂ ಇಬ್ಬರು ಶಿಕ್ಷಕರು ಮೃತಪಟ್ಟ ಘಟನೆ ನಡೆದಿತ್ತು.

ಇದನ್ನೂ ಓದಿ:Prajwal Revanna Case: ವಿದೇಶದಿಂದ ಮಧ್ಯಾಹ್ನ 3 ಗಂಟೆಗೆ ಪ್ರಜ್ವಲ್‌ ರೇವಣ್ಣ ಆಗಮನ? ಬಂದ ಕೂಡಲೇ ಅರೆಸ್ಟ್!

ಕಳೆದ ವಾರ ಕಾರವಾರದಲ್ಲೂ ಅರಬ್ಬೀ ಸಮುದ್ರದಲ್ಲಿ ಭಾರಿ ಗಾಳಿ ಮಳೆಯಿಂದಾಗಿ ಒಂದು ಮೀನುಗಾರಿಕಾ ಬೋಟ್ ಮುಳುಗಡೆಯಾಗಿದ್ದು, ಬೋಟ್‌ನಲ್ಲಿದ್ದ 4 ಮಂದಿ ಮೀನುಗಾರರನ್ನು ರಕ್ಷಿಸಲಾಗಿದೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಬಹಳ ವೈರಲ್‌ ಆಗಿತ್ತು. ಉತ್ತರಕನ್ನಡ ಜಿಲ್ಲೆಯ ಭಟ್ಕಳ ತಾಲೂಕಿನ ಮಾವಿನಕುರ್ವೆ ಮೀನುಗಾರಿಕಾ ಬಂದರು ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಮಹಾದೇವ ಖಾರ್ವಿ ಎಂಬವರ ಮಾಲಕತ್ವದ ಓಂ ಮಹಾಗಣಪತಿ ಹೆಸರಿನ ಬೋಟ್ ಮುಳುಗಡೆಯಾಗಿತ್ತು. ಬೆಳಿಗ್ಗೆ 5 ಗಂಟೆಯ ವೇಳೆಗೆ 4 ಮಂದಿ ಮೀನುಗಾರರು ಈ ಬೋಟ್‌ನಲ್ಲಿ ಮೀನುಗಾರಿಕೆಗೆ ತೆರಳಿದ್ದರು. ಅರಬ್ಬೀ ಸಮದ್ರದಲ್ಲಿ ಕಾಣಿಸಿಕೊಂಡ ಭಾರೀ ಗಾಳಿ ಮಳೆಗೆ ಬೋಟ್ ಪಲ್ಟಿಯಾಗಿದೆ. ಸ್ಥಳದಲ್ಲಿದ್ದ ಇನ್ನೊಂದು ಬೋಟ್‌ನವರಿಂದ ಮೀನುಗಾರರ ರಕ್ಷಣೆ ಮಾಡಲಾಗಿದೆ. ಬೋಟ್ ದುರ್ಘಟನೆಯಿಂದ ಮಾಲೀಕರಿಗೆ ಲಕ್ಷಾಂತರ ರೂಪಾಯಿ ಹಾನಿಯಾಗಿತ್ತು.

Continue Reading
Advertisement
Sunita Williams
ತಂತ್ರಜ್ಞಾನ7 mins ago

Sunita Williams: ಸುನೀತಾ ವಿಲಿಯಮ್ಸ್‌ ಮೂರನೇ ಬಾಹ್ಯಾಕಾಶ ಯಾತ್ರೆ ಮುಂದೂಡಿಕೆ; ಹೊಸ ದಿನಾಂಕ ಶೀಘ್ರ ಘೋಷಣೆ

Money Guide
ಮನಿ ಗೈಡ್14 mins ago

Money Guide: ಮಹಿಳಾ ಸಮ್ಮಾನ್‌ ಸರ್ಟಿಫಿಕೆಟ್‌ ಮತ್ತು ಸುಕನ್ಯಾ ಸಮೃದ್ಧಿ; ಇವುಗಳ ಪ್ರಯೋಜನ ಏನೇನು?

