Site icon Vistara News

Salman Rushdie Attacked | ಅಮೆರಿಕದ ನ್ಯೂಯಾರ್ಕ್‌ನಲ್ಲಿ ಲೇಖಕ ಸಲ್ಮಾನ್‌ ರಶ್ದಿಗೆ ಚಾಕು ಇರಿತ

Salman Rushdie Attacked

ನ್ಯೂಯಾರ್ಕ್‌: ಉಪನ್ಯಾಸ ನೀಡಲು ಆಗಮಿಸಿದ್ದ ಜನಪ್ರಿಯ ಲೇಖಕ, ಭಾರತೀಯ ಮೂಲದ ಸಲ್ಮಾನ್ ರಶ್ದಿ (Salman Rushdie) ಅವರಿಗೆ ಅಗಂತುಕ ನೋರ್ವ ಚಾಕುವಿನಿಂದ ಇರಿದಿದ್ದು, ಅವರು ಗಂಭೀರವಾಗಿ ಗಾಯಗೊಂಡಿದ್ದಾರೆ.

ನ್ಯೂಯಾರ್ಕ್‌ನ ಶುಟಾಕ್ವೇ ಇನ್‌ಸ್ಟಿಟ್ಯೂಷನ್‌ನಲ್ಲಿ ಉಪನ್ಯಾಸನೀಡಲು ಅವರು ವೇದಿಕೆ ಏರಿದ್ದರು. ಅವರ ಪರಿಚಯ ಮಾಡಿಕೊಡುತ್ತಿದ್ದ ವೇಳೆ ವೇದಿಕೆಯೇರಿದ ಅಗಂತುಕ ಚಾಕುವಿನಿಂದ ಬಲವಾಗಿ ಇರಿದಿದ್ದು, ಕುತ್ತಿಗೆಗೆ ಗಂಭೀರ ಗಾಯವಾಗಿದೆ. ಅವರು ಸ್ಥಳದಲ್ಲಿಯೇ ಕುಸಿದು ಬಿದ್ದಿದ್ದಾರೆ. ಅವರನ್ನು ಕೂಡಲೇ ಮೆಡಿಕಲ್‌ ಹೆಲಿಕ್ಯಾಪ್ಟರ್‌ನಲ್ಲಿ ಆಸ್ಪತ್ರೆಗೆ ರವಾನಿಸಲಾಗಿದೆ.

೭೫ ವರ್ಷದ ರಶ್ದಿ ಈ ಹಿಂದಿನಿಂದಲೂ ಇಸ್ಲಾಮ್‌ ಮೂಲಭೂತವಾದಿಗಳಿಂದ ಜೀವ ಬೆದರಿಕೆ ಎದುರಿಸುತ್ತಿದ್ದರು. ಭಾರತೀಯ ಮೂಲದವರಾದ ರಶ್ದಿ, ಇಂಗ್ಲೆಂಡ್‌ ದೇಶದ ಪ್ರಜೆಯಾಗಿದ್ದಾರೆ. ಆದರೆ ಕಳೆದ ೨೦ ವರ್ಷಗಳಿಂದ ಅಮೆರಿಕದಲ್ಲಿ ನೆಲೆಸಿದ್ದಾರೆ. ೧೯೯೮ರಲ್ಲಿಯೇ ಇರಾನಿನ ಪ್ರಮುಖ ಧಾರ್ಮಿಕ ನಾಯಕರೊಬ್ಬರು ಇವರ ಹತ್ಯೆಗೆ ಬಹುಮಾನ ಘೋಷಿಸಿದ್ದರು.

ಚಾಕುವಿನಿಂದ ಇರಿದ ವ್ಯಕ್ತಿಯನ್ನು ವಶಕ್ಕೆ ಪಡೆಯಲಾಗಿದೆ. ಆದರೆ ಯಾವ ಕಾರಣದಿಂದ ಈ ದಾಳಿ ನಡೆದಿದೆ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ.

1981 ರಲ್ಲಿ ಬಿಡುಗಡೆಯಾದ ʼಮಿಡ್‌ನೈಟ್ಸ್‌ ಚಿಲ್ಟ್ರನ್‌ʼ ನಿಂದ ಅಂತರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡಿದ್ದ ರಶ್ದಿ ೧೯೮೦ರಲ್ಲಿ ಬರೆದ ದಿ ಸಟಾನಿಕ್ ವರ್ಸಸ್ ಕಾದಂಬರಿಯಿಂಧಾಗಿ ತೀವ್ರ ವಿವಾದಕ್ಕೊಳಗಾಗಿದ್ದರು. ಮಿಡ್‌ನೈಟ್ಸ್‌ ಚಿಲ್ಟ್ರನ್‌ಗೆ ಅವರು ಬೂಕರ್‌ ಪ್ರಶಸ್ತಿ ಪಡೆದುಕೊಂಡಿದ್ದಾರೆ. ಕಾಶ್ಮೀರದ ಮುಸ್ಲಿಂ ಕುಟುಂಬದಲ್ಲಿ ಜನಿಸಿದ ಅವರು, ಕೇಂಬ್ರಿಡ್ಜ್‌ನಲ್ಲಿ ಓದಿದ್ದು, ಪ್ರಪಂಚದ ಹೆಸರಾಂತ ಲೇಖಕರ ಪೈಕಿ ಒಬ್ಬರಾಗಿದ್ದಾರೆ.

Exit mobile version