ನವ ದೆಹಲಿ: ಕಂಜೂಸ್ಗಳು (ಜಿಪುಣರು) ಸಿಕ್ಕ ಅವಕಾಶಗಳೆಲ್ಲವನ್ನೂ ದುಡ್ಡು ಮಾಡಲು ಉಪಯೋಗಿಸುತ್ತಾರೆ ಎಂಬ ಮಾತಿದೆ. ಎಲ್ಲಿಯ ತನಕ ಎಂದರೆ ಪ್ರತಿಕೂಲ ಸಂದರ್ಭಗಳನ್ನೂ ಗಳಿಕೆಯ ಅವಕಾಶವಾಗಿ ಪರಿವರ್ತಿಸುತ್ತಾರೆ. ಅವರು ಇಂಥವರೇ ಅಥವಾ ಇಂಥ ಜಾಗಕ್ಕೆ ಸೀಮಿತ ಎಂದು ಹೇಳಲಾಗುವುದಿಲ್ಲ. ಯಾಕೆಂದರೆ ಸಿಕ್ಕಾಪಟ್ಟೆ ರಿಚ್, ದುಡ್ಡಿನ ಹಾಸಿಯ ಮೇಲೆ ಮಲಗುವ ವ್ಯಕ್ತಿಗಳೆಂದು ಪರಿಭಾವಿಸಿರುವ ಮುಂದುವರಿದ ದೇಶಗಳ ಜನರೂ ಇಂಥ ಜಿಪುಣತನ ತೋರುವುದುಂಟು. ಅದಕ್ಕೆ ಈ ಆಸ್ಟ್ರೇಲಿಯಾದ ಮಹಿಳೆಯೇ ಉತ್ತಮ ಉದಾಹರಣೆ. ಈ ಮಹಿಳೆ ಹಾಟ್ ಬೆಡ್ಡಿಂಗ್ ಎಂಬ ಹೊಸ ಟ್ರೆಂಡ್ ಸೃಷ್ಟಿ ಮಾಡುವ ಮೂಲಕ ಸಿಕ್ಕಾಪಟ್ಟೆ ದುಡಿಮೆ ಮಾಡಿದ್ದಾರೆ. ಅದೇನು ಗೊತ್ತೇ ದೊಡ್ಡ ಬೆಡ್ನಲ್ಲಿ ತಾನೊಬ್ಬಳೇ ಮಲಗುವ ಬದಲು ಪಕ್ಕದ ಖಾಲಿ ಜಾಗವನ್ನು ಬಾಡಿಗೆಗೆ ಕೊಡುವುದು. ಅಚ್ಚರಿ ಏನು ಗೊತ್ತೇ? ಮಹಿಳೆ ಬೆಡ್ ಬಾಡಿಗೆಗೆ (Viral News) ಕೊಟ್ಟು ತಿಂಗಳಿಗೆ 42,000 ರೂಪಾಯಿ ದುಡಿಮೆ ಮಾಡಿದ್ದಾಳಂತೆ.
ಮಹಿಳೆಯ ಹೆಸರು ಮೋನಿಕ್ ಜೆರೆಮಿಯಾ. ತನ್ನ ಹಾಸಿಗೆ ತನಗೆ ಮಾತ್ರ ತುಂಬಾ ದೊಡ್ಡದಾಗಿದೆ ಮತ್ತು ಇನ್ನೊಬ್ಬ ವ್ಯಕ್ತಿ ಸುಲಭವಾಗಿ ಮಲಗಬಹುದು ಎಂದು ಅಂದುಕೊಂಡ ಆಕೆ ಅದನ್ನು ವ್ಯಾಪಾರದ ಅವಕಾಶವಾಗಿ ಪರಿವರ್ತಿಸಿದ್ದಾಳೆ. ಹಾಟ್ ಬೆಡ್ಡಿಂಗ್ ತನ್ನ ಹೆಸರನ್ನು ಹಾಟ್ ಡೆಸ್ಕ್ ನಿಂದ ಎರವಲು ಪಡೆದಿದ್ದೇನೆ ಎಂದು ಆಕೆ ಹೇಳಿಕೊಂಡಿದ್ದಾರೆ. ಹಾಡ್ ಡೆಸ್ಕ್ ಎಂದರೆ ಸಹೋದ್ಯೋಗಿಗಳು ಒಂದೇ ಡೆಸ್ಕ್ ಅನ್ನು ಹಂಚಿಕೊಳ್ಳುವುದು. ಅಂತೆಯೇ ಈಕೆ ಹಾಸಿಗೆ ಹಂಚಿಕೊಂಡು.