Prajwal Revanna Case HD Revanna gets bail today court asked if there was a chance Hearing adjourned till tomorrow
ಕ್ರೈಂ16 mins ago

Prajwal Revanna Case: ಎಚ್‌.ಡಿ. ರೇವಣ್ಣಗೆ ಇಂದು ಸಿಗದ ಜಾಮೀನು; ಅವಕಾಶ ಇದೆಯೇ ಎಂದು ಕೋರ್ಟ್‌ ಪ್ರಶ್ನೆ; ನಾಳೆಗೆ ವಿಚಾರಣೆ ಮುಂದೂಡಿಕೆ

Rahul Gandhi
ದೇಶ19 mins ago

Rahul Gandhi: ಮೇಲ್ವರ್ಗದವರಿಂದಾಗಿ ಪರೀಕ್ಷೆಗಳಲ್ಲಿ ದಲಿತರು ಫೇಲ್‌; ರಾಹುಲ್‌ ಗಾಂಧಿ ಹೊಸ ವಿವಾದ

5 Day Work in Banks
ವಾಣಿಜ್ಯ31 mins ago

5 Days Work in Banks: ಬ್ಯಾಂಕ್‌ಗಳು ವಾರದಲ್ಲಿ ಐದೇ ದಿನ ಓಪನ್‌ ಇರಲಿವೆ; ಪರ್ಯಾಯ ವ್ಯವಸ್ಥೆಗೆ ಸಜ್ಜಾಗಿ

Theft Case In Bengaluru
ಬೆಂಗಳೂರು43 mins ago

Theft Case : ತಂದೆ ಬೈದಿದ್ದಕ್ಕೆ ಮನೆ ಬಿಟ್ಟು ಆಟೋ ಹತ್ತಿದ ಯುವಕ; 100 ಗ್ರಾಂ ಚಿನ್ನ ಕಸಿದು ಚಾಲಕ ಎಸ್ಕೇಪ್

Salman Khan
ಸಿನಿಮಾ1 hour ago

Salman Khan: ಸಲ್ಮಾನ್‌ ಖಾನ್‌ ಮನೆ ಎದುರು ಫೈರಿಂಗ್‌ ಕೇಸ್‌; ಐದನೇ ಆರೋಪಿಯ ಬಂಧನ

Dharamsala Stadium
ಕ್ರೀಡೆ1 hour ago

Dharamsala Stadium: ಧರ್ಮಶಾಲಾದಲ್ಲಿ ಅನಾವರಣಗೊಂಡ ದೇಶದ ಮೊದಲ ಹೈಬ್ರಿಡ್‌ ಕ್ರಿಕೆಟ್ ಪಿಚ್​ನ ವಿಶೇಷತೆ ಏನು?

Gold rate today
ಚಿನ್ನದ ದರ1 hour ago

Gold Rate Today: ಚಿನ್ನದ ಬೆಲೆ ಗ್ರಾಂಗೆ ₹33 ಏರಿಕೆ; 24 ಕ್ಯಾರಟ್‌ ಬಂಗಾರದ ದರ ಇಂದು ₹7,238

Narendra Modi
ದೇಶ1 hour ago

Narendra Modi: “ನಾನು ಇಸ್ಲಾಂ ವಿರೋಧಿ ಅಲ್ಲ, ಆದರೆ ಮುಸ್ಲಿಮರು…”; ಕಾಂಗ್ರೆಸ್‌ ಆರೋಪದ ಬಗ್ಗೆ ಮೋದಿ ಹೇಳಿದ್ದೇನು?

Sharmitha Gowda in bikini
ಕಿರುತೆರೆ7 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ7 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ7 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ5 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ7 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ6 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ5 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ6 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Prajwal Revanna Case 2nd accused in KR Nagar victim abduction case sent to SIT custody Trouble for Revanna
ಕ್ರೈಂ18 hours ago

Prajwal Revanna Case: ಕೆ.ಆರ್.‌ ನಗರ ಸಂತ್ರಸ್ತೆ ಕಿಡ್ನ್ಯಾಪ್‌ ಕೇಸ್‌ನ 2ನೇ ಆರೋಪಿ SIT ಕಸ್ಟಡಿಗೆ; ರೇವಣ್ಣಗೆ ಸಂಕಷ್ಟ?