ಡೈಲಿ ಸ್ಟಾರ್ ವೆಬ್ ಪ್ರಕಾರ, ಮೋನಿಕ್ ಈಗ ತನ್ನ ಹಾಸಿಗೆಯನ್ನು ಹಂಚಿಕೊಳ್ಳಲು ಜನರಿಗೆ ಆಹ್ವಾನ ಕೊಟ್ಟಿದ್ದಾಳೆ. ಬಂದು ಮಲಗಿದರೆ ಶುಲ್ಕವನ್ನು ವಿಧಿಸುತ್ತಾಳೆ. ಮೋನಿಕ್ ಈ ಹಾಟ್ ಬೆಡ್ಡಿಂಗ್ ಪರಿಕಲ್ಪನೆಯಿಂದ ಪ್ರತಿ ತಿಂಗಳು ಸುಮಾರು 42,000 ರೂ.ಗಳ 400 ಪೌಂಡ್ ಗಳಿಸುತ್ತಿದ್ದಾರೆ. ಒಂದು ವರ್ಷದಲ್ಲಿ ಸೇರಿಸಿದರೆ, ಇದು ಸುಮಾರು 5 ಲಕ್ಷ ರೂ.ಗಳಾಗುತ್ತದೆ ಎಂದು ಮೋನಿಕ್ ಹೇಳಿದ್ದಾರೆ.
ಹಾಸಿಗೆ ಹಂಚಿಕೊಳ್ಳುವ ಪರಿಕಲ್ಪನೆಯು ಸಾಕಷ್ಟು ರೋಮಾಂಚನಕಾರಿಯಾಗಿ ತೋರಿದರೂ, ಅವಳು ಮತ್ತು ಹಾಸಿಗೆಯನ್ನು ಹಂಚಿಕೊಳ್ಳುವ ವ್ಯಕ್ತಿಯ ನಡುವೆ ಒಪ್ಪಂದವೂ ಆಗತ್ತದೆ ಮಲಗುವ ವೇಳೆ ಪ್ರಣಯ ಅಥವಾ ಲೈಂಗಿಕತೆ ಇರುವುದಿಲ್ಲ ಎಂದು ಆಕೆ ಒಪ್ಪಂದ ಮಾಡಿಕೊಳ್ಳುತ್ತಾಳೆ.
ಕೊರೊನಾ ಕಾಲದ ಐಡಿಯಾ?
ಸಾಂಕ್ರಾಮಿಕ ಸಮಯದಲ್ಲಿ ಮೋನಿಕ್ ಒಬ್ಬಂಟಿಯಾಗಿ ಮನೆಯೊಳಗೆ ಲಾಕ್ ಆಗಿದ್ದಳು. ಒಬ್ಬಳೇ ಮಲಗಿದ್ದಾಗ ತನ್ನ ಹಾಸಿಗೆಯಲ್ಲಿ ಇನ್ನೂ ಜಾಗ ಇದೆಯಲ್ವಾ ಎಂದು ಆಕೆಗೆ ಯೋಚನೆ ಬಂದಿತ್ತು. ತಕ್ಷಣ ಆಕೆ ತನ್ನ ಹಾಸಿಗೆಯಲ್ಲಿನ ಖಾಲಿ ಜಾಗವನ್ನು ಬಾಡಿಗೆಗೆ ನೀಡುವ ನಿರ್ಧಾರವನ್ನು ತೆಗೆದುಕೊಂಡರು. ಅಚ್ಚರಿಯೆಂದರೆ ಬಾಡಿಗೆ ವ್ಯವಸ್ಥೆಯನ್ನು ಮೊದಲು ಬಳಸಿಕೊಂಡಿದ್ದು ಆಕೆಯ ಮಾಜಿ ಪ್ರೇಮಿ. ಎರಡು ನಗರಗಳ ನಡುವೆ ಪ್ರಯಾಣಿಸುತ್ತಿದ್ದ ಆತ ಕಡಿಮೆ ದುಡ್ಡಿಗೆ ಸಿಗುತ್ತಿದ್ದ ವಸತಿ ಸೌಕರ್ಯವನ್ನು ಸದ್ಬಳಕೆ ಮಾಡಿಕೊಂಡ. ರಾತ್ರಿ ಸುಮಾರು ಹತ್ತು ಗಂಟೆಗೆ ಇಬ್ಬರೂ ಮಲಗಲು ಹೋಗುತ್ತಿದ್ದರು. ಆದರೆ ಅವರು ಎಂದಿಗೂ ಮಾತನಾಡಿರಲಿಲ್ಲ ಇಬ್ಬರೂ ಹೆಡ್ಫೋನ್ಗಳನ್ನು ಹಾಕಿಕೊಳ್ಳುತ್ತಿದ್ದರು.