karnataka weather forecast
ಮಳೆ19 hours ago

Karnataka Weather : ಬೆಂಗಳೂರು ಸೇರಿ ಹಲವೆಡೆ ಮತ್ತೆ ಅಬ್ಬರಿಸುತ್ತಿರುವ ಮಳೆ; ಇನ್ನೊಂದು ವಾರ ಅಲರ್ಟ್‌

Prajwal Revanna Case DK Shivakumar behind Prajwal video leak Devaraje Gowda demands CBI probe
ಕ್ರೈಂ19 hours ago

Prajwal Revanna Case: ಪ್ರಜ್ವಲ್‌ ವಿಡಿಯೊ ಲೀಕ್‌ ಹಿಂದೆ ಇರೋದು ಡಿಕೆಶಿ; ದಾಖಲೆ ತೋರಿಸಿ, ಸಿಬಿಐಗೆ ಕೇಸ್‌ ವಹಿಸಲು ದೇವರಾಜೇಗೌಡ ಆಗ್ರಹ

Dina bhavishya
ಭವಿಷ್ಯ1 day ago

Dina Bhavishya : ಈ ರಾಶಿಯವರಿಗೆ ಇಂದು ಹುಡುಕಿಕೊಂಡು ಬರಲಿವೆ ಹೊಸ ಅವಕಾಶಗಳು

Prajwal Revanna Case HD Revanna sent to judicial custody Shift to Parappana Agrahara
ಕ್ರೈಂ2 days ago

Prajwal Revanna Case: ಎಸ್‌ಐಟಿ ಕಸ್ಟಡಿಗೆ ಮಾಜಿ ಸಚಿವ ಎಚ್‌.ಡಿ. ರೇವಣ್ಣ; ಮತ್ತೆ ತೀವ್ರ ವಿಚಾರಣೆ

Prajwal Revanna Case No evidence against me its a conspiracy says HD Revanna
ಕರ್ನಾಟಕ2 days ago

Prajwal Revanna Case: ನನ್ನ ವಿರುದ್ಧ ಯಾವುದೇ ಸಾಕ್ಷಿಗಳಿಲ್ಲ, ಇದೊಂದು ಷಡ್ಯಂತ್ರ: ಎಚ್‌.ಡಿ. ರೇವಣ್ಣ ಫಸ್ಟ್‌ ರಿಯಾಕ್ಷನ್‌!

Narendra Modi
ದೇಶ2 days ago

Narendra Modi: ರಾಮನಗರಿ ಅಯೋಧ್ಯೆಯಲ್ಲಿ ಮೋದಿ ಭರ್ಜರಿ ರೋಡ್‌ ಶೋ; ಲೈವ್‌ ಇಲ್ಲಿ ವೀಕ್ಷಿಸಿ

Dina Bhavishya
ಭವಿಷ್ಯ2 days ago

Dina Bhavishya : ಈ ರಾಶಿಯವರಿಗೆ ಆಪ್ತರಿಂದ ಸಿಗಲಿದೆ ಸಿಹಿ ಸುದ್ದಿ

Dina Bhavishya
ಭವಿಷ್ಯ3 days ago

Dina Bhavishya: ವೀಕೆಂಡ್‌ನಲ್ಲೂ ಬಾಸ್‌ ಕಾಟ ತಪ್ಪಲ್ಲ; ಈ ರಾಶಿಯವರಿಗೆ ಇಡೀ ದಿನ ಕೆಲಸದ ಒತ್ತಡ

Bengaluru Rains
ಮಳೆ4 days ago

Bengaluru Rains:‌ ಅಬ್ಬಾಬ್ಬ ಲಾಟ್ರಿ.. ಕಂಗ್ರಾಜುಲೇಷನ್ ಬ್ರದರ್.. ಬೆಂಗಳೂರು ಮಳೆಗೆ ನೆಟ್ಟಿಗರ ವಿಷ್‌, ಫುಲ್ ಖುಷ್‌

ಟ್ರೆಂಡಿಂಗ್‌