ಇದನ್ನೂ ಓದಿ: Viral News : ಏನೋ ಮಾಡಲು ಹೋಗಿ..; ಗಂಡನಿಗೆ ಬುದ್ಧಿ ಕಲಿಸಲೆಂದು ಗೆಳೆಯರಿಂದ ಚಿನ್ನ ಕಳವು ಮಾಡಿಸಿ ಸಿಕ್ಕಿಬಿದ್ಳು!
ವ್ಯವಹಾರವು ಸ್ವಲ್ಪ ಡೇಂಜರಸ್ ಎಂಬುದು ಕೂಡ ಆಕೆಗೆ ಕೆಲವು ಬಾರಿ ಅರ್ಥವಾಗಿತ್ತು. ಆಕೆ ಸುಖ ನಿದ್ದೆಯಲ್ಲಿರುವ ವೇಳೆ ಹಾಸಿಗೆಯನ್ನು ಸಂಪೂರ್ಣವಾಗಿ ಅಪರಿಚಿತರೊಂದಿಗೆ ಹಂಚಿಕೊಳ್ಳುವುದು ಸುಲಭವೂ ಆಗಿರಲಿಲ್ಲ. ಹಾಸಿಗೆಗೆ ಹೋಗುವಾಗ ಜಾಗರೂಕರಾಗಿರಬೇಕಾಗುತ್ತದೆ. ತನ್ನ ಪಕ್ಕದಲ್ಲಿ ಮಲಗುವ ವ್ಯಕ್ತಿಯ ಬ್ಯಾಕ್ಗ್ರೌಂಡ್ ವೆರಿಫಿಕೇಷನ್ ಕೂಡ ಮಾಡುತ್ತಿದ್ದಳು. ಮುಕ್ತ ಮನಸ್ಸಿನವರು, ಗೌರವಯುತರು ಮತ್ತು ಲೈಂಗಿಕ ಸಂಬಂಧವನ್ನು ಹೊಂದಲು ಬಯಸದವರನ್ನು ಆಕೆ ಖಚಿತಪಡಿಸಿಕೊಳ್ಳುತ್ತಿದ್ದಳು.
ಅಂದ ಹಾಗೆ ಹಾಟ್ ಬೆಡ್ಡಿಂಗ್ ಹೊಸತಲ್ಲ. ಸಿಡ್ನಿ ವಿಶ್ವವಿದ್ಯಾಲಯದ ಸಾವಿರಾರು ಅಂತರರಾಷ್ಟ್ರೀಯ ವಿದ್ಯಾರ್ಥಿಗಳು ಈ ವ್ಯವಸ್ಥೆಯನ್ನು ಅವಲಂಬಿಸಿಕೊಂಡಿದ್ದಾರೆ. ಕಡಿಮೆ ಖರ್ಚಿನಲ್ಲಿ ದೊರೆಯುವ ವಸತಿ ವ್ಯವಸ್ಥೆಯನ್ನು ಅವರು ಸಮರ್ಪಕರವಾಗಿ ಬಳಸಿಕೊಂಡಿದ್ದಾರೆ.